ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹಿನ್ನೋಟ: ಮಿನುಗಿದ ಹಾಗೂ ಮಂಕಾದ ತಾರೆಗಳು

By Mahesh
|
Google Oneindia Kannada News

ಕನ್ನಡ ಸಿನಿಮಾ ರಂಗಕ್ಕೂ ರಾಜಕೀಯ ಕ್ಷೇತ್ರಕ್ಕೂ ಬಲವಾದ ನಂಟು ಬೆಳೆದುಕೊಂಡು ಬಂದಿದೆ. ಎರಡು ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡವರು, ಪಾರ್ಟ್ ಟೈಮ್ ರಾಜಕಾರಣಿಯಾದವರು, ಪಾರ್ಟ್ ಟೈಂ ಸಿನಿಮಾಗಳಲ್ಲಿ ನಟಿಸಿದವರು, ಹೀಗೆ ಸಿನಿಮಾ, ಟಿವಿ ಹಾಗೂ ರಾಜಕೀಯ ಕ್ಷೇತ್ರದ ಸೆಲೆಬ್ರಿಟಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಾಂಗ್ರೆಸ್ ನಲ್ಲಿ ಆರು, ಜೆಡಿಎಸ್ ಹಾಗೂ ಕೆಜೆಪಿಯಲ್ಲಿ ತಲಾ ಐದು, ಬಿಎಸ್ಆರ್ ಕಾಂಗ್ರೆಸ್ ನಲ್ಲಿ ಮೂರು ಮಂದಿ ಕಣದಲ್ಲಿದ್ದರು. ಪೂಜಾಗಾಂಧಿ, ರಾಜು ತಾಳಿಕೋಟೆ, ರವಿಕಿರಣ್, ಜೇಡರಹಳ್ಳಿ ಕೃಷ್ಣಪ್ಪ, ಮಯೂರ್ ಪಟೇಲ್ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದರು.ಇನ್ನು ಸಿನಿಮಾಗಳಲ್ಲಿ ಸಿದ್ದರಾಮಯ್ಯ, ರೇಣುಕಾಚಾರ್ಯ, ಶಕುಂತಳಾ ಶೆಟ್ಟಿ, ಡಿ. ವಿ ಸದಾನಂದ ಗೌಡ ಅವರು ಅತಿಥಿ/ಗೌರವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇದೆ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಹೊನ್ನಾಳಿಯ ಎಂ.ಪಿ ರೇಣುಕಾಚಾರ್ಯ ಅವರು 'ಭೀಮಾ ತೀರದಲ್ಲಿ' (ಬದಲಾದ ಶೀರ್ಷಿಕೆ 'ಚಂದಪ್ಪ') ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿಪರದೆಯ ಮೇಲೆ ತಮ್ಮ ಖಾತೆ ತೆರೆದಿದ್ದರು. ಆದರೆ, ಕಾಂಗ್ರೆಸ್ಸಿನ ಶಾಂತನಗೌಡ ಅವರ ಮುಂದೆ ಸೋಲು ಕಂಡಿದ್ದರು . ಒಟ್ಟಾರೆ, 15 ರಿಂದ 20 ಮಂದಿ ಸೆಲೆಬ್ರಿಟಿಗಳ ಪೈಕಿ ಸೋಲು ಕಂಡವರೇ ಅಧಿಕ. ಪ್ರಮುಖರ ಫಲಿತಾಂಶ ವಿವರ ಮುಂದಿದೆ...

 ಟಿಕೆಟ್ ಗಾಗಿ ಅರ್ಜಿ ಹಾಕದ ಅಂಬರೀಷ್, ಮುಂದಿನ ನಡೆ? ಟಿಕೆಟ್ ಗಾಗಿ ಅರ್ಜಿ ಹಾಕದ ಅಂಬರೀಷ್, ಮುಂದಿನ ನಡೆ?

