ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ: ಸೋಲು-ಗೆಲುವಿನ ಭೀತಿ

|
Google Oneindia Kannada News

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಹತ್ತು ಹಲವು ಐತಿಹಾಸಿಕ ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ. ಇದರ ಇತಿಹಾ ರಾಷ್ಟ್ರಕೂಟರ ಕಾಲದಷ್ಟು ಹಿಂದಿನದೆಂದು ಹೇಳಬಹುದು. ಹುಬ್ಬಳ್ಳಿಯ ಸುತ್ತಮುತ್ತಲಿನ ಪುರಾತನ ಜಿನಾಲಯಗಳಲ್ಲಿ ಅನಂತನಾಥ ತೀರ್ಥಂಕರ, ಬ್ರಹ್ಮದೇವ, ಪದ್ಮಾವತಿಯರ ಮೂರ್ತಿಗಳಿವೆ.

ಬಿಜೆಪಿಯ ಅರವಿಂದ ಬೆಲ್ಲದ ತಂದೆ ಚಂದ್ರಕಾಂತ ಬೆಲ್ಲದ ಅವರ ವಾರಸುದಾರ. ಅವರಂತೆ ಸಜ್ಜನ ಮತ್ತು ಸುಸಂಸ್ಕೃತ ರಾಜಕಾರಣಿ. ಭ್ರಷ್ಟಾಚಾರದ ಕಳಂಕ ಹಚ್ಚಿಕೊಂಡವರಲ್ಲಿ. ತಮ್ಮ ಕ್ಷೇತ್ರದಲ್ಲಿ ನಡೆಯುವ ಎಲ್ಲ್ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಕಅರ್ಯಕ್ರಮಗಳಲ್ಲಿ ತನುಮನಧನದ ನೆರವು ನೀಡುವ ಮೂಲಕ ಅವರು ಒಂದು ವರ್ಗದ, ಅದರಲ್ಲೂ ಲಿಂಗಾಯತ, ಬ್ರಾಹ್ಮಣರ ಮತಗಳನ್ನು ಸೆಳೆಯಬಲ್ಲರು.

ಧಾರ್ಮಿಕ ಸಂಸ್ಥೆಗಳ ಮತ್ತು ಸಂಘಗಳ ಪ್ರಬಲ ಬೆಂಬಲ ಇರುವ ಬಿಜೆಪಿಯು ಈ ಕ್ಷೇತ್ರದಲ್ಲಿ ಆರ್ ಎಸ್ ಎಸ್ ತನ್ನ ಹಿಡಿತವನ್ನು ಹೊಂದಿದೆ. ಕಳೆದ ಬಾರಿ ಕಾಂಗ್ರೆಸ್ ನ ಎಸ್ ಆರ್ ಮೋರೆಯವರ ಕಾರಣದಿಂದ ಮರಾಠ ಮತಗಳು ಇವರ ಕೈತಪ್ಪಿದ್ದವು. ಜೆಡಿಎಸ್ ನ ಇಸ್ಮಾಯಿಲ್ ತಮಾಟಗಾರ ಹೆಚ್ಚು ಪೈಪೋಟಿ ನೀಡಿ ಕಡಿಮೆ ಅಂತರದಿಂದ ಸೋತಿದ್ದರು.

Karnataka Assembly Election 2018: Hubballi Dharwad West Constituency Profile

ನಗರ ಮತ್ತು ಗ್ರಾಮೀಣ ಭಾಗದ ಮುಸ್ಲಿಂ ಮತಗಳ ಮೇಲೆ ಹಿಡಿತ ಹೊಂದಿರುವ ಇವರು ಈ ಬಾರಿ ಕಾಂಗ್ರೆಸ್ಸಿನಲ್ಲಿದ್ದಾರೆ. ಕಾಂಗ್ರೆಸ್ ಅವರಿಗೆ ಟಿಕೇಟ್ ನೀಡಿದಲ್ಲಿ ಅರವಿಂದ್ ಬೆಲ್ಲದರ ಗೆಲುವು ಕಠಿಣವಾಗಲಿದೆ. ಅಲ್ಲದೆ ವಿನಯ ಕುಲಕರ್ಣಿ ತಾವು ಗೆಲ್ಲಬೇಕಾದರೆ ತಮಾಟಗಾರಗೆ ಟಿಕೇಟ್ ಕೊಡಿಸಬೇಕಾಗಿದೆ.

ಆ ಮೂಲಕ ಗ್ರಾಮೀಣ ಭಾಗದ ಮುಸ್ಲಿಂ ಮತಗಳನ್ನು ತಮಟಗಾರ ವಿನಯ್ ಗೆ ತಂದುಕೊಡಬಹುದು. ಜೆಡಿಎಸ್ ನಿಂದ ಈ ಬಾರಿ ಕುರುಬ ಸಮುದಾಯದ ರಾಜಣ್ಣ ಕೊರವಿ ಟಿಕೇಟ್ ಆಕಾಂಕ್ಷಿ. ಮೋದಿ ಅಲೆ ಇದ್ದರೂ ಬಿಜೆಪಿಗೆ ಗೆಲುವು ಅಷ್ಟೊಂದು ಸುಲಭದ ಮಾತಲ್ಲ. ಆಗತರಿಕ ಭಿನ್ನಮತ ಇರುವುದರಿಂದ ಬೆಲ್ಲದ ಅವರನ್ನು ಸೋಲಿನ ಭೀತಿ ಕಾಡಬಹುದು.

2013 ರಲ್ಲಿ ಗೆದ್ದ ಬಿಜೆಪಿಯ ಅರವಿಂದ ಬೆಲ್ಲದ ಪಡೆದ ಮತಗಳು 42003, ಇವರ ವಿರುದ್ಧ ಸೋಲನುಭವಿಸಿದ ಎಸ್ ಆರ್ ಮೋರೆ ಗಳಿಸಿದ ಮತಗಳು 30821.

English summary
Karnataka Assembly Election 2018: Read all about Hubballi Dharwad West assembly constituency of Dharwad district. Get election news from Hubballi Dharwad West. Know about candidates list. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರದ ಚುನಾವಣಾ ಕಣದ ಸುದ್ದಿ, ಲೇಖನಗಳನ್ನು ಓದಿರಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X