• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? ಇಲ್ಲಿವೆ ಮುಖ್ಯಾಂಶಗಳು

By Sachhidananda Acharya
|

ಮಂಗಳೂರು, ಏಪ್ರಿಲ್ 27: ರಾಜ್ಯ ರಾಜಧಾನಿ ಬೆಂಗಳೂರಿನ್ನು ಬಿಟ್ಟು ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

'ಪ್ರಗತಿಯ ಪಕ್ಷ ಕಾಂಗ್ರೆಸ್' ಹೆಸರಿನ ಪ್ರಣಾಳಿಯನ್ನು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದು, ಕರ್ನಾಟಕದ ಎಲ್ಲಾ ಸಮುದಾಯಗಳನ್ನು ತಲುಪುವ ಉದ್ದೇಶವನ್ನು ಈ ಮೂಲಕ ವ್ಯಕ್ತಪಡಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿ ಈ ಪ್ರಣಾಳಿಕೆಯನ್ನು ತಯಾರಿಸಿದೆ.

ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕೃಷಿ

ಕೃಷಿ

 • ಕೃಷಿ ಕಾರಿಡಾರ್ ನಿರ್ಮಾಣ - ಚಾಮರಾಜನಗರದಿಂದ ಬಳ್ಳಾರಿವರೆಗಿನ10 ಜಿಲ್ಲೆಗಳನ್ನು ಇದು ಸಂಪರ್ಕಿಸಲಿದೆ.
 • ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ
 • ಕೃಷಿಕರ ಬೆಳೆ ನಾಶ ಪರಿಹಾರಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ 'ಅನ್ನದಾತ ಫಂಡ್' ರಚನೆ
 • ಜೂನ್ 1, 2018ರಂದು ಪಶು ಸಂಗೋಪನೆ ಮತ್ತು ತೋಟಗಾರಿಕೆ 24*7 ವಿದ್ಯುತ್ ಪೂರೈಕೆ
 • ರಾಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಸಂಶೋಧನಾ ಕೇಂದ್ರ ಸ್ಥಾಪನೆ. ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಮಾರಾಟ ಕೇಂದ್ರ ಸ್ಥಾಪನೆ
 • ರಾಯಚೂರಿನಲ್ಲಿ ಹತ್ತಿ ರಫ್ತು, ಸಂಶೋಧನೆ ಮತ್ತು ಮಾರುಕಟ್ಟೆ ಕೇಂದ್ರ ಸ್ಥಾಪನೆ
 • ಸಿರಿಧಾನ್ಯ ಅಭಿವೃದ್ಧಿ ಮಂಡಳಿ ಸ್ಥಾಪನೆ
 • ಡೈರಿ ಕೃಷಿಕರ ಆದಾಯ ದ್ವಿಗುಣಗೊಳಿಸಲು ಕ್ರಮ
 • ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಕಾಳುಮೆಣಸು ಸಂಸ್ಕರಣಾ ಘಟಕ, ಕಾಳುಮೆಣಸಿನ ಮೇಲಿನ ಎಪಿಎಂಸಿ ಸೆಸ್ ರದ್ದು
 • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ 2 ಮೀನು ಕೃಷಿ ಸಂಸ್ಕರಣಾ ಪಾರ್ಕ್ ಗಳ ನಿರ್ಮಾಣ
 • ರೇಷ್ಮೆ ನೂಲು ತೆಗೆಯುವವರ ಆದಾಯ ದ್ವಿಗುಣಗೊಳಿಸಲು ಕ್ರಮ
 • ಸಣ್ಣ ಪ್ಲಾಂಟರ್ ಗಳು ಮತ್ತು ಪ್ಲಾಂಟೇಷನ್ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶಿಪ್
 • ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಕಾಫಿ ಮ್ಯೂಸಿಯಂ ಮತ್ತು ಸಂಶೋಧನಾ ಕೇಂದ್ರ
 • ಏಲಕ್ಕಿ, ಅಡಿಕೆ, ಶುಂಠಿ, ಕಾಳುಮೆಣಸು, ಗೇರು ಬೆಳೆಗಳ ಸಮಸ್ಯೆ ಪರಿಹಾರಕ್ಕೆ ಮಂಡಳಿ ಸ್ಥಾಪನೆ
 • ಕೃಷಿ ಇಲಾಖೆ ಅಡಿಯಲ್ಲಿ ಸಾವಯವ ಕೃಷಿ ಇಲಾಖೆ ಸ್ಥಾಪನೆ
ಕ್ರೀಡೆ, ಶಿಕ್ಷಣ ಮತ್ತು ಸಂಸ್ಕೃತಿ

