ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಕೈಲಿದ್ದ ಚಾಟಿ ಕಸಿದುಕೊಂಡರೆ ಮೋದಿ? : ಸೂಲಿಬೆಲೆ ವಿಶ್ಲೇಷಣೆ

|
Google Oneindia Kannada News

Recommended Video

ಸಿದ್ದುನ ಬದಿಗೊತ್ತಿ ಮೋದಿ ನಾಯಕತ್ವ ವಹಿಸಿಕೊಳ್ಳಲು ಹೊರಟಿದ್ದಾರಾ? ಇಲ್ಲಿದೆ ಸೂಲಿಬೆಲೆ ಉತ್ತರ | Oneindia Kannada

"ಚುನಾವಣೆ ಗೆಲುವು ಎಲ್ಲೆಲ್ಲಿ ತುಂಬ ಸವಾಲು ಆಗಿರುವುದಿಲ್ಲವೋ ಅಲ್ಲೆಲ್ಲ ನರೇಂದ್ರ ಮೋದಿ ಅವರ ಭಾಷಣ ವೈಖರಿಯೇ ಬೇರೆ. ಆದರೆ ಎಲ್ಲಿ ಕಷ್ಟ ಎಂಬುದು ಅವರ ಗಮನಕ್ಕೆ ಬರುತ್ತದೋ ಅಂಥ ಸಂದರ್ಭದಲ್ಲಿ ಆಕ್ರಮಣಕಾರಿಯಾದಂಥ ಚುನಾವಣೆ ಪ್ರಚಾರ ಮಾಡುತ್ತಾರೆ" ಎಂದಿದ್ದರು ಚಿಂತಕ ಚಕ್ರವರ್ತಿ ಸೂಲಿಬೆಲೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಟೆನ್ ಪರ್ಸೆಂಟ್ ಕಮಿಷನ್ ಆರೋಪ ಇರಬಹುದು, ಹಿಂದೂಗಳ ಹತ್ಯೆ ವಿಚಾರ ಇರಬಹುದು, ಕೇಂದ್ರ ಸರಕಾರದ ಅನುದಾನ ನೀಡಿದ್ದ ಬಗ್ಗೆ ಇರಬಹುದು. ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಮೇಲೆ ಆಕ್ರಮಣಕಾರಿಯಾಗಿಯೇ ಪ್ರಹಾರಕ್ಕೆ ಇಳಿದರು ಎಂದು ಮೇಲುನೋಟಕ್ಕೆ ಅನಿಸುತ್ತದೆ.

ಜೆಡಿಎಸ್ ಪರ ವಾಲಿದರೆ ಸೂಲಿಬೆಲೆ?: ಸಂದರ್ಶನದಲ್ಲಿದೆ ಉತ್ತರಜೆಡಿಎಸ್ ಪರ ವಾಲಿದರೆ ಸೂಲಿಬೆಲೆ?: ಸಂದರ್ಶನದಲ್ಲಿದೆ ಉತ್ತರ

ಆದರೆ, ಈ ಬಗ್ಗೆ ವಿಶ್ಲೇಷಣೆಗೆ ಇಳಿದರೆ ಗೋಚರಿಸುವುದು ಏನು? ಇಷ್ಟು ಸಮಯ ಅಂದರೆ, ಹದಿನೈದು ದಿನದ ಹಿಂದಿನವರೆಗಿನ ರಾಜ್ಯ ಬಿಜೆಪಿ ಸ್ಥಿತಿ ಬೇರೆ. ಆದರೆ ಆ ನಂತರದ ಪರಿಸ್ಥಿತಿಯೇ ಬೇರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು. ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರು ಒನ್ಇಂಡಿಯಾ ಕನ್ನಡದ ಬಗ್ಗೆ ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.

ಲೆಕ್ಕಾಚಾರ ಉಲ್ಟಾ

ಲೆಕ್ಕಾಚಾರ ಉಲ್ಟಾ

"ನರೇಂದ್ರ ಮೋದಿಯವರು ಮಾತನಾಡಬಹುದು ಎಂದು ನಿರೀಕ್ಷಿಸಿದ್ದೇ ಬೇರೆ. ಆದರೆ ಅವರು ತುಂಬ ಲೆಕ್ಕಾಚಾರದಲ್ಲಿ ಅಳೆದು- ತೂಗಿ ಮಾತನಾಡಿದ್ದಾರೆ. ಹಿಂದುತ್ವದ ವಿಚಾರವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರಕಾರದ ವಿರುದ್ಧ ದಾಳಿ ಮಾಡುತ್ತಾರೆ ಎಂದುಕೊಂಡಿದ್ದರ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ".

