ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಮಿಡ್ ನೈಟ್ ಪ್ರವಾಸ: ಮಾಧ್ಯಮಗಳ ಕಣ್ತಪ್ಪಿಸಲು ಹರಸಾಹಸ.!

By Harshitha
|
Google Oneindia Kannada News

Recommended Video

ಶಾಸಕರ ಮಿಡ್ ನೈಟ್ ಪ್ರವಾಸ: ಮಾಧ್ಯಮಗಳ ಕಣ್ತಪ್ಪಿಸಲು ಹರಸಾಹಸ | Oneindia Kannada

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ಮೇಲೆ, 'ಆಪರೇಶನ್ ಕಮಲ' ಭೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಕಾಡುತ್ತಿದೆ. ಹೀಗಾಗಿ, ಬೆಂಗಳೂರಿನ ಹೋಟೆಲ್ ಹಾಗೂ ರೆಸಾರ್ಟ್ ಗಳಲ್ಲಿ ಇರುವುದು ಸೇಫ್ ಅಲ್ಲವೇ ಅಲ್ಲ. ಹೊರರಾಜ್ಯಕ್ಕೆ ಶಿಫ್ಟ್ ಆಗುವುದೇ ಲೇಸು ಅಂತ ಮನಗಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಕೇರಳದ ಕೊಚ್ಚಿ ಕಡೆ ಹಾರಲು ಮುಂದಾದರು.

ಯಾವಾಗ, ವಿಮಾನಯಾನ ಸಚಿವಾಲಯ ಅದಕ್ಕೆ ಮುಳ್ಳಾಯಿತೋ.. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪಕ್ಕದ ತೆಲಾಂಗಣದ ಕಡೆ ಮುಖ ಮಾಡಿದರು.

ಹೈದರಾಬಾದ್ ನತ್ತ ಶಾಸಕರು? ಅರ್ಥವಾಗದ ನಿಗೂಢ ನಡೆ!ಹೈದರಾಬಾದ್ ನತ್ತ ಶಾಸಕರು? ಅರ್ಥವಾಗದ ನಿಗೂಢ ನಡೆ!

ಆದ್ರೆ, ಅಷ್ಟರಲ್ಲಾಗಲೇ ಮಾಧ್ಯಮಗಳು 'ದಾರಿ' ತಪ್ಪಿದ್ದವು. ಮಾಧ್ಯಮಗಳ ಕಣ್ತಪ್ಪಿಸಲು ಪಾಂಡಿಚೇರಿ ಕಡೆಗೆ ಬೆಟ್ಟು ಮಾಡಿ ತೋರಿಸಲಾಯಿತು.

 Congress and JDS Mlas were shifted to Andhra registration bus in midnight

ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಎರಡು ಬಸ್ ಗಳಲ್ಲಿ ಹೊರಟು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಆಂಧ್ರ-ಕರ್ನಾಟಕ ಗಡಿಭಾಗದಲ್ಲಿ ಬೇರೆ ಬಸ್ ಗಳಿಗೆ ಶಿಫ್ಟ್ ಮಾಡಲಾಗಿದೆ.

ಮೂಲಗಳ ಪ್ರಕಾರ, ಆಂಧ್ರ ರಾಜ್ಯದ ನೋಂದಣೆ ಇರುವ ಬಸ್ ಗಳಿಗೆ ಮಧ್ಯರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಶಿಫ್ಟ್ ಮಾಡಲಾಗಿದೆ. ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಆಗಬಾರದು ಎಂಬ ಕಾರಣಕ್ಕೆ ಇಷ್ಟೆಲ್ಲ ಸರ್ಕಸ್ ಮಾಡಲಾಗಿದೆ.

ಇಂದು ದಿನಪೂರ್ತಿ ನಡೆದ ರಾಜಕೀಯ ಡೊಂಬರಾಟದ ವಿವರ ಇಲ್ಲಿದೆಇಂದು ದಿನಪೂರ್ತಿ ನಡೆದ ರಾಜಕೀಯ ಡೊಂಬರಾಟದ ವಿವರ ಇಲ್ಲಿದೆ

ಸದ್ಯ ಲಭ್ಯವಾಗಿರುವ ಮಾಹಿತಿ ಅನುಗುಣವಾಗಿ, ಜೆಡಿಎಸ್ ಶಾಸಕರನ್ನೊಳಗೊಂಡ ಬಸ್ ಈಗಾಗಲೇ ಹೈದರಾಬಾದ್ ತಲುಪಿದೆ. ಕಾಂಗ್ರೆಸ್ ಶಾಸಕರನ್ನೊಳಗೊಂಡ ಬಸ್ ಇನ್ನೂ ಪ್ರಯಾಣ ಮಾರ್ಗದಲ್ಲಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಹೈದರಾಬಾದ್ ನಲ್ಲಿಯೇ ವಾಸ್ತವ್ಯ ಹೂಡುತ್ತಾರಾ.? ಅಥವಾ ಇದೂ ಮಾಧ್ಯಮಗಳ ದಿಕ್ಕು ತಪ್ಪಿಸುವ ಮತ್ತೊಂದು ಮಾಸ್ಟರ್ ಪ್ಲಾನಾ.? ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.

English summary
Congress and JDS Mla's were shifted to Andhra registration bus on May 18th midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X