ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಕಾಂಗ್ರೆಸ್ ನಾಗಾಲೋಟದ ಮುಂದೆ ಬಿಜೆಪಿ, ಜೆಡಿಎಸ್ ಛಿದ್ರ

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಎರಡು ಸಮೀಕ್ಷೆಗಳನ್ನು ಬಿಡುಗಡೆ ಮಾಡಿ ಎರಡರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದ ಸಿ-ಫೋರ್ ಸಮೀಕ್ಷೆ ಇದೀಗ ಮೂರನೇ ಸಮೀಕ್ಷೆ ನಡೆಸಿದೆ. ಮೂರನೇ ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಏಪ್ರಿಲ್ 20 ರಿಂದ 30ರ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ ರಾಂಡಮ್ ಸಾಂಪ್ಲಿಂಗ್ ವಿಧಾನ ಅನುಸರಿಸಲಾಗಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿಕೊಂಡಿದೆ.

ಸಿಫೋರ್ ಸಮೀಕ್ಷೆ : ಎರಡು ಬಾರಿ ಫಲಿತಾಂಶದಲ್ಲೂ 'ಕೈ' ಮೇಲುಗೈಸಿಫೋರ್ ಸಮೀಕ್ಷೆ : ಎರಡು ಬಾರಿ ಫಲಿತಾಂಶದಲ್ಲೂ 'ಕೈ' ಮೇಲುಗೈ

61 ವಿಧಾನಸಭೆ ಕ್ಷೇತ್ರಗಳಿಗೆ ಸೇರಿದ 6,247 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ವಿಧಾನಸಭೆ ಕ್ಷೇತ್ರಗಳನ್ನು ವಿಭಾಗವಾರು ಆಯ್ಕೆ ಮಾಡಲಾಗಿದೆ. ಜೊತೆಗೆ ಮತದಾರರು ಬೇರೆ ಬೇರೆ ಜಾತಿ, ಸಮುದಾಯಕ್ಕೆ ಸೇರಿರುವಂತೆ ನೋಡಿಕೊಳ್ಳಲಾಗಿದೆ ಎಂದು ಸಮೀಕ್ಷೆ ನಡೆಸಿದ ಸಂಸ್ಥೆ ಹೇಳಿದೆ. ಸಮೀಕ್ಷೆಯಲ್ಲಿ ಶೇಕಡಾ 2 ತಪ್ಪುಗಳಿರಬಹುದು ಎಂದು ಸಿ-ಫೋರ್ ಸಮೀಕ್ಷೆ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಸ್ಪಷ್ಟವಾಗಿ ಹೇಳಿದೆ. ಕಾಂಗ್ರೆಸ್ ಪಕ್ಷ ಬರೋಬ್ಬರಿ 118-128 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಬಿಜೆಪಿಗೆ 63-73 ಸ್ಥಾನಗಳನ್ನು ನೀಡಿದೆ.

ಪ್ರಾದೇಶಿಕ ಪಕ್ಷ ಜೆಡಿಎಸ್ 29-36 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಇತರರು 2-7 ಸ್ಥಾನಗಳನ್ನು ಗೆಲ್ಲಬಹುದು ಎಂದು ತನ್ನ ಮೂರನೇ ಸಮೀಕ್ಷೆಯಲ್ಲಿ ಸಿ-ಪೋರ್ ಅಂದಾಜಿಸಿದೆ.

ಕಾಂಗ್ರೆಸಿಗೆ ಶೇಕಡಾ 45 ಮತ

ಕಾಂಗ್ರೆಸಿಗೆ ಶೇಕಡಾ 45 ಮತ

ಶೇಕಡಾವಾರು ಮತಗಳ ವಿಚಾರಕ್ಕೂ ಬಂದಾಗ ಕಾಂಗ್ರೆಸ್ ಏಕಸ್ವಾಮ್ಯ ಮೆರೆಯಲಿದೆ. ಶೇಕಡಾ 45 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳಲಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದೆ. ಇದು 2013ರಲ್ಲಿ ಪಡೆದ ಮತಗಳಿಗಿಂತ ಶೇಕಡಾ 8ರಷ್ಟು ಹೆಚ್ಚಾಗಿದೆ.

ಬಿಜೆಪಿ ಶೇಕಡಾ 32 ಮತಗಳನ್ನು ಪಡೆಯಲಿದೆ ಎಂದು ಸರ್ವೆ ಹೇಳಿದೆ. ಇದು ಕಳೆದ ಬಾರಿಗಿಂತ ಶೇಕಡಾ 12 ಹೆಚ್ಚಾಗಿದೆ.

