ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ಕನಸಿನ ಕರ್ನಾಟಕ' : ವಿಡಿಯೋ ಮಾಡಿ ಕಳಿಸಿ

By Prasad
|
Google Oneindia Kannada News

ನಮ್ಮ ಜೀವನ ಸಮೃದ್ಧವಾಗಿರಲಿ ಎಂದು ನಾವು ಕನಸು ಕಾಣುತ್ತಲೇ ಇರುತ್ತೇವೆ. ಒಳ್ಳೆ ಉದ್ಯೋಗ ಸಿಗಬೇಕು, ಸನ್ನಡತೆಯ ಹೆಂಡತಿ ಜೊತೆಗಾರ್ತಿಯಾಗಬೇಕು, ಆರೋಗ್ಯವಂತ ಮಕ್ಕಳಾಗಬೇಕು, ಒಂದು ಸುಂದರ ಮನೆ ಕಟ್ಟಬೇಕು, ಜೊತೆಗೊಂದು ಕಾರೂ ಇರಬೇಕು ಇತ್ಯಾದಿ ಇತ್ಯಾದಿ.

ಕನಸುಗಳಿಗೆ ಕೊನೆಯೆಲ್ಲಿ? ಗಂಡಸರು ದುಡ್ಡು ಕಾಸು ಮಾಡಬೇಕು, ಹೆಂಗಸರು ಮೈತುಂಬ ಒಡವೆ ಕೊಂಡುಕೊಳ್ಳಬೇಕು ಎಂಬ ಕನಸಂತೂ ಕಂಡೇ ಇರುತ್ತಾರೆ? ಇನ್ನು ಯುವಪೀಳಿಗೆ ಫಾರಿನ್ನಿಗೆ ಹೋಗಬೇಕು, ಡಾಲರ್ ರೂಪದಲ್ಲಿ ಸಂಬಳ ಎಣಿಸಬೇಕು, ವಿದೇಶದಲ್ಲೇ ಸೆಟ್ಲ್ ಆಗಬೇಕು ಇತ್ಯಾದಿ.

ಆದರೆ, ಎಂದಾದರೂ ನನ್ನ ರಾಜ್ಯ, ನನ್ನ ಊರು, ನನ್ನ ಕ್ಷೇತ್ರ ಸುಂದರವಾಗಿರಬೇಕು, ನಾನಿರುವ ಊರಿನ ಕಚೇರಿ ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು, ನಾನು ಆರಿಸಿದ ಜನಪ್ರತಿನಿಧಿ ನಮ್ಮ ಆಶೋತ್ತರಗಳಿಗೆ ಸ್ಪಂದಿಸಬೇಕು, ನಾವು ತೆತ್ತುವ ತೆರಿಗೆ ದುರುಪಯೋಗವಾಗಬಾರದು, ಪ್ರತಿ ಪೈಸೆ ಸದ್ಬಳಕೆಯಾಗಬೇಕು ಅಂತ ಎಂದಾದರೂ ಕನಸು ಕಂಡಿದ್ದೀರಾ?

