ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ: 'ಬಿಜೆಪಿಯಲ್ಲಿ ಪೇಮೆಂಟ್ ಗಷ್ಟೇ ಬೆಲೆ, ಮೆರಿಟ್ ಗಲ್ಲ'

By ಯಶಸ್ವಿನಿ ಎಂಕೆ
|
Google Oneindia Kannada News

ಮೈಸೂರು, ಮೇ 3: ನನ್ನ ಬಳಿ ಹಣವಿಲ್ಲವೆಂಬ ಕಾರಣಕ್ಕೆ ಹಾಗೂ ಕೊನೆಗೆ ಬಂದವರಿಗೆ ಮಣೆ ಹಾಕುತ್ತದೆ ಎಂದು ಬಿಜೆಪಿ ಮೊದಲೇ ಹೇಳಿದ್ದರೆ, ನನ್ನ ದಾರಿ ನಾನು ನೋಡಿಕೊಳ್ಳುತ್ತಿದೆ. 'ಇಲ್ಲಿ ಪೇಮೆಂಟ್ ಸೀಟಿಗೆ ಹೆಚ್ಚು ಬೆಲೆ, ಮೆರಿಟ್ ಗಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ಆರ್ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಬಿ.ಎಂ. ನಟರಾಜ್.

ಮೈಸೂರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಸಂದರ್ಶನ ಮೈಸೂರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಸಂದರ್ಶನ

ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ 3 ವರುಷಗಳಿಂದಲೇ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ನಟರಾಜ್, ಕೊನೆ ಕ್ಷಣದ ರಾಜಕೀಯ ಮೇಲಾಟದಲ್ಲಿ ಟಿಕೆಟ್ ವಂಚಿತರಾಗಿ ಸೈಕಲ್ ಏರಿದ್ದಾರೆ. ಇದೀಗ ಅವರು ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ. ಅವರ ಮುಂದಿನ ನಿಲುವುಗಳೇನು ಎಂಬುದರ ಕುರಿತಾದ ಮಾತುಗಳು ಇಲ್ಲಿದೆ.

ನಿಮ್ಮ ಬಗ್ಗೆ ಕ್ಷೇತ್ರದ ಜನರು ಏನಂತಾರೆ ?

ನಿಮ್ಮ ಬಗ್ಗೆ ಕ್ಷೇತ್ರದ ಜನರು ಏನಂತಾರೆ ?

ಜೆಡಿಎಸ್, ಬಿಜೆಪಿ ಪಕ್ಷದಲ್ಲಿ ಇದ್ದವನು ನಾನು. ಟಿಕೆಟ್ ಸಿಗದ ಕಾರಣ ಪಕ್ಷ ತೊರೆದೆ. ಆದರೆ ಜನರು ಪಕ್ಷ ನೋಡಿ ಮತ ಚಲಾವಣೆ ಮಾಡದೇ, ಮಾಡಿರುವ ಕಾಯಕಕ್ಕೆ ಬೆಂಬಲ ನೀಡುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ.

ನಾಮಪತ್ರ ಸಲ್ಲಿಸುವ ವೇಳೆ ನನ್ನ ಪರವಾಗಿ ಬಂದಿದ್ದ ಕಾರ್ಯಕರ್ತರನ್ನು ನೋಡಿ ನನಗೆ ಆಶ್ಚಯರ್ವೆನಿಸುತ್ತಿದೆ. ಜನರಿಗೆ ನನ್ನ ವಿಚಾರವಾಗಿ ಯಾವುದೇ ಗೊಂದಲವಿಲ್ಲ.

ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ

ನೀವು ಬಿಜೆಪಿ ತೊರೆಯಲು ಕಾರಣವೇನು?

ನೀವು ಬಿಜೆಪಿ ತೊರೆಯಲು ಕಾರಣವೇನು?

ನಾನು ನಗರಪಾಲಿಕೆ ಸದಸ್ಯನಾಗಲು ಅವಕಾಶ ಒದಗಿ ಬಂತು. ಆದರೆ ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಹೊರಗಿಟ್ಟು ಅನ್ಯ ಪಕ್ಷದ ಅಭ್ಯರ್ಥಿಯನ್ನು ತಂದು ನಿಲ್ಲಿಸಿದರು. ಆ ಕಾರಣಕ್ಕೆ ನನಗೆ ಮುಜುಗರವಾಯಿತು.