ಕ್ರೀಡೆ, ಶಿಕ್ಷಣ ಮತ್ತು ಸಂಸ್ಕೃತಿ

 • 1ನೇ ತರಗತಿಯಿಂದ ಆರಂಭಿಸಿ 12 ವರ್ಷಗಳವರೆಗೆ ಉಚಿತ ಕಡ್ಡಾಯ ಶಿಕ್ಷಣ
 • ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ವಸತಿ ಯುತ ಶಾಲೆ ಸ್ಥಾಪನೆ
 • ಪಠ್ಯಪುಸ್ತಕ ರಚನಾ ಪ್ರಾಧಿಕಾರ ಸ್ಥಾಪನೆ
 • ಕೌಶಲ್ಯಾಭಿವೃದ್ಧಿಗಾಗಿ ವೃತ್ತಿ ತರಬೇತಿ ವಿಶ್ವವಿದ್ಯಾಲಯ ಸ್ಥಾಪನೆ
 • ಕಾಲೇಜು, ಯುನಿವರ್ಸಿಟಿಗಳಲ್ಲಿ ಉಚಿತ ವೈಫೈ ಸೌಲಭ್ಯ
 • ಕ್ರೀಡೆ ಮತ್ತು ಯೋಗ ಶಿಕ್ಷಣವನ್ನು ಶಾಲೆಯಲ್ಲಿ ಕಡ್ಡಾಯಗೊಳಿಸುವುದು
 • ಬೆಂಗಳೂರಿನಲ್ಲಿ ಕನಿಷ್ಠ 10 ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ
 • ಧಾರವಾಡದಲ್ಲಿ ಸಾಹಿತ್ಯ ಭಾಷಾ ಪ್ರಾಧಿಕಾರ ಸ್ಥಾಪನೆ
 • ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ
ಎಲ್ಲಾ ಮನೆಗಳಿಗೂ ವಿದ್ಯುತ್

ಎಲ್ಲಾ ಮನೆಗಳಿಗೂ ವಿದ್ಯುತ್

 • ಎಲ್ಲಾ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡುವುದು. ಇದಕ್ಕಾಗಿ ವಿದ್ಯುತ್ ಅಗತ್ಯವಿರುವ ಮನೆಗಳ ಲೆಕ್ಕವನ್ನು ಮೊದಲು ತೆಗೆದುಕೊಳ್ಳುವುದು.
 • ಶಾಲಾ-ಕಾಲೇಜು ಪಠ್ಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಪಠ್ಯಗಳ ಅಳವಡಿಕೆ
 • 5 ಸ್ಟಾರ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಉಪಕರಣಗಳ ಉತ್ಪಾದನೆಗೆ ಪ್ರೋತ್ಸಾಹ

