ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲೇಶ್ವರಂನಲ್ಲಿ ಕಮಲದ ಕಂಪು ಮತ್ತೆ ಹರಡುವುದೇ?

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ಮಲ್ಲೇಶ್ವರಂ, ಧಾರ್ಮಿಕ ಮತ್ತು ಸಂಸ್ಕೃತಿಯ ಗುಣಲಕ್ಷಣಕ್ಕೆ ಹೆಸರುವಾಸಿ. ಜತೆಗೆ ಪ್ರಮುಖ ಶಾಪಿಂಗ್ ಪ್ರದೇಶ ಕೂಡ.

ಕ್ಷೇತ್ರ ಪರಿಚಯ: ಬಿಟಿಎಂ ಲೇಔಟ್ ನಲ್ಲಿ ಮತ್ತೆ ಗೆಲ್ಲುತ್ತಾರಾ ರೆಡ್ಡಿ?ಕ್ಷೇತ್ರ ಪರಿಚಯ: ಬಿಟಿಎಂ ಲೇಔಟ್ ನಲ್ಲಿ ಮತ್ತೆ ಗೆಲ್ಲುತ್ತಾರಾ ರೆಡ್ಡಿ?

ಇಲ್ಲಿ ಕಾಲಿಟ್ಟರೆ ಮಲ್ಲಿಗೆ, ಸಂಪಿಗೆ ಮುಂತಾದ ಹೂವುಗಳ ಕಂಪು ಆವರಿಸುತ್ತದೆ. ಅದರ ನಡುವೆಯೇ ದಶಕದಿಂದ 'ಕಮಲ'ದ ಕಂಪು ಕೂಡ ಇಲ್ಲಿ ಹರಡಿದೆ. ಪ್ರಸಿದ್ಧ ಚೌಡಯ್ಯ ಸ್ಮಾರಕ ಇರುವುದು ಇಲ್ಲಿಯೇ. ವಾಯುವಿಹಾರದ ಆಸಕ್ತರಿಗೆ ಸ್ಯಾಂಕಿ ಕೆರೆ ಅಚ್ಚುಮೆಚ್ಚು. ತನ್ನ ಪಾರಂಪರಿಕ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಲೇ ಆಧುನಿಕತೆಗೆ ತೆರೆದುಕೊಂಡಿರುವ ಮಲ್ಲೇಶ್ವರಂ ಪರಿಸರ ತಣ್ಣಗಿದ್ದರೂ, ರಾಜಕೀಯದ ಬಿಸಿ ಜೋರಾಗಿದೆ.

ಕೆಳವರ್ಗ, ಮಧ್ಯಮ, ಮೇಲ್ಮಧ್ಯಮ ಮತ್ತು ಗಣ್ಯರು ಹೀಗೆ ಎಲ್ಲ ವರ್ಗದ ಜನರೂ ಇಲ್ಲಿದ್ದಾರೆ. ಇಲ್ಲಿನ ಬಹುಪಾಲು ಮತದಾರರು ವಿದ್ಯಾವಂತರು. ಸತತ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Karnataka Assembly Election 2018: Bengaluru- Malleshwaram constituency profile

ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮುಂದಾಗಿದೆ. ಎರಡು ಬಾರಿ ಗೆದ್ದು ಒಮ್ಮೆ ಸೋತಿರುವ ಮಾಜಿ ಶಾಸಕ ಎಂ.ಆರ್. ಸೀತಾರಾಂ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಇಲ್ಲಿನ ಏಳು ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಕಳೆದ ಚುನಾವಣೆಯಲ್ಲಿ ಅಶ್ವತ್ಥನಾರಾಯಣ ಭಾರಿ ಅಂತರದಿಂದ ಗೆದ್ದಿದ್ದರು. ಆಗ ಕಾಂಗ್ರೆಸ್ ಬಿ.ಕೆ. ಶಿವರಾಂ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಸೀತಾರಾಂ ಮತ್ತೆ ಕಾಂಗ್ರೆಸ್‌ ಟಿಕೆಟ್ ನೀಡಿರುವುರಿಂದ ಇಬ್ಬರ ನಡುವೆ ನಿಕಟ ಪೈಪೋಟಿ ನಿರೀಕ್ಷಿಸಬಹುದು.

ಬೆಂಗಳೂರಿನ ಕೆಆರ್ ಪುರದಲ್ಲಿ ಮತ್ತೆ ಕಮಲ ಅರಳುವುದೇ?ಬೆಂಗಳೂರಿನ ಕೆಆರ್ ಪುರದಲ್ಲಿ ಮತ್ತೆ ಕಮಲ ಅರಳುವುದೇ?

