ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ vs ಜೆಡಿಎಸ್ ಫೈಟ್

By Mahesh
|
Google Oneindia Kannada News

ಐತಿಹಾಸಿಕ ತಾಣ ಶ್ರೀರಂಗಪಟ್ಟಣ ರಾಜ್ಯದ ಪ್ರಮುಖ ಪ್ರವಾಸಿ ಕ್ಷೇತ್ರ ಎನಿಸಿಕೊಂಡಿದೆ. ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಜುಮ್ಮ ಮಸೀದಿ, ದರಿಯಾ ದೌಲತ್, ರಂಗನತಿಟ್ಟು, ಬೆಳಗೊಳದ ಲಕ್ಷ್ಮಿ ನರಸಿಂಹ ದೇಗುಲ, ಕರಿಘಟ್ಟದ ವೆಂಕಟೇಶ್ವರ, ನಿಮಿಷಾಂಬ ದೇಗುಲ, ಚಂದ್ರವನ ಆಶ್ರಮ, ಟಿಪ್ಪು ಕಾಲದ ಮದ್ದಿನ ಮನೆ, ಬಲಮುರಿ, ಎಡಮುರಿ, ಶಿವನ ಸಮುದ್ರ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ್ ಹೀಗೆ ಪ್ರವಾಸಿ, ಧಾರ್ಮಿಕ, ಐತಿಹಾಸಿಕ ತಾಣಗಳ ಪಟ್ಟಿ ಬೆಳೆಯುತ್ತದೆ.

ರಸ್ತೆ, ರೈಲು ಮಾರ್ಗಗಳು ಸಮರ್ಪಕವಾಗಿದ್ದು, ಗಂಗ ವಿಜಯನಗರ, ಟಿಪ್ಪು ಸುಲ್ತಾನರ ಕಾಲದ ರಾಜಧಾನಿಯಾದ ಶ್ರೀರಂಗಪಟ್ಟಣ, ಇಂದಿಗೂ ತನ್ನ ಖದರ್ ಉಳಿಸಿಕೊಂಡಿದೆ.

ಪ್ರವಾಸಿಗರಿಗೆ ಸೂಕ್ತ ಮಾಹಿತಿ ಇದ್ದರು, ಪ್ರವಾಸಿಗರು ಹೆಚ್ಚಾಗಿದ್ದ ಸಂದರ್ಭದಲ್ಲಿ ಇಲ್ಲಿನ ಕಾರ್ಯನಿರ್ವಹಣೆ ಸೂಕ್ತವಾಗಿಲ್ಲ. ಕಾವೇರಿ, ಕಬಿನಿ ಮತ್ತು ಹೇಮಾವತಿ ಸಂಗಮ ಸ್ಥಳ ಹಾಗೂ ಅಪರ ಕರ್ಮಗಳಿಗೆ ಬಳಸಲಾಗುವ ಕಾವೇರಿ ಪಶ್ಚಿಮ ವಾಹಿನಿ ಸ್ಥಳಗಳಲ್ಲಿ ಇತ್ತೀಚೆಗೆ ಸ್ವಚ್ಛತೆ ಅಭಿಯಾನದಿಂದ ತಕ್ಕಮಟ್ಟಿನ ನದಿ ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ, ಶಾಶ್ವತ ಪರಿಹಾರ ಸಿಕ್ಕಿಲ್ಲ.

200 ವರ್ಷಗಳ ಹಿಂದಿನ, ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಮಾರಕವನ್ನು ಮೂಲ ಸ್ಥಳದಿಂದ 130 ಮೀಟರ್‌ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್‌ಎಲ್‌ ಕಂಪೆನಿಗಳು, ಸ್ಥಳಾಂತರಿಸಿದ್ದು ದೊಡ್ಡ ಸಾಧನೆ.

ಬದಲಾದ ಅಭ್ಯರ್ಥಿಗಳ ಪಕ್ಷಗಳು

ಬದಲಾದ ಅಭ್ಯರ್ಥಿಗಳ ಪಕ್ಷಗಳು

ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ನ ರವೀಂದ್ರ ಶ್ರೀಕಂಠಯ್ಯ ಅವರ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಬಾರಿಯೂ ಇಲ್ಲಿ ಜೆಡಿಎಸ್ ಅಲೆ ಎದ್ದಿದೆ. ರಮೇಶ್ ಬಂಡಿಸಿದ್ದೇಗೌಡ ಅವರು ಪಕ್ಷ ಬದಲಾಯಿಸಿ ಮತ್ತೊಮ್ಮೆ ಜಯ ಸಾಧಿಸುವರೇ ಕಾದು ನೋಡಬೇಕಿದೆ.

