ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿರು ಜಿಲ್ಲೆ ಉತ್ತರ ಕನ್ನಡ ಕ್ಷೇತ್ರದ ಪ್ರಮುಖ ಸಮಸ್ಯೆಗಳು

|
Google Oneindia Kannada News

ಕರ್ನಾಟಕದಲ್ಲಿ ಅತೀ ಹೆಚ್ಚು ಕಾಡನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಉತ್ತರ ಕನ್ನಡ ಜಿಲ್ಲೆಯದು. ಸರ್ವಋತುಗಳಲ್ಲೂ ಹಸಿರನ್ನೇ ಹೊದ್ದಿರುವ ಉತ್ತರ ಕನ್ನಡ ಮಲೆನಾಡೂ ಹೌದು, ಕರಾವಳಿಯೂ ಹೌದು! ಒಂದೆಡೆ ಕರಾವಳಿಯ ಸಮುದ್ರ ಕಿನಾರೆ ಇನ್ನೊಂದೆಡೆ ಮಲೆನಾಡಿನ ಸಸ್ಯಶಾಮಲೆ ಸೇರಿ ಉತ್ತರ ಕನ್ನಡದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಆದರೆ ಇತ್ತಿಚಿನ ಜಾಗತಿಕ ತಾಪಮಾನದ ಬಿಸಿ, ಅಂತರ್ಜಲದ ಕೊರತೆ ಈ ಹಸಿರು ಜಿಲ್ಲೆಯಲ್ಲೂ ವ್ಯಾಪಿಸಿದೆ. ಏಪ್ರಿಲ್, ಮೇ ಸಂದರ್ಭದಲ್ಲಿ ಜನರು ನೀರಿನ ಕೊರತೆ ಅನುಭವಿಸಬೇಕಾಗಿದೆ.

ಉತ್ತರ ಕನ್ನಡಕ್ಕೆ ಒಂದರ್ಥದಲ್ಲಿ ಅದು ಹೊಂದಿರುವ ಸೌಂದರ್ಯವೇ ಮಾರಕವೂ ಆಗಿದೆ. ದಟ್ಟ ಕಾಡು ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದಾಗಿ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಉತ್ತರ ಕನ್ನಡದತ್ತ ಸರ್ಕಾರದ, ಖಾಸಗಿ ಕಪನಿಗಳ ನೋಟ ಜಾರದಿದೆ. ಪರಿಸರಕ್ಕೆ ಹಾನಿಯಾಗುವಂಥ ಯಾವುದೇ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಜನರೂ ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.

ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ ಸೇರಿದಂತೆ ಘಟಾನುಘಟಿ ಸಾಹಿತಿಗಳ ನೆಲೆ ಇದು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಲವು ಪ್ರಮುಖರನ್ನು ಪರಿಚಯಿಸಿದ ಕೀರ್ತಿಯೂ ಈ ಜಿಲ್ಲೆಯದ್ದು.

ಜಿಲ್ಲೆಯ ಪ್ರಮುಖ ಸಮಸ್ಯೆಗಳೇನು?

ಜಿಲ್ಲೆಯ ಪ್ರಮುಖ ಸಮಸ್ಯೆಗಳೇನು?

