ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಬಿಜೆಪಿಗೆ ಒಲಿಯದ ಕಾಂಗ್ರೆಸ್ ಭದ್ರಕೋಟೆ ಮೂಡಬಿದಿರೆ

By Sachhidananda Acharya
|
Google Oneindia Kannada News

ಮಂಗಳೂರು ತಾಲೂಕಿಗೆ ಒಳಪಡುವ ವಿಧಾನಸಭಾ ಕ್ಷೇತ್ರವಿದು. ಸದ್ಯ ಮೂಡಬಿದಿರೆ ತಾಲೂಕಾಗಿದೆ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 34 ಕಿಲೋ ಮೀಟರ್ ದೂರದಲ್ಲಿದೆ. ಸಾವಿರ ಕಂಬದ ಬಸದಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ಇನ್ನೂ ಹಲವಾರು ಕಾಲೇಜುಗಳನ್ನು ಹೊಂದಿರುವ ಆಧುನಿಕ ಶಿಕ್ಷಣ ಕಾಶಿ ಮೂಡಬಿದಿರೆ.

ಕರಾವಳಿ ಜಿಲ್ಲೆಗಳಲ್ಲಿ ಕೆರೆಗಳು ಅಪರೂಪವಾದರೂ ಮೂಡಬಿದಿರೆ ಅದಕ್ಕೆ ಅಪವಾದ. ಇಲ್ಲಿ 18 ಕೆರೆಗಳು ಕಾಣ ಸಿಗುತ್ತವೆ. ಕೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೈನ ಮತದಾರರಿದ್ದಾರೆ. ಹಾಲಿ ಶಾಸಕ ಅಭಯಚಂದ್ರ ಜೈನ್ ಕೂಡಾ ಜೈನ ಸಮುದಾಯದವರೇ ಆಗಿದ್ದಾರೆ.

ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?

ಇಲ್ಲಿ ಕಾಂಗ್ರೆಸ್ ಗೆದ್ದಿದೆ. ಜೆಡಿಎಸ್ ಗೆದ್ದಿದೆ. 1983ಕ್ಕೂ ಹಿಂದೆ ಜನತಾ ಪಕ್ಷವೂ ಗೆದ್ದಿದೆ. ಆದರೆ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಕ್ಷೇತ್ರಗಳಲ್ಲಿ ಒಂದಲ್ಲ ಒಂದು ಬಾರಿ ಬಿಜೆಪಿ ಗೆದ್ದಿದೆ. ಮುಸ್ಲಿಂ ಬಾಹುಳ್ಯದ ಉಳ್ಳಾಲದಲ್ಲೂ ಒಮ್ಮೆ ಕೇಸರಿ ಪಕ್ಷ ತನ್ನ ಬಾವುಟ ಊರಿದೆ. ಆದರೆ ಬಿಜೆಪಿ ಪಾಲಿಗೆ ಒಲಿಯದ ಕರಾವಳಿಯ ಏಕೈಕ ಕ್ಷೇತ್ರವೆಂದರೆ ಅದು ಮೂಡಬಿದಿರೆ.

Karnataka Assembly Election 2018: Moodabidri Constituency Profile

ಇಲ್ಲಿ 1983, 85ರಲ್ಲಿ ಜನತಾ ಪಕ್ಷ ಮತ್ತು 94ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದು ಅಮರನಾಥ ಶೆಟ್ಟಿ ಸಚಿವರೂ ಆಗಿದ್ದರು. ಬೆಳ್ತಂಗಡಿ ಬಿಟ್ಟರೆ ದಕ್ಷಿಣ ಕನ್ನಡದಲ್ಲಿ ಜನತಾ ದಳದ ಧ್ವಜ ಹಾರಾಡಿದ ಮತ್ತೊಂದು ಕ್ಷೇತ್ರ ಇದಾಗಿತ್ತು. ಸದ್ಯ ಅಮರನಾಥ ಶೆಟ್ಟಿ ಜಾತ್ಯಾತೀತ ಜನತಾ ದಳದಲ್ಲಿದ್ದಾರೆ. ಆದರೆ ಹಿಂದಿನ ಚಾರ್ಮ್ ಇವತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಜೆಡಿಎಸ್ ಮತಗಳಿಕೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದೇ ಕಾಲಕ್ಕೆ ಬಿಜೆಪಿ ತನ್ನ ಮತಗಳಿಕೆ ಹೆಚ್ಚಿಸಿಕೊಂಡು ಸಾಗಿದೆ.

