ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಐತಿಹಾಸಿಕ ಹಿನ್ನಲೆ ಹೊಂದಿರುವ ಹೊನ್ನಾಳಿ

|
Google Oneindia Kannada News

ತುಂಗ-ಭದ್ರಾ ನದಿಯ ಪ್ರಶಾಂತ ವಾತಾವರಣದಲ್ಲಿರುವ ಕ್ಷೇತ್ರ ದಾವಣಗೆರೆ ಜಿಲ್ಲೆಯ ಹೊನ್ನಾಳಿ. ಜಿಲ್ಲೆಯಲ್ಲಿ ಭತ್ತ, ಜೋಳ ಹೆಚ್ಚು ಬೆಳಯುವ ತಾಲೂಕಿಗಳಲ್ಲಿ ಹೊನ್ನಾಳಿಯೂ ಒಂದು.

ತುಂಗ-ಭದ್ರಾ ನದಿ ಇರುವುದರಿಂದ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲ. ರಸ್ತೆ, ಮೂಲ ಸೌಕರ್ಯಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಸಾರಿಗೆ ವಿಚಾರದಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕು.

ಸದಾ ವಿವಾದದಿಂದಲೇ ಸುದ್ದಿ ಮಾಡುವ ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಅವರ ತವರು ಕ್ಷೇತ್ರ ಹೊನ್ನಾಳಿ. 2008ರಲ್ಲಿ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದ ಅವರು 2013ರ ಚುನಾವಣೆಯಲ್ಲಿ ಸೋಲು ಕಂಡರು.

ಕ್ಷೇತ್ರ ಪರಿಚಯ : ಪಕ್ಷಗಳ ಪ್ರಾಬಲ್ಯಕ್ಕಿಲ್ಲಿ 2ನೇ ಸ್ಥಾನ!ಕ್ಷೇತ್ರ ಪರಿಚಯ : ಪಕ್ಷಗಳ ಪ್ರಾಬಲ್ಯಕ್ಕಿಲ್ಲಿ 2ನೇ ಸ್ಥಾನ!

ಕಳೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಣುಕಾಚಾರ್ಯ ಅವರು ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ ವಿರುದ್ಧ ಸೋಲು ಅನುಭವಿಸಿದ್ದರು. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿ ಎಂದು ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

Karnataka Assembly Election 2018 : Honnali constituency profile

ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಪರಮಾಪ್ತರು. ಹೊನ್ನಾಳಿ ಕ್ಷೇತ್ರದಲ್ಲಿ ಲಿಂಗಾಯತರು, ಕುರುಬರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದ್ದರಿಂದ, ಅವರು ಗೆಲ್ಲುವ ಸಾಧ್ಯತೆ ಹೆಚ್ಚು.

ಕ್ಷೇತ್ರ ಪರಿಚಯ : ಜಗಳೂರಿನ ಜನರು ಯಾರನ್ನು ಆಯ್ಕೆ ಮಾಡಲಿದ್ದಾರೆ?ಕ್ಷೇತ್ರ ಪರಿಚಯ : ಜಗಳೂರಿನ ಜನರು ಯಾರನ್ನು ಆಯ್ಕೆ ಮಾಡಲಿದ್ದಾರೆ?

ಕಾಂಗ್ರೆಸ್ ಶಾಂತನಗೌಡ ಅವರ ಬದಲಾಗಿ ಬೇರೆ ಅಭ್ಯರ್ಥಿ ಹುಡುಕಿದರೆ ಬಿಜೆಪಿಗೆ ಲಾಭವಾಗಲಿದೆ. ಕಾಂಗ್ರೆಸ್ ಶಾಂತನಗೌಡ ಅವರಿಗೆ ಟಿಕೆಟ್ ನೀಡುವುದು ಖಚಿತ. ಕಳೆದ ಬಾರಿ ಜೆಡಿಎಸ್‌ನಿಂದ ಎಂ.ಆರ್.ಮಹೇಶ್ ಸ್ಪರ್ಧಿಸಿ 1,340 ಮತಗಳನ್ನು ಮಾತ್ರ ಪಡೆದಿದ್ದರು.

ಕ್ಷೇತ್ರ ಪರಿಚಯ : ಚನ್ನಗಿರಿಯಲ್ಲಿ ಈ ಬಾರಿ ಯಾರಿಗೆ ಗೆಲುವು?ಕ್ಷೇತ್ರ ಪರಿಚಯ : ಚನ್ನಗಿರಿಯಲ್ಲಿ ಈ ಬಾರಿ ಯಾರಿಗೆ ಗೆಲುವು?

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತದೆ. ಕಳೆದ ಬಾರಿ ಹಲವು ಪಕ್ಷೇತರ ಅಭ್ಯರ್ಥಿಗಳು ಸೇರಿ 13 ಜನರು ಕ್ಷೇತ್ರದ ಚುನಾವಣಾ ಕಣದಲ್ಲಿದ್ದರು, ಠೇವಣಿ ಕಳೆದುಕೊಂಡಿದ್ದರು.

2016ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ 78,789 ಮತಗಳನ್ನು ಪಡೆದಿದ್ದರು. ಕೆಜೆಪಿಯ ಎಂ.ಪಿ.ರೇಣುಕಾಚಾರ್ಯ 60,051 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಎಂ.ಆರ್.ಮಹೇಶ್ 1,340ಮತ ಪಡೆದಿದ್ದರು.

English summary
Karnataka Assembly Election 2018 : Read all about Honnali assembly constituency of Davanagere district. Get election news from Honnali. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X