ಅಂಬರೀಷ್ -ಮಂಡ್ಯ

ಅಂಬರೀಷ್ -ಮಂಡ್ಯ

ಯಾವ ಕಾಲಕ್ಕೂ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ರೆಬೆಲ್ ಸ್ಟಾರ್ ಅನುಭವಿ ರಾಜಕಾರಣಿ ಅಂಬರೀಶ್ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಟಿ.ಎಲ್.ರವಿಶಂಕರ್, ಜೆಡಿಎಸ್ ನ ಎಂ.ಶ್ರೀನಿವಾಸ್, ಕೆಜೆಪಿಯ ವೆಂಕಟೇಶ್ ಆಚಾರ್ ಈ ಕಣದಲ್ಲಿರುವ ಇತರೆ ಸ್ಪರ್ಧಿಗಳಾಗಿದ್ದರು.

2013ರ ಫಲಿತಾಂಶ: ಅಂಬರೀಷ್ ಗೆ ಗೆಲುವು, ಜೆಡಿಎಸ್ ನ ಎಂ. ಶ್ರೀನಿವಾಸ್ ಗೆ ಸೋಲು.

ಈ ಬಾರಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದ್ದರೂ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುತ್ತಾರಾ? ಎಂಬ ಅನುಮಾನ ಇನ್ನೂ ಇದ್ದೇ ಇದೆ.

ಸಿ.ಪಿ ಯೋಗೇಶ್ವರ-ಚನ್ನಪಟ್ಟಣ

ಸಿ.ಪಿ ಯೋಗೇಶ್ವರ-ಚನ್ನಪಟ್ಟಣ

ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಈ ಬಾರಿ ಕಣದಲ್ಲಿದ್ದರು. ಜೆಡಿಎಸ್ ನ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ನ ಸಾದತ್ ಅಲಿ ಖಾನ್, ಬಿಜೆಪಿಯ ರವಿಕುಮಾರ್ ಗೌಡ ಪ್ರಬಲ ಸ್ಪರ್ಧಿಗಳಾಗಿದ್ದರು.

2013ರ ಚುನಾವಣೆ ಫಲಿತಾಂಶ: ಸಿಪಿ ಯೋಗೇಶ್ವರ್ ಗೆ ಗೆಲುವು, ಮೊದಲ ಬಾರಿಗೆ ಖಾತೆ ತೆರೆದ ಸಮಾಜವಾದಿ ಪಕ್ಷ, ಜೆಡಿಎಸ್ ನ ಅನಿತಾ ಕುಮಾರಸ್ವಾಮಿಗೆ ಎರಡನೇ ಸ್ಥಾನ.

2018ರಲ್ಲಿ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದಿಂದ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಕಣಕ್ಕಿಲಿಯಲಿದ್ದಾರೆ.

ಎಚ್ ಡಿ ಕುಮಾರಸ್ವಾಮಿ- ರಾಮನಗರ

ಎಚ್ ಡಿ ಕುಮಾರಸ್ವಾಮಿ- ರಾಮನಗರ

ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ನಿರ್ಮಾಪಕರಾಗಿ ಹೆಸರು ಮಾಡಿದವರು. ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿದೇವರು, ಬಿಜೆಪಿಯಿಂದ ಕೆ.ಎಸ್.ಶಿವಮಾಧು, ಎಸ್ ಡಿಪಿಐನಿಂದ ಫಿರೋಜ್ ಅಲಿ ಖಾನ್, ಕೆಜೆಪಿಯಿಂದ ಎಸ್.ಆರ್.ನಾಗರಾಜ್ ಕಣದಲ್ಲಿದರು.

2013ರ ಚುನಾವಣೆ ಫಲಿತಾಂಶ: ಎಚ್.ಡಿ.ಕುಮಾರಸ್ವಾಮಿಗೆ ಗೆಲುವು, ಕಾಂಗ್ರೆಸ್ಸಿನ ಮರಿದೇವರು ಎರಡನೇ ಸ್ಥಾನ.

2018 ಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.