ಈ ಭಾಗದಲ್ಲಿ ಅಡಿಕೆ ಬೆಳೆಗಾರರೇ ಹೆಚ್ಚಿರುವುದರಿಂದ ಅಡಿಕೆಗೆ ಬೆಂಬಲ ಬೆಲೆ ಮತ್ತು ಸರಿಯಾದ ಮಾರುಕಟ್ಟೆ ಪಡೆಯುವುದೇ ಇಲ್ಲಿನ ಜನರ ನಿರಂತರ ಹೋರಾಟ ಎನ್ನಿಸಿದೆ. ಒಂದೆಡೆ ಕರಾವಳಿಯೂ ಇರುವುದರಿಂದ ಇಲ್ಲಿ ಮೀನುಗಾರಿಕೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ನಂಬಿಕೊಂಡವರು ಹಲವರಿದ್ದಾರೆ. ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗಬೇಕು ಎಂಬ ಬೇಡಿಕೆಯೂ ಈ ಜಿಲ್ಲೆಯಿಂದ ಕೇಳಿಬರುತ್ತಿದೆ. ಕಾರವಾರದ ಕೈಗಾದಲ್ಲಿ ನಿರ್ಮಾಣವಾದ ಉಷ್ಣವಿದ್ಯುತ್ ಸ್ಥಾವರದಿಂದಾಗಿ ಹಲವರು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೂರುತ್ತಿವೆ ಎಂಬ ಮಾತೂ ಕೇಳಿಬರುತ್ತಿದೆ. ಆದ್ದರಿಂದ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಜನರು ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ. ಕೃಷಿ ಸಂಬಂಧಿ ಸಮಸ್ಯೆಗಳ ಜೊತೆಗೆ ಇಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಅಲೇಜ್ ಗಳಿಲ್ಲದಿರುವುದೂ ಸಮಸ್ಯೆ ಎನ್ನಿಸಿಸದೆ.

ಆಸ್ಪತ್ರೆ ಕೊರತೆ, ರಸ್ತೆ, ನೀರು, ಕಡಲ್ಕೊರೆತ, ಒಕ್ಕಲು ಸಮಸ್ಯೆ, ಎಲ್ಲಕ್ಕಿಂತ ಬಹುಮುಖ್ಯ ಸಮಸ್ಯೆ ಎಂದರೆ ಜನ ಸಂಪರ್ಕ. ಒಂದು ಮನೆಯಿಂದ ಮತ್ತೊಂದು ಮನೆಗೆ ಸಾಗಲು ಸಂಪರ್ಕವೇ ಇರುವುದಿಲ್ಲ. ಜಿಲ್ಲೆ ಆಧುನಿಕತೆಗೆ ಹೆಚ್ಚು ತೆರೆದುಕೊಳ್ಳದಿರುವುದರಿಂದ, ಮತ್ತು ಮೂಲ ಸೌಕರ್ಯದ ಸಮಸ್ಯೆ ಇರುವುದರಿಂದ ಇಲ್ಲಿ ಸರಿಯಾದ ಶಿಕ್ಷಣ ಒದಗಿಸುವುದೂ ಒಂದು ಸಮಸ್ಯೆ ಎನ್ನಿಸಿಸದೆ.

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಒಂದಷ್ಟು ಮಾಹಿತಿ

ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಒಂದಷ್ಟು ಮಾಹಿತಿ

ತಾಲೂಕುಗಳು: ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ, ಭಟ್ಕಳ, ಹಳಿಯಾಳ, ಜೋಯಿಡಾ, ಮುಂಡಗೋಡು, ಅಂಕೋಲ

ವಿಧಾನಸಭಾ ಕ್ಷೇತ್ರಗಳು: ಶಿರಸಿ, ಯಲ್ಲಾಪುರ, ಕುಮಟಾ, ಭಟ್ಕಳ, ಹಳಿಯಾಳ, ಕಾರವಾರ

ಪ್ರಮುಖ ಜನಾಂಗ: ಬ್ರಾಹ್ಮಣ, ಒಕ್ಕಲಿಗ, ಮುಸ್ಲಿಂ, ಸಿದ್ಧಿ ಜನಾಂಗ, ಹಿಂದುಳಿದ ಜನಾಂಗ

ಪ್ರವಾಸೋದ್ಯಮದ ಉಪಯೋಗ ಪಡೆಯುತ್ತಿಲ್ಲ!

ಪ್ರವಾಸೋದ್ಯಮದ ಉಪಯೋಗ ಪಡೆಯುತ್ತಿಲ್ಲ!