ಆಡಳಿತ

 • ಸರಕಾರಿ ಇಲಾಖೆಗಳ ಗಣಕೀಕರಣ
 • ಕಂಪ್ಯೂಟರ್ ಸಾಕ್ಷರತೆಗಾಗಿ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಡಿಜಿಟಲ್ ಗ್ರಂಥಾಲಯ/ಸೈಬರ್ ಕೆಫೆ
 • ಶಾಂತಿ ಸಹಬಾಳ್ವೆಗಾಗಿ ಎಲ್ಲಾ ತಾಲೂಕು, ಜಿಲ್ಲೆ, ಗ್ರಾಮಗಳಲ್ಲಿ ನಾಗರೀಕ ಸೌಹಾರ್ದ ಸಮಿತಿ ರಚನೆ
ಆರೋಗ್ಯ ಮತ್ತು ಪೌಷ್ಠಿಕಾಂಶ

ಆರೋಗ್ಯ ಮತ್ತು ಪೌಷ್ಠಿಕಾಂಶ

 • ಆರೋಗ್ಯ ಕ್ಷೇತ್ರಕ್ಕೆ ಈಗಿರುವುವ ಜಿಡಿಪಿ ಹಂಚಿಕೆಯ ಪ್ರಮಾಣ ಶೇಕಡಾ 0.9 ರಿಂದ ಶೇಕಡಾ 1.5 ಕ್ಕೆ ಏರಿಕೆ.
 • ಪ್ರತೀ ತಾಲೂಕಿನಲ್ಲಿ ಇಂದಿರಾ ಕ್ಲಿನಿಕ್ ಹೊಂದಿರುವಂತ ವೃದ್ಧಾಶ್ರಮಗಳ ಸ್ಥಾಪನೆ
 • ಪ್ರತೀ ವಾರ್ಡ್ ಗಳಲ್ಲಿ ರಾಜೀವ್ ಗಾಂಧಿ ಕ್ಲಿನಿಕ್ ಸ್ಥಾಪನೆ
 • ವಲಸೆ ಕಾರ್ಮಿಕರಿಗೂ ಅನ್ನಭಾಗ್ಯ ವಿಸ್ತರಣೆ
 • ಮಗುವಿಗೆ ಎರಡು ವರ್ಷ ಆಗುವವರೆಗೆ ಮಾತೃಪೂರ್ಣ ಯೋಜನೆ ವಿಸ್ತರಣೆ

ಐಟಿ -ಬಿಟಿ

 • ಬೆಂಗಳೂರಿನಲ್ಲಿ ಪೇಟೆಂಟ್ ಕೇಂದ್ರ ಸ್ಥಾಪನೆ
 • 1 ಕೋಟಿ ರೂಪಾಯಿವರೆಗೆ ಸ್ಟಾರ್ಟ್ ಅಪ್ ಸಬ್ಸಿಡಿ
 • ದೇವನಹಳ್ಳಿಯಲ್ಲಿ ಐಟಿ ಪಾರ್ಟ್ ರಚನೆ
 • ಶಿಡ್ಲಘಟ್ಟ ಚಿಕ್ಕಬಳ್ಳಾಪುರದಲ್ಲಿ ಹಾರ್ಡ್ ವೇರ್ ಪಾರ್ಕ್ ರಚನೆ
 • ಹುಬ್ಬಳ್ಳಿಯಲ್ಲಿ ಸೆಮಿ ಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ನಿರ್ಮಾಣ
ಮೂಲ ಸೌಕರ್ಯ

