ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಭಾಗ ಕ್ಷೇತ್ರ: ಬಿಜೆಪಿಯ ದುರ್ಯೋಧನ ಐಹೊಳೆಗೆ ಹ್ಯಾಟ್ರಿಕ್ ಜಯದ ಕನಸು

By Sachhidananda Acharya
|
Google Oneindia Kannada News

ರಾಯಭಾಗ ಬೆಳಗಾವಿ ಜಿಲ್ಲೆಯ ಒಂದು ಪಟ್ಟಣ ಮತ್ತು ತಾಲೂಕು. ಇಲ್ಲಿ ಬಾಳೆ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ರಾಯಭಾಗದಲ್ಲೊಂದು ಬ್ರಿಟೀಷರು ಕಟ್ಟಿದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವೂ ಇದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಯಭಾಗ ಕ್ಷೇತ್ರವನ್ನು ಬಿಜೆಪಿಯ ದುರ್ಯೋಧನ ಐಹೊಳೆ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲೂ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ಕಾಗವಾಡ ಕ್ಷೇತ್ರ ಪರಿಚಯ: ವಲಸಿಗರದ್ದೇ ಇಲ್ಲಿ ದರ್ಬಾರು!ಕಾಗವಾಡ ಕ್ಷೇತ್ರ ಪರಿಚಯ: ವಲಸಿಗರದ್ದೇ ಇಲ್ಲಿ ದರ್ಬಾರು!

ಹಾಗೆ ನೋಡಿದರೆ ರಾಯಭಾಗ ಕ್ಷೇತ್ರ ಕಾಂಗ್ರೆಸ್ ಪಾಲಿನ ಭದ್ರಕೋಟೆಯಾಗಿತ್ತು. ಆದರೆ 2004ರಲ್ಲಿ ಕಾಂಗ್ರೆಸ್ ಕೋಟೆಗೆ ಜೆಡಿಯುನ ಸರಿಕರ್ ಭೀಮಪ್ಪ ಕನ್ನ ಕೊರೆದರು. ಮುಂದೆ 2008ರಲ್ಲಿ ಮತ್ತು 13ರಲ್ಲಿ ಬಿಜೆಪಿಯ ದುರ್ಯೋಧನ ಐಹೊಳೆ ಇಲ್ಲಿ ಸತತ ಗೆಲುವು ಸಾಧಿಸಿದರು.

Karnataka Assembly Election 2018: Raybag Constituency Profile

2008ರಲ್ಲಿ ಐಹೊಳೆ ಗೆಲುವು ಸಾಧಿಸಿದಾಗ ಕಾಂಗ್ರೆಸಿನ ಓಂ ಪ್ರಕಾಶ್ ಕನಗಳಿ ಎರಡನೇ ಸ್ಥಾನವನ್ನು ಪಡೆದಿದ್ದರು. 2013ರಲ್ಲಿ ಬಿಜೆಪಿ ಅಭ್ಯರ್ಥಿ ಐಹೊಳೆ 37,535 ಮತಗಳನ್ನು ಪಡೆದು ಜಯ ಸಾಧಿಸಿದರು. ಎರಡನೇ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಪ್ರದೀಪ್ ಮಳಗಿ ಪಡೆದಿದ್ದರು. ಅವರು ಈ ಚುನಾವಣೆಯಲ್ಲಿ 36,706 ಮತಗಳನ್ನು ಪಡೆದಿದ್ದರು. ಇನ್ನು ಈ ಚುನಾವಣೆಯಲ್ಲಿ ಕಾಂಗ್ರೆಸಿನ ಸುಕುಮಾರ್ ಪುಂಡಲೀಕ್ 30,043 ಮತಗಳನ್ನಷ್ಟೇ ಪಡೆದಿದ್ದರು.

ಯಮಕನಮರಡಿ ಕ್ಷೇತ್ರ: ಸತೀಶ್ ಜಾರಕಿಹೊಳಿಗಿಲ್ಲ ಸೋಲಿನ ಭಯಯಮಕನಮರಡಿ ಕ್ಷೇತ್ರ: ಸತೀಶ್ ಜಾರಕಿಹೊಳಿಗಿಲ್ಲ ಸೋಲಿನ ಭಯ

ಈ ಬಾರಿ ಇಲ್ಲಿ ಬಿಜೆಪಿ ಮತ್ತೆ ದುರ್ಯೋಧನ ಐಹೊಳೆಯರಿಗೆ ಟಿಕೆಟ್ ನೀಡಿದೆ. ಅವರು ಇಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ 2013ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಪ್ರದೀಪ್ ಕುಮಾರ್ ಮಳಗಿಯವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದೆ. ಮಳಗಿ ಸ್ವಂತ ಮತಗಳು ಮತ್ತು ಪಕ್ಷದ ಮತಗಳು ಸೇರಿದರೆ ಐಹೊಳೆಯವರನ್ನು ಸೋಲಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್ ಲೆಕ್ಕಚಾರ ಫಲಿಸುತ್ತಾ ಅಥವಾ ಬಿಜೆಪಿಯ ದುರ್ಯೋಧನ ಐಹೊಳೆ ಹ್ಯಾಟ್ರಿಕ್ ಜಯ ಸಾಧಿಸುತ್ತಾರಾ ಎಂಬುದಕ್ಕೆ ಮೇ 15ರಂದು ಉತ್ತರ ದೊರೆಯಲಿದೆ.

English summary
Karnataka Assembly Election 2018: Read all about Raybag assembly constituency of Belagavi. Get election news from Raybag. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X