ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ | Oneindia Kannada

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಇನ್ನೇನು ನಾಮಿನೇಶನ್ ಫೈಲ್ ಮಾಡಲು ಹೋಗಬೇಕು ಎನ್ನುವಷ್ಟರಲ್ಲಿ, ಪಕ್ಷದ ವರಿಷ್ಠರಿಂದ ಬಂದ ಆದೇಶ ಕಾರ್ಯಕರ್ತರ ಉತ್ಸಾಹಕ್ಕೆ ಸಿಡಿಲಿನಂತೆ ಅಪ್ಪಳಿಸಿತ್ತು.

ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿ ತೋರಿಸುತ್ತೇನೆಂದು ಶಪಥ ಮಾಡಿದ ಯಡಿಯೂರಪ್ಪನವರ ಮಾತಿನಂತೆ, ಬಿಜೆಪಿ ತೋಟದಪ್ಪ ಬಸವರಾಜ್ ಅವರಿಗೆ ಟಿಕೆಟ್ ನೀಡಿತು. ಆದರೆ, ಕಾರ್ಯಕರ್ತರ ಆಕ್ರೋಶ ಕಮ್ಮಿಯಾಗಿಲ್ಲ.

ವರುಣಾದಲ್ಲಿ ಗೆಲ್ಲುವವರು ಯಾರು? ಇಲ್ಲಿದೆ ಗ್ರೌಂಡ್ ರಿಪೋರ್ಟ್ವರುಣಾದಲ್ಲಿ ಗೆಲ್ಲುವವರು ಯಾರು? ಇಲ್ಲಿದೆ ಗ್ರೌಂಡ್ ರಿಪೋರ್ಟ್

ಮೈಸೂರು ವ್ಯಾಪ್ತಿಯ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿದ್ದರೆ, ಕಣದಿಂದ ಹಿಂದಕ್ಕೆ ಸರಿಯುವುದಾಗಿ ಬೆದರಿಕೆಯೊಡ್ದಿದರು. ಆದರೆ, ಇದ್ಯಾವುದಕ್ಕೂ ಜಪ್ಪಯ್ಯ ಅನ್ನದ ವರಿಷ್ಠರು, ಅಭ್ಯರ್ಥಿಗಳಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡು ಮೊದಲು ನಿಮ್ಮನಿಮ್ಮ ಕ್ಷೇತ್ರಗಳಿಂದ ಗೆದ್ದು ಬರುವುದಕ್ಕೆ ಆದ್ಯತೆ ನೀಡಿ ಎಂದು ಸೂಚನೆ ನೀಡಿತು.

ವರುಣಾ ಕ್ಷೇತ್ರದ ಟಿಕೆಟ್ ಘೋಷಣೆಯಾದ ನಂತರ ಕಾರ್ಯಕರ್ತತರ ಉತ್ಸಾಹ ಈ ಹಿಂದೆ ಎಷ್ಟಿತ್ತೋ, ಅಷ್ಟು ಈಗ ಇಲ್ಲ ಎನ್ನುವುದು ಕ್ಷೇತ್ರವನ್ನು ರೌಂಡ್ ಹೊಡೆದಾಗ ಕಾಣುವ ವಾಸ್ತವತೆ. ನಾವೇ ತಟ್ಟೆಯಲ್ಲಿ ತಾಂಬೂಲ ಇಟ್ಟು ಕಾಂಗ್ರೆಸ್ಸಿಗೆ ಕ್ಷೇತ್ರವನ್ನು ಬಿಟ್ಟಕೊಟ್ಟ ಹಾಗಾಯಿತು ಎನ್ನುವುದು ಕಾರ್ಯಕರ್ತರ ಬೇಸರದ ನುಡಿ.

ವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟ

ಅದೇನೇ ಇರಲಿ, ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವುದು ನಮ್ಮ ಕರ್ತವ್ಯ ಎನ್ನುವ ನಿಲುವನ್ನು ಹೊಂದಿರುವ ಬಿಜೆಪಿ ಕಾರ್ಯಕರ್ತರೂ ನಮಗೆ ಮಾತಿಗೆ ಸಿಕ್ಕಿದ್ದರಿಂದ, ಇನ್ನುಳಿದ ಹತ್ತು ದಿನಗಳಲ್ಲಿ ಬಿಜೆಪಿ ಪ್ರಚಾರದ ಕಾವು ತೀವ್ರತೆ ಪಡೆದರೂ ಪಡೆಯಬಹುದು. ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜ್ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಪ್ರಮುಖಾಂಶ, ಮುಂದೆ ಓದಿ..

