ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವನಗುಡಿ: ಕಾಂಗ್ರೆಸ್ಸಿಗೆ ಗೆಲುವಿನ ವರ ಸಿಗುವುದೇ?

By Mahesh
|
Google Oneindia Kannada News

ಬೆಂಗಳೂರಿನ ಪುರಾತನ ಬಡಾವಣೆ, ಅಚ್ಚ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ದೊಡ್ಡ ಬಸವಣ್ಣ, ಗಣಪತಿ ದೇಗುಲಗಳಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದ ಪರಿಚಯ ಇಲ್ಲಿದೆ.

ಹಾಲಿ ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಅವರಿಗೆ ಕಾಂಗ್ರೆಸ್ಸಿನ ಬಾಗೇಗೌಡ, ಜೆಡಿಎಸ್ಸಿನಿಂದ ಜನಪ್ರಿಯ ಅಭ್ಯರ್ಥಿ ಬಿ.ಕೆ ಚಂದ್ರಶೇಖರ್ ಈ ಬಾರಿಯೂ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಲಕ್ಷಣಗಳು ಕಾಣುತ್ತಿದೆ.

ಹಿಂದೂ ಧರ್ಮ, ಸಂಪ್ರದಾಯವಾದಿಗಳ ಮತಗಳೇ ಇಲ್ಲಿ ನಿರ್ಣಾಯಕ. ಹಳೆ ಬಡಾವಣೆಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ನೀರು, ವಿದ್ಯುತ್, ಕಸ ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಿದೆ. ಸ್ವಚ್ಛ ಬಡಾವಣೆ ಎಂಬ ಟ್ಯಾಗ್ ಪಡೆದುಕೊಂಡಿದೆ. ಆದರೆ, ಸಮಸ್ಯೆಗಳಿಂದ ಸಂಪೂರ್ಣ ಮುಕ್ತವಾಗಿಲ್ಲ.

ಚುನಾವಣೆ 'ಕಟ್ಟೆ'ಯಿಂದಿಳಿಯಲು ರವಿಗೆ ಅಭ್ಯಂತರವಿಲ್ಲಚುನಾವಣೆ 'ಕಟ್ಟೆ'ಯಿಂದಿಳಿಯಲು ರವಿಗೆ ಅಭ್ಯಂತರವಿಲ್ಲ

ಬಸವನಗುಡಿ ಕ್ಷೇತ್ರದಲ್ಲಿ ಬಿಎಂಎಸ್, ನ್ಯಾಷನಲ್, ಬಿಎಚ್ಎಸ್, ವಿವಿಪುರಂ, ಜೈನ್, ಸುರಾನಾ, ಆಚಾರ್ಯ ಹೀಗೆ ಅನೇಕ ಜನಪ್ರಿಯ ಕಾಲೇಜುಗಳು ಸೇರಿ ಹತ್ತು ಹಲವು ವಿದ್ಯಾಸಂಸ್ಥೆಗಳಿವೆ.

ಬ್ಯೂಗಲ್ ರಾಕ್, ಎಂಎನ್ ಕೃಷ್ಣರಾವ್ ಪಾರ್ಕ್, ಲಾಲ್ ಬಾಗ್ ವೆಸ್ಟ್ ಗೇಟ್, ಗೋಖಲೆ ಇನ್ಸ್ಟಿಟ್ಯೂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಡಿವಿಜಿ ರಸ್ತೆ, ಗಾಂಧಿಬಜಾರು ಪ್ರಮುಖ ಸ್ಥಳಗಳು.

ಬಿಜೆಪಿ ಭದ್ರಕೋಟೆ ಬಸವನಗುಡಿಗೆ ಲಗ್ಗೆ ಹಾಕುವವರು ಯಾರು?ಬಿಜೆಪಿ ಭದ್ರಕೋಟೆ ಬಸವನಗುಡಿಗೆ ಲಗ್ಗೆ ಹಾಕುವವರು ಯಾರು?

ನೆಟ್ಟಕಲ್ಲಪ್ಪ, ಡಿ.ವಿ ಗುಂಡಪ್ಪ, ನಂಜೇಗೌಡ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಟಿ. ಆರ್ ಶಾಮಣ್ಣ ಸೇರಿದಂತೆ ಅನೇಕ ಗಣ್ಯರು ಇಲ್ಲಿ ನೆಲೆಸಿದ್ದರು.

2013ರ ಫಲಿತಾಂಶ

2013ರ ಫಲಿತಾಂಶ

* ವಿಧಾನಸಭಾ ಕ್ಷೇತ್ರ ಸಂಖ್ಯೆ 170:
* ಹಾಲಿ ಶಾಸಕ- ರವಿ ಸುಬ್ರಹ್ಮಣ್ಯ (60 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಕೆ ಬಾಗೇಗೌಡ
* ವಾರ್ಡ್: ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ
* ಮತದಾರರ ಸಂಖ್ಯೆ: 2,26,320. ಕಳೆದ ಬಾರಿ ವೋಟ್ ಮಾಡಿದವರು ಶೇ. 52.33ರಷ್ಟು ಮಂದಿ.
* ಎಲ್. ಎ ರವಿ ಸುಬ್ರಹ್ಮಣ್ಯ ಅವರು 43,876 ಮತಗಳನ್ನು ಗಳಿಸಿದ್ದರೆ, ಜೆಡಿಎಸ್ ನ ಕೆ ಬಾಗೇಗೌಡ ಅವರು 24,163 ಮತಗಳನ್ನು ಗಳಿಸಿದ್ದರು. 19,713 (ಶೇ19.02) ಮತಗಳ ಅಂತರದಿಂದ ರವಿ ಸುಬ್ರಹ್ಮಣ್ಯ ಅವರು ಗೆಲುವು ದಾಖಲಿಸಿದ್ದರು.

