ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿವಿ ಸಮೀಕ್ಷೆ: ಅತಂತ್ರ ವಿಧಾನಸಭೆ, ಕಾಂಗ್ರೆಸ್‌ ದೊಡ್ಡ ಪಕ್ಷ

|
Google Oneindia Kannada News

Recommended Video

Karnataka Elections 2018 : ಎಲ್ಲಾ ಮೂರು ಪಕ್ಷಗಳ ಸಮೀಕ್ಷೆ ಬಯಲು ಮಾಡಿದ ಬಿಟಿವಿ | Oneindia Kannada

ಬೆಂಗಳೂರು, ಮೇ ೦9: ಪಬ್ಲಿಕ್ ಟಿವಿ, ಜನ್‌ ಕಿ ಬಾತ್ ನಂತರ ಇಂದು ಕನ್ನಡದ ಸುದ್ದಿ ವಾಹಿನಿ ಬಿಟಿವಿಯು ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದೆ.

ಮತದಾನಕ್ಕೆ ಇನ್ನು ಕೇವಲ 72 ಗಂಟೆಗಳು ಬಾಕಿ ಇರುವಾಗ ಸಂಗ್ರಹಿಸಿರುವ ಈ ಫೈನಲ್ ಜನಾಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದು ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್‌ ಅತಿ ತೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಬಿಟಿವಿ ಸಮೀಕ್ಷೆ: ಫಲಿತಾಂಶ ನಿರ್ಧರಿಸುವ ಪ್ರಶ್ನೆಗಳಿಗೆ ಜನರ ಉತ್ತರಬಿಟಿವಿ ಸಮೀಕ್ಷೆ: ಫಲಿತಾಂಶ ನಿರ್ಧರಿಸುವ ಪ್ರಶ್ನೆಗಳಿಗೆ ಜನರ ಉತ್ತರ

ಪಬ್ಲಿಕ್ ಟಿವಿ ಮಾಡಿರುವ ಸಮೀಕ್ಷೆ ಪ್ರಕಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 94 ಸೀಟುಗಳನ್ನು ಪಡೆದರೆ ಬಿಜೆಪಿಯು 84, ಜೆಡಿಎಸ್‌ 42 ಹಾಗೂ ಇತರೆ 3 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಈ ಸಂಖ್ಯೆಗಳಲ್ಲಿ 5 ಕ್ಷೇತ್ರಗಳು ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಬಿಟಿವಿ ಹೇಳಿದೆ.

ಪಬ್ಲಿಕ್ ಟಿವಿ ಸಮೀಕ್ಷೆ : ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?ಪಬ್ಲಿಕ್ ಟಿವಿ ಸಮೀಕ್ಷೆ : ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?

ಬಿಟಿವಿಯ ವಲಯವಾರು ಸಮೀಕ್ಷೆ ಫಲಿತಾಂಶ ಇಲ್ಲಿದೆ ನೋಡಿ....

ಹೈದರಾಬಾದ್ ಕರ್ನಾಟದಲ್ಲಿ ಕಾಂಗ್ರೆಸ್‌ ಅಧಿಪತ್ಯ

ಹೈದರಾಬಾದ್ ಕರ್ನಾಟದಲ್ಲಿ ಕಾಂಗ್ರೆಸ್‌ ಅಧಿಪತ್ಯ

ಸಮೀಕ್ಷೆ ಪ್ರಕಾರ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಪಷ್ಟ ಮೇಲುಗೈ ಸಾಧಿಸಲಿದೆ. ಈ ಭಾಗದಲ್ಲಿ ಕಾಂಗ್ರೆಸ್‌ 22 ಕ್ಷೇತ್ರಗಳಲ್ಲಿ ಗೆದ್ದರೆ ಬಿಜೆಪಿ 14, ಜೆಡಿಎಸ್‌ 4 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ.