ವರುಣಾ ಕ್ಷೇತ್ರದ ಜನ ಏನಂತಾರೆ?

ವರುಣಾ ಕ್ಷೇತ್ರದ ಜನ ಏನಂತಾರೆ?

ಪ್ರ: ನೀವು ಅಭ್ಯರ್ಥಿಯಾಗಿರಲಿ, ಆಗದಿರಲಿ, ವರುಣಾ ಕ್ಷೇತ್ರದ ಜನರ ನಾಡಿಮಿಡಿತ ಹೇಗಿದೆ?
ತೋ.ಬ: ಕ್ಷೇತ್ರದ ನಾಡಿಮಿಡಿತ ಬಿಜೆಪಿಯ ಪರವಾಗಿದೆ. ಯಾಕೆಂದರೆ ಮೋದಿಯವರು ಪ್ರಧಾನಿಯಾದ ನಂತರ ಇಡೀ ವಿಶ್ವ ಮೆಚ್ಚುವ ಆಡಳಿತವನ್ನು ಅವರು ನೀಡುತ್ತಿದ್ದಾರೆ. ಭ್ರಷ್ಟಾಚಾರ ರಹಿತ, ಸಣ್ಣ ಕಪ್ಪುಚುಕ್ಕೆಯಿಲ್ಲದಂತೇ ಎಲ್ಲರನ್ನೂ ಜೊತೆಗೂಡಿಸಿ ಮೋದಿಯವರು ಕೆಲಸ ಮಾಡುತ್ತಿದ್ದಾರೆ.

ಹಲವಾರು ಯೋಜನೆಗಳನ್ನು ತಂದು, ಉದ್ಯೋಗ ಸೃಷ್ಟಿಮಾಡಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಹಿಂದಿನ ಬಿಎಸ್ವೈ, ಶೆಟ್ಟರ್ ಮತ್ತು ಸದಾನಂದ ಗೌಡರ ಸರಕಾರದಲ್ಲಿ ಉತ್ತಮ ಕೆಲಸಗಳಾಗಿವೆ. ವರುಣಾ ಕ್ಷೇತ್ರದ ಜನತೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರೂ, ಜನಸಾಮಾನ್ಯರಿಗೆ ಸಿಗುತ್ತಿರಲಿಲ್ಲ. ಇದು ಅಲ್ಲಿ ಕೊರತೆಯಾಗಿ ಕಾಣುತ್ತಿದೆ. ನನ್ನಂತವನು ಶಾಸಕನಾಗಿ ಆಯ್ಕೆಯಾದರೆ, ಜನರಿಗೆ 24ಗಂಟೆ ಸಿಗುತ್ತೇನೆ ಎನ್ನುವುದೇ ಇಲ್ಲಿ ನನಗೆ ಪ್ಲಸ್ ಪಾಯಿಂಟ್.

ಯಡಿಯೂರಪ್ಪನವರಿಗೂ ಆ ಶಕ್ತಿಯಿದೆ, ಬಿಜೆಪಿಗೂ ಆ ಶಕ್ತಿಯಿದೆ.

ಯಡಿಯೂರಪ್ಪನವರಿಗೂ ಆ ಶಕ್ತಿಯಿದೆ, ಬಿಜೆಪಿಗೂ ಆ ಶಕ್ತಿಯಿದೆ.

ಪ್ರ: ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆದ್ದು ತೋರಿಸುತ್ತೇನೆಂದು ಬಿಎಸ್ವೈ ಹೇಳಿದ್ದಾರೆ, ಈ ಬಗ್ಗೆ?
ತೋ.ಬ: ಖಂಡಿತ, ಯಡಿಯೂರಪ್ಪನವರಿಗೂ ಆ ಶಕ್ತಿಯಿದೆ, ಬಿಜೆಪಿಗೂ ಆ ಶಕ್ತಿಯಿದೆ. ಅದರಿಂದಲೇ ಸವಾಲನ್ನು ಸ್ವೀಕರಿಸಿ ನನ್ನನ್ನು ಕಣಕ್ಕಿಳಿಸಿರುವುದು.

