• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂಜನಗೂಡು : ಶ್ರೀನಿವಾಸ, ಕೇಶವ ಯಾರಿಗೆ ಜಯ?

By Mahesh
|

ಕಪಿಲ ನದಿ ತೀರದ ಪ್ರಮುಖ ಧಾರ್ಮಿಕ, ಐತಿಹಾಸಿಕ ಪಟ್ಟಣ ನಂಜನಗೂಡಿನಲ್ಲಿ ಈ ಬಾರಿ ಬಿಸಿಲಿನ ಬಾಳೆಹಣ್ಣು ತಿನ್ನುತ್ತಾ ಎಲ್ಲಾ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಓಡಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಖಚಿತವಾಗಿಲ್ಲ. ಯಾರು ಗೆಲ್ಲಬಹುದು ಎಂಬುದನ್ನು ಊಹಿಸುವುದು ಈ ಬಾರಿ ಕಷ್ಟ.

ಸುಮಾರು 188ಕ್ಕೂ ಅಧಿಕ ಗ್ರಾಮಗಳನ್ನು ಒಳಗೊಂಡ ನಂಜನಗೂಡು ಕ್ಷೇತ್ರ ತಕ್ಕಮಟ್ಟಿಗೆ ಸುಭಿಕ್ಷವಾಗಿದೆ. ನೀರಾವರಿ, ಖನಿಜ ಭೂಮಿ ಒಳಗೊಂಡಿದ್ದು, ಭತ್ತ, ಕಬ್ಬು, ಕಡಲೆಕಾಯಿ, ಧಾನ್ಯಗಳು ಪ್ರಮುಖ ಬೆಳೆಯಾಗಿವೆ. ಜೋಳ, ರಾಗಿ ಸೀಸನ್ ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಇನ್ನು ನಂಜನಗೂಡಿನ ರಸಬಾಳೆ ಜಗತ್ ಪ್ರಸಿದ್ಧ.

ಬಟ್ಟೆ ಗಿರಣಿ, ಕಾಗದದ ಕಾರ್ಖಾನೆ, ಔಷಧ ಮತ್ತು ಸುಗಂಧ ದ್ರವ್ಯಗಳ ಕಾರ್ಖಾನೆ, ಅಕ್ಕಿ ಗಿರಣಿಗಳು ಮತ್ತು ಮರ ಕೊಯ್ಯುವ ಕಾರ್ಖಾನೆಗಳು, ರೇಷ್ಮೆ ಉದ್ಯಮವಿದೆ. ವಿದ್ಯುತ್ ಪೂರೈಕೆ ಎಲ್ಲೆಡೆ ಸಮರ್ಪಕವಾಗಿ ಸಿಗುತ್ತಿದೆ. ಉದಕಮಂಡಲಕ್ಕೆ ತೆರಳುವ ಹೆದ್ದಾರಿ, ಮೈಸೂರು-ಚಾಮರಾಜನಗರ ಜಿಲ್ಲೆ ರೈಲು ಮಾರ್ಗವಿದೆ.

ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?

ಕಳಲೆ, ದೇವನೂರು, ಹೆಡತಲೆ, ಸುತ್ತೂರು, ದೇವನೂರುಗಳಲ್ಲಿನ ದೇಗುಲಗಳು, ಮಠಗಳು ಪ್ರಭಾವಿಯಾಗಿವೆ. ಆಸ್ಪತ್ರೆ ಮತ್ತು ಪಶುವೈದ್ಯಶಾಲೆ, ಶಾಲೆಗಳಿದ್ದರೂ, ಉನ್ನತಮಟ್ಟದ ವ್ಯಾಸಂಗಕ್ಕೆ ಮೈಸೂರನ್ನು ಆಶ್ರಯಿಸಬೇಕಾಗಿದೆ.

ಜೆಡಿಎಸ್ ಇಲ್ಲಿ ಜಯ ಸಾಧಿಸುವ ಲೆಕ್ಕಾಚಾರ

ಜೆಡಿಎಸ್ ಇಲ್ಲಿ ಜಯ ಸಾಧಿಸುವ ಲೆಕ್ಕಾಚಾರ

ಇಲ್ಲಿ ಕಾಂಗ್ರೆಸ್ ತೊರೆದ ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿಯ ನಾಯಕರಾಗಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ ವಿರುದ್ಧ ಸೋಲು ಕಂಡಿದ್ದಾರೆ. ಕೇಶವಮೂರ್ತಿ ಅವರು ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಯಲ್ಲಿ ಜಾತ್ಯಾತೀತ ಜನತಾ ದಳಕ್ಕೆ ಲಾಭವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಶಿವಮೂರ್ತಿ ಅವರನ್ನು ಕಣಕ್ಕಿಳಿಸಲು ಸಜ್ಜಾಗಿರುವ ಜೆಡಿಎಸ್ ಇಲ್ಲಿ ಜಯ ಸಾಧಿಸುವ ಲೆಕ್ಕಾಚಾರದಲ್ಲಿ ತೊಡಗಿದೆ.