ಈ ಜಿಲ್ಲೆಗಳಲ್ಲಿ ಮೂಲಸೌಕರ್ಯದ ಸಮಸ್ಯೆ ಎಂದಿನಿಂದಲೂ ಇದೆ. ಸಾಕಷ್ಟು ಪ್ರವಾಸಿ ತಾಣಗಳಿದ್ದರೂ ಅವವನ್ನು ಅವನ್ನು ತಲುಪುವುದಕ್ಕೆ ರಸ್ತೆಗಳಿಲ್ಲ. ಕರ್ನಾಟಕದ ಇನ್ನಿತರ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯ ಅಭಿವೃದ್ಧಿ ಹೊಂದಿರುವುದು ಅಷ್ಟಕ್ಕಷ್ಟೇ. ಪ್ರವಾಸೋದ್ಯಮದ ಮೂಲಕವೇ ಜಿಲ್ಲೆ ಸಾಕಷ್ಟು ಆದಾಯ ಗಳಿಸಬಹುದಾದರೂ ಅದನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಸಾಲದು. ಜನಪ್ರತಿನಿಧಿಗಳೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಶ್ರಮ ವಹಿಸುತ್ತಿರುವಂತೆ ಕಾಣುತ್ತಿಲ್ಲ.

ಜಿಲ್ಲೆಯ ಆಕರ್ಷಕ ಪ್ರವಾಸೀ ತಾಣಗಳು

ಜಿಲ್ಲೆಯ ಆಕರ್ಷಕ ಪ್ರವಾಸೀ ತಾಣಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಬರವಿಲ್ಲ. ಸಾಕಷ್ಟು ಜಲಪಾತಗಳನ್ನೂ ಹೊಂದಿರುವ ಉತ್ತರ ಕನ್ನಡ ಜಲಪಾತಗಳ ಜಿಲ್ಲೆ ಎಂದೂ ಪ್ರಸಿದ್ಧಿ ಪಡೆದಿದೆ. ಗೋಕರ್ಣ, ಮುರುಡೇಶ್ವರ, ಕಾರವಾರಗಳ ಪ್ರಸಿದ್ಧ ಬೀಚ್ ಗಳು, ದೇವಾಲಯಗಳು ಉಂಚಳ್ಳಿ, ಸಾತೊಡ್ಡಿ, ಶಿವಗಂಗಾ, ಗಣೇಶ್ ಫಾಲ್, ಮಾಗೋಡು, ಶಿರ್ಲೆ, ಸಹಸ್ರಲಿಂಗ, ಇಡಗುಂಜಿ, ಸೋಂದಾಮಠ, ಶ್ರೀ ಮಾರಿಕಾಂಬಾ ದೇವಾಲಯ, ಕಾಳಿ ನದಿ ತೀರ, ಸಿಂತೇರಿ ರಾಕ್ಸ್, ಬನವಾಸಿ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ತಾಣಗಳು ಉತ್ತರ ಕನ್ನಡ ಸೌಂದರ್ಯಕ್ಕೆ ಸಾಕ್ಷಿಯಾಗಿವೆ.

ಜಿಲ್ಲೆಯ ಜನ ಪ್ರತಿನಿಧಿಗಳು

ಜಿಲ್ಲೆಯ ಜನ ಪ್ರತಿನಿಧಿಗಳು

ಹಳಿಯಾಳ: ಆರ್.ವಿ.ದೇಶಪಾಂಡೆ (ಕಾಂಗ್ರೆಸ್)
ಯಲ್ಲಾಪುರ: ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್)
ಶಿರಸಿ-ಸಿದ್ದಾಪುರ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
ಕುಮಟಾ-ಹೊನ್ನಾವರ: ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್)
ಕಾರವಾರ: ಸತೀಶ್ ಸೇಲ್ (ಪಕ್ಷೇತರ)
ಭಟ್ಕಳ: ಮಂಕಾಳ ಸುಬ್ಬಾ ವೈದ್ಯ(ಪಕ್ಷೇತರ)

English summary
Karnataka assembly Elections 2018 : Here is list of major problems faced in the Uttara Kannada District Assembly Constituencies. Uttara Kannada district consists 5 Assembly constituencies: Uttara Kannada, Karwar, Sirsi, Kumta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X