ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಲಿಂಗಸಗೂರು ಕ್ಷೇತ್ರದಲ್ಲಿ ಯಾರಿಗೆ ಜಯ?

|
Google Oneindia Kannada News

ರಾಯಚೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ ಲಿಂಗಸಗೂರು. ಹಲವಾರು ದೇವಾಲಯಗಳು, ಬೆಟ್ಟ ಕ್ಷೇತ್ರದ ಪ್ರಮುಖ ಆಕರ್ಷಣೆ. ಮುದಗಲ್‌ ನಲ್ಲಿರುವ ಪುರಾತನ ಕೋಟೆ ಪ್ರಸಿದ್ಧಿ ಪಡೆದಿದೆ.

ಲಿಂಗಸಗೂರಿನಿಂದ ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌ಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಹೈದರಾಬಾದ್ ವಿಮಾನ ನಿಲ್ದಾಣ ಕ್ಷೇತ್ರಕ್ಕೆ ತುಂಬಾ ಹತ್ತಿರವಾಗಿದೆ. ಪಟ್ಟಣ್ಣದಿಂದ ವಿವಿಧ ಗ್ರಾಮಗಳಿಗೆ ಹಲವು ಕೆಎಸ್ಆರ್‌ಟಿಸಿ ಬಸ್ಸುಗಳು ಸಂಚಾರ ನಡೆಸುತ್ತವೆ.

ಕ್ಷೇತ್ರ ಪರಿಚಯ : ಮಾನ್ವಿಯಲ್ಲಿ ಗೆಲ್ಲುವವರು ಯಾರು?ಕ್ಷೇತ್ರ ಪರಿಚಯ : ಮಾನ್ವಿಯಲ್ಲಿ ಗೆಲ್ಲುವವರು ಯಾರು?

ಪಟ್ಟಣ್ಣದ ಹೊರವಲಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಹರಿಯುತ್ತದೆ. ಕೆರೆಗಳಿಗೆ ನೀರನ್ನು ಹರಿಸಿ ಕುಡಿಯುವ ನೀರು ಒದಗಿಸಲಾಗುತ್ತದೆ. ಕ್ಷೇತ್ರದ ವ್ಯಾಪ್ತಿಯ ಹಲವು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿಲ್ಲ.

Karnataka Assembly Election 2018 : Lingsugur constituency profile

ವಿಶ್ವಸಂಸ್ಥೆಯ ವರದಿ ಪ್ರಕಾರ ದಕ್ಷಿಣ ಭಾರತದಲ್ಲಿ ಅಂತರ್‌ ಜಲದಲ್ಲಿ ಆರ್ಸೆನಿಕ್ ಕಂಡುಬಂದಿರುವುದು ರಾಯಚೂರು ಜಿಲ್ಲೆಯಲ್ಲಿ. ಅದರಲ್ಲಿ ಹಲವು ಗ್ರಾಮಗಳು ಲಿಂಗಸಗೂರು ಕ್ಷೇತ್ರಕ್ಕೆ ಸೇರಿವೆ.

ರಾಜಕೀಯವಾಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಏಕೈಕ ಕ್ಷೇತ್ರ ಲಿಂಗಸಗೂರು. ಜೆಡಿಎಸ್ ವಶದಲ್ಲಿದೆ ಕ್ಷೇತ್ರ, ಬೋವಿ ಸಮುದಾಯದ ಮಾನಪ್ಪ ವಜ್ಜಲ್ ಶಾಸಕರಾಗಿದ್ದರು. ಕೆಲವು ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

2008ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರವನ್ನು ಜೆಡಿಎಸ್ ಕೈವಶ ಮಾಡಿಕೊಳ್ಳಲು ಕಾರಣ ಬಿಜೆಪಿ-ಕೆಜೆಪಿ ನಡುವಿನ ಮತ ಹಂಚಿಕೆ. ವಜ್ಜಲ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗಾಗಿ ಎ.ವಸಂತ ಕುಮಾರ್ ಪ್ರಯತ್ನ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ಎನ್‌.ಎಸ್.ಬೋಸರಾಜು ಅವರು ವಸಂತ ಕುಮಾರ್ ಅವರಿಗೆ ಟಿಕೆಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾವಿ ನಾಯಕ ಎಂದು ಹೆಸರುಗಳಿಸಿರುವ ಬಿ.ಎಫ್.ಹೂಲಿಗೇರಿ ಅವರ ಹೆಸರು ಟಿಕೆಟ್‌ಗೆ ಕೇಳಿಬರುತ್ತಿದೆ.

ಬಿಜೆಪಿಯಲ್ಲಿ ಕುಳಸಿದ್ದು ಬಂಡಿ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಗೋವಿಂದ ಕಾರಜೋಳ ಅವರ ಪುತ್ರ ರವಿ ಕಾರಜೋಳರಿಗೆ ಟಿಕೆಟ್ ಕೊಡಿಸುವ ಪ್ರಯತ್ನವೂ ನಡೆದಿದೆ. ಕ್ಷೇತ್ರವನ್ನು ಉಳಿಸಿಕೊಳ್ಳಲು, ವಜ್ಜಲ್‌ಗೆ ಪಾಠ ಕಲಿಸಲು ಜೆಡಿಎಸ್‌ ಯಾರಿಗೆ ಟಿಕೆಟ್ ನೀಡಲಿದೆ? ಎಂಬುದು ಕುತೂಹಲದ ಪ್ರಶ್ನೆ.

2013ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ 31,737, ಕಾಂಗ್ರೆಸ್‌ನ ಡಿ.ಎಸ್.ಹೂಲಗೇರಿ 30,451, ಬಿಜೆಪಿಯ ಟಿ.ಆರ್.ನಾಯಕ್ 13,545 ಮತಗಳನ್ನು ಪಡೆದಿದ್ದಾರೆ.

English summary
Karnataka Assembly Election 2018 : Read all about Lingsugur constituency of Raichur district. Get election news from Lingsugur. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X