ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಕೆಂಪು ಮೆಣಸಿನ ಕಾಯಿ ನಾಡಲ್ಲಿ ಯಾರಿಗೆ ಗೆಲುವು!

|
Google Oneindia Kannada News

ಮೆಣಸಿನಕಾಯಿ ಮೂಲಕ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ಹಾವೇರಿ ಜಿಲ್ಲೆಯ ಬ್ಯಾಡಗಿ. ಇಲ್ಲಿನ ಮೆಣಸಿನಕಾಯಿ ಒಳ್ಳೆಯ ರುಚಿ, ಬಣ್ಣ ಹೊಂದಿರುತ್ತದೆ. ಆದ್ದರಿಂದ, ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ಬ್ಯಾಡಗಿಯ ಪ್ರಖ್ಯಾತ ಮೆಣಸಿನಕಾಯಿ ಇಲ್ಲಿನ ಜನರಿಗೆ ಉದ್ಯೋಗವನ್ನು ನೀಡಿದೆ. ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮೆಣಸಿನಕಾಯಿಯನ್ನು ಬ್ಯಾಡಗಿ ತಾಲೂಕಿನಲ್ಲಿ ಬೆಳೆಯಲಾಗುತ್ತದೆ.

ಕ್ಷೇತ್ರ ಪರಿಚಯ : ದುರ್ಗಾದೇವಿಯ ಕೃಪೆಯಿಂದ ಯಾರಿಗೆ ಜಯ?ಕ್ಷೇತ್ರ ಪರಿಚಯ : ದುರ್ಗಾದೇವಿಯ ಕೃಪೆಯಿಂದ ಯಾರಿಗೆ ಜಯ?

ಪ್ರಸಿದ್ಧ ಕಾಗಿನೆಲೆ ಕ್ಷೇತ್ರಕ್ಕೆ ಬ್ಯಾಡಗಿ ಸಮೀಪದಲ್ಲಿದೆ. ವೀರಭದ್ರೇಶ್ವರ ಜಾತ್ರೆ, ಶ್ರೀ ದಾನಮ್ಮ ದೇವಿ ಜಾತ್ರೆ ಬ್ಯಾಡಗಿ ಕ್ಷೇತ್ರದಲ್ಲಿ ಪ್ರಸಿದ್ಧಿ. ರಸ್ತೆ, ರೈಲು, ಬಸ್ಸಿನ ಸಂಪರ್ಕ ಕ್ಷೇತ್ರಕ್ಕೆ ಉತ್ತಮವಾಗಿದೆ.

Karnataka Assembly Election 2018 : Byadgi constituency profile

ರಾಜಕೀಯವಾಗಿ ಕುರುಬ ಸಮುದಾಯದವರು ಕ್ಷೇತ್ರದಲ್ಲಿ ನಿರ್ಣಾಯಕರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಜನರು ಕಾಂಗ್ರೆಸ್‌ನ ಬಸವರಾಜ್ ನೀಲಪ್ಪ ಶಿವಣ್ಣನವರ್‌ ಅವರಿಗೆ ಮತ ಹಾಕಿ ಗೆಲ್ಲಿಸಿದ್ದರು.

ಕೆಜೆಪಿ-ಬಿಜೆಪಿ ಮತ ಬ್ಯಾಂಕ್ ವಿಭಜನೆಯಿಂದಾಗಿ ಬಿಜೆಪಿಗೆ ಸೋಲಾಗಿತ್ತು. ಕೆಜೆಪಿಯ ಶಿವರಾಜ್ ಸಜ್ಜನರ್ 13 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಶಿವರಾಜ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತವಾಗಿದೆ.

ಕಳೆದ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳನ್ನು ಹೊರತುಪಡಿಸಿ ಪಕ್ಷೇತರರು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿ 13 ಅಭ್ಯರ್ಥಿಗಳು ಕಣದಲ್ಲಿದ್ದರು. ಜೆಡಿಎಸ್‌ನ ಚಂದ್ರಪ್ಪ ಬರಮಪ್ಪ ಕಾರಗಿ 1,163ಮತಗಳನ್ನು ಪಡೆದು 7ನೇ ಸ್ಥಾನ ಪಡೆದಿದ್ದರು.

ಬಿಎಸ್‌ಆರ್ ಕಾಂಗ್ರೆಸ್, ಬಿಎಸ್‌ಪಿ, ಸರ್ವ ಜನಶಕ್ತಿ ಪಕ್ಷದ ಅಭ್ಯರ್ಥಿಗಳು, 6 ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಆದ್ದರಿಂದ, ಮತಗಳು ಹರಿದು ಹಂಚಿ ಹೋಗಿತ್ತು. ಹಲವು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜ್ ನೀಲಪ್ಪ ಶಿವಣ್ಣನವರ್‌ 57,707 ಮತ ಪಡೆದಿದ್ದರು. ಕೆಜೆಪಿಯ ಶಿವರಾಜ್ ಸಜ್ಜನರ್ 44,348 ಮತ, ಬಿಜೆಪಿಯ ಬಳ್ಳಾರಿ ವಿರೂಪಾಕ್ಷಪ್ಪ ರುದ್ರಪ್ಪ 37,877 ಮತಗಳನ್ನು ಪಡೆದಿದ್ದರು.

English summary
Karnataka Assembly Election 2018 : Read all about Byadgi assembly constituency of Haveri district. Get election news from Byadgi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X