ಜೆಡಿಎಸ್ ಈ ಬಾರಿ ಶೇಕಡಾ 2 ಮತಗಳನ್ನು ಕಳೆದುಕೊಂಡು ಶೇಕಡಾ 18 ಮತಗಳನ್ನು ಪಡೆಯಲಿದೆ ಎಂಬುದಾಗಿ ಸಮೀಕ್ಷೆಯ ಅಂದಾಜಿಸಿದೆ. ಸಮೀಕ್ಷೆ ಪ್ರಕಾರ ಇತರರು ಶೇಕಡಾ 5 ಮತಗಳನ್ನು ಪಡೆಯಲಿದ್ದಾರೆ.

2ನೇ ಸಮೀಕ್ಷೆಯಲ್ಲಿ 126 ಸ್ಥಾನ ನೀಡಿದ್ದ ಸಿ-ಫೋರ್

2ನೇ ಸಮೀಕ್ಷೆಯಲ್ಲಿ 126 ಸ್ಥಾನ ನೀಡಿದ್ದ ಸಿ-ಫೋರ್

2018ರ ಮಾರ್ಚ್ 1 ರಿಂದ 25ರ ನಡುವೆ ಮೊದಲ ಸಮೀಕ್ಷೆ ನಡೆಸಿದ್ದ ಸಿ-ಫೋರ್ ಕಾಂಗ್ರೆಸ್ 126 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜು ಮಾಡಿತ್ತು. ಇದರಲ್ಲಿ ಬಿಜೆಪಿ ಸ್ಥಾನಗಳು 70ಕ್ಕೆ ಏರಿಕೆಯಾಗಬಹುದು ಎಂದು ಸಮೀಕ್ಷೆ ಹೇಳಿತ್ತು. ಜೆಡಿಎಸ್ ಸ್ಥಾನಗಳು 27 - 40ರ ಒಳಗೆ ನಿಲ್ಲಲಿದೆ, ಇತರರು 1 ಸ್ಥಾನದಲ್ಲಷ್ಟೇ ಗೆಲುವು ಸಾಧಿಸಬಹುದು ಎಂದು ಸರ್ವೆ ತಿಳಿಸಿತ್ತು.

ಮೊದಲ ಸಮೀಕ್ಷೆಯಲ್ಲೂ ಕಾಂಗ್ರೆಸಿಗೆ ಜೈ ಎಂದಿದ್ದ ಸಮೀಕ್ಷೆ

ಮೊದಲ ಸಮೀಕ್ಷೆಯಲ್ಲೂ ಕಾಂಗ್ರೆಸಿಗೆ ಜೈ ಎಂದಿದ್ದ ಸಮೀಕ್ಷೆ

2017ರ ಜುಲೈನಲ್ಲಿಯೂ ಸಮೀಕ್ಷೆ ನಡೆಸಿದ್ದ ಸಿ-ಪೋರ್ ಆಗಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿತ್ತು. ಕಾಂಗ್ರೆಸ್ ಶೇಕಡಾ 43 ಮತಗಳನ್ನು ಪಡೆದ 120 ರಿಂದ 132 ಸ್ಥಾನಗಳನ್ನು ಗಲ್ಲಲಿದೆ ಎಂದಿತ್ತು.

ಇದರಲ್ಲಿ ಬಿಜೆಪಿ ಶೇಕಡಾ 32 ಮತಗಳನ್ನು ಪಡೆದು 60-72 ಸ್ಥಾನಗಳನ್ನು ಪಡೆದುಕೊಳ್ಳಲಿದೆ, ಜೆಡಿಎಸ್ ಶೇಕಡಾ 17 ಮತಗಳನ್ನು ಪಡೆದುಕೊಂಡು 24 ರಿಂದ 30 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಸರ್ವೆ ಹೇಳಿತ್ತು. ಇದೇ ಸಮೀಕ್ಷೆಯಲ್ಲಿ ಇತರರಿಗೆ 1-7 ಸ್ಥಾನಗಳನ್ನು ನೀಡಲಾಗಿತ್ತು.

English summary
Karnataka Assembly Elections 2018: The Congress will return to power in Karnataka in 2018. Congress will win 118-128 seats in 224-member Legislative Assembly, predicts 'C-Fore' in its latest survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X