ಅಶೋಕ್ ಖೇಣಿ- ಬೀದರ್ ದಕ್ಷಿಣ

ಅಶೋಕ್ ಖೇಣಿ- ಬೀದರ್ ದಕ್ಷಿಣ

2013ರ ಚುನಾವಣೆ ಫಲಿತಾಂಶ: ಅಶೋಕ್ ಖೇಣಿಗೆ ಗೆಲುವು, ಎರಡನೇ ಸ್ಥಾನ ಜೆಡಿಎಸ್ ನ ಬಂಡೇಪ್ಪ ಕಾಶೆಂಪೂರ್ ಗೆ ಸೋಲು, ಮೂರನೇ ಸ್ಥಾನಕ್ಕೆ ಬಿ ಎಸ್ ಪಿಯ ಅಬ್ದುಲ್ ಮನ್ನನ್ ಬಂದಿದ್ದರು. ಬಿಜೆಪಿಗೆ 7ನೇ ಸ್ಥಾನ, ಕಾಂಗ್ರೆಸ್ 5ನೇ ಸ್ಥಾನಗಳಿಸಿತ್ತು.

2018ರಲ್ಲಿ ಪಕ್ಷ ಬದಲಾವಣೆ ಮಾಡಿಕೊಂಡಿರುವ ಖೇಣಿ ಅವರು ಈ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಲಿದ್ದಾರೆ.

ಉಮಾಶ್ರೀ- ತೇರದಾಳ

ಉಮಾಶ್ರೀ- ತೇರದಾಳ

2013ರ ಚುನಾವಣೆ ಫಲಿತಾಂಶ : ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ಅವರು ಭರ್ಜರಿ ಗೆಲುವು(70,189 ಮತಗಳು) ದಾಖಲಿಸಿದ್ದರು.ತಮ್ಮ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ಸಿದ್ದು ಸವದಿ(67,590 ಮತಗಳು) ವಿರುದ್ಧ ಜಯಭೇರಿ ಭಾರಿಸಿದ್ದರು.

2018ರಲ್ಲಿ ಇದೇ ಕ್ಷೇತ್ರದಿಂದ ಉಮಾಶ್ರೀ ಸ್ಪರ್ಧಿಸುವ ಸಾಧ್ಯತೆಯಿದೆ.

ಪೂಜಾಗಾಂಧಿ -ರಾಯಚೂರು

ಪೂಜಾಗಾಂಧಿ -ರಾಯಚೂರು

ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪೂಜಾಗಾಂಧಿ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಡಾ.ಎಸ್.ಶಿವರಾಜ್ ಪಾಟೀಲ್(ಜೆಡಿಎಸ್) 45263 ಮತಗಳು
* ಸೈಯದ್ ಯಾಸಿನ್ (ಕಾಂಗ್ರೆಸ್) 37392
* ತ್ರಿವಿಕ್ರಮ್ ಜೋಶಿ (ಬಿಜೆಪಿ) : 6186
* ಪೂಜಾಗಾಂಧಿ(ಬಿಎಸ್ ಆರ್ ಕಾಂಗ್ರೆಸ್): 1815

ಆನಂದ್ ಬಿ ಅಪ್ಪುಗೋಳ್ -ಕಿತ್ತೂರು

ಆನಂದ್ ಬಿ ಅಪ್ಪುಗೋಳ್ -ಕಿತ್ತೂರು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಬಿ ಅಪ್ಪುಗೋಳ್ ಕಿತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಾಂಗ್ರೆಸ್ ನ ಇನಾಂದಾರ್ ದಾನಪ್ಪಗೌಡ ಬಸವನಗೌಡ ಅವರ ವಿರುದ್ಧ ಹೀನಾಯ ಸೋಲು ಕಂಡಿದ್ದರು.
* ಇನಾಂದಾರ್ ದಾನಪ್ಪಗೌಡ ಬಸವನಗೌಡ (ಕಾಂಗ್ರೆಸ್) ಮತಗಳು 53924

