ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತ ಗೆದ್ದ ಎಚ್ ಡಿ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಮೇ 25: ಇಂದು(ಮೇ 25) ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸಭೆ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸ್ಪೀಕರ್ ಆಯ್ಕೆಯ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ವಿಶ್ವಾಸ ಮತ ಯಾಚಿಸಲಿದ್ದಾರೆ.

ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ 37 ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ 78 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಸರ್ಕಾರ ರಚಿಸಲು ಬೆಂಬಲ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಸಾಕಷ್ಟು ರಾಜಕೀಯ ತಲ್ಲಣಗಳು ಉಂಟಾಗಿದ್ದವು.

ಸಮ್ಮಿಶ್ರ ಸರ್ಕಾರದ ವಿಶ್ವಾಸಮತ : ಶುಕ್ರವಾರ ಸದನದಲ್ಲಿ ನಡೆಯುವುದೇನು?ಸಮ್ಮಿಶ್ರ ಸರ್ಕಾರದ ವಿಶ್ವಾಸಮತ : ಶುಕ್ರವಾರ ಸದನದಲ್ಲಿ ನಡೆಯುವುದೇನು?

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ(104) ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿ, ಅವರು ಪ್ರಮಾಣ ವಚನ ಸ್ವೀಕರಿಸಿಯೂ ಆಗಿತ್ತು. ಆದರೆ ಮೇ 19 ರಂದು ನಡೆಯಬೇಕಿದ್ದ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಬಹುಮತ ಬರುವ ವಿಶ್ವಾಸವಿಲ್ಲದ ಕಾರಣ ವಿಶ್ವಾಸಮತ ಯಾಚಿಸುವ ಮುನ್ನವೇ ಬಿ ಎಸ್ ವೈ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Karnataka Assembly JDS Congress Floor Test LIVE Updates and results

ಅದರ ಮುಂದಿನ ಭಾಗವಾಗಿ ಮೇ 23 ರಂದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಎಚ್ ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಸಾಬೀತುಪಡಿಸಲಿದ್ದು, ಅದರ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

Newest FirstOldest First
3:54 PM, 25 May

ವಿಶ್ವಾಸಮತ ಗೆದ್ದ ಕುಮಾರಸ್ವಾಮಿಗೆ ಗಣ್ಯರ ಅಭಿನಂದನೆ
3:50 PM, 25 May

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಗೆಲುವು
3:49 PM, 25 May

"ಹೌದು" ಎನ್ನುವ ಮೂಲಕ ವಿಶ್ವಾಸ ಮತಕ್ಕೆ ಬೆಂಬಲ ಸೂಚಿಸಿದ 117 ಶಾಸಕರು
3:44 PM, 25 May

"ನಾನು ಮಾಜಿ ಕಾಂಗ್ರೆಸ್ ಸದಸ್ಯನಾಗಿ ಮಾತ್ರವಿಲ್ಲ. ಇದುವರೆಗೆ ಹಣಕಾಸು ಖಾತೆಯನ್ನು ಅತ್ಯಂತ ನಿಷ್ಠೆಯಿಂದ ನಡೆಸಿಕೊಂಡುಬಂದ, ಒಂದು ಚೆಕ್ ಸಹ ಬೌನ್ಸ್ ಆಗದಂತೆ ನೋಡಿಕೊಂಡವರು ಸಿದ್ದರಾಮಯ್ಯ" ಸ್ಪೀಕರ್ ರಮೇಶ್ ಕುಮಾರ್
3:41 PM, 25 May

ನನಗೆ ಬೆಂಬಲ ನೀಡಿದ ಕಾಂಗ್ರೆಸ್ಸಿನ ಎಲ್ಲ ನಾಯಕರಿಗೂ ಧನ್ಯವಾದಗಳು. ಅವರು ನೀಡಿದ ಅವಕಾಶವನ್ನು ನಾನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ಸಿನ ಘನತೆಯೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತೇನೆ- ಎಚ್ ಡಿ ಕುಮಾರಸ್ವಾಮಿ
3:39 PM, 25 May

