ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಮಳವಳ್ಳಿಯಲ್ಲಿ ಯಾರಿಗೆ ಗೆಲುವು?

|
Google Oneindia Kannada News

ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಮಳವಳ್ಳಿ. ಕಾವೇರಿ ನದಿಯ ಶಿವನಸಮುದ್ರ ಜಲಾಶಯ, ಗಗನಚುಕ್ಕಿ ಮತ್ತು ಬರಚುಕ್ಕಿ ಮಳವಳ್ಳಿ ತಾಲೂಕಿನ ಅತ್ಯಂತ ಪ್ರಮುಖ ಪ್ರವಾಸಿ ತಾಣ.

ಇಡೀ ಏಷ್ಯಾ ಖಂಡದಲ್ಲೇ ಮೊದಲಬಾರಿಗೆ 1905 ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಶಿವನಸಮುದ್ರದಲ್ಲಿ ಸ್ಥಾಪಿಸಲಾಗಿತ್ತು. ಸುಮಾರು 90 ಮೀಟರ್ ಎತ್ತರದಿಂದ ಕಾವೇರಿಯು ಇಲ್ಲಿ ಧುಮ್ಮಿಕ್ಕುತ್ತದೆ.

ಕೃಷ್ಣರಾಜ ಒಡೆಯರ ಕನಸಿನ ಕೆ.ಆರ್ ಪೇಟೆ ಕ್ಷೇತ್ರ ಪರಿಚಯಕೃಷ್ಣರಾಜ ಒಡೆಯರ ಕನಸಿನ ಕೆ.ಆರ್ ಪೇಟೆ ಕ್ಷೇತ್ರ ಪರಿಚಯ

ರಾಜಕೀಯವಾಗಿ ಹಿರಿಯ ಗಾಂಧಿವಾಧಿ, ರಾಜಕಾರಣಿ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ರಾಜಕೀಯ ನೆಲೆ ಕಂಡುಕೊಂಡ ಕ್ಷೇತ್ರ ಮಳವಳ್ಳಿ. 1962ರಲ್ಲಿ ಮೊದಲ ಬಾರಿಗೆ ಅವರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

Karnataka Assembly Election 2018: Malavalli constituency profile

1957 ರಿಂದ 2013ರ ತನಕ ನಡೆದ ಚುನಾವಣೆಯಲ್ಲಿ 1962ರ ಚುನಾವಣೆಯನ್ನು ಹೊರತುಪಡಿಸಿದರೆ ಎಲ್ಲಾ ಚುನಾವಣೆಯಲ್ಲಿ ಕ್ಷೇತ್ರ ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಪಿ.ಎಂ.ನರೇಂದ್ರ ಸ್ವಾಮಿ.

ಕ್ಷೇತ್ರ ಪರಿಚಯ : ಸಕ್ಕರೆ ನಾಡು ಮಂಡ್ಯಕ್ಕೆ ಯಾರು ಹೊಸ ಅಧಿಪತಿ?ಕ್ಷೇತ್ರ ಪರಿಚಯ : ಸಕ್ಕರೆ ನಾಡು ಮಂಡ್ಯಕ್ಕೆ ಯಾರು ಹೊಸ ಅಧಿಪತಿ?

ಪಿ.ಎಂ.ನರೇಂದ್ರ ಸ್ವಾಮಿ ಅವರು ಕಳೆದ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿ 2008, 2013ರಲ್ಲಿ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಪಕ್ಷೇತರ ಶಾಸಕರಾಗಿದ್ದ ಅವರು ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿ, ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ಅವರು ಕಾಂಗ್ರೆಸ್‌ ಅಭ್ಯರ್ಥಿ, ಸಿದ್ದರಾಮಯ್ಯ ಆಪ್ತರು.

2013ರ ಚುನಾವಣೆಯಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರು 61,869 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್‌ನ ಡಾ.ಕೆ.ಅನ್ನದಾನಿ ಅವರು 61,331 ಮತಗಳನ್ನು ಪಡೆದಿದ್ದರು. ಬಿಜೆಪಿಯ ಡಿ.ಎನ್.ಕುಮಾರಸ್ವಾಮಿ ಅವರು 1,697 ಮತಗಳನ್ನು ಪಡೆದು 9ನೇ ಸ್ಥಾನ ಪಡೆದಿದ್ದರು.

English summary
Read all about Mandya district Malavalli assembly constituency of Mandya. Get election news from Mandya district. Know about Malavalli candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X