ಪ್ರ: ನೋಟಾ ಚಲಾಯಿಸುತ್ತೇವೆ ಎನ್ನುವ ಮಾತು ಕೇಳಿಬರುತ್ತಿದೆಯಲ್ಲಾ?
ತೋ.ಬ: ಕೆಲವೇ ಕೆಲವು ವ್ಯಕ್ತಿಗಳು ಮಾಡುತ್ತಿರುವಂತಹ ಗೊಂದಲ. ನೋಟಾ ಮಾಡೋದು ಒಂದೇ ಮನೆಯಲ್ಲಿ ಸುಮ್ಮನಿರುವುದೂ ಒಂದೇ..

ವರುಣಾದಲ್ಲಿ ಬಿಜೆಪಿ ಹೆಸರಿನಲ್ಲಿ ಗೊಂದಲ ನಡೆಸುತ್ತಿರುವವರು ಯಾರು?

ವರುಣಾದಲ್ಲಿ ಬಿಜೆಪಿ ಹೆಸರಿನಲ್ಲಿ ಗೊಂದಲ ನಡೆಸುತ್ತಿರುವವರು ಯಾರು?

ಪ್ರ: ಕಾರ್ಯಕರ್ತರಲ್ಲಿ ಭಾರೀ ಗೊಂದಲವಿದೆಯಲ್ಲಾ?
ತೋ.ಬ: ಗೊಂದಲ ಮಾಡುತ್ತಿರುವವರಿಗೂ, ಬಿಜೆಪಿಗೂ ಸಂಬಂಧವಿಲ್ಲ. ಬಿಜೆಪಿ ಕಾರ್ಯಕರ್ತರು ಯಾರೂ ಗೊಂದಲ ಮಾಡುತ್ತಿಲ್ಲ.ಬಿಜೆಪಿ ಹೆಸರಿನಲ್ಲಿ ಗೊಂದಲ ನಡೆಸಲಾಗುತ್ತಿದೆ. ನಮ್ಮ ಕಾರ್ಯಕರ್ತರು ಬೂತ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರೂ ನಮ್ಮ ಪರವಾಗಿ ಒಲವನ್ನು ವ್ಯಕ್ತಪಡಿಸಿದ್ದಾರೆ.

ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ

ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ

ಪ್ರ: ವರುಣಾ ಕ್ಷೇತ್ರದ ಸಮಸ್ಯೆ ಏನು?
ತೋ.ಬ: ವರುಣಾ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿ ನಾಲ್ಕು ತಾಲೂಕಿಗೆ ಬರುತ್ತದೆ. ಈ ಕ್ಷೇತ್ರಕ್ಕೆ ಕಳೆದ ಹತ್ತು ವರ್ಷದಿಂದ ಸಿದ್ದರಾಮಯ್ಯನವರೇ ಶಾಸಕರು. ವರುಣಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬಹುದಿತ್ತು. ನನ್ನನ್ನು ಜನ ಆರಿಸಿ ಕಳುಹಿಸುವುದಂತೂ ಖಂಡಿತ. ನನ್ನ ಮೊದಲ ಆದ್ಯತೆ ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದಕ್ಕೆ ಹೋರಾಡುತ್ತೇನೆ.

ಮತದಾರರಲ್ಲಿ ನಿಮ್ಮ ಮನವಿ

ಮತದಾರರಲ್ಲಿ ನಿಮ್ಮ ಮನವಿ

ಪ್ರ: ವರುಣಾ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
ತೋ.ಬ: ಈ ಹಿಂದೆ ಬಡತನದಿಂದ ಬಂದ ಮಹಾದೇವಪ್ಪ ಅವರನ್ನು ಗೆಲ್ಲಿಸಿದ್ರಿ. ಅದೇ ರೀತಿ, ತೋಟದಪ್ಪ ಬಸವರಾಜು ಎನ್ನುವ ಸಾಮಾನ್ಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡುತ್ತೀರಾ ಎನ್ನುವ ನಂಬಿಕೆಯಿದೆ.

ನಾನು ನಿಮ್ಮಲ್ಲಿ ಸವಿನಯದಿಂದ ಪ್ರಾರ್ಥನೆ ಮಾಡುತ್ತೇನೆ, ಬಿಜೆಪಿಗೆ ಮತವನ್ನು ಕೊಡಿ. ನಾನು ನಿಮ್ಮ ಮನೆಮಗನಾಗಿ, ಕ್ಷೇತ್ರದಲ್ಲಿ ನಿಮ್ಮೊಡನೆ ಬೆರೆತು, ಸಹೋದರ, ಸ್ನೇಹಿತನಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ.

English summary
Exclusive interview with Varuna (Mysuru) BJP candidate Totadappa Basavaraju. During his interview, Basavaraju said, ticket crisis in Varuna is not created by BJP supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X