ಬಿ ಎಸ್ ಯಡಿಯೂರಪ್ಪ ಅವರು ವಿರೊಧ ಪಕ್ಷದ ನಾಯಕರಾಗಿ ಇಂದು ಆಡಿದ ಮಾತುಗಳು, ಮಾಡಿದ ಆರೋಪಗಳು ನನ್ನ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿದೆ- ಎಚ್ ಡಿ ಕುಮಾರಸ್ವಾಮಿ
3:37 PM, 25 May

"ಭಾಷಣದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ನಡವಳಿಕೆಯನ್ನು ನೋಡಿದರೆ ಅವರಿಗೆ ತಮ್ಮ ಭವಿಶ್ಯ ಅಂಧಕಾರದಲ್ಲಿದೆ ಎಂಬುದು ದೃಢವಾಗುತ್ತಿದೆ ಎನ್ನಿಸುತ್ತದೆ"- ಎಚ್ ಡಿ ಕುಮಾರಸ್ವಾಮಿ
Advertisement
3:36 PM, 25 May

ಬಿ ಎಸ್ ಯಡಿಯೂರಪ್ಪ ಅವರ ಭಾಷಣಕ್ಕೆ ಸಮಜಾಯಿಷಿ ನೀಡುತ್ತಿರುವ ಎಚ್ ಡಿ ಕುಮಾರಸ್ವಾಮಿ
3:25 PM, 25 May

ವಿಪಕ್ಷ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸಮತಕ್ಕೂ ಮುನ್ನ ಸಭಾತ್ಯಾಗ
3:23 PM, 25 May

ನೀವು ಸಾಲಮನ್ನಾ ಮಾಡದೆ ಇದ್ದರೆ ಇದೇ ಸೋಮವಾರ (ಮೇ 28) ಸ್ವಯಂಘೋಷಿತ ರಾಜ್ಯ ಬಂದ್ ಮಾಡುತ್ತೇವೆ.- ಬಿ ಎಸ್ ಯಡಿಯೂರಪ್ಪ
3:21 PM, 25 May

ನಿಮ್ಮ ಪ್ರಣಾಳಿಕೆಯಂತೆ ಕೊನೇಪಕ್ಷ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ- ಬಿ ಎಸ್ ಯಡಿಯೂರಪ್ಪ
3:20 PM, 25 May

ನಾನು ಜೆಡಿಎಸ್ ನ ಕೆಲವರನ್ನು ಸಂಪರ್ಕ ಮಾಡಿದ್ದು ಸತ್ಯ. ಅದನ್ನು ಇಲ್ಲಿಯೇ ಹೇಳುತ್ತೇನೆ. ಅದರಲ್ಲೇನಿದೆ?- ಬಿ ಎಸ್ ಯಡಿಯೂರಪ್ಪ
Advertisement
3:19 PM, 25 May

ನಿಮ್ಮ ಅಧಿಕಾರಾವಧಿಯಲ್ಲಿ ಎಷ್ಟೆಲ್ಲ ಹಗಲು ದರೋಡೆಯಾಗಿದೆ. ಎಷ್ಟು ಗಣಿಗಾರಿಕೆಗಳಿಕೆ ಅನುಮತಿ ನೀಡಿದ್ದೀರಿ ಗೊತ್ತಿದೆ. ನಿಮ್ಮ ಕುಟುಂಬ ವರ್ಗದ ಹೆಸರಿನಲ್ಲಿ ಎಷ್ಟು ಸೈಟ್ ಇದೆ ಹೇಳಲಿ- ಬಿ ಎಸ್ ಯಡಿಯೂರಪ್ಪ
3:18 PM, 25 May

ಸಾಲಮನ್ನಾ ಮಾಡುವ ಕ್ರಮ ಸ್ವಾಗತ, ಮಾಸಾಶನ, ಪಿಂಚಣಿ ಎಲ್ಲಾ ಸ್ವಾಗತಾರ್ಹ. ನೀರಾವರಿ ಯೋಜನೆ, ಮಹಿಳೆಯರಿಗೆ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಎಲ್ಲವನ್ನೂ ಕೊಡಿ ಪರವಾಗಿಲ್ಲ- ಬಿ ಎಸ್ ಯಡಿಯೂರಪ್ಪ
3:16 PM, 25 May

