ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : ಚನ್ನಪಟ್ಟಣದಲ್ಲಿ ಎಚ್ ಡಿ ಕೆ ಮತ್ತು ಸಿಪಿವೈ ನೇರ ಹಣಾಹಣಿ

By ಚನ್ನಪಟ್ಟಣ ಪ್ರತಿನಿಧಿ
|
Google Oneindia Kannada News

ಬೊಂಬೆಗಳ ತಯಾರಿಕೆಗೆ ವಿಶ್ವಪ್ರಸಿದ್ಧವಾಗಿರುವ ಚನ್ನಪಟ್ಟಣ ರಾಜಕಾರಣ ಮಾಡುವುದರಲ್ಲೂ ಅಷ್ಟೇ ಪ್ರಸಿದ್ಧ. ವಿ.ವೆಂಕಟಪ್ಪ, ಡಿ.ಟಿ.ರಾಮು, ಬಿ.ಜೆ ಲಿಂಗೇಗೌಡ, ಎಂ ವರದೇಗೌಡ , ಸಾದತ್ ಆಲಿಖಾನ್ ಪ್ರಸುತ್ತ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ನಾಯಕರು ಚನ್ನಪಟ್ಟಣವನ್ನು ಪ್ರತಿನಿಧಿಸಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಇತರೆ ವರ್ಗದ ಮತದಾರರೇ ನಿರ್ಣಾಯಕ.

ಹಾಲಿ ಶಾಸಕ ಸಿ.ಪಿ.ಯೋಗೇಶ್ವರ್ ಪಕ್ಷೇತರರಾಗಿ ಕಣಕ್ಕಿಳಿದು, ನಂತರ ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷದಿಂದ ಸ್ವರ್ಧಿಸಿ ಒಮ್ಮೆ ಸೋತು, ಎಲ್ಲದರಲ್ಲೂ ಗೆಲುವು ಸಾಧಿಸಿರುವುದು ವಿಶೇಷ.
2013 ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ ಯೋಗೇಶ್ವರ್ 80,099 ಮತ ಪಡೆದು ಜಯಭೇರಿ ಗಳಿಸಿದ್ದರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ 73,635 ಮತ ಪಡೆದು ಗೆಲುವಿನಿಂದ ವಂಚಿತರಾಗಿದ್ದರು. ಗೆಲುವಿನ ಅಂತರವಿದ್ದದ್ದು ಕೇವಲ 6,464 ಮಾತ್ರ.

ಕ್ಷೇತ್ರ ಪರಿಚಯ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಲಗಾಮು ಹಾಕುವವರಾರು? ಕ್ಷೇತ್ರ ಪರಿಚಯ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಲಗಾಮು ಹಾಕುವವರಾರು?

ಕ್ಷೇತ್ರದಲ್ಲಿ 2013ರಲ್ಲಿ ಪುರುಷ ಮತದಾರರ ಸಂಖ್ಯೆ 105,688 ಇದ್ದರೆ, ಮಹಿಳೆಯರ ಸಂಖ್ಯೆ 109,015 ಇತ್ತು. ಅಂದರೆ ಒಟ್ಟು ಮತದಾರರ ಸಂಖ್ಯೆ 214,703ಇತ್ತು. ಜಾತಿವಾರು ಮತಗಳು ಒಕ್ಕಲಿಗರು 105,920, ದಲಿತರು 39,250, ಕುರುಬರು 7,136, ಮುಸ್ಲಿಮರು 24,000, ಲಿಂಗಾಯಿತರು 9,450, ತಿಗಳರು 8,232, ಬೆಸ್ತರು 9,700, ಇತರೆ 10,500 ಜನರಿದ್ದರು.

Channapatna constituency introduction

2018ರಲ್ಲಿ ಅಂದರೆ ಪ್ರಸ್ತುತ ಪುರುಷರ ಸಂಖ್ಯೆ 106,134 ಇದ್ದರೆ, ಮಹಿಳೆಯರು ಸಂಖ್ಯೆ 110,272 ಇದೆ. ತೃತೀಯ ಲಿಂಗದ ಸಂಖ್ಯೆ 9 ಇದ್ದು, ಒಟ್ಟು ಮತದಾರರ ಸಂಖ್ಯೆ 216,415 ಇದೆ.

