ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಕಾಂಗ್ರೆಸ್: ರೋಣದಲ್ಲಿ ಗೆಲ್ಲುವುದು ಯಾರು?

|
Google Oneindia Kannada News

ದ್ರೋಣಾಪುರ ಎಂದೇ ಪುರಾಣೇತಿಹಾಸಗಳಲ್ಲಿ ಕರೆಸಿಕೊಂಡ ರೋಣವು ಗದಗ ಜಿಲ್ಲೆಯ ಒಂದು ನಗರ.

ಕಪ್ಪು ಮಣ್ಣು ಹೇರಳವಾಗಿರುವ ಈ ಪ್ರದೇಶದಲ್ಲಿ ಸಂಕರಣ ಹತ್ತಿ ಬೀಜಗಳನ್ನು ತುಂಬಾ ಬೆಳೆಯುತ್ತಾರೆ. ಇಲ್ಲಿನ ಹತ್ತಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?

ಇಲ್ಲಿನ ದೇವಾಲಯಗಳನ್ನು ದ್ರೋಣಾಚಾರ್ಯರು ನಿರ್ಮಿಸಿದರು ಎಂಬ ಪ್ರತೀತಿಯಿದೆ. ಆದಕ್ಕೆಂದೇ ರೋಣವನ್ನು ದ್ರೋಣಪುರ ಎಂದು ಕರೆಯಲಾಗುತ್ತಿತ್ತು. ಆದರೆ ಕ್ರಮೇಣ ಜನರ ಬಾಯಿಮಾತಲ್ಲಿ ಅದು 'ರೋಣ' ವಾಗಿ ಬದಲಾಗಿದೆ.

Karnataka Assembly Election 2018: Ron Constituency Profile

ಇಲ್ಲಿನ ಅನಂತಶಯನ ಗುಡಿ, ಈಶ್ವರ ದೇವಾಲಯ, ಕಾಳಿ ಗುಡಿ, ಲೋಕನಾಥ ದೇವಾಲಯ, ಮಲ್ಲಿಕಾರ್ಜುನ ಗುಡಿ, ಪಾರ್ಶ್ವನಾಥ ಜೈನ ದೇವಾಲಯ ಮತ್ತು ಸೋಮಲಿಂಗೇಶ್ವರ ದೇವಾಲಯ ಐತಿಹಾಸಿಕ ಮಹತ್ವ ಪಡೆದಿವೆ.

ಇಲ್ಲಿನ ಇಟಗಿ ಎಂಬ ಸಣ್ಣ ಗ್ರಾಮದಲ್ಲಿರುವ ಇಟಗಿ ಭೀಮವ್ವ ದೇವಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಶಂಭುಲಿಂಗ ದೇವಾಲಯ 1000 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ಚಾಲಿಕ್ಯರ ಕಾಲದ್ದು ಎಂದು ನಂಬಲಾದ ಈ ದೇವಾಲಯದಲ್ಲಿ ಉದ್ಭವ ಶಿವಲಿಂಗವಿದೆ.

ಈ ಐತಿಹಾಸಿಕ ಕ್ಷೇತ್ರದ ರಾಜಕೀಯ ಚಿತ್ರಣದ ಬಗ್ಗೆ ಯೋಚಿಸುವುದಾದರೆ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳು ಜಾಸ್ತಿ. ಕುರುಬ ಸಮುದಾಯದ ಮತದಾರರೇ ಇಲ್ಲಿ ನಿರ್ಣಾಯಕ ಸ್ಥಾನ ವಹಿಸಿದ್ದಾರೆ. ಹಿಂದುಳಿದ ಗಾಣಿಗ ಸಮುದಾಯದ ಮತದಾರರು ಈ ಬಾರಿ ರೋಣದ ಜಿ ಎಸ್ ಪಾಟೀಲರನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ ಇದೆ.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಿ.ಎಸ್.ಪಾಟೀಲ್ 74593 ಮತ ಪಡೆದಿದ್ದರೆ, ಬಿಜೆಪಿಯ ಕೆ.ಜಿ.ಬಂಡಿ 56026 ಮತ ಪಡೆದಿದ್ದರು. ಆದರೆ ಈ ಬಾರಿ ಇಲ್ಲಿನ ಜನರು ಬಿಜೆಪಿಯನ್ನೇ ಬೆಂಬಲಿಸಿದರೆ ಅಚ್ಚರಿಯೇನಿಲ್ಲ.

English summary
Karnataka Assembly Election 2018: Read all about Ron assembly constituency of Gadag district. Get election news from Ron. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X