ಮೂಲ ಸೌಕರ್ಯ

 • ಮಂಗಳೂರು-ಹುಬ್ಬಳ್ಳಿ ವಿಮಾನ ಸೇವೆ
 • ಶಿರಾಡಿ ಘಾಟ್ ನಲ್ಲಿ ಸುರಂಗ ರಸ್ತೆ ನಿರ್ಮಾಣ

ನೀರಾವರಿ

 • ಮುಂದಿನ 5 ವರ್ಷಗಳಲ್ಲಿ ನೀರಾವರಿಗೆ 1.25 ಲಕ್ಷ ಕೋಟಿ ರೂಪಾಯಿ ಅನುದಾನ
 • ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಮುಕ್ತಾಯ
 • ಭದ್ರಾ ಮೇಲ್ದಂಡೆ ಯೋಜೆನೆ ಪೂರ್ಣಗೊಳಿಸುವಿಕೆ
 • ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗಕ್ಕೆ ಕುಡಿಯುವ ಮತ್ತು ಕೃಷಿಗೆ ನೀರು ಪೂರೈಕೆ. ಇದಕ್ಕಾಗಿ ವರದಾ ಅಣೆಕಟ್ಟಿಗೆ ಅಘನಾಶಿನಿ ಮತ್ತು ಬೇಡ್ತಿ ನದಿಗಳ ಜೋಡಣೆ.
 • ಕೆರೆ ತುಂಬಿಸಲು ಮಿಷನ್ ವಿಶ್ವೇಶ್ವರಯ್ಯ ಯೋಜನೆಗೆ ಚಾಲನೆ
 • ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಕ್ಕೆ ನೀರೊದಗಿಸುವ ಪಶ್ಚಿಮ ವಾಹಿನಿ ಯೋಜನೆ ಜಾರಿ
 • ಬೆಂಗಳೂರಿನ 192 ಕೆರೆಗಳ ಪುನರುಜ್ಜೀವನ ಮತ್ತು ಸ್ವಚ್ಛತೆಗೆ ಕ್ರಮ
ಕಾನೂನು ಮತ್ತು ಸುವ್ಯವಸ್ಥೆ

ಕಾನೂನು ಮತ್ತು ಸುವ್ಯವಸ್ಥೆ

 • ಎಲ್ಲಾ ಜಿಲ್ಲಾಗಳಲ್ಲಿ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆ
 • ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಹಾಲಿ ಶೇಕಡಾ 20ರಿಂದ ಶೇಕಡಾ 33ಕ್ಕೆ ವಿಸ್ತರಣೆ. ಇದರಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ 5 ಮೀಸಲಾತಿ.
 • ಫೊರೆನ್ಸಿಕ್ ಸೈನ್ಸ್ ಯುನಿವರ್ಸಿಟಿ ಸ್ಥಾಪನೆ

ಕೌಶಲ್ಯ

 • ಪ್ರತಿ ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರುಡ್ ಸೆಟ್) ಸ್ಥಾಪನೆ
 • ಪ್ರತೀ ವರ್ಷ 10-15 ಲಕ್ಷ ಉದ್ಯೋಗ ಸೃಷ್ಟಿ
ಸಾಮಾಜಿಕ ನ್ಯಾಯ

ಸಾಮಾಜಿಕ ನ್ಯಾಯ

 • ಸಫಾಯಿ ಕರ್ಮಚಾರಿಗಳಿಗೆ ಮತ್ತು ಸ್ಮಶಾನ ಅಗೆಯುವವರಿಗೆ ಶೇಕಡಾ 10 ಮನೆಗಳ ಮೀಸಲು
 • ಒಬಿಸಿ ನಿಗಮ ಸ್ಥಾಪನೆ
 • ಒಬಿಸಿ ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇಕಡಾ 75 ರಿಯಾಯಿತಿ
 • ಬಿಪಿಎಲ್ ಸ್ಲಾಬ್ 2,00,000ಕ್ಕೆ ಏರಿಕೆ
 • ಸೋಲಿಗರಿಗೆ ಶೇಕಡಾ 100 ವ಻ಸತಿ, ಹೆಣ್ಣುಮಕ್ಕಳಿಗೆ ನರ್ಸಿಂಗ್ ಮತ್ತು ಎಎನ್ಎಂ ತರಬೇತಿ. ವಸತಿ ಶಾಲೆಗಳ ನಿರ್ಮಾಣ.
 • ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಲಿಕ, ಪರವ, ಪಂಬದ, ಕುಡ್ಬಿ, ಕೊರಗ ಸಮುದಾಯದ ಯುವಕ, ಯುವತಿಯರಿಗೆ ವಿಶೇಷ ಉದ್ಯೋಗ ತರಬೇತಿ, ಶೇಕಡಾ 100 ಮನೆಗಳ ನಿರ್ಮಾಣ
 • ಮಾಸಿಕ ಭತ್ಯೆಗಳು ಮುಂದಿನ ಐದು ವರ್ಷಗಳಲ್ಲಿ ದ್ವಿಗುಣ
 • 250 ಹಾಸ್ಟೆಲ್, 150 ವಸತಿ ಶಾಲೆಗಳ ನಿರ್ಮಾಣ
 • 1000 ಮೌಲಾನಾ ಅಝಾದ್ ಶಾಲೆಗಳ ನಿರ್ಮಾಣ
 • ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ
 • ವಕ್ಫ್ ಆಸ್ತಿ ಅಭಿವೃದ್ಧಿ ನಿಗಮ ಸ್ಥಾಪನೆ
 • ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೆ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸಹಿತ ಪಿಯುಸಿವರೆಗೆ ವಿದ್ಯಾಭ್ಯಾಸ
ಪ್ರವಾಸೋದ್ಯಮ