ರಮೇಶ್ ಬಂಡಿಸಿದ್ದೇಗೌಡಗೆ ಗೆಲುವಿನ ನಿರೀಕ್ಷೆ

ರಮೇಶ್ ಬಂಡಿಸಿದ್ದೇಗೌಡಗೆ ಗೆಲುವಿನ ನಿರೀಕ್ಷೆ

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನ ಬಂಡಾಯ ಶಾಸಕರ ಗುಂಪಿನಲ್ಲಿ ಅವರು ಗುರುತಿಸಿಕೊಂಡಿದ್ದರು. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕೆಪಿಸಿಸಿ ಸದಸ್ಯ ಇಂಡವಾಳು ಸಚ್ಚಿದಾನಂದ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿಯಿಂದ ನಂಜುಂಡೇಗೌಡ ಕಣದಲ್ಲಿದ್ದಾರೆ. ಮತ್ತೊಮ್ಮೆ ರಮೇಶ್ ಬಂಡಿಸಿದ್ದೇಗೌಡ ಹಾಗೂ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಪೈಪೋಟಿ ಕಾಣಬಹುದು. ರವೀಂದ್ರ ಅವರು ಜೆಡಿಎಸ್ ನಿಂದ ಕಣಕ್ಕಿಳಿದಿದ್ದಾರೆ.

ಶ್ರೀರಂಗಪಟ್ಟಣದ ಮತದಾರರು

ಶ್ರೀರಂಗಪಟ್ಟಣದ ಮತದಾರರು

ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ 2,04,059 (1,01,503 ಪುರುಷ, 1,02,556 ಮಹಿಳೆ) ಮತದಾರರಿದ್ದಾರೆ.

2013ರ ಫಲಿತಾಂಶ

2013ರ ಫಲಿತಾಂಶ

ಶ್ರೀರಂಗಪಟ್ಟಣದಲ್ಲಿ 2013ರಲ್ಲಿ 18 ಮಂದಿ ನಾಮಪತ್ರ ಸಲ್ಲಿಸಿದ್ದರು. 7 ಮಂದಿ ನಾಮಪತ್ರ ಹಿಂಪಡೆದರು. 11 ಜನ ಅಂತಿಮವಾಗಿ ಸ್ಪರ್ಧಿಸಿದ್ದರು. ಈ ಪೈಕಿ 8 ಮಂದಿ ಠೇವಣಿ ಕಳೆದುಕೊಂಡರು.

ಒಟ್ಟು ಶೇ 80.85ರಷ್ಟು ಮತದಾನವಾಗಿದ್ದು, 157807 ಮತಗಳ ಪೈಕಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎ.ಬಿ ರಮೇಶ ಬಂಡಿಸಿದ್ದೇಗೌಡ ಅವರು 55204ಮತಗಳನ್ನು ಗಳಿಸಿ ಜಯಗಳಿಸಿದರು. ಸ್ವತಂತ್ರವಾಗಿ ಸ್ಪರ್ಧಿಸಿದ್ದ ರವೀಂದ್ರ ಶ್ರೀಕಂಠಯ್ಯ ಅವರು 41580 ಮತಗಳನ್ನು ಗಳಿಸಿ 13624 ಮತಗಳ(ಶೇ8.63) ಅಂತರದಿಂದ ಸೋಲು ಕಂಡಿದ್ದರು.

ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಸ್ ಎಲ್ ಲಿಂಗರಾಜು ಅವರು 27144 ಮತಗಳು ಹಾಗೂ ಕೆಎಸ್ ನಂಜುಡೇಗೌಡ ಅವರು 24012 ಗಳಿಸಿದ್ದರು.

English summary
Karnataka Assembly Election 2018: Read all about Mandya district Srirangapatna assembly constituency of Mandya. Get election news from Mandya district. Know about Srirangapatna candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X