ಮುಂಬೈ ಕರ್ನಾಟದಲ್ಲಿ ಬಿಜೆಪಿ ಮೇಲುಗೈ

ಮುಂಬೈ ಕರ್ನಾಟದಲ್ಲಿ ಬಿಜೆಪಿ ಮೇಲುಗೈ

ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಇಲ್ಲಿ ಕಾಂಗ್ರೆಸ್‌ 19 ಸ್ಥಾನ ಗಳಿಸಿದರೆ ಬಿಜೆಪಿ ಅತಿ ಹೆಚ್ಚು 29 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಡೆಎಸ್‌ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಬೇರೆ ಪಕ್ಷಗಳು ಇಲ್ಲಿ ಬೇರುಬಿಟ್ಟಿಲ್ಲ.

ಮಧ್ಯ ಕರ್ನಾಟಕದಲ್ಲಿ ಸಮಬಲ

ಮಧ್ಯ ಕರ್ನಾಟಕದಲ್ಲಿ ಸಮಬಲ

ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ 11 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 10 ಸ್ಥಾನಗಳು ಜೆಡೆಎಸ್‌ 5 ಸ್ಥಾನಗಳಲ್ಲಿ ಗೆಲವು ಕಾಣಲಿದೆ ಎಂದಿದೆ ಬಿಟಿವಿ ಸಮೀಕ್ಷೆ. ಇಲ್ಲಿ ಪತರ ಪಕ್ಷ ಅಥವಾ ಪಕ್ಷೇತರರು ಗೆಲ್ಲಲು ಶಕ್ತರಾಗಿಲ್ಲ.

ಹಳೆ ಮೈಸೂರಿನಲ್ಲಿ ಜೆಡಿಎಸ್ ಕಿಂಗ್

ಹಳೆ ಮೈಸೂರಿನಲ್ಲಿ ಜೆಡಿಎಸ್ ಕಿಂಗ್

61 ಕ್ಷೇತ್ರಗಳನ್ನು ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಜೆಡೆಎಸ್‌ ಮುನ್ನಡೆ ಪಡೆದಿದೆ. ಇಲ್ಲಿ ಅದು 30 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಕಾಂಗ್ರೆಸ್‌ 18 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 10 ಸ್ಥಾನಗಳಲ್ಲಿಯಷ್ಟೆ ಗೆಲ್ಲಲಿದೆ. ಇತರ ಪಕ್ಷಗಳು ಇಲ್ಲಿ 3 ಸ್ಥಾನಗಳಲ್ಲಿ ವಿಜಯ ಸಾಧಿಸಲಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಮುಂದೆ

ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಮುಂದೆ

ಕರಾವಳಿ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ. ಇಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ, 8 ಸ್ಥಾನಗಳನ್ನು ಬಿಜೆಪಿ ಗೆದ್ದರೆ ಜೆಡಿಎಸ್‌ ಖಾತೆಯನ್ನೇ ತೆರೆಯುವುದಿಲ್ಲ ಎಂದು ಸಮೀಕ್ಷೆ ಹೇಳುತ್ತಿದೆ.

ಬೆಂಗಳೂರಲ್ಲಿ ಬಿಜೆಪಿ-ಕಾಂಗ್ರೆಸ್ ಸಮ-ಸಮ

ಬೆಂಗಳೂರಲ್ಲಿ ಬಿಜೆಪಿ-ಕಾಂಗ್ರೆಸ್ ಸಮ-ಸಮ

ಬೆಂಗಳೂರಿನ 27 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಸಮನಾಗಿ ಹಂಚಿಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್‌ 13 ಹಾಗೂ ಬಿಜೆಪಿ 13 ಕ್ಷೇತ್ರಗಳನ್ನು ಗೆಲ್ಲಲಿದೆ. ಜೆಡಿಎಸ್ ಪಕ್ಷವು ಕೇವಲ 1 ಸ್ಥಾನ ಪಡೆಯಲಿದೆ. ಹಿಂದಿನ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಬೆಂಗಳೂರಲ್ಲಿ ಜೆಡಿಎಸ್‌ ಎರಡು ಸ್ಥಾನ ಕಳೆದುಕೊಳ್ಳಲಿದೆ.

English summary
Btv did opinion poll about Karnataka assembly elections 2018. survey report says there will be a hung assembly in Karnataka. As per the survey Congress will get 94 seats, BJP get 84 and JDS will get 42 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X