ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಬಿಸಿಲನಾಡು ರಾಯಚೂರಲ್ಲಿ ಗೆಲ್ಲುವವರು ಯಾರು?

|
Google Oneindia Kannada News

ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ ರಾಯಚೂರು. ನಾಡಿಗೆ ಬೆಳಕನ್ನು ನೀಡುವ ಉಷ್ಣ ವಿದ್ಯುತ್ ಸ್ಥಾವರವನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರ ರಾಯಚೂರು ನಗರ. ಉಷ್ಣ ವಿದ್ಯುತ್ ಸ್ಥಾವರದ ಜೊತೆ ಬಿಸಿಲಿನ ಶಾಖವೂ ರಾಯಚೂರಿನಲ್ಲಿ ಹೆಚ್ಚು.

ರಾಯಚೂರು ನಗರ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಇನ್ನೂ ಉತ್ತಮವಾಗಬೇಕು. ಐಐಟಿ ಕೇಂದ್ರವನ್ನು ಪಡೆಯುವ ಜಿಲ್ಲೆಗಳ ಸಾಲಿನಲ್ಲಿ ರಾಯಚೂರು ಇತ್ತು. ಕೊನೆ ಕ್ಷಣದಲ್ಲಿ ಐಐಟಿ ಧಾರವಾಡದ ಪಾಲಾಯಿತು.

ಕ್ಷೇತ್ರ ಪರಿಚಯ : ರಾಯಚೂರು ಗ್ರಾಮಾಂತರದಲ್ಲಿ ಯಾರಿಗೆ ಜಯ?ಕ್ಷೇತ್ರ ಪರಿಚಯ : ರಾಯಚೂರು ಗ್ರಾಮಾಂತರದಲ್ಲಿ ಯಾರಿಗೆ ಜಯ?

ರಾಯಚೂರು ನಗರ ಕ್ಷೇತ್ರದ ಶಾಸಕರು ಜೆಡಿಎಸ್‌ನ ಶಿವರಾಜ ಪಾಟೀಲ. 2018ರ ಜನವರಿಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ಅವರ ಅಳಿಯ ಸೈಯದ್ ಯಾಸಿನ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

Karnataka Assembly Election 2018 : Raichur constituency profile

ಬಿಜೆಪಿಯಲ್ಲಿದ್ದು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಎ.ಪಾಪರೆಡ್ಡಿ ಅವರು ಕಾಂಗ್ರೆಸ್ ಸೇರಿದ್ದರು. ಈಗ ಅವರು ಬಿಜೆಪಿಗೆ ಮರಳಿದ್ದಾರೆ. ಮುಸ್ಲಿಂ, ಕಮ್ಮ, ಲಿಂಗಾಯತ ಸಮುದಾಯದ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ.

ಕ್ಷೇತ್ರ ಪರಿಚಯ : ಲಿಂಗಸಗೂರು ಕ್ಷೇತ್ರದಲ್ಲಿ ಯಾರಿಗೆ ಜಯ?ಕ್ಷೇತ್ರ ಪರಿಚಯ : ಲಿಂಗಸಗೂರು ಕ್ಷೇತ್ರದಲ್ಲಿ ಯಾರಿಗೆ ಜಯ?

ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಪ್ರಬಲವಿಲ್ಲದ ಬಿಜೆಪಿ ಅಭ್ಯರ್ಥಿಯಿಂದಾಗಿ ಶಿವರಾಜ ಪಾಟೀಲ್ ಗೆಲುವು ಕಂಡಿದ್ದರು. ಆದರೆ, ಈ ಬಾರಿ ಅವರು ಬಿಜೆಪಿಯಿಂದ ಸ್ಪರ್ಧಿಸಲಿದ್ದು, ಗೆಲುವು ಅಷ್ಟು ಸುಲಭವಿಲ್ಲ.

ಕ್ಷೇತ್ರ ಪರಿಚಯ : 'ಭತ್ತದ ಕಣಜ'ದಲ್ಲಿ ಗೆಲುವು ಯಾರಿಗೆ?ಕ್ಷೇತ್ರ ಪರಿಚಯ : 'ಭತ್ತದ ಕಣಜ'ದಲ್ಲಿ ಗೆಲುವು ಯಾರಿಗೆ?

2013ರ ಚುನಾವಣೆಯಲ್ಲಿ ಡಾ.ಶಿವರಾಜ್ ಪಾಟೀಲ್ 45,263 ಮತ, ಕಾಂಗ್ರೆಸ್‌ನ ಸೈಯದ್ ಯಾಸೀನ್ 37,392 ಮತ, ಬಿಜೆಪಿಯ ತ್ರಿವಿಕ್ರಮ ಜೋಷಿ 6,186 ಮತಗಳನ್ನು ಪಡೆದಿದ್ದರು.

English summary
Karnataka Assembly Election 2018 : Read all about Raichur constituency of Raichur district. Get election news from Raichur. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X