ಅದೃಷ್ಟಕ್ಕಿಳಿದಿರುವ ಘಟಾನುಗಟಿಗಳು
ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ನಿಂದ ಎಚ್.ಎಂ.ರೇವಣ್ಣ, ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ ಮೂವರು ಘಟಾನುಗಟಿಗಳು ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದು,
ನೇರ ಹಣಾಹಣಿ ನಡೆಯುವುದು ಎಚ್ ಡಿ ಕೆ ಮತ್ತು ಸಿಪಿವೈ ನಡುವೆ. ಎಚ್.ಎಂ.ರೇವಣ್ಣ ಅವರ ಸ್ಪರ್ಧೆಯಿಂದ ಅಹಿಂದ ಮತಗಳು ವಿಭಜನೆಯಾಗಿ, ಮತ್ತೊಬ್ಬರ ಸೋಲಿಗೆ ಕಾರಣರಾಗುತ್ತಾರೆ ಎನ್ನಲಾಗಿದೆ.

ಅಭ್ಯರ್ಥಿಗಳ ಪ್ಲಸ್- ಮೈನಸ್ ಪಾಯಿಂಟ್ ಏನು?
ಸಿ.ಪಿ.ಯೋಗೇಶ್ವರ್: ತಾಲೂಕಿನಲ್ಲಿ ಮಾಡಿರುವ ನೀರಾವರಿ ಯೋಜನೆಗಳು ಹಾಗೂ ಸ್ಥಳೀಯರು ಮತ್ತು ತಮ್ಮದೇ ಅಭಿಮಾನಿ ಬಳಗದ ಬಲ ಹೊಂದಿರುವುದು ಪ್ಲಸ್ ಪಾಯಿಂಟ್ ಆದರೆ, ಕೆಲ ಕೆರೆಗಳಿಗೆ ನೀರು ತುಂಬಿಸಿದ್ದು ಬಿಟ್ಟರೆ ಅಭಿವೃದ್ಧಿ ಮಾಡದಿರುವುದು, ಪ್ರತಿ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಪಕ್ಷಾಂತರ ಪಕ್ಷಿ ಎಂಬ ಅಪಕೀರ್ತಿ ಸಹ ಮೈನಸ್ ಆಗಲಿದೆ.

ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ

ಎಚ್.ಡಿ.ಕುಮಾರಸ್ವಾಮಿ: ತಮ್ಮ 20 ತಿಂಗಳ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಮಾಡಿದ ಕೆಲಸ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಜನಪ್ರಿಯತೆ ಪ್ಲಸ್ ಪಾಯಿಂಟ್ ಆದರೆ, ತಮ್ಮ‌ 20 ತಿಂಗಳ ಆಡಳಿತದಲ್ಲಿ ಚನ್ನಪಟ್ಟಣಕ್ಕೆ ಯಾವುದೇ ಅಭಿವೃದ್ಧಿ ಯೋಜನೆ ನೀಡದಿರುವುದು, ರಾಮನಗರವನ್ನು ಜಿಲ್ಲೆಯಾಗಿ ಮಾಡಿದ್ದು, ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು, ನಂತರ ರಾಜೀನಾಮೆ ನೀಡುತ್ತಾರೆ ಎನ್ನುವ ಆತಂಕ ಮೈನಸ್ ಪಾಯಿಂಟ್ ಆಗಲಿದೆ.

ಎಚ್.ಎಂ.ರೇವಣ್ಣ: ಕುರುಬ ಮತ್ತು ಅಹಿಂದ ಮತದಾರರು ಕೈಹಿಡಿಯುತ್ತಾರೆ ಎಂಬ ನಂಬಿಕೆ, ಪ್ರಸ್ತುತ ಸಚಿವರು ಮತ್ತು ಜಿಲ್ಲೆಯವರೇ ಎನ್ನುವುದು ಪ್ಲಸ್ ಪಾಯಿಂಟ್ ಆದರೆ,
ಕ್ಷೇತ್ರಕ್ಕೆ ಹೊಸ ಮುಖ, ಮತದಾರನ ಒಡಾನಾಟ ಇಲ್ಲದೆ ಇರುವುದು ಮೈನಸ್ ಆಗಬಹುದು.

English summary
Channapatna is famous for making world famous dolls and politics. Many leaders including V. Venkatappa, DT Ramu, BJ Linge Gowda, M Varadegowda,Sadat Alikhan, C.P. Yogeshwar and others represents Channapatna. This constituency is dominated by vokkaliga. Other voters are determinant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X