ಟೆನ್ ಪರ್ಸೆಂಟ್ ಕಮಿಷನ್

ಟೆನ್ ಪರ್ಸೆಂಟ್ ಕಮಿಷನ್

ರಾಜ್ಯ ಸರಕಾರದ ನಾಲ್ಕು- ನಾಲ್ಕೂವರೆ ವರ್ಷದ ವೈಫಲ್ಯವನ್ನು ತೆರೆದಿಡಲು ಈ ಅವಕಾಶವನ್ನು ಬಳಸಿಕೊಂಡರು. ಟೆನ್ ಪರ್ಸೆಂಟ್ ಕಮಿಷನ್ ಎಂಬ ಮಾತನ್ನು ಅವರು ಹೇಳಿದರು. ಆ ಮೂಲಕ ಅಲ್ಲಿ ಸೇರಿದ್ದ ನಾಲ್ಕು ಲಕ್ಷ ಜನಕ್ಕೆ ಹಾಗೂ ಇಡೀ ರಾಜ್ಯಕ್ಕೆ ತಾವು ತಿಳಿಸಬೇಕಿದ್ದ ವಿಚಾರವನ್ನು ದಾಟಿಸಿದ್ದಾರೆ.

10% ಹೇಳಿಕೆ ಬಗ್ಗೆ 100% ತಲೆಕೆಡಿಸಿಕೊಂಡಿರುವ ಕಾಂಗ್ರೆಸ್10% ಹೇಳಿಕೆ ಬಗ್ಗೆ 100% ತಲೆಕೆಡಿಸಿಕೊಂಡಿರುವ ಕಾಂಗ್ರೆಸ್

ಲೀಡ್ ತೆಗೆದುಕೊಂಡರು ಮೋದಿ

ಲೀಡ್ ತೆಗೆದುಕೊಂಡರು ಮೋದಿ

ಇಷ್ಟು ಸಮಯ ಹೇಗಾಗುತ್ತಿತ್ತು ಅಂದರೆ, ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಯಾವುದೋ ಅಸ್ತ್ರ ಪ್ರಯೋಗಿಸುತ್ತಿದ್ದರು. ಅದಕ್ಕೆ ರಾಜ್ಯದ ಬಿಜೆಪಿ ನಾಯಕರು ಉತ್ತರ ಹೇಳಿಕೊಂಡು ಓಡಾಡುತ್ತಿದ್ದರು. ಸಿದ್ದರಾಮಯ್ಯ ಅವರ ಕೈ ಮೇಲಾದಂತೆ ಗೋಚರ ಆಗುತ್ತಿತ್ತು. ಆದರೆ ಈಗ ಮೋದಿ ಲೀಡ್ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಉತ್ತರ ಕೊಡಬೇಕಿದೆ. ಸಮಜಾಯಿಷಿ ನೀಡಬೇಕಿದೆ.

ವಿಭಜನೆ ರಾಜಕೀಯ ಪ್ರಸ್ತಾವ ಮಾಡಲಿಲ್ಲ

ವಿಭಜನೆ ರಾಜಕೀಯ ಪ್ರಸ್ತಾವ ಮಾಡಲಿಲ್ಲ

ಹಿಂದೂಗಳ ಹತ್ಯೆ, ಜಾತಿ ರಾಜಕೀಯ, ಮುಸ್ಲಿಮರ ಓಲೈಕೆ ಇಂಥ ವಿಚಾರಗಳನ್ನೇ ಮೋದಿ ಮಾತನಾಡುತ್ತಾರೆ. ತಮ್ಮ ಜಾತಿ- ಧರ್ಮ ವಿಭಜನೆ ರಾಜಕೀಯ ಮುಂದುವರಿಸಬಹುದು ಎಂದು ಸಿದ್ದರಾಮಯ್ಯ ಅಂದಾಜು ಮಾಡಿದ್ದರೇನೋ ಆದರೆ ಅವರ ನಿರೀಕ್ಷೆಯನ್ನು ಮೋದಿ ಉಲ್ಟಾ ಮಾಡಿದ್ದಾರೆ.

ಅನಿವಾರ್ಯಕ್ಕೆ ಸಿಲುಕಿದರೆ ಸಿದ್ದು

ಅನಿವಾರ್ಯಕ್ಕೆ ಸಿಲುಕಿದರೆ ಸಿದ್ದು

ಅನಂತಕುಮಾರ್ ಹೆಗಡೆ ಹಾಗೂ ಪ್ರತಾಪ್ ಸಿಂಹರನ್ನು ಮುಂಚೂಣಿಯಲ್ಲಿ ನಿಲ್ಲಿಸಿಕೊಂಡು, ಹಿಂದುತ್ವದ ಆಧಾರದ ಮೇಲೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಎದುರಿಸುತ್ತದೆ ಎಂಬ ನಿರೀಕ್ಷೆಯಲ್ಲೇ ಸಿದ್ದರಾಮಯ್ಯ ಇದ್ದರು. ಅದಕ್ಕೆ ತಕ್ಕಂತೆ ತಮ್ಮ ಸಿದ್ಧತೆಯನ್ನೂ ನಡೆಸಿದ್ದರು. ಈಗ ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಜನರ ಮುಂದೆ ಇಡಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಂಡಿದ್ದಾರೆ ಎನ್ನುತ್ತಾರೆ ಚಕ್ರವರ್ತಿ ಸೂಲಿಬೆಲೆ.

English summary
After Narendra Modi visit to Bengaluru game changed for BJP. Modi questioned about Siddaramaiah led congress government failures. Here is an analysis of Modi speech by thinker Chkravarty Sulibele.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X