ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ, 600 ಕೋಟಿ ಪ್ಲಸ್!

By Mahesh
|
Google Oneindia Kannada News

Recommended Video

2013ಕ್ಕೆ ಹೋಲಿಸಿದರೆ 2018ರಲ್ಲಿ ಡಿ ಕೆ ಶಿವಕುಮಾರ್ ಆಸ್ತಿ ಡಬಲ್ ಆಗಿದೆ | Oneindia Kannada

ಬೆಂಗಳೂರು, ಏಪ್ರಿಲ್ 19: ಕರ್ನಾಟಕದ ಇಂಧನ ಸಚಿವ, ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ಅವರು ತಮ್ಮ ಆಸ್ತಿ ವಿವರವುಳ್ಳ ಅಫಿಡವಿಟ್ ಸಲ್ಲಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ಮೌಲ್ಯ ತಿಳಿಸುವ ಅಫಿಡವಿಟ್ ನಂತೆ ಡಿಕೆ ಶಿವಕುಮಾರ್ ಅವರ ಆಸ್ತಿ 2013ಕ್ಕೆ ಹೋಲಿಸಿದರೆ ಡಬ್ಬಲ್ ಆಗಿದ್ದು, 600 ಕೋಟಿ ರು ಪ್ಲಸ್ ನಷ್ಟಿದೆ.

ಕಳೆದ ಚುನಾವಣೆಯಲ್ಲಿ 251 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಸ್ಥಿರಾಸ್ತಿ 548 ಕೋಟಿ 85 ಲಕ್ಷದ 20 ಸಾವಿರದ 592 ರೂ ಹಾಗೂ ಚರಾಸ್ತಿ 70 ಕೋಟಿ 94 ಲಕ್ಷದ 84 ಸಾವಿರದ 974 ರೂ. ನಷ್ಟಿದೆ. ಬ್ಯಾಂಕ್ ಸಾಲ 101 ಕೋಟಿ 77 ಲಕ್ಷದ 82 ಸಾವಿರದ 200 ರೂ.ನಷ್ಟಿದೆ.

<span class='ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ" title="'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ" />'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಕುಟುಂಬದ ಆಸ್ತಿ ಮೊತ್ತವನ್ನು ಸೇರಿಸಿದರೆ 840 ಪ್ಲಸ್ ಕೋಟಿ ರು ಒಡೆಯನಾಗಿ ಡಿಕೆ ಶಿವಕುಮಾರ್ ಅವರು ಕಣಕ್ಕಿಳಿಯುತ್ತಿದ್ದಾರೆ.
ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ, ಡಿಕೆ ಶಿವಕುಮಾರ್​ ಪತ್ನಿ ಉಷಾ ಹೆಸರಿನಲ್ಲಿ 48 ಕೋಟಿ ರೂ. ಆಸ್ತಿ ಇದೆ. ಇನ್ನಷ್ಟು ವಿವರ ಮುಂದಿದೆ...

ಅಫಿಡವಿಟ್​ನಲ್ಲಿ ತಿಳಿಸಿದಂತೆ ಡಿಕೆಶಿ ಆಸ್ತಿ

ಅಫಿಡವಿಟ್​ನಲ್ಲಿ ತಿಳಿಸಿದಂತೆ ಡಿಕೆಶಿ ಆಸ್ತಿ

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದ ಡಿಕೆಶಿ, ಒಟ್ಟು 70,94,84,974.32 ರು ಚರಾಸ್ತಿ ಹಾಗೂ 5,48,85,20,592 ರು ಸ್ಥಿರಾಸ್ತಿ ಒಟ್ಟಾರೆ, 6,19,80,05,566.32 ರು ಆಸ್ತಿ ಘೋಷಿಸಿದ್ದಾರೆ. ಜತೆ ಪತ್ನಿ ಉಷಾ, ಮಕ್ಕಳಾದ ಆಭರಣ, ಆಕಾಶ್ ಹಾಗೂ ಐಶ್ವರ್ಯಾ ಅವರ ಆಸ್ತಿ ವಿವರಗಳನ್ನು ಸಲ್ಲಿಸಲಾಗಿದೆ.

ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕಮರ್ (55) ಅವರು ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕರಾಗಿ ಗುರುತಿಸಿಕೊಂಡಿದ್ದಾರೆ. ಎಂ.ಎ ವ್ಯಾಸಂಗ ಮಾಡಿರುವ ಡಿಕೆ ಶಿವಕುಮಾರ್ ಅವರ ಮೇಲೆ ಹತ್ತು ಹಲವು ಕ್ರಿಮಿನಲ್ ಕೇಸುಗಳಿವೆ. ಆಸ್ತಿ-ಸಾಲದ ವಿವರ ಮುಂದೆ

ಡಿಕೆಶಿ ಮೇಲಿನ ಕ್ರಿಮಿನಲ್ ಕೇಸುಗಳ ಪಟ್ಟಿ

ಡಿಕೆಶಿ ಮೇಲಿನ ಕ್ರಿಮಿನಲ್ ಕೇಸುಗಳ ಪಟ್ಟಿ

*ಐಪಿಸಿ ಸೆಕ್ಷನ್ 468 ಅಡಿಯಲ್ಲಿ ಫೋರ್ಜರಿ ಕೇಸ್.
* ಭ್ರಷ್ಟಾಚಾರ, ಸಂಚು ಆರೋಪದ ಮೇಲೆಐಪಿಸಿ ಸೆಕ್ಷನ್ 120(B), 169, 177, 417, 419, 465, 468 ಅನ್ವಯ ಪ್ರಕರಣ.
* ನಕಲಿ ದಾಖಲೆ ಸಲ್ಲಿಕೆ, ಭೂ ಅವ್ಯವಹಾರ, ಕಲ್ಲು ಗಣಿಗಾರಿಕೆ ಆರೋಪ, ಹಲ್ಲೆ ಸೇರಿದಂತೆ ಅನೇಕ ಕೇಸುಗಳು ಇನ್ನೂ ಬಾಕಿ ಇವೆ.

