ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಎಂಇಎಸ್ ಹಿಡಿತದಿಂದ ಹೊರಬರುತ್ತದೆಯೇ ಖಾನಾಪುರ?

|
Google Oneindia Kannada News

ಬೆಳಗಾವಿ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಖಾನಾಪುರ ಬೆಳಗಾವಿ ನಗರದಿಂದ ದಸುಮಾರು 25 ಕಿ.ಮೀ.ದೂರದಲ್ಲಿದೆ.

ಕ್ಷೇತ್ರ ಪರಿಚಯ : ಸವದತ್ತಿ ಯಲ್ಲಮ್ಮ ಕೃಪೆಯಿಂದ ಯಾರಿಗೆ ಗೆಲುವು?ಕ್ಷೇತ್ರ ಪರಿಚಯ : ಸವದತ್ತಿ ಯಲ್ಲಮ್ಮ ಕೃಪೆಯಿಂದ ಯಾರಿಗೆ ಗೆಲುವು?

ಭಾಷಾರಾಜಕಾರಣದಿಂದಾಗಿ ಹಿಂದುಳಿದ ಪ್ರದೇಶವಾದ ಖಾನಾಪುರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಪ್ರಾಬಲ್ಯ ಹೆಚ್ಚು. ಭಾಷೆಯ ವಿಷಯವನ್ನಿಟ್ಟುಕೊಂಡು ಜನರ ನಡುವಲ್ಲಿ ಅಂತರ ಸೃಷ್ಟಿಸುವ ಕಾರ್ಯ ಇಲ್ಲಿ ಸದಾ ನಡೆಯುತ್ತಿದೆ. ಮರಾಠಿ ಭಾಷಿಕರು ಹೆಚ್ಚಿರುವ ಈ ಪ್ರದೇಶ ಸದಾ ರಾಜ್ಯ ಸರ್ಕಾರದಿಂದ ಕಡೆಗಣನೆಗೊಳಪಟ್ಟಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಇಲ್ಲಿನ ಮುಗ್ಧರನ್ನ ಬಳಸಿಕೊಂಡು ಎಂಇಎಸ್ ಇಲ್ಲಿನವರೆಗೆ ಅಧಿಕಾರ ಪಡೆದುಕೊಳ್ಳುತ್ತಾ ಬಂದಿದೆ. ಆದರೆ ಇತ್ತೀಚೆಗೆ ಜನರಲ್ಲೂ ಅರಿವು ಮೂಡಿದ್ದು, ಅಭಿವೃದ್ಧಿ ಗಾಳಿ ಬಿಸತೊಡಗಿದೆ. ಜನ ಭಾಷಾ ರಾಜಕಾರಣದಿಂದ ಆಚೆಬಂದು ಜೀವನಾವಶ್ಯಕ ಸೌಕರ್ಯಗಳ ಬಗ್ಗೆ ಬೇಡಿಕೆ ಇಡತೊಡಗಿದ್ದಾರೆ.

Karnataka Assembly Election 2018: Khanapur Constituency Profile

ಹಾಲಿ ಶಾಸಕ ಅರವಿಂದ ಪಾಟೀಲ ಬಗ್ಗೆ ಕೂಡ ಎಂಇಎಸ್ ನಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಮತ್ತು ಇವರಿಗೆ ಪ್ರತಿಸ್ಪರ್ಧಿಯಾಗಿ ಅಂಜಲಿ ನಿಂಬಾಳಕರ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಇಲ್ಲಿಂದ ಕಣಕ್ಕಿಳಿದು ಸೋತಿದ್ದರು. ಈಗ ಇದೇ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನತೆಗೆ ಚಿರ ಪರಿಚಿತರಾಗಿದ್ದಾರೆ. ಹೀಗಾಗಿ ಇವರು ಈ ಬಾರಿ ಇಲ್ಲಿನ ಜನರನ್ನ ಭಾಷಾರಾಜಕಾರಣದಿಂದ ಹೊರತರುವಲ್ಲಿ ಯಶಸ್ವಿಯಾಗಲಿದ್ದಾರೆ.

2013 ರ ವಿಧಾನಸಭಾ ಚುನಾವಣೆ ಫಲಿತಾಂಶ
ಅರವಿಂದ್ ಸಿ ಪಾಟೀಲ್-ಎಂಇಎಸ್(ಪಕ್ಷೇತರ)-37055 ಮತಗಳು
ರಫಿಕ್ ಕೆ ಖಾನಾಪುರಿ-ಕಾಂಗ್ರೆಸ್-20903 ಮತಗಳು
ಡಾ.ಅಂಜಲಿ ನಿಂಬಾಳ್ಕರ್-ಪಕ್ಷೇತರ-17686 ಮತಗಳು

English summary
Karnataka Assembly Election 2018: Read all about Khanapur assembly constituency of Belgaum(Belagavi) district. Get election news from Belagavi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X