ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಗುಂದದ ಮತದಾರ ಯಾರ ಕೈ ಹಿಡಿಯಲಿದ್ದಾನೆ..?

|
Google Oneindia Kannada News

ನರಗುಂದ ಎಂದೊಡನೆ ನೆನಪಾಗುವುದು ಸ್ವಾತಂತ್ರ್ಯ ಹೋರಾಟ. ಬ್ರಿಟೀಶರನ್ನು ಭಾರತಿಂದ ಓಡಿಸುವಲ್ಲಿ ನರಗುಂದದ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ಎಂದೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನರಗುಂದ ಬಾಬಾಸಾಹೇಬರು, ಜಗನ್ನಾಥ ಜೋಷಿಯವರು ಸಹ ಇದೇ ಊರಿನವರು.

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಾಬಾಸಾಹೇಬರು ಬ್ರಿಟಿಶರ ವಿರುದ್ಧ ದಂಗೆ ಆರಂಭಿಸಿ, ನರಗುಂದವೂ ಭಾರತದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಭದ್ರಸ್ಥಾನ ಪಡೆವಂತೆ ಮಾಡಿದರು.

ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?

ಭಾರತದಲ್ಲಿರುವ ಮೂರು ಬೃಹತ್ ರಾಷ್ಟ್ರ ದ್ಹಜಗಳಲ್ಲಿ ಒಂದನ್ನು ಪ್ರತಿವರ್ಷವೂ ನರಗುಂದ ಬೆಟ್ಟದಲ್ಲಿ ಹಾರಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ರತಿ ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣವಾಗುವ ರಾಷ್ಟ್ರಧ್ವಜ ನರಗುಂದದ ಖಾದಿ ಗ್ರಾಮೋದ್ಯೋಗದಲ್ಲೇ ತಯಾರಾಗುವಂಥದು.

Karnataka Assembly Election 2018: Nargund Constituency Profile

ನರಗುಂದ ಗುಡ್ಡ ನೋಡುವುದಕ್ಕೆ ಮಲಗಿದ ಸಿಂಹದಂತೆಯೇ ಕಾಣಿಸುತ್ತದೆ! ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಹಾಗೂ ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದೆ. ಇಲ್ಲಿನ ಪುರಸಭೆಯ ಎದುರಿಗೆ 1857 ರ ದಂಗೆಯ ಬಾಬಾಸಾಹೇಬನ ಎದೆಮಟ್ಟದ ಆಧುನಿಕ ಪ್ರತಿಮೆ ಇದೆ. ಮಲಪ್ರಭಾ ನದಿಯ ನೀರಾವರಿಯಿಂದಾಗಿ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ನರಗುಂದ ತನ್ನ ಹತ್ತಿ ಬೆಳೆಗೆ ಪ್ರಸಿದ್ಧವಾಗಿದೆ.

ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?

ಇನ್ನು ಇಲ್ಲಿನ ರಾಜಕೀಯ ಚಿತ್ರಣದ ಬಗ್ಗೆ ಯೋಚಿಸುವುದಾದರೆ ಬಿಜೆಪಿಯ ಸ್ಥಳಿಯ ನಾಯಕರ ಅಪ್ರಬುದ್ಧ ಹೇಳಿಕೆಗಳು ಎದುರಾಳಿ ಕಾಂಗ್ರೆಸ್ ಗೆ ಲಾಭವಾಗಬಹುದು. ಕಳಸಾಬಂಡೂರಿ ಹೋರಾಟವೂ ಇಲ್ಲಿನ ರಾಜಕೀಯದ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಗೆದ್ದಿರುವ ಬಿ.ಆರ್.ಯಾವಗಲ್ ಅವರಿಗೆ ಮತ್ತೊಮ್ಮೆ ಮತದಾರರನ್ನು ಸೆಳೆಯುವುದು ಕಷ್ಟದ ಕೆಲಸವಾಗಲಾರದು.

2013 ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ನ ಬಿ.ಆರ್.ಯಾವಗಲ್ 59620 ಮತ ಪಡೆದಿದ್ದರೆ, ಬಿಜೆಪಿಯ ಸಿ ಸಿ ಪಾಟೀಲ್ 51035 ಮತ ಗಳಿಸಿದ್ದರು.

English summary
Karnataka Assembly Election 2018: Read all about Nargund assembly constituency of Gadag district. Get election news from Nargund. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X