ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿನಗರ : ಅಧಿಪತ್ಯಕ್ಕೆ ಬೇಗ್-ಕಟ್ಟಾ ಕಾದಾಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಹಾಲಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರ ಹಿಡಿತವಿರುವ ಕ್ಷೇತ್ರ ಶಿವಾಜಿನಗರ. ಆದರೆ ಈ ಬಾರಿ ಶಿವಾಜಿನಗರದ ಅಧಿಪತ್ಯ ಕಸಿಯಲು ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಾರಿ ಸಿದ್ಧತೆ ಆರಂಭಿಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ ರೋಷನ್ ಬೇಗ್ ಕಾಂಗ್ರೆಸ್ ಅಭ್ಯರ್ಥಿ?ರಾಜ್ಯಸಭೆ ಚುನಾವಣೆಗೆ ರೋಷನ್ ಬೇಗ್ ಕಾಂಗ್ರೆಸ್ ಅಭ್ಯರ್ಥಿ?

ಸರಿಸುಮಾರು ಮೂರುವರೆ ದಶಕಗಳಿಂದ ರಾಜಕೀಯ ಪಾರಮ್ಯ ಹೊಂದಿರುವ ರೋಶನ್ ಬೇಗ್ ಈ ಬಾರಿ ಪುತ್ರ ರುಮಾನ್ ಬೇಗ್ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದ್ದರು. ಆದರೆ ಪಕ್ಷದ ಹೈಕಮಾಂಡ್ ಒಪ್ಪದ ಕಾರಣ ಅವರೇ ಕಣಕ್ಕಿಳಿದಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಳೆದ ಎರಡು ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿದ ಬಿಜೆಪಿ ನಿರ್ಮಲ್ ಕುಮಾರ್ ಸುರಾನಾ ಈ ಬಾರಿ ಸ್ಪರ್ಧಿಸುವುದಿಲ್ಲ ಎಂಬುದು ಬಹುತೇಖ ಖಚಿತ. ಹಿಂದೆ 1999 ಹಾಗೂ 2004ರಲ್ಲಿ ಎರಡು ಬಾರಿ ಜಯ ಗಳಿಸಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕ್ಷೇತ್ರ ಪುನರ್ವಿಂಗಡಣೆ ವೇಳೆ ಹೆಬ್ಬಾಳಕ್ಕೆ ವಲಸೆ ಹೋಗಿದ್ದರು. ಈ ಬಾರಿ ಮತ್ತೆ ಶಿವಾಜಿನಗರಕ್ಕೆ ವಾಪಸಾಗುತ್ತಿದ್ದಾರೆ.

ಕ್ಷೇತ್ರ ಪರಿಚಯ: ಬಿಟಿಎಂ ಲೇಔಟ್ ನಲ್ಲಿ ಮತ್ತೆ ಗೆಲ್ಲುತ್ತಾರಾ ರೆಡ್ಡಿ? ಕ್ಷೇತ್ರ ಪರಿಚಯ: ಬಿಟಿಎಂ ಲೇಔಟ್ ನಲ್ಲಿ ಮತ್ತೆ ಗೆಲ್ಲುತ್ತಾರಾ ರೆಡ್ಡಿ?

ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗುವ ಲಕ್ಷಣಗಳಿವೆ. ಈ ಕ್ಷೇತ್ರದಲ್ಲಿ ಕಳೆದ ಆರೆಂಟು ತಿಂಗಳಿಂದ ರುದ್ರೇಶ್ ಹತ್ಯೆ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವುದರಿಂದ ಒಂದು ವರ್ಗದ ಮತಗಳು ಇಡಿಯಾಗಿ ಬಿಜೆಪಿಗೆ ಸಿಗಲಿವೆ ಎಂದು ಪಕ್ಷ ನಂಬಿದೆ. ಇದೇ ಅಂಶ ನೆಚ್ಚಿಕೊಂಡು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮ್ಮ ರಾಜಕೀಯ ಮರುಜನ್ಮದ ಕನಸು ಕಾಣುತ್ತಿದ್ದಾರೆ.

Karnataka Assembly Election 2018: Bengaluru- Shivajinagara constituency

2013ರಲ್ಲಿ ಜಯ ಗಳಿಸಿದ ನಂತರ ರೋಷನ್ ಬೇಗ್ ತತ್‌ಕ್ಷಣಕ್ಕೆ ಸಚಿವರಾಗಲಿಲ್ಲ. ಸರಿಸುಮಾರು ಆರು ತಿಂಗಳ ನಂತರ ಸಚಿವ ಸಂಪುಟ ಸೇರ್ಪಡೆಯಾಗುವಲ್ಲಿ ಯಶಸ್ವಿಯೂ ಆದರು. ಶಿವಾಜಿ ನಗರದಂತಹ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಮುಸ್ಲಿಮರು ಶೇ.35ಕ್ಕಿಂತ ಹೆಚ್ಚು ಪ್ರಮಾಣದಲ್ಲಿದ್ದು, ನಿರ್ಣಾಯಕ ಮತದಾರರಾಗಿದ್ದಾರೆ. ಅದೇ ಧೈರ್ಯವನ್ನು ಆಧರಿಸಿಯೇ ರೋಷನ್ ಬೇಗ್ ಪುತ್ರನನ್ನು ಕಣಕ್ಕಿಳಿಸಿ ರಾಜ್ಯಸಭೆ ಸದಸ್ಯರಾಗುವ ಆಲೋಚನೆಯಲ್ಲಿದ್ದರು. ಆದರೆ ಪಕ್ಷ ಅದಕ್ಕೆ ಮಣೆ ಹಾಕಲಿಲ್ಲ. ಇದೀಗ ಶಿವಾಜಿನಗರದಲ್ಲೇ ಮತ್ತೊಮ್ಮೆ ರಾಜಕೀಯ ನೆಲೆ ಕಂಡುಕೊಳ್ಳಬೇಕಾಗಿದೆ. ಆದರೆ ರೋಶನ್ ಬೇಗ್ ಮತದಾರರ ಕೈಗೆ ಸಿಗುವುದೇ ಇಲ್ಲ ಎಂಬ ಆರೋಪ ಮಾತ್ರ ಗಾಢವಾಗಿದೆ.

ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಸ್ಪರ್ಧೆ?ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಸ್ಪರ್ಧೆ?

ಸಚಿವ ಬೇಗ್‌ಗೆ ನೇರ ಎದುರಾಳಿಯಾಗಲಿರುವ ಕಟ್ಟಾ ಕೂಡ ಕ್ಷೇತ್ರದ ಮತದಾರರ ಮನ ಗೆಲ್ಲುವುದು ಸುಲಭದ ಮಾತಲ್ಲ. ಸರಣಿ ಭ್ರಷ್ಟಾಚಾರ ಪ್ರಕರಣಗಳಿಂದ ಜರ್ಝರಿತರಾಗಿರುವ ಕಟ್ಟಾ, ಈಗಾಗಲೇ ಐದು ವರ್ಷ ವನವಾಸ ಅನುಭವಿಸಿದ್ದಾರೆ.

ಪ್ರಭಾವಿ ಸಚಿವರಾಗಿದ್ದವರು ಟಿಕೆಟ್ ಗಾಗಿ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಬೇಗ್ ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಶಿವಾಜಿನಗರದಲ್ಲಿ ಜೆಡಿಎಸ್ ಗೆ ಮತ್ತೆ ಗೆಲುವು ಒಲಿದಿಲ್ಲ. ಈ ಬಾರಿ ಅಭ್ಯರ್ಥಿ ಯಾರೆಂಬುದೂ ಇನ್ನೂ ತೀರ್ಮಾನವೇ ಆಗಿಲ್ಲ. ಹೀಗಾಗಿ ಬೇಗ್ ಮತ್ತು ಕಟ್ಟಾ ನಡುವಣ ಕದನ ತೀವ್ರ ಕುತೂಹಲ ಕೆರಳಿಸಿದೆ.

ಮತ ಲೆಕ್ಕಾಚಾರ: ಒಟ್ಟು 191528,
ಮಹಿಳೆಯರು: 94085,
ಪುರುಷರು: 97441,
ಇತರರು: 2 ಇದ್ದಾರೆ.

ಕ್ಷೇತ್ರದ ಇತಿಹಾಸ: ಈವರೆಗಿನ 11 ಚುನಾವಣೆಯಲ್ಲಿ 5 ಬಾರಿ ಕಾಂಗ್ರೆಸ್, ಎರಡು ಬಾರಿ ಬಿಜೆಪಿ ಹಾಗೂ ಜನತಾದಳ ಮತ್ತು ಜನತಾಪಕ್ಷ ತಲಾ ಒಂದು ಬಾರಿ ಶಿವಾಜಿನಗರದಲ್ಲಿ ಗೆಲುವು ಸಾಧಿಸಿವೆ. 1985, 1994, 2008 ಮತ್ತು 2013ರಲ್ಲಿ ರೋಶನ್ ಬೇಗ್ ಗೆದ್ದಿದ್ದರು. 1978ರಲ್ಲಿ ಸಿ.ಎಂ.ಇಬ್ರಾಹಿಂ ಜನತಾ ಪಕ್ಷದಿಂದ ವಿಧಾನಸಭೆ ಪ್ರವೇಶಿಸಿದ್ದರು.

ಹಿಂದಿನ ಫಲಿತಾಂಶಗಳು: 2008ರ ಚುನಾವಣೆಯಲ್ಲಿ ಅಭ್ಯರ್ಥಿ ಕಾಂಗ್ರೆಸ್ ನಿಂದ ರೋಷನ್ ಬೇಗ್ 43013 ಮತವನ್ನು ಗಳಿಸಿದ್ದರೆ, ಬಿಜೆಪಿಯವರಾದ ಆದ ನಿರ್ಮಲ್ ಕುಮಾರ್ ಸುರಾನ್ ಅವರು 32617 ಮತ ಗಳಿಸಿದ್ದರು.

2013ರಲ್ಲಿನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರದಿಂದ ರೋಷನ್ ಬೇಗ್ 49649 ಮತಗಳನ್ನು ಪಡೆದರೆ ನಿರ್ಮಲ್ ಕುಮಾರ್ ಸುರಾನ್ 28794 ಮತಗಳನ್ನು ತನ್ನದಾಗಿಸಿಕೊಂಡಿದ್ದರು.

English summary
Karnataka Assembly Election 2018: Read all about Shivajinagara assembly constituency of Bengaluru. Get election news from Bengaluru district. Know about Shivajinagara candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X