ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದೇವಪುರ: ಲಿಂಬಾವಳಿ ಹ್ಯಾಟ್ರಿಕ್ ಗೆ ಬ್ರೇಕ್ ಹಾಕುವುದೇ ಕೈ ಪಡೆ

By Mahesh
|
Google Oneindia Kannada News

ಬೆಂಗಳೂರಿನ ಮಹದೇವಪುರ ಮೀಸಲು ಕ್ಷೇತ್ರದಲ್ಲಿ ಬಹುರಾಷ್ಟೀಯ ಕಂಪನಿಗಳು, ಹೊರ ವರ್ತುಲ ರಸ್ತೆ, ಸುದ್ದಿಗೆ ಗ್ರಾಸವಾಗಿರುವ ಕೆರೆಗಳು, ಪ್ರಮುಖ ಆಸ್ಪತ್ರೆಗಳು ಸೇರಿದಂತೆ ವೈವಿಧ್ಯವಾಗಿದೆ.

ಎರಡು ಈ ಕ್ಷೇತ್ರದಿಂದ ಗೆದ್ದು ಬಂದಿರುವ ಬಿಜೆಪಿಯ ಶಾಸಕ ಅರವಿಂದ ಲಿಂಬಾವಳಿ ಅವರು ಸಚಿವರಾಗಿ ಕೂಡಾ ಅನುಭವ ಹೊಂದಿದವರು. ಆದರೆ, ಈ ಬಾರಿ ಲಿಂಬಾವಳಿಗೆ ಹ್ಯಾಟ್ರಿಕ್ ತಪ್ಪಿಸಲು ಕಾಂಗ್ರೆಸ್ ಪಣತೊಟ್ಟಿದೆ.

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಪರಿಚಯ

ಬಿಬಿಎಂಪಿ ಚುನಾವಣೆಯಲ್ಲಿ 8 ವಾರ್ಡ್​ಗಳ ಪೈಕಿ 4 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಲಿಂಬಾವಳಿ ಯಶಸ್ವಿಯಾಗಿದ್ದರು. 3 ವಾರ್ಡ್​ಗಳನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಶ್ರೀನಿವಾಸ್ ಪ್ರಮುಖ ಪಾತ್ರ ವಹಿಸಿದ್ದರು. ಇದರಲ್ಲಿ ಸೋದರ ಎ.ಸಿ. ಹರಿಪ್ರಸಾದ್ ಹೂಡಿ ವಾರ್ಡ್​ನಲ್ಲಿ ಗೆಲುವು ಸಾಧಿಸಿದ್ದರು. ಮಾರತ್ತಹಳ್ಳಿ ವಾರ್ಡ್​ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ರಮೇಶ್ ಈಗ ಕಾಂಗ್ರೆಸ್ ಸೇರಿದ್ದಾರೆ. 11 ಪಂಚಾಯಿತಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವುದು ಕೈ ಪಾಳಯದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

2013ರ ಫಲಿತಾಂಶದ ವಿಶ್ಲೇಷಣೆ

2013ರ ಫಲಿತಾಂಶದ ವಿಶ್ಲೇಷಣೆ

* ವಿಧಾನಸಭಾ ಕ್ಷೇತ್ರ ಸಂಖ್ಯೆ 174:
ಹಾಲಿ ಶಾಸಕ- ಅರವಿಂದ ಲಿಂಬಾವಳಿ- ಬಿಜೆಪಿ.
ಸೋತ ಅಭ್ಯರ್ಥಿ ಎ. ಸಿ ಶ್ರೀನಿವಾಸ್- ಕಾಂಗ್ರೆಸ್

* ವಾರ್ಡ್: ಹೂಡಿ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ಹಗದೂರು, ದೊಡ್ಡ ನೆಕ್ಕುಂಡಿ, ಮಾರತ್ ಹಳ್ಳಿ, ವರ್ತೂರು, ಬೆಳ್ಳಂದೂರು

* ಮತದಾರರ ಸಂಖ್ಯೆ: 368411. ಕಳೆದ ಬಾರಿ ವೋಟ್ ಮಾಡಿದವರು ಶೇ. 61.54ರಷ್ಟು ಮಂದಿ. ಒಟ್ಟು 226749 ಮತಗಳ ಪೈಕಿ ಅರವಿಂದ ಲಿಂಬಾವಳಿ 110244 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಕಾಂಗ್ರೆಸ್ಸಿನ ಎ.ಸಿ ಶ್ರೀನಿವಾಸ್ ಅವರು 104095 ಮತ ಗಳಿಸಿದರು. ಶೇ 2.71ರಷ್ಟು(6149 ಮತಗಳು) ಮತಗಳ ಅಂತರದಿಂದ ಮಾತ್ರ ಗೆಲುವು ಸಾಧಿಸಿದರು.

