ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 03 : ಬೆಂಗಳೂರು ನಗರದ ಹಳೆಯ ಬಡಾವಣೆಗಳಲ್ಲಿ ಚಿಕ್ಕಪೇಟೆಯೂ ಒಂದು. ನಗರದ ಪ್ರಮುಖ ಹಣಕಾಸಿನ ವಹಿವಾಟಿನ ಪ್ರದೇಶವಿದಾಗಿದೆ. ಸಸ್ಯಕಾಶಿ ಲಾಲ್‌ಬಾಗ್ ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಚಾಮರಾಜಪೇಟೆ, ಜಯನಗರ, ಬಸವನಗುಡಿ ವಿಧಾನಸಭಾ ಕ್ಷೇತ್ರಗಳ ಹಲವು ಭಾಗಗಳನ್ನು ಸೇರಿಸಿ ಚಿಕ್ಕಪೇಟೆ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ವಿ.ವಿ.ಪುರಂ, ಸಿದ್ದಾಪುರ, ಸುಂಕೇನಹಳ್ಳಿ ಮುಂತಾದ ಪುರಾತನ ಬೆಂಗಳೂರಿನ ವಾರ್ಡ್‌ಗಳು ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿವೆ.

ಚಿಕ್ಕಪೇಟೆ ಬಿಜೆಪಿ ಟಿಕೆಟ್‌ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು!ಚಿಕ್ಕಪೇಟೆ ಬಿಜೆಪಿ ಟಿಕೆಟ್‌ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು!

ಗಾಂಧಿ ಬಜಾರ್ ವೃತ್ತ, ಡಿವಿಜಿ ರಸ್ತೆ, ಲಾಲ್ ಬಾಗ್ ರಸ್ತೆ, ಜೆ.ಸಿ.ರಸ್ತೆ ಹೀಗೆ ಬೆಂಗಳೂರಿನ ಪ್ರಮುಖ ರಸ್ತೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಪುರಾತನ ಕಟ್ಟಡಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಚಿಕ್ಕ-ಚಿಕ್ಕ ರಸ್ತೆಗಳು ಸಂಚಾರಕ್ಕೆ ತೊಡಕಾಗಿವೆ.

Karnataka assembly election 2018 : Chickpet constituency profile

ಹಣ್ಣು, ತರಕಾರಿಗೆ ಪ್ರಸಿದ್ಧಿ ಪಡೆದಿರುವ ಕೆ.ಆರ್.ಮಾರುಕಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸಿಗುವ ಎಸ್‌.ಪಿ.ರಸ್ತೆ, ಕರಗಕ್ಕೆ ಪ್ರಸಿದ್ಧಿ ಪಡೆದಿರುವ ಧರ್ಮರಾಯಸ್ವಾಮಿ ದೇವಾಲಯ ಹೀಗೆ ವೈವಿದ್ಯಮಯ ಪ್ರದೇಶಗಳನ್ನು ಕ್ಷೇತ್ರ ಒಳಗೊಂಡಿದೆ.

ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ

ರಾಜಕೀಯವಾಗಿ 2004ರ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ 21,404 ಮತಗಳನ್ನು ಪಡೆದು ಜಯಗಳಿಸಿದ್ದರು. 2008, 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ವಿ.ದೇವರಾಜ್ ಅವರು ಜಯಗಳಿಸಿದ್ದಾರೆ.

ವಾರ್ಡ್‌ಗಳು : ಸುಧಾಮನಗರ, ಧರ್ಮರಾಯಸ್ವಾಮಿ ದೇವಾಲಯ, ಸುಂಕೇನಹಳ್ಳಿ, ವಿಶ್ವೇಶ್ವಪುರಂ, ಸಿದ್ದಾಪುರ, ಹೊಂಬೇಗೌಡ ನಗರ ಮತ್ತು ಜಯನಗರ.

English summary
Karnataka Assembly Election 2018 : Read all about Chickpet assembly constituency of Bengaluru. Get election news from Chickpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X