ಡಿಕೆ ಶಿವಕುಮಾರ್ ಅವರ ಚರಾಸ್ತಿ ವಿವರ

ಡಿಕೆ ಶಿವಕುಮಾರ್ ಅವರ ಚರಾಸ್ತಿ ವಿವರ

ನಗದು: ಡಿಕೆಶಿ 6.47 ಲಕ್ಷ, ಪತ್ನಿ ಹೆಸರಿನಲ್ಲಿ 8 ಲಕ್ಷ ಒಟ್ಟು 23 ಲಕ್ಷ ರು ಬ್ಯಾಂಕಿನಲ್ಲಿ ಜಮೆ: ಒಟ್ಟು 1 ಕೋಟಿ ರು.
ಷೇರುಗಳು, ಡಿಬೆಂಚರ್ಸ್ ಮೊತ್ತ: 6 ಕೋಟಿ ರು
ಎಲ್ ಐಸಿ: 21 ಲಕ್ಷರು
ವೈಯಕ್ತಿಕ ಸಾಲ: ಸಿಪಿ ಯೋಗೇಶ್ವರ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ವೈಯಕ್ತಿಕ ಸಾಲದ ಮೊತ್ತ 51 ಕೋಟಿ ರು.
* 8 ಲಕ್ಷದ ಟೊಯೊಟಾ ಕ್ವಾಲೀಸ್, * 50 ಲಕ್ಷ ರು ಬೆಲೆ ಬಾಳುವ ಅಭರಣ * 27 ಲಕ್ಷ ರು ಬೆಲೆ ಬಾಳುವ ಪೀಠೋಪಕರಣ ಚಿರಾಸ್ತಿ ಮೌಲ್ಯ : 60 ಕೋಟಿ ರು

ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ

ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ

* ಕನಕಪುರ, ಸರ್ಜಾಪುರದಲ್ಲಿರುವ ಜಮೀನುಗಳ ಮೊತ್ತ 1 ಕೋಟಿ ರು
* ಉತ್ತರಹಳ್ಳಿ ಹೋಬಳಿ, ಭೂಪಸಂದ್ರ, ಕೆ.ಆರ್ ಪುರಂ, ಕನಕಪುರ, ಮೈಸೂರು, ಗೋಪಾಲಪುರ, ಓಕಳಿಪುರಂ, ಮೈಸೂರಿನ ಮೂರು ಕಡೆ ಇರುವ ಕಟ್ಟಡ ಸೇರಿ 149 ಕೋಟಿ ರು.

ವಾಣಿಜ್ಯ ಕಟ್ಟಡಗಳು : ಕೆಂಗೇರಿ, ಕನಕಪುರ, ಇನ್ಫಾಂಟ್ರಿ ರಸ್ತೆ, ಮಡಿವಾಳದಲ್ಲಿ ಐದು ಕಾಂಪ್ಲೆಕ್ಸ್ ಸೇರಿ 26 ಕೋಟಿ ರು

* ವಸತಿ ಕಟ್ಟಡ: ಕನಕಪುರ ಟೌನ್, ದೆಹಲಿ ಸಫ್ದರ್ಜಂಗ್ ಎನ್ ಕ್ಲೇವ್, ಕೃಷ್ಣನಗರ್, ಮುಂಬೈನಲ್ಲಿ ಫ್ಲಾಟ್,ಸದಾಶಿವ ನಗರ, ಕನಕಪುರ, ಬೆಂಗಳೂರಿನಲ್ಲಿ ಫ್ಲಾಟ್ ಎಲ್ಲವೂ ಸೇರಿ 14 ಕೋಟಿ ರು

* ಇತರೆ 10 ಲಕ್ಷ ರು ಮೌಲ್ಯದ ಕಟ್ಟಡ ಒಟ್ಟಾರೆ, 191 ಕೋಟಿ ರು ಸ್ತಿರಾಸ್ತಿ ಮೌಲ್ಯ

ಬ್ಯಾಂಕಿನಿಂದ ಪಡೆದ ಸಾಲದ ವಿವರ

ಬ್ಯಾಂಕಿನಿಂದ ಪಡೆದ ಸಾಲದ ವಿವರ

* ವಿಜಯ ಬ್ಯಾಂಕ್, ಫೆಡರಲ್ ಬ್ಯಾಂಕಿನಿಂದ 5 ಕೋಟಿ ರು ಸಾಲ
* ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಪಡೆದ ಸಾಲದ ಮೊತ್ತ 99 ಕೋಟಿ ರು
* ಆದಾಯ ತೆರಿಗೆ, ಸೇವಾ ತೆರಿಗೆ, ಆಸ್ತಿ ತೆರಿಗೆ ಸೇರಿದಂತೆ ಯಾವುದೇ ತೆರಿಗೆ ಉಳಿಸಿಕೊಂಡಿಲ್ಲ.
* 105 ಕೋಟಿ ರು ಒಟ್ಟಾರೆ ಸಾಲವನ್ನು ಹೊಂದಿದ್ದಾರೆ.

English summary
Karnataka Assembly Elections 2018 : Karnataka Energy Minister, Kanakapura Congress candidate D K Shivakumar today((April 19) declared assets over Rs 600 crore in an affidavit filed along with his nomination for the May 12 assembly election in the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X