ಶಾಸಕ ರವಿ ಸುಬ್ರಹ್ಮಣ್ಯ ಸಾಧನೆ

ಶಾಸಕ ರವಿ ಸುಬ್ರಹ್ಮಣ್ಯ ಸಾಧನೆ

ಮೂಲತಃ ಉದ್ಯಮಿ, ರಾಜಕೀಯ ರಂಗಕ್ಕೆ ಹೊಸಬರು. ಪಾರ್ಕುಗಳು ಅಭಿವೃದ್ಧಿ, ಹಳೆ ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯಗಳ ಬೆಳವಣಿಗೆಗೆ ಕಾರಣರಾದವರು. ಜನಾನುರಾಗಿಯಾಗಿದ್ದರೂ ಸಮಾಧಾನಕರ ಸಾಧನೆ ಎಂಬುದು ನಾಗರೀಕರ ಅಭಿಪ್ರಾಯ.

ಬಸವನಗುಡಿ ಸಮಸ್ಯೆಗಳು

ಬಸವನಗುಡಿ ಸಮಸ್ಯೆಗಳು

ಶಾಶ್ವತ ಯೋಜನೆಗಳು ರೂಪಿಸಿಲ್ಲ. ಕೆಲ ಬಡಾವಣೆಗಳಲ್ಲಿ ಇನ್ನೂ ಮೂಲ ಸೌಕರ್ಯಗಳ ಸಮಸ್ಯೆ ಇದ್ದೇ ಇದೆ. ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಅಲ್ಲದೆ, ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆ. ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದ್ದರೂ, ಸದ್ಯಕ್ಕೆ ಪರಿಹಾರ ಸಿಕ್ಕಿದೆ. ಪಾರ್ಕುಗಳು, ಶಾಲಾ, ಕಾಲೇಜು, ಆಟದ ಮೈದಾನ ಅಭಿವೃದ್ಧಿಗೆ ಅವಕಾಶವಿದೆ. ಪಾರಂಪರಿಕ ಕಟ್ಟಡಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂಪ್ರದಾಯಿಕ ಮತದಾರರ ಶ್ರೀರಕ್ಷೆಯಿಂದಲೇ ರವಿ ಅವರು ಗೆಲುವು ಸಾಧಿಸಿದ್ದು ಸುಳ್ಳಲ್ಲ.

ಜೆಡಿಎಸ್ ಹಾಗೂ ಕಾಂಗ್ರೆಸ್ ಶತಪ್ರಯತ್ನ

ಜೆಡಿಎಸ್ ಹಾಗೂ ಕಾಂಗ್ರೆಸ್ ಶತಪ್ರಯತ್ನ

ಬಸವನಗುಡಿ ಕ್ಷೇತ್ರದಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಅರೆ ಮನಸ್ಸಿನಿಂದಲೇ ರವಿ ಸುಬ್ರಹ್ಮಣ್ಯ ಅವರು ಈ ಬಾರಿ ಕಣಕ್ಕಿಳಿಯುತ್ತಿದ್ದಾರೆ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೂಡಾ ಟಿಕೆಟ್ ಆಕಾಂಕ್ಷಿ. ಮತ್ತೊಮ್ಮೆ ಮೋದಿ ಅಲೆ, ಹಿಂದೂಗಳ ಮತಗಳನ್ನು ಆಶ್ರಯಿಸಿ ಗೆಲ್ಲಲು ರವಿ ಮುಂದಾಗಿದ್ದಾರೆ.

ಜೆಡಿಎಸ್ ನಿಂದ ಬಾಗೇಗೌಡ ಅವರ ಸ್ಪರ್ಧೆ ಖಚಿತ, ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕ. ಆದರೆ, ಕಾಂಗ್ರೆಸ್ಸಿನಿಂದ ಬಿ.ಕೆ ಚಂದ್ರಶೇಖರ್ ಅವರಿಗೆ ಮತ್ತೆ ಟಿಕೆಟ್ ಸಿಗುವುದೇ ಕಾದು ನೋಡಬೇಕಿದೆ. ಶ್ರೀಪಾದ ರೇಣು, ಕೆಪಿಸಿಸಿ ಐಟಿಬಿಟಿ ವಿಭಾಗದ ಮುಖ್ಯಸ್ಥ ನಿರಂಜನ್, ಯು.ಬಿ.ವೆಂಕಟೇಶ್ ಅವರ ಹೆಸರು ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

English summary
Karnataka Assembly Election 2018: Read all about Basavanagudi assembly constituency of Bengaluru. Get election news from Bengaluru district. Know about Basavanagudi candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X