1999ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಹಾಲಿ ಶಾಸಕ ಅಭಯಚಂದ್ರ ಜೈನ್ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. ಮೊದಲ ಯತ್ನದಲ್ಲೇ ಅವರು ಮೂರು ಬಾರಿಯ ಶಾಸಕ ಅಮರನಾಥ ಶೆಟ್ಟರಿಗೆ ಸೋಲುಣಿಸಿದ್ದರು. ಅಲ್ಲಿಂದ ಅಭಯಚಂದ್ರ ಜೈನ್ ನಾಗಾಲೋಟಕ್ಕೆ ತಡೆ ಒಡ್ಡಲು ಯಾರಿಗೂ ಸಾಧ್ಯವಾಗಿಲ್ಲ.

ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?

1999, 2004, 2008, 2013... ಹೀಗೆ ಇಲ್ಲಿಯವರೆಗೆ ಸತತ 4 ಚುನಾವಣೆಗಳಲ್ಲಿ ಅಭಯಚಂದ್ರ ಜೈನ್ ಮೂಡಬಿದಿರೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಜೈನ್ ಸಚಿವರಾಗಿಯೂ ನೇಮಕವಾಗಿದ್ದರು; ಆದರೆ ಕಳಪೆ ಸಾಧನೆಗಳ ಕಾರಣಕ್ಕೆ ಸಂಪುಟದಿಂದ ಮುಂದೆ ಅವರನ್ನು ಕೈ ಬಿಡಲಾಯಿತು.

ಇತ್ತೀಚಿಗಿನ ವರ್ಷಗಳಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತಗಳಿಕೆ ಅಂತರ ಕಡಿಮೆಯಾಗಿದ್ದನ್ನು ಗಮನಿಸಬಹುದು. 2008ರಲ್ಲಿ 10 ಸಾವಿರ ಮತಗಳಿಂದ ಗೆದ್ದಿದ್ದ ಜೈನ್, 2013ರಲ್ಲಿ ಕಾಂಗ್ರೆಸ್ ಪರ ಅಲೆ ಇದ್ದೂ 5 ಸಾವಿರ ಮತಗಳ ಅಂತರದಿಂದ ಪ್ರಯಾಸದ ಗೆಲುವು ದಾಖಲಿಸಿದ್ದರು. ಈ ಚುನಾವಣೆಯಲ್ಲಿ ಜೈನ್ 53,180 ಮತಗಳನ್ನು ಪಡೆದರೆ ಬಿಜೆಪಿಯ ಉಮಾನಾಥ ಕೋಟ್ಯಾನ್ 48,630 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ, ಮೂರು ಬಾರಿಯ ಶಾಸಕ ಅಮರನಾಥ ಶೆಟ್ಟಿ 20,471 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಜಾರಿದ್ದರು.

2018ರ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂದು ಅಭಯಚಂದ್ರ ಜೈನ್ ಈಗಾಗಲೇ ಹೇಳಿರುವುದರಿಂದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದೇ ಕುತೂಹಲಕಾರಿಯಾಗಿದೆ. ಈಗಾಗಲೇ ಜೈನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಟವೆಲ್ ಹಾಕಿದ್ದಾರೆ. ಅದಕ್ಕೆ ಬೇಕಾದ ಭರ್ಜರಿ ಸಿದ್ಧತೆಗಳನ್ನೂ ಅವರು ನಡೆಸಿದ್ದಾರೆ.

ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಕಳೆದ ಬಾರಿ ಸೋತಗ ಉಮಾನಾಥ ಕೋಟ್ಯಾನ್, 2008ರಲ್ಲಿ ಸೋತ ಜಗದೀಶ್ ಅಧಿಕಾರಿ ನಡುವೆ ಪ್ರಬಲ ಪೈಪೋಟಿ ಇದೆ. ಜತೆಗೆ ಉಳಿದ ಕೆಲವು ನಾಯಕರೂ ಟಿಕೆಟ್ ಬಯಸಿದ್ದಾರೆ. ತನಗೆ ಎಂದೂ ಒಲಿಯದ ಮೂಡಬಿದಿರೆ ಕ್ಷೇತ್ರದಲ್ಲಿ ಈ ಬಾರಿಯಾದರೂ ಬಿಜೆಪಿ ಗೆಲುವು ಸಾಧಿಸುತ್ತಾ ಕಾದು ನೋಡಬೇಕಿದೆ.

English summary
Karnataka Assembly Election 2018: Read all about Moodabidri assembly constituency of Dakshina Kannada district. Get election news from Moodabidri. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X