* ಸುರೇಶ್ ಶಿವರುದ್ರಪ್ಪ ಮಾರಿಹಾಳ (ಬಿಜೆಪಿ) 35, 634
* ಆನಂದ್ ಬಿ ಅಪ್ಪುಗೋಳ್ ಮತಗಳು-20657

ಮುನಿರತ್ನ -ರಾಜರಾಜೇಶ್ವರಿನಗರ

ಮುನಿರತ್ನ -ರಾಜರಾಜೇಶ್ವರಿನಗರ

ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರದಿಂದ ಕಣಕ್ಕಿಳಿದ್ದರು. ಬಿಜೆಪಿಯ ಎಂ ಶ್ರೀನಿವಾಸ್, ಜೆಡಿಎಸ್ ನ ಕೆ.ಎಲ್.ತಿಮ್ಮನಂಜಯ್ಯ ಹಾಗೂ ಕೆಜೆಪಿಯ ವೆಂಕಟೇಶ್ ಗೌಡ ಇದೇ ಕ್ಷೇತ್ರದ ಇತರೆ ಅಭ್ಯರ್ಥಿಗಳಾಗಿದ್ದರು.

2013ರ ಫಲಿತಾಂಶ: ಮುನಿರತ್ನಗೆ ಗೆಲುವು, ಜೆಡಿಎಸ್ ನ ಕೆ.ಎಲ್.ತಿಮ್ಮನಂಜಯ್ಯ ಗೆ ಎರಡನೇ ಸ್ಥಾನ, ಬಿಜೆಪಿಯ ಎಂ ಶ್ರೀನಿವಾಸ್ ಗೆ ಮೂರನೇ ಸ್ಥಾನ ಲಭಿಸಿತ್ತು.

2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಮತ್ತೆ ಕಣಕ್ಕಿಳಿಯಲು ಮುನಿರತ್ನ ನಾಯ್ಡು ಸಜ್ಜಾಗಿದ್ದಾರೆ. ಅವರ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಮಧು ಬಂಗಾರಪ್ಪ -ಸೊರಬ

ಮಧು ಬಂಗಾರಪ್ಪ -ಸೊರಬ

ಮಧು ಬಂಗಾರಪ್ಪ ಅಭಿನಯದ ದೇವಿ ಎಂಬ ಚಿತ್ರ ಇನ್ನೂ ಬಿಡುಗಡೆ ಕಂಡಿಲ್ಲ. ಈ ಹಿಂದೆ ಅವರು ಪುರುಷೋತ್ತಮ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈಗ ಜೆಡಿಎಸ್ ಅಭ್ಯರ್ಥಿಯಾಗಿ ಅಣ್ಣನ ವಿರುದ್ಧ ಕಣಕ್ಕಿಳಿದಿದ್ದಾರೆ. ಕುಮಾರ ಬಂಗಾರಪ್ಪ ಅವರೇ ಮಧು ಅವರಿಗೆ ಪ್ರಬಲ ಸ್ಪರ್ಧಿ.

2013ರಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದರು. ಕೆಜೆಪಿಯ ಹರತಾಳು ಹಾಲಪ್ಪ ಎರಡನೇ ಸ್ಥಾನ ಹಾಗೂ ಮಧು ಅವರ ಅಣ್ಣ, ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು. 2018ರಲ್ಲಿ ಸೊರಬದಿಂದಲೆ ಸ್ಪರ್ಧಿಸಲು ಮಧು ಸಿದ್ಧರಾಗಿದ್ದಾರೆ.

ಬಿಜೆಪಿಯಿಂದ ಸೊರಬದಲ್ಲಿ ಕುಮಾರ್

ಬಿಜೆಪಿಯಿಂದ ಸೊರಬದಲ್ಲಿ ಕುಮಾರ್

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಕುಮಾರ ಬಂಗಾರಪ್ಪ ಅವರು ಈ ಬಾರಿಯ ಬಿಜೆಪಿ ಅಭ್ಯರ್ಥಿ. ಇವರ ವಿರುದ್ಧ ಅವರ ಸಹೋದರ ಮಧು ಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಮತ್ತೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್ಸಿನಿಂದ ಅಭ್ಯರ್ಥಿಯಾಗಿ ಯಾರು ಎಂಬುದು ಖಚಿತವಾಗಿದೆ.

