ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಸವದತ್ತಿ ಯಲ್ಲಮ್ಮ ಕೃಪೆಯಿಂದ ಯಾರಿಗೆ ಗೆಲುವು?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆ ಬೆಳಗಾವಿ. ಸವದತ್ತಿ ಯಲ್ಲಮ್ಮ ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನವನ್ನು ಹೊಂದಿರುವ ಕ್ಷೇತ್ರ ರಾಜ್ಯ ಮತ್ತು ಅಕ್ಕ-ಪಕ್ಕದ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡಿನಿಂದ ಭಕ್ತರು ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ಈ ಕ್ಷೇತ್ರದ ವಿಶೇಷವಾಗಿದೆ. ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ನೂರಾರು ವರ್ಷಗಳ ಐತಿಹಾಸಿಕ ಹಿನ್ನಲೆ ಇದೆ. ಜಮದಗ್ನಿ ಮುನಿಯ ಪತ್ನಿ ರೇಣುಕಾ ತಾಯಿಯೇ ಈ ಯಲ್ಲಮ್ಮ ಎನ್ನುತ್ತದೆ ಇತಿಹಾಸ.

ಒಂದಾದ ಜಾರಕಿಹೊಳಿ ಸಹೋದರರು, ಲಖನ್ ಬಿಜೆಪಿ ಸೇರಲ್ಲ!ಒಂದಾದ ಜಾರಕಿಹೊಳಿ ಸಹೋದರರು, ಲಖನ್ ಬಿಜೆಪಿ ಸೇರಲ್ಲ!

ಮಲಪ್ರಭಾ ನದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿಯುತ್ತದೆ. ನವಿಲು ತೀರ್ಥ ಎಂಬಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ರೇಣುಕಾ ಜಲಾಶಯವನ್ನು ನಿರ್ಮಿಸಲಾಗಿದೆ. ಸವದತ್ತಿಯ ಕೋಟೆ ಸಹ ಕ್ಷೇತ್ರದ ಪ್ರಮುಖ ಪ್ರವಾಸಿ ತಾಣವಾಗಿದೆ.

Karnataka assembly election 2018 : Saundatti Yellamma constituency profile

ರಾಜಕೀಯವಾಗಿ ಬಿಜೆಪಿ ವಶದಲ್ಲಿರುವ ಕ್ಷೇತ್ರ ಸವದತ್ತಿ ಯಲ್ಲಮ್ಮ. ಕ್ಷೇತ್ರದ ಶಾಸಕರು ವಿಶ್ವನಾಥ ಮಾಮನಿ. ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗಾಯತ ಮತದಾರರು ಹೆಚ್ಚು. ಆದ್ದರಿಂದ, ಲಿಂಗಾಯತ ಸಮಯದಾಯಕ್ಕೆ ಸೇರಿದ ಅಭ್ಯರ್ಥಿಗಳು ಸುಲಭವಾಗ ಗೆಲುವು ಸಾಧಿಸುತ್ತಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಪಂಚನಗೌಡಾ ದಾಮನಗೌಡರ ಕೂಡ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಬೆಳಗಾವಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯಬೆಳಗಾವಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ವಿಶ್ವನಾಥ ಮಾಮನಿ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ ವೈದ್ಯ, ಆನಂದ ಚೋಪ್ರಾ ಅವರು ಟಿಕೆಟ್ ಆಕಾಂಕ್ಷಿಗಳು. ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

2013ರ ಫಲಿತಾಂಶ

* ವಿಶ್ವನಾಥ ಮಾಮನಿ 46,434
* ರವೀಂದ್ರ ಭೂಪಾಲಪ್ಪ ಯಲಿಗಾರ್ (ಕಾಂಗ್ರೆಸ್) 30,392
* ಡಿ.ಬಿ.ನಾಯ್ಕ್ 2,630 ಮತಗಳು

English summary
Karnataka Assembly Election 2018 : Read all about Saundatti Yellamma assembly constituency of Belagavi district. Get election news from Saundatti Yellamma. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X