ಸಮಸ್ಯೆಗಳು: ಕಿರಿದಾದ ರಸ್ತೆಗಳು ಮತ್ತು ಹೆಚ್ಚುತ್ತಿರುವ ವಾಹನ ಸಂಖ್ಯೆ ಈ ಕ್ಷೇತ್ರದ ಪ್ರಮುಖ ಸಮಸ್ಯೆ. ಮಾಲ್‌ಗಳು, ವ್ಯಾಪಾರಿ ಮಳಿಗೆಗಳು ಹೆಚ್ಚಾದಂತೆ ಇಲ್ಲಿಗೆ ಖರೀದಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದೆ. ಸಂಜೆ ವೇಳೆ ಸಂಪಿಗೆ ರಸ್ತೆ ಕಿಕ್ಕಿರಿದು ತುಂಬಿಕೊಳ್ಳುತ್ತದೆ. ವಾಹನ ನಿಲ್ಲಿಸಲು ಇಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ.

ಮರಗಿಡಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಲ್ಲಿನ ನಿವಾಸಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ಕಾನೂನು ಸಮರವೇ ನಡೆಯುತ್ತಿದೆ. ಸ್ಯಾಂಕಿ ರಸ್ತೆ ಅಗಲೀಕರಣ, ಕೆರೆ ಸಮೀಪ ಬೃಹತ್ ಕಟ್ಟಡಗಳ ನಿರ್ಮಾಣ ಮುಂತಾದವುಗಳಿಗೆ ವಿರೋಧ ವ್ಯಕ್ತಪಡಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಹೂವು, ಹಣ್ಣು ಮತ್ತು ತರಕಾರಿ ಮಾರಾಟಕ್ಕಾಗಿ 50 ವರ್ಷದ ಹಳೆಯ ಕಟ್ಟಡ ಕೆಡವಿ ಬಹು ಮಹಡಿ ಕಟ್ಟಣ ನಿರ್ಮಾಣ ಆರಂಭಿಸಲಾಗಿತ್ತು. ಆದರೆ ಆ ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

* ವಿಧಾನಸಭಾ ಕ್ಷೇತ್ರ ಸಂಖ್ಯೆ: 157
ಹಾಲಿ ಶಾಸಕ: ಡಾ. ಸಿ.ಎನ್. ಅಶ್ವತ್ಥ ನಾರಾಯಣ (ಬಿಜೆಪಿ) ಸೋತ ಅಭ್ಯರ್ಥಿ ಬಿ.ಕೆ. ಶಿವರಾಂ (ಕಾಂಗ್ರೆಸ್)
ಈ ಬಾರಿಯ ಅಭ್ಯರ್ಥಿಗಳು: ಡಾ. ಸಿ.ಎನ್. ಅಶ್ವತ್ಥ ನಾರಾಯಣ (ಬಿಜೆಪಿ), ಎಂ.ಆರ್. ಸೀತಾರಾಂ (ಕಾಂಗ್ರೆಸ್‌)
ವಾರ್ಡ್‌ಗಳು: ಅರಮನೆ ನಗರ, ಮತ್ತಿಕೆರೆ, ರಾಜಾಮಹಲ್ ಗುಟ್ಟಹಳ್ಳಿ, ಮಲ್ಲೇಶ್ವರಂ, ಕಾಡು ಮಲ್ಲೇಶ್ವರ ವಾರ್ಡ್, ಸುಬ್ರಮಣ್ಯ ನಗರ, ಗಾಯತ್ರಿನಗರ

2013ರ ಫಲಿತಾಂಶ: 2013ರ ಚುನಾವಣೆಯಲ್ಲಿ ಶೇ 48.11ರಷ್ಟು ಮತದಾನವಾಗಿತ್ತು. ಅಶ್ವತ್ಥ ನಾರಾಯಣ 57,609 ಮತ ಪಡೆದಿದ್ದರು. ಮತದಾನದಲ್ಲಿ ಶೇ 53.19 ರಷ್ಟು ಮತ ಅವರಿಗೆ ಬಂದಿತ್ತು. 36,543 ಮತ ಪಡೆದಿದ್ದ ಬಿ.ಕೆ. ಶಿವರಾಂ ಅವರು ಶೇ 33.74 ಪ್ರಮಾಣದ ಮತ ಗಳಿಸಿ ಸೋಲು ಅನುಭವಿಸಿದ್ದರು. ಈ ಚುನಾವಣೆಯಲ್ಲಿ 16 ಮಂದಿ ಸ್ಪರ್ಧಿಸಿದ್ದರು.

ಕಳೆದ ಬಾರಿಯ ಮತದಾರರ ಸಂಖ್ಯೆ: 1,61,367

English summary
Karnataka Assembly Election 2018: Read all about Malleshwaram assembly constituency of Bengaluru. Get election news from Bengaluru district. Know about Malleshwaram candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X