ಬಿ. ಸಿ ಪಾಟೀಲ್- ಹಿರೇಕೆರೂರು

ಬಿ. ಸಿ ಪಾಟೀಲ್- ಹಿರೇಕೆರೂರು

ಕೌರವ, ಪೂರ್ಣ ಸತ್ಯ, ಎಲ್ಲರಂತಲ್ಲ ನನ್ನ ಗಂಡ, ಅಸ್ತ್ರ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಬಿ.ಸಿ.ಪಾಟೀಲ್ ಅವರಿಗೆ 2013ರಲ್ಲಿ ಮುಖಭಂಗವಾಗಿತ್ತು. ಕೆಜೆಪಿಯ ಯು.ಬಿ.ಬಣಕಾರ್ ವಿರುದ್ಧ ಅವರು ಸೋತಿದ್ದರು. ಕೆಜೆಪಿಯ ಯು.ಬಿ.ಬಣಕಾರ್ ಮತಗಳು 52,623, ಕಾಂಗ್ರೆಸ್ಸಿನ ಬಿಸಿ ಪಾಟೀಲ್ ಮತಗಳು 50,017 ಗಳಿಸಿದ್ದರು. ಈ ಬಾರಿ ಸ್ಪರ್ಧೆಗಿಳಿಯಲು ಉತ್ಸುಕರಾಗಿದ್ದಾರೆ.

ನೆ.ಲ.ನರೇಂದ್ರ ಬಾಬು-ಮಹಾಲಕ್ಷ್ಮಿ ಲೇಔಟ್

ನೆ.ಲ.ನರೇಂದ್ರ ಬಾಬು-ಮಹಾಲಕ್ಷ್ಮಿ ಲೇಔಟ್

ನೆ.ಲ.ನರೇಂದ್ರ ಬಾಬು ಅವರು ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಹಲವಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಎಸ್ ಹರೀಶ್, ಜೆಡಿಎಸ್ ನ ಗೋಪಾಲಯ್ಯ, ಕೆಜೆಪಿಯ ವೀರೇಶ್ ಕುಮಾರ್ ಇದೇ ಕ್ಷೇತ್ರದ ಸ್ಪರ್ಧಿಗಳು.

2013ರ ಫಲಿತಾಂಶ: ಜೆಡಿಎಸ್ ನ ಗೋಪಾಲಯ್ಯಗೆ ಗೆಲುವು, 16 ಸಾವಿರ ಮತಗಳಿಂದ ನರೇಂದ್ರ ಬಾಬುಗೆ ಸೋಲು. 2018ರಲ್ಲಿ ನರೇಂದ್ರಬಾಬು ಅವರಿಗೆ ಟಿಕೆಟ್ ಸಿಗುವುದೇ ಅನುಮಾನ ಎನಿಸಿದೆ.

ರಾಜು ತಾಳಿಕೋಟೆ-ಸಿಂಧಗಿ

ರಾಜು ತಾಳಿಕೋಟೆ-ಸಿಂಧಗಿ

ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ರಾಜು ತಾಳಿಕೋಟೆ ಅವರು ಠೇವಣಿ ಕಳೆದುಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಭೂಸನೂರು ರಮೇಶ್ ಬಾಲಪ್ಪ ಅವರು ಸಿಂಧಗಿ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ. ಭೂಸನೂರು ರಮೇಶ್ ಬಾಲಪ್ಪ ಮತಗಳು-36,834, ಮಲ್ಲಪ್ಪ ಚಂದ್ರಪ್ಪ ಮನಗುಳಿ(ಜೆಡಿಎಸ್) 32,082 ರಾಜು ತಾಳಿಕೋಟೆ (ಬಿಎಸ್ಆರ್ ಕಾಂಗ್ರೆಸ್)-530

ಮಯೂರ್ ಪಟೇಲ್-ಮಹದೇವಪುರ

ಮಯೂರ್ ಪಟೇಲ್-ಮಹದೇವಪುರ

ಮಹದೇವಪುರ ಮೀಸಲು ಕ್ಷೇತ್ರದಿಂದ ನಟ ಮಯೂರ್ ಪಟೇಲ್ ಮೊದಲ ಬಾರಿಗೆ ಕಣಕ್ಕಿಳಿದಿದ್ದರು. ಕಾಂಗ್ರೆಸ್ ನ ಶ್ರೀನಿವಾಸ್ ಎ.ಸಿ, ಬಿಜೆಪಿಯ ಅರವಿಂದ ಲಿಂಬಾವಳಿ, ಜೆಡಿಎಸ್ ನ ಎನ್ ಗೋವರ್ಧನ್ ಕಣದಲ್ಲಿರುವ ಇತರೆ ಸ್ಪರ್ಧಿಗಳು.

