ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಸಕ್ಕರೆ ನಾಡು ಮಂಡ್ಯಕ್ಕೆ ಯಾರು ಹೊಸ ಅಧಿಪತಿ?

By Mahesh
|
Google Oneindia Kannada News

ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಜಿಲ್ಲೆಯೆಂದರೆ ಅದು ಮಂಡ್ಯ ಮಾತ್ರ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ತಾಲೂಕು ಆಗಿದ್ದ ಮಂಡ್ಯವನ್ನು ಆನಂತರ, ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಿತು.

ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಜಿಲ್ಲೆಯೆಂದರೆ ಅದು ಮಂಡ್ಯ ಮಾತ್ರ. ಬರದ ನಾಡಾಗಿದ್ದ ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿ ಮಂಡ್ಯ ಜಿಲ್ಲೆಯಲ್ಲಿ ಹಸಿರು ತುಂಬಿ ತುಳುಕುವಂತೆ ಮಾಡಿದರು.

ಮಂಡ್ಯ ಜಿಲ್ಲೆಯ ಮತದಾರರ ಪಟ್ಟಿ ಅಂತಿಮಮಂಡ್ಯ ಜಿಲ್ಲೆಯ ಮತದಾರರ ಪಟ್ಟಿ ಅಂತಿಮ

ಎಸ್ಸೆಂ ಕೃಷ್ಣ ಅವರಂಥ ರಾಷ್ಟ್ರಮಟ್ಟದ ರಾಜಕಾರಣಿ, ಅಂಬರೀಷ್ ರಂಥ ಜನಪ್ರಿಯ ನಾಯಕ, ಕೆ.ಎಸ್ ಪುಟ್ಟಣ್ಣಯ್ಯ ರಂಥ್ ರೈತ ಮುಖಂಡರನ್ನು ನೀಡಿದೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 4 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಮಂಡ್ಯ ಕ್ಷೇತ್ರಕ್ಕೆ ಹಾಲಿ ಶಾಸಕ ಅಂಬರೀಶ್ ಅವರು ಅಭ್ಯರ್ಥಿ ಎಂದು ತೀರ್ಮಾನಿಸಲಾಗಿತ್ತು. ಆದರೆ, ಅಂಬರೀಶ್ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಕಾಂಗ್ರೆಸ್ಸಿನಿಂದ ಗಣಿಗ ರವಿ ಕಣಕ್ಕಿಳಿದಿದ್ದಾರೆ.

ಪ್ರಾತಃ ಸ್ಮರಣೀಯ ನಾಲ್ವಡಿ ಕೃಷ್ಣರಾಜ ಒಡೆಯರ್

ಪ್ರಾತಃ ಸ್ಮರಣೀಯ ನಾಲ್ವಡಿ ಕೃಷ್ಣರಾಜ ಒಡೆಯರ್

ಮಂಡ್ಯ ಜಿಲ್ಲೆಯ ಜನರು ನಿಜಕ್ಕೂ ಸ್ಮರಿಸಬೇಕಾದ್ದದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು. ಬರದ ನಾಡಾಗಿದ್ದ ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿ ಮಂಡ್ಯ ಜಿಲ್ಲೆಯಲ್ಲಿ ಹಸಿರು ತುಂಬಿ ತುಳುಕುವಂತೆ ಮಾಡಿದರು.

ಶ್ರೀರಂಗಪಟ್ಟಣ ತಾಲೂಕಿನಲ್ಲಿ 1912ರಲ್ಲಿ ಆರಂಭಗೊಂಡಿದ್ದ ಅಣೆಕಟ್ಟು, 1935ರ ವೇಳೆಗೆ ಪೂರ್ಣಗೊಂಡು ಈ ಭಾಗದ ರೈತರ ಜೀವನಾಡಿಯಾಯಿತು

 ಜೆಡಿಎಸ್ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ.

ಜೆಡಿಎಸ್ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ.

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 4 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ, ಮಂಡ್ಯದಲ್ಲಿ ಕಾಂಗ್ರೆಸ್ಸಿಗೆ ಅಂಬರೀಷ್ ಅವರ ಬಲವಿತ್ತು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂಬರೀಷ್ ಅವರು ಬೆಂಬಲಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಮಂಡ್ಯ ಕ್ಷೇತ್ರವನ್ನು ವಶಕ್ಕೆ ಪಡೆಯಲು ಜೆಡಿಎಸ್ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ.

ಮಂಡ್ಯದಲ್ಲಿನ ಮತದಾರರು

ಮಂಡ್ಯದಲ್ಲಿನ ಮತದಾರರು

ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಮಂಡ್ಯದಲ್ಲಿ 2,21,555 (1,09,834 ಪುರುಷ, 1,11,721 ಮಹಿಳೆ) ಮತದಾರರಿದ್ದಾರೆ. ಒಕ್ಕಲಿಗರ ಮತಗಳು ಇಲ್ಲಿ ನಿರ್ಣಾಯಕ.

2013ರ ಫಲಿತಾಂಶ

2013ರ ಫಲಿತಾಂಶ

ಒಟ್ಟು 22 ಮಂದಿ ನಾಮಪತ್ರ ಸಲ್ಲಿಸಿದ್ದರು ಈ ಪೈಕಿ ಮೂವರು ನಾಮಪತ್ರ ಹಿಂಪಡೆದರು. 19 ಮಂದಿ ಸ್ಪರ್ಧಿಗಳ ಪೈಕಿ 17 ಮಂದಿ ಠೇವಣಿ ಕಳೆದುಕೊಂಡರು.

ಶೇ 68.58ರಷ್ಟು ಮತದಾನವಾಗಿತ್ತು. ಸುಮಾರು 152818 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಚ್ ಅಂಬರೀಷ್ ಅವರು 90329 ಮತಗಳನ್ನು ಪಡೆದುಕೊಂಡು 42937 ಮತಗಳ (ಶೇ 28.10) ಅಂತರದಿಂದ ಜೆಡಿಎಸ್ ನ ಎಂ ಶ್ರೀನಿವಾಸ (47392 ಮತಗಳು) ಅವರನ್ನು ಸುಲಭವಾಗಿ ಸೋಲಿಸಿದ್ದರು.

English summary
Karnataka Assembly Election 2018: Read all about Mandya district Mandya assembly constituency of Mandya. Get election news from Mandya district. Know about Mandya candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X