"ಸಾಂದರ್ಭಿಕ ಶಿಶುವಿನ ಪೂರ್ವಾಶ್ರಮ ಎಂದರೆ ಊಸರವಳ್ಳಿ ಎನ್ನುವುದಕ್ಕೂ ಆಗುವುದಿಲ್ಲ. ಏಕೆಂದರೆ ಅದಕ್ಕೆ ಧರ್ಮ ಕರ್ಮ ಗೊತ್ತಿಲ್ಲ."- ಬಿ ಎಸ್ ಯಡಿಯೂರಪ್ಪ
3:14 PM, 25 May

ದುರ್ಯೋಧನ ಕುಮಾರಸ್ವಾಮಿಯವರ ಮನೆದೇವರು ಅನ್ನಿಸುತ್ತೆ- ಬಿ ಎಸ್ ಯಡಿಯೂರಪ್ಪ
3:11 PM, 25 May

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬದಲಾಗಿ ಸಿದ್ದರಾ,ಯ್ಯ ಎಂದು ಅಪಹಾಸ್ಯ ಅನುಭವಿಸಿದ ಯಡಿಯೂರಪ್ಪ
3:08 PM, 25 May

ಡಿಕೆಶಿ ಅವರನ್ನು ಖಳನಾಯಕ ಎಂದು ಕರೆದಿದ್ದರ ಕುರಿತು ರಮೇಶ್ ಕುಮಾರ್ ಹಾಸ್ಯಾತ್ಮಕ ಪ್ರತಿಕ್ರಿಯೆ. "ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಒಂದು ಮನುಷ್ಯನಿಗೆ ಆಹಾರವಾಗಿದ್ದು ಇನ್ನೊಬ್ಬ ವ್ಯಕ್ತಿಗೆ ವಿಷವಾಗಿರಬಹುದು"- ಬಿ ಎಸ್ ಯಡಿಯೂರಪ್ಪ
3:04 PM, 25 May

"ನಮ್ಮ ಹೋರಾಟವೇನಿದ್ದರೂ ಕಾಂಗ್ರೆಸ್ ವಿರುದ್ಧವಲ್ಲ. ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ" - ಬಿ ಎಸ್ ಯಡಿಯೂರಪ್ಪ
3:01 PM, 25 May

ಸದನದಲ್ಲಿ ಯಡಿಯೂರಪ್ಪ ಅವರಿಂದ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ
2:58 PM, 25 May

"ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದವರು ಕುಮಾರಸ್ವಾಮಿ. ನಿಮಗೆ ಅಧಿಕಾರ ನೀಡಿದ್ದು ಸಿದ್ದರಾಮಯ್ಯ ಎಂಬುದು ನೆನಪಿರಲಿ. ಅವರಿಗೆ ಗೌರವ ನೀಡಬೇಕಿತ್ತು"- ಬಿ ಎಸ್ ಯಡಿಯೂರಪ್ಪ
2:57 PM, 25 May

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಇಂಥ ಎಚ್ ಡಿ ಕುಮಾರಸ್ವಾಮಿಯವರಿಗಾಗಿ ನೀವು ಶಾಸಕರನ್ನೆಲ್ಲ ಒಂದೆಡೆ ಸೇರಿಸಿ ಖಳನಾಯಕ ಆದಿರಿ- ಬಿ ಎಸ್ ಯಡಿಯೂರಪ್ಪ
2:53 PM, 25 May

"ನಿಮ್ಮ ತಂದೆಗೆ ಬಿಜೆಪಿ ಜೊತೆ ಕೈಜೋಡಿಸುವುದು ಇಷ್ಟವಿರಲಿಲ್ಲ ಎನ್ನುತ್ತಿದ್ದೀರಿ. ಆವತ್ತು ಅಧಿಕಾರ ಹಸ್ತಾಂತರ ಮಾಡುವ ಸಮಯದಲ್ಲಿ ನಮಗೆ ಷರತ್ತು ವಿಧಿಸುವ ಸಮಯದಲ್ಲಿ ದೇವೇಗೌಡರೂ ನಿಮ್ಮ ಜೊತೆ ಇರಲಿಲ್ಲವೇ- ಬಿ ಎಸ್ ಯಡಿಯೂರಪ್ಪ
2:48 PM, 25 May