ನಾನು 3 ವರುಷಗಳಿಂದ ಹಿಂದುತ್ವದ ಆಧಾರದ ಮೇಲೆ ಸಂಘಟನೆ ಮಾಡಿದೆ. ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಿಗಲಿಲ್ಲ. ನನಗೆ ಈಗ ಅನಿಸುತ್ತಿದೆ ಬಿಜೆಪಿ ಪೇಮೆಂಟ್ ಸೀಟ್ ನೀಡಿದೆ. ಆದರೆ ಮೆರಿಟ್ ಸೀಟ್ ನೀಡಿಲ್ಲ ಎಂದು. ಸಂದೇಶ್ ಸ್ವಾಮಿಗೆ ಟಿಕೆಟ್ ನೀಡಿದ್ದು ಪೇಮೆಂಟ್ ನಿಂದ. ಹಾಗಾಗಿ ಹೊರಬಂದೆ.

ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎ ರಾಮದಾಸ್ ಸಂದರ್ಶನ ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎ ರಾಮದಾಸ್ ಸಂದರ್ಶನ

ಹಾಗಾದರೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ನೀವು ಬಿಜೆಪಿ ತೊರೆದದ್ದು ಸ್ವಾರ್ಥವಲ್ಲವೇ ?

ಹಾಗಾದರೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ನೀವು ಬಿಜೆಪಿ ತೊರೆದದ್ದು ಸ್ವಾರ್ಥವಲ್ಲವೇ ?

ಖಂಡಿತ ಇಲ್ಲ. ನಾನು ಪಕ್ಷದ ಸಂಘಟನೆಗೆ ಬಲವರ್ಧನೆಗೆ ಶ್ರಮಿಸಿದ್ದೆ. ಪಕ್ಷದಲ್ಲಿ ನಾನು ಕಷ್ಟಪಟ್ಟು ದುಡಿದು, ಟಿಕೆಟ್ ಮತ್ತೊಬ್ಬನಿಗೆ ಕೊಡುವುದಕ್ಕೆ ಹೇಗಾಗುತ್ತದೆ. ನೀವೇ ನೋಡಿ ಮುಂದಿನ ದಿನದಲ್ಲಿ ಸಂದೇಶ್ ಸ್ವಾಮಿ ಬಿಜೆಪಿಯಲ್ಲಿಯೂ ಇರುವುದಿಲ್ಲ. ಜಂಪಿಂಗ್ ಜಪಾಂಗ್ ತರಹ ಬೇರೇ ಪಕ್ಷಕ್ಕೆ ಹಾರುತ್ತಾರೆ.

ಚುನಾವಣಾ ಸಂದರ್ಭದಲ್ಲಿ ಟೂರ್ ಬಂದ ಹಾಗೇ ಬರುತ್ತಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಗೆಲ್ಲಲು ಇಂಥಹವರು ಏನೂ ಮಾಡಿಲ್ಲ. ಇಂಥವರಿಗೆ ಏಕೆ ಬಿಜೆಪಿ ಟಿಕೆಟ್ ನೀಡಿದೆ? ನನಗೆ ಅದಕ್ಕೆ ಬೇಸರವಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ

ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ?

ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ?

ಕ್ಷೇತ್ರದಲ್ಲಿರುವುದು 19 ಮಂದಿ ಅಭ್ಯರ್ಥಿಗಳು. ಹತ್ತೊಂಬತ್ತು ಮಂದಿಯಲ್ಲಿ ಕಾಂಗ್ರೆಸ್ ನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಜನ ಸಂಪರ್ಕವೇ ಇಲ್ಲ. ಇನ್ನು ಬಿಜೆಪಿಯಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದವರೇ ಬೇರೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದವರೇ ಬೇರೆ.

ಆದರೆ ನಾನು ಜನರ ಮಧ್ಯೆ ದಿನವೂ ಇರುತ್ತೇನೆ. ಜನರ ಕಷ್ಟ - ಸುಖಗಳಿಗೆ ಸ್ಪಂದಿಸಿದ್ದೇನೆ. ಹಾಗಾಗಿ ನನಗೆ ಜನರ ಬಗ್ಗೆ ಕಾಳಜಿ ಇದೆ. ಇದೇ ನನ್ನ ಗೆಲುವಿಗೆ ಮೆಟ್ಟಿಲು ಆಗುತ್ತದೆ.

ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ

ನಿಮಗೆ ಬಿಜೆಪಿ ತೊರೆದ ಮೇಲೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿತ್ತೇ?