ಪ್ರವಾಸೋದ್ಯಮ

 • ಮಂಗಳೂರು, ಉಡುಪಿ, ಕಾರವಾರದಲ್ಲಿ ಬೀಚ್ ಪ್ರವಾಸೋದ್ಯಮ
 • ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಟ್ಟಾರೆ 65 ಲಕ್ಷ ಉದ್ಯೋಗ ಸೃಷ್ಟಿ

ನಗರಾಭಿವೃದ್ಧಿ

 • ಈಗಿರುವ ಸಾರ್ವಜನಿಕ ಸಾರಿಗೆಯನ್ನು ಶೇಕಡಾ 55ರಿಂದ 80ಕ್ಕೆ ಏರಿಸಲು ಕ್ರಮ

ಮಹಿಳಾ ಮತ್ತು ಮಕ್ಕಳ ಕಲ್ಯಾಣ

 • ಎಲ್ಲಾ ಶಾಲೆ, ಕಾಲೇಜು, ಐಐಟಿ, ಪಾಲಿಟೆಕ್ನಿಕ್, ಸಾರ್ವಜನಿಕ ಶೌಚಾಲಯಗಳಲ್ಲಿ ರಿಯಾಯಿತಿ ನ್ಯಾಪ್ಕಿನ್ ವಿತರಿಸುವ ಯಂತ್ರಗಳ ಸ್ಥಾಪನೆ
 • ಬಿಪಿಎಲ್ ಕಾರ್ಡ್ ದಾರ ಮಹಿಳೆಯರಿಗೆ ಉಚಿತ ನ್ಯಾಪ್ಕಿನ್ ವಿತರಣೆ
 • ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 30 ಮೀಸಲು
 • ಮಂಗಳ ಭಾಗ್ಯ - ಬಿಪಿಎಲ್ ಕಾರ್ಡುದಾರ ಮುದುವೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮೂರು ಗ್ರಾಂ ತಾಳಿ ವಿತರಣೆ
 • ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಮಹಿಳೆಯರಿಗಾಗಿ ಸೇವೆ ನೀಡಲು ಪೊಲೀಸರ ಕಣ್ಗಾವಲು ಹೊಂದಿರುವ ಪಿಂಕ್ ಆಟೋಗಳ ಜಾರಿ
 • ಮಹಿಳೆಯರಿಗಾಗಿ ಮಹಿಳಾ ನಿರ್ವಾಹಕರಿರುವ ಬಸ್ಸುಗಳು
 • ಮಹಿಳೆಯರಿಗಾಗಿ ಮಹಿಳಾ ಚಾಲಕರಿರುವ ಆಟೋಗಳು
 • ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಮಹಿಳೆಯರ ನೇಮಕಾತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: AICC president Rahul Gandhi released congress manifesto in Mangaluru for next upcoming election. Highlights of the Congress manifesto is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more