ಎಬಿವಿಪಿ ಸಂಘಟನೆಯ ಮೂಲಕ ಬೆಳೆದವರು

ಎಬಿವಿಪಿ ಸಂಘಟನೆಯ ಮೂಲಕ ಬೆಳೆದವರು

ಮೇಲ್ಮನೆ ಸದಸ್ಯರಾಗಿದ್ದ ಲಿಂಬಾವಳಿ ಅವರು ಎರಡು ಬಾರಿ ವಿಧಾನಸಭೆಯೆ ಆಯ್ಕೆಯಾಗಿದ್ದಾರೆ. ಎಬಿವಿಪಿ ಸಂಘಟನೆಯ ಮೂಲಕ ಬೆಳೆದವರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆ ಕಟ್ಟಡ, ಅಂಗನವಾಡಿ, ಗ್ರಂಥಾಲಯ, ವ್ಯಾಯಾಮ ಶಾಲೆ, ಕ್ರೀಡಾಂಗಣ ಅಭಿವೃದ್ಧಿ ಇವರ ಸಾಧನೆ

ಸಮಸ್ಯೆಗಳ ಆಗರವಾಗಿರುವ ಮಹದೇವಪುರ

ಸಮಸ್ಯೆಗಳ ಆಗರವಾಗಿರುವ ಮಹದೇವಪುರ

ಕಾರ್ಪೊರೇಟರುಗಳು ಮಾಡಿದ ಕೆಲಸವನ್ನು ತಮ್ಮದೆಂದೇ ಹೇಳಿಕೊಳ್ಳುತ್ತಾರೆ. ಕಣ್ಣಿಗೆ ಬೀಳುವಂಥ ಮಹತ್ತರ ಕೆಲಸ ಕಾರ್ಯಗಳೇನೂ ಆಗಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ, ಜನರ ಕೈಗೆ ಸಿಗುವುದೇ ಇಲ್ಲ ಎಂದು ಎದುರಾಳಿ ಶ್ರೀನಿವಾಸ್ ಆರೋಪಿಸುತ್ತಾರೆ.

ಟ್ರಾಫಿಕ್ ಸಮಸ್ಯೆ, ವಸತಿ ಸಮಸ್ಯೆ, ಕಾಲೇಜು ಆಸ್ಪತ್ರೆ ನಿರ್ವಹಣೆ, ಕಟ್ಟಡ ಕುಸಿತ, ಮಳೆ ನೀರು ನಿರ್ವಹಣೆಯಲ್ಲಿ ವೈಫಲ್ಯ, ಐಟಿ ಬಿಟಿ ಉದ್ಯೋಗಿಗಳ ಸುರಕ್ಷತೆ, ಕೆರೆ ತ್ಯಾಜ್ಯ ನಿರ್ವಹಣೆ ವೈಫಲ್ಯ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತದೆ.

ಹ್ಯಾಟ್ರಿಕ್ ಗೆಲುವು ಕಷ್ಟ ಕಷ್ಟ

ಹ್ಯಾಟ್ರಿಕ್ ಗೆಲುವು ಕಷ್ಟ ಕಷ್ಟ

ಅರವಿಂದ್ ಲಿಂಬಾವಳಿ ಅವರ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ಸಿನ ಶ್ರೀನಿವಾಸ್ ಅವರಷ್ಟೇ ಆಲ್ಲದೆ, ಮತ ವಿಭಜನೆ ಮಾಡಲು ಆಮ್ ಆದ್ಮಿ ಪಕ್ಷವು ಉಡುಪಿ ಚಲೋ ಖ್ಯಾತಿಯ ಭಾಸ್ಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ, ಬಿಜೆಪಿ ವಿರುದ್ಧದ ಮತಗಳನ್ನು ಸೆಳೆಯುವಲ್ಲಿ ಭಾಸ್ಕರ್ ಪ್ರಸಾದ್ ಯಶಸ್ವಿಯಾದರೆ, ಲಿಂಬಾವಳಿಗೆ ಅಪಾಯ ಕಾದಿದೆ.

English summary
Karnataka Assembly Election 2018: Read all about Mahadevapura assembly constituency of Bengaluru. Get election news from Bengaluru district. Know about Mahadevapura candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X