ನಿಮಗೆ ಬಿಜೆಪಿ ತೊರೆದ ಮೇಲೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿತ್ತೇ?

ಬಂದಿದ್ದು ನಿಜ . ಪಕ್ಷವನ್ನು ಬೆಂಬಲಿಸಿ ಎಂದು ಆಹ್ವಾನ ಬಂದಿದೆಯೇ ವಿನಃ ತಮ್ಮ ಪಕ್ಷದಿಂದ ಸ್ಪರ್ಧಿಸಿ ಎಂದು ಬಂದಿರಲಿಲ್ಲ. ನನಗೆ ಮಿಕ್ಕಿದ ಪಕ್ಷದ ಅಭ್ಯರ್ಥಿಗಳ ಮೇಲೂ ನಂಬಿಕೆ ಇಲ್ಲ. ಅವರು ಜನಸ್ನೇಹಿಯಾಗಿಯೂ ಇಲ್ಲ. ಹಾಗಾಗಿ ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ.

ಎನ್. ಆರ್ ಕ್ಷೇತ್ರದಲ್ಲಿ ಕೋಮು ಸಾಮರಸ್ಯ ಎಂಬುದು ಬಹುದೊಡ್ಡ ಸವಾಲು. ಈ ನಿಟ್ಟಿನಲ್ಲಿ ನಿಮ್ಮ ಮುಂದಿನ ನಿಲುವುಗಳೇನು ?

ಈ ಕಾರಣಕ್ಕಾಗಿಯೇ ಜನರು ಹಾಗೂ ಕಾರ್ಯಕರ್ತರು ನನ್ನನ್ನು ನಿಲ್ಲಿ ಎಂದು ಒತ್ತಡ ಹೇರಿದ್ದು. ನಾನು ಈ ಹಿಂದೆ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಕೋಮು ಗಲಭೆಗಳಿಲ್ಲದ ರೀತಿಯಲ್ಲಿ ಕೊಂಡೊಯ್ದಿದ್ದೇನೆ. ಇದೇ ನನಗೆ ಶ್ರೀ ರಕ್ಷೆ.

ನೀವು ಗೆದ್ದರೆ ನಿಮ್ಮಿಂದಾಗುವ ಅಭಿವೃದ್ಧಿ ಕಾರ್ಯಗಳು ಏನು?

ನೀವು ಗೆದ್ದರೆ ನಿಮ್ಮಿಂದಾಗುವ ಅಭಿವೃದ್ಧಿ ಕಾರ್ಯಗಳು ಏನು?

ನನ್ನನ್ನು ನೀನೇ ಅಭ್ಯರ್ಥಿ ಎಂದು ಘೋಷಿಸಿ ಮೋಸ ಮಾಡಿದ ಪಕ್ಷವನ್ನು ನೀವು ಕೂಡ ನಂಬಬೇಡಿ. ಗೆಲ್ಲುವ ಅವಕಾಶ ನನಗೆ ಸ್ಪಷ್ಟವಾಗಿದೆ. ಅದಕ್ಕಾಗಿ ನೀವು ದಾರಿ ಮಾಡಿಕೊಡಿ ಎಂಬುದು ನನ್ನ ಮಾತು.

ನಾನು ಗೆದ್ದರೆ ನನ್ನ ಮೊದಲ ಆದ್ಯತೆ ಇಲ್ಲಿನ ಮೂಲಭೂತ ಸೌಕರ್ಯವನ್ನು ಜನರಿಗೆ ಒದಗಿಸುವುದು. ಜೊತೆಗೆ ರಸ್ತೆ ಸಮಸ್ಯೆಯನ್ನೂ ಪರಿಹರಿಸುತ್ತೇನೆ. ಕೋಮು ಸೌಹಾರ್ದತೆ ಹಾಗೂ ಎಲ್ಲ ಸಮಾಜದವರನ್ನು ಒಂದೇ ದೃಷ್ಟಿಯಲ್ಲಿ ಕರೆದುಕೊಂಡು ಹೋಗುವ ಆಶಯ ನನ್ನದಿದೆ. ಅದಕ್ಕೆ ಜನರು ಅವಕಾಶ ಕಲ್ಪಿಸುತ್ತಾರೆಂಬ ಭರವಸೆ ನನಗಿದೆ.

English summary
Narasimharaja constituency Samajwadi party candidate BM Nataraj exclusive interview with Oneindia Kannada. He explains work done in the constituency and his future plans for the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X