ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಚಿ : ಮೂಲ ಸೌಕರ್ಯ ವಂಚಿತ ಕ್ಷೇತ್ರಕ್ಕೆ ಯಾರು ದಿಕ್ಕು?

By Mahesh
|
Google Oneindia Kannada News

ಕೃಷ್ಣೆ ತಟದ ಕ್ಷೇತ್ರ ಕುಡಚಿಗೆ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸಮರ್ಪಕವಾಗಿ ನೀರಿನ ನಿರೀಕ್ಷೆ ಹುಸಿಯಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿದೆ. ರಸ್ತೆ, ಕುಡಿವ ನೀರು, ಮೂಲ ಸೌಕರ್ಯಗಳ ಬಗ್ಗೆ ದೂರಗಳ ಸುರಿಮಳೆಯಾಗುತ್ತಿದೆ. ಮೀಸಲು ಕ್ಷೇತ್ರವಾದರೂ ಸರಿಯಾದ ಪೋಷಣೆ ಸಿಕ್ಕಿಲ್ಲ. ಬೆಳಗಾವಿ ಜಿಲ್ಲೆಗಳ ಪೈಕಿ ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಆಶ್ವಾಸನೆ

ರಾಯಭಾಗ ಕ್ಷೇತ್ರ: ಬಿಜೆಪಿಯ ದುರ್ಯೋಧನ ಐಹೊಳೆಗೆ ಹ್ಯಾಟ್ರಿಕ್ ಜಯದ ಕನಸು ರಾಯಭಾಗ ಕ್ಷೇತ್ರ: ಬಿಜೆಪಿಯ ದುರ್ಯೋಧನ ಐಹೊಳೆಗೆ ಹ್ಯಾಟ್ರಿಕ್ ಜಯದ ಕನಸು

ಕಳೆದ ಬಾರಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಪಿ ರಾಜೀವ್ ಈ ಬಾರಿ ಬಿಜೆಪಿಯ ಸ್ಪರ್ಧಿ. ಪಿ ರಾಜೀವ್ ಕಳೆದ ಬಾರಿ 70787 ಮತಗಳು, ಕಾಂಗ್ರೆಸ್ ಅಮಿತ್ ಶಾಮ ಘಾಟ್ಗೆ 24751 ಮತಗಳು,ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್ (14257 ಮತಗಳು) ಸ್ಪರ್ಧಿಸಿ ಮೂರನೇ ಸ್ಥಾನ ಗಳಿಸಿದ್ದರು. ಈ ಬಾರಿ ಜೆಡಿಎಸ್ ನ ರಾಜೇಂದ್ರ ಅಪ್ಪಣ್ಣ ಐಹೊಳೆ ಕಣದಲ್ಲಿದ್ದಾರೆ.

Karnataka Assembly Election 2018: Kudachi constituency profile

2013ರ ಫಲಿತಾಂಶ:
ಕುಡಚಿಯಲ್ಲಿ 2013ರಲ್ಲಿ 17 ಮಂದಿ ನಾಮಪತ್ರ ಸಲ್ಲಿಸಿದ್ದರು. 6 ನಾಮಪತ್ರ ತಿರಸ್ಕೃತವಾಯಿತು. ಒಬ್ಬರು ನಾಮಪತ್ರ ಹಿಂಪಡೆದರು. 10 ಮಂದಿ ಸ್ಪರ್ಧಿಗಳ ಪೈಕಿ 8 ಮಂದಿ ಠೇವಣಿ ಕಳೆದುಕೊಂಡರು.

ಕಾಗವಾಡ ಕ್ಷೇತ್ರ ಪರಿಚಯ: ವಲಸಿಗರದ್ದೇ ಇಲ್ಲಿ ದರ್ಬಾರು!ಕಾಗವಾಡ ಕ್ಷೇತ್ರ ಪರಿಚಯ: ವಲಸಿಗರದ್ದೇ ಇಲ್ಲಿ ದರ್ಬಾರು!

ಒಟ್ಟು ಶೇ 78 ರಷ್ಟು ಮತದಾನವಾಗಿದ್ದು, 115375 ಮತಗಳ ಪೈಕಿ ಬಿಎಸ್ ಆರ್ ಕಾಂಗ್ರೆಸ್ಸಿನ ಪಿ ರಾಜೀವ್ ಅವರು 71057 ಮತಗಳನ್ನು ಗಳಿಸಿ ಜಯ ಸಾಧಿಸಿದರು. ಕಾಂಗ್ರೆಸ್ಸಿನ ಶ್ಯಾಮ ಭೀಮ ಘಾಟ್ಗೆ ಅವರು 24823 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. 46234 ಮತಗಳ (ಶೇ 40.07) ಅಂತರದಿಂದ ಜಯ ದಾಖಲಿಸಿದ್ದರು.

ಪಿ ರಾಜೀವ್ ಗೆಲ್ಲುವ ನಿರೀಕ್ಷೆ:
ಕಾಂಗ್ರೆಸ್ಸಿನಿಂದ 6ನೇ ಬಾರಿಗೆ ಶ್ಯಾಮ ಭೀಮ ಘಾಟ್ಗೆ ಮೂಲತಃ ರಾಯಭಾಗ ಕ್ಷೇತ್ರದವರು. ಮೊದಲ ಬಾರಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಪಿಎಸ್ ಐ ಪಿ. ರಾಜೀವ್ ಅವರು ಈಗ ಪ್ರಬಲ ಸ್ಪರ್ಧಿ ಹಾಗೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ. ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಮತ ವಿಭಜನೆ ಭೀತಿಯಿಲ್ಲ, ಮುಸ್ಲಿಮ್ ಹಾಗೂ ಪರಿಶಿಷ್ಟ ಮತದಾರರ ಒಲವು ಗಳಿಸಿರುವ ರಾಜೀವ್ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆಯಿದೆ.

English summary
Karnataka Assembly Election 2018: Read all about Belagavi district Kudachi assembly constituency of Belgaum. Get election news from Belagavi district. Know about Kudachi candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X