ಉಪಚುನಾವಣೆಯಿಂದಾಗಿ ನಂಜನಗೂಡು

ಉಪಚುನಾವಣೆಯಿಂದಾಗಿ ನಂಜನಗೂಡು

ಇತ್ತೀಚೆಗೆ, ಈ ಕ್ಷೇತ್ರದ ಉಪಚುನಾವಣೆಯಿಂದಾಗಿ ನಂಜನಗೂಡು ಸುದ್ದಿಯಲ್ಲಿತ್ತು. ಕಾಂಗ್ರೆಸ್ ತೊರೆದ ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿಯ ನಾಯಕರಾಗಿದ್ದಾರೆ ಇಲ್ಲಿ. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿ, ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ ವಿರುದ್ಧ ಸೋಲು ಕಂಡಾಗ ತಾವು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದ್ದರು ಶ್ರೀನಿವಾಸ್. ಆದರೆ, ಬಿಜೆಪಿ ನಾಯಕರು ಸತತವಾಗಿ ಮನವೊಲಿಸಿದರೆ ಅವರು ಮತ್ತೆ ಚುನಾವಣೆ ಅಖಾಡಕ್ಕೆ ಇಳಿಯಬಹುದು.

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು

ಆದರೆ, ಕಳಲೆ ಕೇಶವಮೂರ್ತಿಯವರದ್ದು ಇಲ್ಲಿ ಆಕಸ್ಮಿಕ ಗೆಲುವುದು ಎಂಬ ಅನಿಸಿಕೆ ಕಾಂಗ್ರೆಸ್ ವಲಯದಲ್ಲೇ ಇರುವುದರಿಂದ, ಈ ಬಾರಿ ಕೇಶವ ಮೂರ್ತಿ ಬದಲಿಗೆ ಬೇರೆಯವರನ್ನು ಕಣಕ್ಕಿಳಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಹಾಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಯಲ್ಲಿ ಜಾತ್ಯಾತೀತ ಜನತಾ ದಳಕ್ಕೆ ಲಾಭವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಶಿವಮೂರ್ತಿ ಅವರನ್ನು ಕಣಕ್ಕಿಳಿಸಲು ಸಜ್ಜಾಗಿರುವ ಜೆಡಿಎಸ್ ಇಲ್ಲಿ ಜಯ ಸಾಧಿಸುವ ಲೆಕ್ಕಾಚಾರದಲ್ಲಿ ತೊಡಗಿದೆ.

ಆದರೆ, ಮೈಸೂರಿನವರಾದ ಬೆಳವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಳವಾಡಿ ಶಿವಮೂರ್ತಿ, ಪಾಲಿಕೆಯ ಮಾಜಿ ಸದಸ್ಯ ಆರ್‌.ಸೋಮಸುಂದರ್‌ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಕೋಟೆ ಎಂ.ಶಿವಣ್ಣ ಪ್ರಬಲ ಟಿಕೆಟ್‌ ಆಕಾಂಕ್ಷಿಗಳು

ಕೋಟೆ ಎಂ.ಶಿವಣ್ಣ ಪ್ರಬಲ ಟಿಕೆಟ್‌ ಆಕಾಂಕ್ಷಿಗಳು

ಎಸ್‌.ಮಹದೇವಯ್ಯ, ಜಿಲ್ಲಾ ಪಂಚಾಯತ್‌ ಸದಸ್ಯ ಎಚ್‌.ಎಸ್‌. ದಯಾನಂದಮೂರ್ತಿ, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಪ್ರಬಲ ಟಿಕೆಟ್‌ ಆಕಾಂಕ್ಷಿಗಳು. ಮಹದೇವಯ್ಯ ಕಳೆದ ಉಪ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್‌ ಅವರಿಗಾಗಿ ಪಕ್ಷದ ಟಿಕೆಟ್‌ ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಸೋತು ಮುಖಂಡರು ಸ್ವಲ್ಪ ನಿಷ್ಕ್ರಿಯರಾಗಿದ್ದಾಗ ಮುನ್ನುಗ್ಗಿ ಕಾರ್ಯಕರ್ತರನ್ನು ಹುರಿದುಂಬಿಸಿ ಸಂಘಟನೆಯಲ್ಲಿ ತೊಡಗಿದವರು ದಯಾನಂದಮೂರ್ತಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Election 2018: Read all about Mysore district Nanjangud assembly constituency of Mysuru. Get election news from Nanjangud, Mysuru district. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more