Do you have dream about Karnataka? Share with us

ಕೆಲವೊಬ್ಬರಾದರೂ ಕನಸು ಕಂಡೇ ಇರುತ್ತೀರಿ. ಆದರೆ, ಆ ಕನಸುಗಳು ನನಸಾಗಲು ಈ ದರಿದ್ರ ವ್ಯವಸ್ಥೆ ನಮಗೆ ಬಿಟ್ಟಿರುವುದಿಲ್ಲ, ಅಂಥ ಕನಸು ಕಾಣಲು ಅವಕಾಶವನ್ನೂ ನೀಡಿರುವುದಿಲ್ಲ. ಆದರೆ, ಕನಸು ಯಾರಪ್ಪನ ಗಂಟು? ಇಂಥ ಕನಸುಗಳು ನನಸಾಗದಿದ್ದರೇನಂತೆ, ನಮ್ಮ ದೇಶ ಭ್ರಷ್ಟಾಚಾರದಿಂದ ಮುಕ್ತವಾಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು, ಮಹಿಳೆಯರಿಗೆ ರಕ್ಷಣೆ ಇರಬೇಕು, ಪ್ರತಿಭೆ ನಮ್ಮಲ್ಲಿಯೇ ಉಳಿಯಬೇಕು ಇಂಬಿತ್ಯಾದಿ ಕನಸು ಕಾಣುವುದು ನಮ್ಮನಿಮ್ಮೆಲ್ಲರ ಹಕ್ಕು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪುಢಾರಿಗಳು ಮತಯಾಚನೆಗೆ ನಿಂತಿದ್ದಾರೆ. ಬೀದಿಬೀದಿಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ, ವಿರೋಧಿಗಳನ್ನು ಮಾತಿನಲ್ಲಿಯೇ ಹಣಿಯುತ್ತಿದ್ದಾರೆ. ಮತದಾನದ ದಿನ ನಮ್ಮ ಮತಗಳನ್ನು ಪಡೆದು ಆರಿಸಿಯೂ ಬರುತ್ತಾರೆ. ಅಷ್ಟಾದರೆ ಮುಗಿಯಿತಾ ನಮ್ಮ ಜವಾಬ್ದಾರಿ? ಮುಂದಿನ ಕರ್ನಾಟಕ ಹೇಗಿರಬೇಕು? ಈ ಬಗ್ಗೆ ನಿಮ್ಮಲ್ಲಿ ಕನಸು ಮೊಳಕೆಯೊಡೆದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಕನಸು ಯಾವುದೇ ಆಗಿರಬಹುದು. ಫೋನಿನಲ್ಲಿಯೇ ಶಾಸಕ ಸಿಗುವಂತಿರಬೇಕು, ಕಚೇರಿಗಳಲ್ಲಿ ಲಂಚ ನೈಯಾಪೈಸೆ ಕೇಳಬಾರದು, ಬೀದಿಗಳು ಕಸದಿಂದ ಮುಕ್ತವಾಗಿರಬೇಕು, ಎಲ್ಲೆಲ್ಲೂ ಕನ್ನಡ ರಾರಾಜಿಸುತ್ತಿರಬೇಕು, ರಾಜ್ಯದಲ್ಲಿರುವ ನೈಸರ್ಗಿಕ ಸಂಪತ್ತು ಹಣದಾಹಿಗಳ ಪಾಲಾಗಬಾರದು, ಅರಣ್ಯ ಸಂಪತ್ತು ಸಮೃದ್ಧಿಯಾಗಿರಬೇಕು, ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಮೆರೆದಾಡಬೇಕು....

ನೀವು ಮಾಡಬೇಕಾಗಿರುವುದಿಷ್ಟೆ...

ವಿಷಯ : 'ನನ್ನ ಕನಸಿನ ಕರ್ನಾಟಕ' (ನನ್ನ ಕನಸಿನ ಊರು ಕೂಡ ಆಗಬಹುದು)

ನಿಮ್ಮಲ್ಲಿರುವ ಸ್ಮಾರ್ಟ್ ಫೋನ್, ಕ್ಯಾಮೆರಾ ಎತ್ತಿಕೊಂಡು ಮೇಲಿನ ವಿಷಯ ಕುರಿತು ಕೇವಲ 1ರಿಂದ 3 ನಿಮಿಷಗಳ ವಿಡಿಯೋದಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. (ಸ್ವಲ್ಪ ಹೆಚ್ಚೂ ಕಮ್ಮಿಯಾದರೆ ತೊಂದರೆಯಿಲ್ಲ.)

ವಿಡಿಯೋವನ್ನು ಈಮೇಲ್ ಅಥವಾ ವಾಟ್ಸಾಪ್ ಮುಖಾಂತರ ನಮಗೆ ಕಳಿಸಿ. ಟೆಲಿಗ್ರಾಂ ಮೂಲಕವೂ ಕಳಿಸಬಹುದು. ಕಳಿಸುವಾಗ ನಿಮ್ಮ ಊರು, ತಾಲೂಕು, ಜಿಲ್ಲೆಯ ವಿವರ ಕಳಿಸಲು ಮರೆಯಬೇಡಿ. ನಿಮ್ಮ ಊರಿನ ಸಮಸ್ಯೆಗಳನ್ನು ಬಿಂಬಿಸುವ ವಿಡಿಯೋ/ಫೋಟೋ ಇದ್ದರೂ ಕಳಿಸಿ.

ಈಮೇಲ್ : [email protected] ; ಮೊಬೈಲ್ : 9845725260

English summary
Do you have a dream about Karnataka? How you want your Karnataka to be? Free of corruption, listening MLA, good job, rich forest, Kannada everywhere, security for women... Create a video and share with us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X