• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಷೇತ್ರ ಪರಿಚಯ: ಗಂಗಾವತಿಯಲ್ಲಿ ಅನ್ಸಾರಿ ಓಟಕ್ಕೆ ಬ್ರೇಕ್ ಹಾಕುವವರಾರು?

By Sachhidananda Acharya
|

ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ ಗಂಗಾವತಿ. ಈ ತಾಲೂಕು ಭತ್ತದ ಬೆಳೆಗೆ ಪ್ರಸಿದ್ಧಿಯನ್ನು ಪಡೆದಿದ್ದು ಇದನ್ನು 'ಭತ್ತದ ಕಣಜ' ಎಂದೂ ಕರೆಯುತ್ತಾರೆ. ಇದು ಜಿಲ್ಲೆಯ ಅತ್ಯಂತ ದೊಡ್ಡ ವಾಣಿಜ್ಯ ನಗರವಾಗಿದ್ದು, ಅಕ್ಕಿ ಇಲ್ಲಿನ ಪ್ರಮುಖ ಬೆಳೆಯಾಗಿದೆ. ತಾಲೂಕು ಸಕ್ಕರೆ ಕಾರ್ಖನೆಗಳಿಗೂ ಹೆಸರುವಾಸಿಯಾಗಿದೆ.

ಗಂಗಾವತಿಯ ಬಳಿ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ಸ್ಥಳಗಳಿವೆ. ಕನಕಗಿರಿಯ ವೆಂಕಟಛಲಪತಿ ದೇವಾಲಯ, ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ರಾಘವೇಂದ್ರ ದೇವರ ನವ ಬೃಂದಾವನ, ಹೇಮಗುಡ್ಡ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಂಪಾಪತಿ, ಮುದ್ದಾನೇಶ್ವರಿ, ನೀಲಕಂಠೇಶ್ವರ ದೇವಸ್ಥಾನ ನಗರದ ವ್ಯಾಪ್ತಿಯೊಳಗೆ ಬರುತ್ತದೆ.

ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶವು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಈ ಕಾರಣಕ್ಕೆ ಭಾರತಕ್ಕೆ 1947, ಆಗಸ್ಟ್ 15ರಂದೇ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಹಿಡಿತದಿಂದ ಹೊರಬರಲು ಕೊಪ್ಪಳದ ಜನರು ಮತ್ತಷ್ಟು ಹೋರಾಟ ಮಾಡಬೇಕಾಯಿತು. ಕೊನೆಗೆ 17 ಸೆಪ್ಟೆಂಬರ್ 1948 ರಲ್ಲಿ ಹೈದರಾಬಾದ್-ಕರ್ನಾಟಕಕ್ಕೆ ನಿಜಾಮರಿಂದ ಸ್ವಾತಂತ್ರ್ಯ ಸಿಕ್ಕಿದಾಗ ಕೊಪ್ಪಳ ಸ್ವತಂತ್ರವಾಯಿತು.

ಇನ್ನು ಈ ಕ್ಷೇತ್ರದ ರಾಜಕೀಯ ಲೆಕ್ಕಚಾರವನ್ನು ನೋಡುವುದಾದರೆ ಸದ್ಯ ಜೆಡಿಎಸ್ ನಿಂದ ಗೆದ್ದಿರುವ ಇಕ್ಬಾಲ್ ಅನ್ಸಾರಿ ಅವರು ಇಲ್ಲಿನ ಶಾಸಕರಾಗಿದ್ದಾರೆ.

ಹಾಗೆ ನೋಡಿದರೆ ಈ ಹಿಂದೆ ಗಂಗಾವತಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1989, 1994, 1999ರಲ್ಲಿ ಶ್ರೀರಂಗದೇವರಾಯಲು ಎನ್ನುವವರು ಕಾಂಗ್ರೆಸ್ ನಿಂದ ಗೆದ್ದಿದ್ದರು. 2004ರಲ್ಲಿ ಶ್ರೀರಂಗದೇವರಾಯಲು ನಾಗಾಲೋಟಕ್ಕೆ ಮೊದಲ ಬಾರಿಗೆ ಜೆಡಿಎಸ್ ನಿಂದ ಇಕ್ಬಾಲ್ ಅನ್ಸಾರಿ ಇಲ್ಲಿ ಬ್ರೇಕ್ ಹಾಕಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

2008ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಇಲ್ಲಿ ಅನ್ಸಾರಿ ಸೋಲಬೇಕಾಯಿತು. ಬಿಜೆಪಿಯ ಪರಣ್ಣ ಮನವಳ್ಳಿ ಈ ಬಾರಿ ಇಲ್ಲಿ ಗೆಲುವು ಸಾಧಿಸಿದ್ದರು. ಆದರೆ ಛಲಬಿಡದ ಅನ್ಸಾರಿ 2013ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. 60,303 ಮತಗಳನ್ನು ಪಡಡೆದಿದ್ದ ಅವರು ಪರಣ್ಣ ಮನವಳ್ಳಿಯನ್ನು ಬರೋಬ್ಬರಿ 30 ಸಾವಿರ ಮತಗಳಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಕಾಂಗ್ರೆಸ್ ಪಡೆದ ಮತಗಳು 20,248.

ಈ ಬಾರಿ ಇಕ್ಬಾಲ್ ಅನ್ಸಾರಿ ಅವರು ಕಾಂಗ್ರೆಸ್ ಗೆ ಬಂದಿದ್ದಾರೆ. ಇಲ್ಲಿ ಈ ಬಾರಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ. ಅವರು ಗೆಲುವು ಸಾಧಿಸಲಿದ್ದಾರೆ ಎಂದೇ ಭಾವಿಸಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಅನ್ಸಾರಿಯನ್ನು ಸೋಲಿಸುತ್ತಾ ಎಂದು ಕಾದು ನೋಡಬೇಕಿದೆ.

ಬಿಜೆಪಿಯಿಂದ ಹಳೆ ಹುಲಿ ಪರಣ್ಣ ಮುನವಳ್ಳಿ ಮತ್ತೆ ಸ್ಪರ್ಧೆಯಲಿದ್ದಾರೆ. ಆದರೆ ಜೆಡಿಎಸ್ ಇನ್ನೂ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Election 2018: Read all about Gangawati assembly constituency of Koppal district. Get election news from Gangawati. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more