"ಕುಮಾರಸ್ವಾಮಿ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಸಿದ್ದರಾಮಯ್ಯ ಅವರು ನೋಡಿದ್ದಕ್ಕಿಂತ ಹೆಚ್ಚು ಹತ್ತಿರದಿಂದ ನೋಡಿದ್ದೇನೆ, ನನಗೆ ಪಶ್ಚಾತ್ತಾಪವಾಗುತ್ತಿದೆ. ಅವರಿಗೆ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ನನ್ನ ಅಕ್ಷಮ್ಯ ಅಪರಾಧ"-ಬಿ ಎಸ್ ಯಡಿಯೂರಪ್ಪ
2:45 PM, 25 May

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ಧಿಕ್ಕರಿಸಿ ಅವಕಾಶವಾದಿ ರಾಜಕಾರಣಕ್ಕೆ ಮಣೆ ಹಾಕಲಾಗಿದೆ ಎಂಬುದು ನಾಡಿನ ಜನರ ಅಭಿಪ್ರಾಯ- ಬಿ ಎಸ್ ಯಡಿಯೂರಪ್ಪ
2:39 PM, 25 May

ಇದೊಂದು ಮಾದರಿ ಸಮ್ಮಿಶ್ರ ಸರ್ಕಾರವಾಗಲಿದೆ. ಅದಕ್ಕೆ ನಿಮ್ಮೆಲ್ಲರ ಸರ್ಕಾರ ಬೇಕು- ಎಚ್ ಡಿ ಕುಮಾರಸ್ವಾಮಿ
2:38 PM, 25 May

"2008 ರಲ್ಲಿ ಬಿಜೆಪಿಯವರು ಏನು ಮಾಡಿದ್ದೀರಿ ಎಂಬುದು ನನಗೆ ಗೊತ್ತಿ 114 ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ನೀವು"- ಎಚ್ ಡಿ ಕುಮಾರಸ್ವಾಮಿ
2:36 PM, 25 May

"ಸುಪ್ರೀಂ ಕೋರ್ಟ್ ಒಂದೇ ಸಿನದಲ್ಲಿ ವಿಶ್ವಾಸಮತ ಯಾಚಿಸುವ ಸೂಚನೆ ನೀಡದಿದ್ದಲ್ಲಿ ನಾವು ಇನ್ನು ಏನೇನು ಅನಾಹುತ ನೋಡಬೇಕಿತ್ತೋ ದೇವರೇ ಬಲ್ಲ!"- ಎಚ್ ಡಿ ಕುಮಾರಸ್ವಾಮಿ
2:33 PM, 25 May

"ಆಪರೇಷನ್ ಕಮಲದಂಥ ಹೊಸ ರಾಜಕೀಯ ಪರಿಕಲ್ಪನೆಗೆ ನಾಂದಿ ಹಾಡಿದ್ದು ಯಾರು?"- ಎಚ್ ಡಿ ಕುಮಾರಸ್ವಾಮಿ
2:30 PM, 25 May

"ವಿರೋಧ ಪಕ್ಷದ ಗಣ್ಯರು ತಮ್ಮ ದೇಹ ದಂಡಿಸಿಕೊಂಡು ಕಷ್ಟಪಡೋದು ಬೇಡ. ನಿಮ್ಮ ಸಲಹೆಗಳನ್ನು ನಮಗೆ ಕೊಡಿ. ನಾವು ಪರಿಹರಿಸುತ್ತೇವೆ. ಈ ವಯಸ್ಸಿನಲ್ಲಿ ಯಡಿಯೂರಪ್ಪ ಅವರ ಆರೋಗ್ಯ ಚೆನ್ನಾಗಿರಬೇಕು."- ಎಚ್ ಡಿ ಕುಮಾರಸ್ವಾಮಿ
READ MORE

English summary
Karnataka Assembly Congress -JDS Floor Test Live Updates in Kannada : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅಗ್ನಿಪರೀಕ್ಷೆ. ಅಗ್ನಿಪರೀಕ್ಷೆ ಪಾಸಾಗುತ್ತಾರಾ ಕುಮಾರಸ್ವಾಮಿ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X