ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಕ್ಕೇರಿ ಕ್ಷೇತ್ರ ಪರಿಚಯ : ಮಾಜಿ ಸಚಿವರುಗಳ ನಡುವೆ ಸಮರ

By Mahesh
|
Google Oneindia Kannada News

ಶಾಸಕ ವಿಶ್ವನಾಥ್ ಮಲ್ಲಪ್ಪ ಕತ್ತಿ ಅವರ ಅಕಾಲಿಕ ಮರಣ(1985)ದ ನಂತರ ಅವರ ಪುತ್ರ ಉಮೇಶ್ ಕತ್ತಿ ಅವರು ಚುನಾವಣಾ ರಾಜಕೀಯ ಪ್ರವೇಶಿಸಿ, ವಿವಿಧ ಪಕ್ಷಗಳಿಂದ ಭಾರಿ ಅಂತರದಿಂದ ಗೆದ್ದಿದ್ದಾರೆ.

ಜನತಾದಳ, ಜೆಡಿಎಸ್ ನಿಂದ ಗೆದ್ದು ನಂತರ 2008ರಲ್ಲಿ ಆಪರೇಷನ್ ಕಮಲದ ಫಲವಾಗಿ ರಾಜೀನಾಮೆ ನೀಡಿದ ಕತ್ತಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದಿದ್ದರು. ಸಂಕೇಶ್ವರ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮಾಜಿ ಸಚಿವ ಎ.ಬಿ ಪಾಟೀಲ್ ಅವರು 2018ರಲ್ಲಿ ಹುಕ್ಕೇರಿಯಿಂದ ಸ್ಪರ್ಧಿಸಿ ಸೋಲು ಕಂಡರು.

ಕುಡಚಿ : ಮೂಲ ಸೌಕರ್ಯ ವಂಚಿತ ಕ್ಷೇತ್ರಕ್ಕೆ ಯಾರು ದಿಕ್ಕು?ಕುಡಚಿ : ಮೂಲ ಸೌಕರ್ಯ ವಂಚಿತ ಕ್ಷೇತ್ರಕ್ಕೆ ಯಾರು ದಿಕ್ಕು?

ಈ ಮತ್ತೊಮ್ಮೆ ಮಾಜಿ ಸಚಿವರಾದ ಉಮೇಶ್ ಕತ್ತಿ ಹಾಗೂ ಎ.ಬಿ ಪಾಟೀಲರ ನಡುವೆ ಪೈಪೋಟಿ ಕಾಣಬಹುದು. ಕತ್ತಿ ಅವರ ಬೆಂಬಲಕ್ಕೆ ಅವರ ಒಡೆತನದ ಸಕ್ಕರೆ ಕಾರ್ಖಾನೆ, ಸಹಕಾರಿ ಸಂಸ್ಥೆಗಳಿದ್ದರೆ, ಎ.ಬಿ ಪಾಟೀಲರ ಬೆಂಬಲಕ್ಕೆ ಶಿಕ್ಷಣ ಹಾಗೂ ಸಹಕಾರಿ ಸಂಘಗಳಿವೆ.

Karnataka Assembly Election 2018: Hukkeri constituency profile

ಲಿಂಗಾಯತ, ಮುಸ್ಲಿಮ್, ಮರಾಠ, ಎಸ್ ಸಿ, ಎಸ್ಟಿ ಮತಗಳೇ ಇಲ್ಲಿ ನಿರ್ಣಾಯಕ. ಈ ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರತ್ಯೇಕ ರಾಜ್ಯಕ್ಕೆ ಸಿಎಂ ಆಗುವ ಕನಸು ಹೊತ್ತುಕೊಂಡಿದ್ದಾರೆ ಉಮೇಶ್ ಕತ್ತಿ.

ರಾಯಭಾಗ ಕ್ಷೇತ್ರ: ಬಿಜೆಪಿಯ ದುರ್ಯೋಧನ ಐಹೊಳೆಗೆ ಹ್ಯಾಟ್ರಿಕ್ ಜಯದ ಕನಸು ರಾಯಭಾಗ ಕ್ಷೇತ್ರ: ಬಿಜೆಪಿಯ ದುರ್ಯೋಧನ ಐಹೊಳೆಗೆ ಹ್ಯಾಟ್ರಿಕ್ ಜಯದ ಕನಸು

2013ರ ಫಲಿತಾಂಶ:

ಹುಕ್ಕೇರಿಯಲ್ಲಿ 2013ರಲ್ಲಿ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. 2 ನಾಮಪತ್ರ ಹಿಂಪಡೆದಿದ್ದರು. 7 ಮಂದಿ ಸ್ಪರ್ಧಿಗಳ ಪೈಕಿ 5 ಮಂದಿ ಠೇವಣಿ ಕಳೆದುಕೊಂಡಿದ್ದರು.

ಒಟ್ಟು ಶೇ 75.87 ರಷ್ಟು ಮತದಾನವಾಗಿದ್ದು, 132961 ಮತಗಳ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮೇಶ್ ವಿಶ್ವನಾಥ್ ಕತ್ತಿ ಅವರು 81810 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಸ್ಪರ್ಧಿ ರವಿ ಬಸವರಾಜ್ ಕರಾಳೆ ಅವರು 24484 ಮತಗಳನ್ನು ಗಳಿಸಿ, ಸೋಲು ಕಂಡರು. 57326ಮತಗಳ (ಶೇ 43.11) ಅಂತರದಿಂದ ಉಮೇಶ್ ಕತ್ತಿ ಜಯ ದಾಖಲಿಸಿದ್ದರು.

ಈ ಬಾರಿ ಕಣದಲ್ಲಿ ಬಿಜೆಪಿಯಿಂದ ಉಮೇಶ್ ಕತ್ತಿ, ಕಾಂಗ್ರೆಸ್ಸಿನಿಂದ ಎ.ಬಿ ಪಾಟೀಲ್ ಹಾಗೂ ಜೆಡಿಎಸ್ ನಿಂದ ಎಂಬಿ ಪಾಟೀಲ ಸ್ಪರ್ಧಿಸುತ್ತಿದ್ದಾರೆ.

ಕಳೆದ ಬಾರಿ ಉಮೇಶ್ ಕತ್ತಿ 81810 ಮತಗಳು (ಶೇ 61.53), ರವಿ ಬಸವರಾಜ್ ಕರಾಳೆ 24484 ಮತಗಳು (ಶೇ 18.41) ಹಾಗೂ ಜೆಡಿಎಸ್ ನ ಬಸವರಾಜ್ ಕಾಶಪ್ಪ ಮಟಗಾರ್ 19501 ಮತಗಳು (ಶೇ 14.67) ಪಡೆದಿದ್ದರು.

English summary
Karnataka Assembly Election 2018: Read all about Belagavi district Hukkeri assembly constituency of Belgaum. Get election news from Belagavi district. Know about Hukkeri candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X