ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುವುದು ಹೇಗೆ?

By Mahesh
|
Google Oneindia Kannada News

ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು, ಚುನಾವಣಾ ಗುರುತಿನ ಚೀಟಿಯನ್ನು 18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕು. ವೋಟರ್ ಐಡಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡು ರೀತಿಯಲ್ಲೂ ಅರ್ಜಿ ಸಲ್ಲಿಸಬಹುದು.

ಆನ್ ಲೈನ್ ನಲ್ಲಿ ಪಡೆಯಬೇಕಾದರೆ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ವೆಬ್ ಸೈಟ್ ಗೆ ತೆರಳಿ. (ವೆಬ್ ಸೈಟ್ ವಿಳಾಸ: www.ceokarnataka.kar.nic.in ಹಾಗೂ http://www.voterreg.kar.nic.in/) ನೋಂದಾಯಿಸಿಕೊಂಡು, ನೀಡಿ ಲಾಗಿನ್ ಐಡಿ, ಪಾಸ್ವರ್ಡ್ ಪಡೆಯಬಹುದು. ನಂತರ ಲಾಗಿನ್ ಆಗಿ ನಿಮ್ಮ ವಿವರಗಳನ್ನು ದಾಖಲಿಸಬಹುದು.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಅಥವಾ ನಿಮ್ಮ ಏರಿಯಾದಲ್ಲಿರುವ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಫಾರ್ಮ್ 6 ಅನ್ನು ಪಡೆಯಿರಿ.
* ಫಾರ್ಮ್ 6 ರಲ್ಲಿ ನಿಮ್ಮ ಹೆಸರು, ವಯಸ್ಸು, ವಿಳಾಸ ಇತ್ಯಾದಿ ವಿವರಗಳನ್ನು ತಪ್ಪಿಲ್ಲದಂತೆ ತುಂಬಿ. ಚಿತ್ರ ಅಂಟಿಸುವುದಕ್ಕೆ ಇರುವ ಜಾಗದಲ್ಲಿ ನಿಮ್ಮ ಚಿತ್ರವನ್ನು ಅರ್ಪಿಸಿ, ನಿಮ್ಮ ಸಹಿ ಹಾಕಿ.

* ವಿಳಾಸ, ವಯಸ್ಸುಗಳ ದಾಖಲೆಗಳ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಏರಿಯಾದಲ್ಲಿರುವ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಅರ್ಜಿಯನ್ನು ನೀಡಿ. ಹೀಗೆ ಲಭ್ಯವಾದ ಮತದಾರರ ಗುರುಚಿನ ಚೀಟಿಯಲ್ಲಿ ಎಪಿಕ್ ನಂಬರ್ ಬಳಸಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಪಡೆಯಬಹುದು. ಈ ಬಗ್ಗೆ ಮುಂದೆ ಓದಿ...

ನಿಮ್ಮ ಹೆಸರನ್ನು ಹುಡುಕುವುದು ಹೇಗೆ?

ನಿಮ್ಮ ಹೆಸರನ್ನು ಹುಡುಕುವುದು ಹೇಗೆ?

ಆನ್ ಲೈನ್ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವುದು ಹೇಗೆ?
1. ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಬಹುದು.
2. ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ
3. ಮೊಬೈಲ್ ಫೋನ್ ಸಂಖ್ಯೆಯಿಂದ ಹುಡುಕಿ
ಇದಲ್ಲದೆ, ನಾಗರೀಕ ಸೇವೆ ವಿವರಗಳನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಾಟ

ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಾಟ

1. ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಬಹುದು.
* ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್ ಗೆ ಭೇಟಿ ಕೊಡಿ
* ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಿ
* ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. (ಉದಾ. ಬಳ್ಳಾರಿ ಅಸೆಂಬ್ಲಿ )
* ಎಪಿಕ್ ನಂಬರ್ : ಸಂಖ್ಯೆಯನ್ನು ನಮೂದಿಸಿ
ಹುಡುಕಿ
* ನಿಮ್ಮ ವಿವರ ಸರಿಯಿದೆಯೆ ಪರೀಕ್ಷಿಸಿ.

ಹೆಸರು ಮತ್ತು ಇತರ ವಿವರಗಳಿಂದ ಹುಡುಕಾಟ

ಹೆಸರು ಮತ್ತು ಇತರ ವಿವರಗಳಿಂದ ಹುಡುಕಾಟ

2. ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ
* ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. (ಉದಾ. ಬಳ್ಳಾರಿ ಅಸೆಂಬ್ಲಿ )
* ಗುರುತಿನ ಚೀಟಿಯಲ್ಲಿರುವಂತೆ ಹೆಸರು ನಮೂದಿಸಿ
* ನಿಮ್ಮ ತಂದೆ, ತಾಯಿ ಸಂಬಂಧಿಯ ಹೆಸರು ನಮೂದಿಸಿ
* ಪುರುಷ, ಸ್ತ್ರೀ ಅಥವಾ ಇತರೆ ಆಯ್ಕೆ ಮಾಡಿ
* ನಿಮ್ಮ ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿ
* captcha ಹಾಕಿ submit ಮಾಡಿ
* ನಿಮ್ಮ ಹೆಸರು ವಿವರ ಸರಿಯಾಗಿದೆಯೇ ಪರೀಕ್ಷಿಸಿ

ಮೊಬೈಲ್ ಫೋನ್ ಮೂಲಕ ಚೆಕ್ ಮಾಡಿ

ಮೊಬೈಲ್ ಫೋನ್ ಮೂಲಕ ಚೆಕ್ ಮಾಡಿ

3. ಸೆಲ್‌ಫೋನ್ ಸಂಖ್ಯೆಯಿಂದ ಹುಡುಕಿ
* ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. (ಉದಾ. ಬಳ್ಳಾರಿ ಅಸೆಂಬ್ಲಿ )
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಿ ಸರ್ಚ್ ಮಾಡಿ, ವಿವರ ಪಡೆದುಕೊಳ್ಳಿ.

ಇದಲ್ಲದೆ ಈಗ ಹೊಸದಾಗಿ ಎಸ್ಎಂಎಸ್ ಮೂಲಕ ಕೂಡಾ ನಿಮ್ಮ ಹೆಸರು ವಿವರ ಪತ್ತೆ ಮಾಡಬಹುದು.

English summary
How to Check Your Name In Electoral Roll or Voter List: To check if your name exists on voter list, you can log on to Election Commission website and search using your voter ID, or name and relationship details which you have entered in Form 6 while registration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X