ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಜಮಖಂಡಿ ಗೆಲ್ಲಲು ಮೂರು ಪಕ್ಷಗಳ ತಯಾರಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ ಜಮಖಂಡಿ. ಕ್ಷೇತ್ರದಲ್ಲಿರುವ ಪುರಾತನ ಜಂಬುಕೇಶ್ವರ ದೇವಾಲಯಕ್ಕೂ ಜಮಖಂಡಿ ಎಂಬ ಹೆಸರಿಗೂ ನಂಟಿದೆ. ಟಿಪ್ಪು ಸುಲ್ತಾನನ್ನು ಯುದ್ಧದಲ್ಲಿ ಸೋಲಿಸಿದ ಬಳಿಕ ಜಮಖಂಡಿ ಸಂಸ್ಥಾನ ಪ್ರಸಿದ್ಧಿಗೆ ಬಂತು ಎಂದು ಇತಿಹಾಸ ಹೇಳುತ್ತದೆ.

ರಾಜಕೀಯವಾಗಿ ಜಮಖಂಡಿ ಕ್ಷೇತ್ರದ ಶಾಸಕ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಿದ್ದುನ್ಯಾಮಗೌಡ. 'ಬ್ಯಾರೇಜ ಸಿದ್ದು' ಎಂದೆ ಪ್ರಖ್ಯಾತಿ ಪಡೆದವರು. ರೈತರಿಗಾಗಿ ರೈತರಿಂದ ಹಣ ಸಂಗ್ರಹಿಸಿ ದೇಶದಲ್ಲೇ ಮಾದರಿ ಬ್ಯಾರೇಜ್ ನಿರ್ಮಿಸಿ ರೈತರ ಪರವಾಗಿ ನಿಂತವರು.

ಕ್ಷೇತ್ರ ಪರಿಚಯ : ಎಚ್.ವೈ.ಮೇಟಿಗೆ ಸವಾಲು ಹಾಕುವವರು ಯಾರು?ಕ್ಷೇತ್ರ ಪರಿಚಯ : ಎಚ್.ವೈ.ಮೇಟಿಗೆ ಸವಾಲು ಹಾಕುವವರು ಯಾರು?

ಶಾಸಕರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆದರೆ, ಈ ಬಾರಿಯೂ ಸಿದ್ದು ನ್ಯಾಮಗೌಡರೇ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿಯಾಗಿದೆ.

Karnataka assembly election 2018 : Jamakhandi constituency profile

ಸಿದ್ದು ನ್ಯಾಮಗೌಡ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಬ್ಯಾರೇಜ್ ನಿರ್ಮಾಣದ ವರ್ಚಸ್ಸು ಇವರನ್ನು ಮತ್ತೆ ಗೆಲುವಿನ ನಗೆ ಬೀರುವಂತೆ ಮಾಡಲಿದೆ ಎಂಬುದು ಲೆಕ್ಕಾಚಾರ. ಜೊತೆಗೆ ಇಅವರು ಪ್ರಬಲ ಲಿಂಗಾಯತ ಸಮುದಾಯದ ಮುಖಂಡರು ಹೌದು.

ಕಳೆದ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರಿಗೆ ಬಿಜೆಪಿಗಿಂತ ದೊಡ್ಡ ಸ್ಪರ್ಧೆ ಕೊಟ್ಟವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಗದೀಶ ಗುಡಗುಂಟಿ. ಅವರು 27,993 ಮತಗಳನ್ನು ಪಡೆದಿದ್ದರು. ಬಿಜೆಪಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಈ ಬಾರಿ ಬಿಜೆಪಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಟಿಕೆಟ್ ಆಕಾಂಕ್ಷಿ. ಚುನಾವಣೆಗಳು ಬರುವ ಒಂದು ವರ್ಷದ ಮೊದಲೇ ನಿರಾಣಿ ಫೌಂಡೇಶನ್ ಮೂಲಕ ಸಂಘಟನೆ ಆರಂಭಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಆದರೆ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹಿರಿಯ ಮುಖಂಡ, ಬಿಜೆಪಿ ಹೈಕಮಾಂಡ್ ವರೆಗೂ ವರ್ಚಸ್ಸು ಇಟ್ಟು ಕೊಂಡಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಈ ಭಾಗದಲ್ಲಿ ಬ್ರಾಹ್ಮಣ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಒಬ್ಬರೇ. ಆದ್ದರಿಂದ, ಈ ಬಾರಿ ಅವರೇ ಅಭ್ಯರ್ಥಿ ಎಂಬ ಸುದ್ದಿ ಹಬ್ಬಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಲು ಸಂಗಮೇಶ ನಿರಾಣಿ ತಯಾರಿ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಜಗದೀಶ ಗುಡಗುಂಟಿ ಅವರಿಗೆ ಜೆಡಿಎಸ್ ಗಾಳ ಹಾಕುತ್ತಿದೆ. ಈ ಬಾರಿ ಬಿಜೆಪಿಯಲ್ಲಿನ ಟಿಕೆಟ್ ಗೊಂದಲದಿಂದ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಲಿದೆ ಎಂಬುದು ಸದ್ಯದ ಲೆಕ್ಕಾಚಾರ.

2013ರ ವಿಧಾನಸಭೆ ಚುನಾವಣೆ ಫಲಿತಾಂಶ

* ಸಿದ್ದು ನ್ಯಾಮಗೌಡ : 49,145 ಮತ
* ಜಗದೀಶ ಗುಡಗುಂಟಿ (ಪಕ್ಷೇತರ) : 27,993

* ಶ್ರೀಕಾಂತ ಕುಲಕರ್ಣಿ (ಬಿಜೆಪಿ) : 20,982

ಗೆಲುವಿನ ಅಂತರ : 21,152

English summary
Karnataka Assembly Election 2018 : Read all about Jamakhandi assembly constituency of Bagalkot district. Get election news from Jamakhandi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X