2013ರಲ್ಲಿ ಅರವಿಂದ ಲಿಂಬಾಳಿಗೆ ಗೆಲುವು, ಮಯೂರ್ ಪಟೇಲ್(ಬಿಎಸ್ ಆರ್ ಕಾಂಗ್ರೆಸ್) 5ನೇ ಸ್ಥಾನ 1532 ಮತಗಳು.

ದೊಡ್ಡಬಳ್ಳಾಪುರ ಕೆಜೆಪಿ ಅಭ್ಯರ್ಥಿ ವಿ ನಾಗೇಂದ್ರ ಪ್ರಸಾದ್

ದೊಡ್ಡಬಳ್ಳಾಪುರ ಕೆಜೆಪಿ ಅಭ್ಯರ್ಥಿ ವಿ ನಾಗೇಂದ್ರ ಪ್ರಸಾದ್

ಗೀತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರು ಈ ಬಾರಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನ ವೆಂಕಟರಾಮಯ್ಯ.ಟಿ, ಬಿಜೆಪಿಯ ಜೆ.ನರಸಿಂಹಸ್ವಾಮಿ, ಜೆಡಿಎಸ್ ನ ಸಿ ಚೆನ್ನಿಗಪ್ಪ ಇದೇ ಕ್ಷೇತ್ರದ ಇತರೆ ಪ್ರಬಲ ಸ್ಪರ್ಧಿಗಳು.

2013 ಫಲಿತಾಂಶ: ಕಾಂಗ್ರೆಸ್ ನ ವೆಂಕಟರಾಮಯ್ಯ ಗೆಲುವು, ಎರಡನೇ ಸ್ಥಾನ ಪಕ್ಷೇತರ ಮುನೇಗೌಡ, ಕೆಜೆಪಿಯ ನಾಗೇಂದ್ರ ಪ್ರಸಾದ್ 1517 ಮತಗಳು ಬಂದಿತ್ತು.

ರವಿಕಿರಣ್

ರವಿಕಿರಣ್

ಕಿರುತೆರೆ ಕ್ರೇಜಿಸ್ಟಾರ್ ರವಿಕಿರಣ್ ಅವರು ಕೆಜೆಪಿ ಅಭ್ಯರ್ಥಿಯಾಗಿ ಪ್ರತಿಷ್ಠಿತ ಬಸವನಗುಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಬಿ.ಕೆ.ಚಂದ್ರಶೇಖರ್, ಬಿಜೆಪಿಯಿಂದ ಎಲ್ ಎ ರವಿಸುಬ್ರಹ್ಮಣ್ಯ, ಜೆಡಿಎಸ್ ನ ಬಾಗೇಗೌಡ ಇದೇ ಕ್ಷೇತ್ರದ ಅಭ್ಯರ್ಥಿಗಳು.

1741ಮತಗಳನ್ನು ಮಾತ್ರ ಪಡೆದ ರವಿಕಿರಣ್ ಹೀನಾಯ ಸೋಲು ಕಂಡಿದ್ದರು. ಬಿಜೆಪಿಯ ರವಿಸುಬ್ರಹ್ಮಣ್ಯಗೆ ಗೆಲುವು.

English summary
Elections 2018 : More than 15 film personalities contested in the 2013 assembly elections but, many failed to achieve success. The list includes Ambareesh, producer HD Kumaraswamy, Umashree, Pooja Gandhi, Nagendra Prasad, Muniratna, BC Patil, Anand Appugol, Ravikiran and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X