ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಲು 182 ಅರ್ಜಿ

By Nayana
|
Google Oneindia Kannada News

ಬೆಂಗಳೂರು, ಮೇ 9: ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಮತ್ತು ಓಡಾಟಕ್ಕಾಗಿ ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗಾಗಿ ಆನ್‌ಲೈನ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳು ಒಟ್ಟು 182 ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.

​ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್‌ನಲ್ಲಿರುವ 'ಸುವಿಧಾ' ದ ಮೂಲಕ ವಿವಿಧ ರಾಜಕೀಯ ಪಕ್ಷಗಳು ಆನ್‌ಲೈನ್ ಮೂಲಕ ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗಾಗಿ ಸಲ್ಲಿಸಿದ್ದ 182 ಅರ್ಜಿಗಳ ಪೈಕಿ 142 ಕ್ಕೆ ಅನುಮತಿ ನೀಡಲಾಗಿದ್ದು, ಮೂರು ಕೋರಿಕೆಗಳನ್ನು ತಿರಸ್ಕರಿಸಲಾಗಿದೆ. ಇನ್ನುಳಿದ 3 ಪ್ರಕರಣಗಳು ವಿವಿಧ ಹಂತದಲ್ಲಿವೆ.

ರಾಜರಾಜೇಶ್ವರಿ ನಗರ ಚುನಾವಣೆ ಮುಂಡೂಡಿ: ಜೆಡಿಎಸ್‌ರಾಜರಾಜೇಶ್ವರಿ ನಗರ ಚುನಾವಣೆ ಮುಂಡೂಡಿ: ಜೆಡಿಎಸ್‌

​ಈ ಪೈಕಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗಾಗಿ ಸಲ್ಲಿಸಿದ್ದ 101 ಅರ್ಜಿಗಳ ಪೈಕಿ ಒಟ್ಟು 82 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿದೆ. 17 ಕಡೆಗಳಲ್ಲಿ ಅನುಮತಿಯ ನಿರೀಕ್ಷಣೆಯಲ್ಲಿದೆ. ಎರಡು ಕಡೆಗಳಲ್ಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ.

EC receives 182 application for helicopter campaigning

ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗಾಗಿ ಕಾಂಗ್ರೆಸ್ ಸಲ್ಲಿಸಿದ್ದ 39 ಅರ್ಜಿಗಳ ಪೈಕಿ ಒಟ್ಟು 32 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿದೆ. 7 ಕಡೆಗಳಲ್ಲಿ ಅನುಮತಿಯ ನಿರೀಕ್ಷಣೆಯಲ್ಲಿದ್ದರೆ, ಯಾವುದೇ ಕಡೆಗಳಲ್ಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿರುವುದಿಲ್ಲ.

ಜೆಡಿಎಸ್‌ನಿಂದ ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗಾಗಿ ಸಲ್ಲಿಸಿದ್ದ 42 ಅರ್ಜಿಗಳ ಪೈಕಿ ಒಟ್ಟು 28 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿದೆ. 13 ಕಡೆಗಳಲ್ಲಿ ಅನುಮತಿಯ ನಿರೀಕ್ಷಣೆಯಲ್ಲಿದೆ. ಒಂದು ಕಡೆಯಲ್ಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

English summary
Different political parties have sought permission from election commission to campaign through helicopter from various destinations during ongoing state assembly poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X