ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್-ಕಾಂಗ್ರೆಸ್‌ ಸಮ-ಸಮ

By Manjunatha
|
Google Oneindia Kannada News

ಬೆಂಗಳೂರು, ಮೇ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸಮ ಪ್ರಮಾಣದಲ್ಲಿ ವಿಜಯ ಸಾಧಿಸಿವೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡು ಸ್ಥಾನಗಳನ್ನು ಎರಡೂ ಪಕ್ಷಗಳು ಹಂಚಿಕೊಂಡಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರಗಳಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಕೂಡಾ ಎರಡು ಜೆಡಿಎಸ್ ಎರಡು ಕಾಂಗ್ರೆಸ್‌ ಪಕ್ಷ ಗೆದ್ದಿತ್ತು. ಈ ಬಾರಿಯೂ ಅದೇ ಫಲಿತಾಂಶ ಮುಂದುವರೆದಿದೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ದೇವನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ನಿಸರ್ಗ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ ಅಭ್ಯರ್ಥಿ ವೆಂಕಟಸ್ವಾಮಿ ಅವರಿಗಿಂತಲೂ 15000 ಸಾವಿರ ಹೆಚ್ಚು ಮತಗಳನ್ನು ಗಳಿಸಿ ಭರ್ಜರಿ ವಿಜಯ ಸಾಧಿಸಿದ್ದಾರೆ.

LIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವುLIVE: ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಗೆಲುವು

ಈ ಬಾರಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವು ಹೊಸ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿ ಪರೀಕ್ಷೆಗೆ ಇಳಿದಿತ್ತು ಅದರಂತೆ ಒಬ್ಬ ಅಭ್ಯರ್ಥಿ ಗೆದ್ದಿದ್ದರೆ ಒಬ್ಬ ಅಭ್ಯರ್ಥಿ ಸೋತಿದ್ದಾರೆ.

ಮೊದಲ ಬಾರಿ ಶಾಸಕರಾದ ನಾರಾಯಣಸ್ವಾಮಿ

ಮೊದಲ ಬಾರಿ ಶಾಸಕರಾದ ನಾರಾಯಣಸ್ವಾಮಿ

ನಿಸರ್ಗ ನಾರಾಯಣಸ್ವಾಮಿ ಅವರು ಇತ್ತೀಚೆಗಷ್ಟೆ ಜೆಡಿಎಸ್ ಪಕ್ಷ ಸೇರಿದ್ದರೂ ಸಹಿತ ಕೊನೆ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಪಡೆಯಲು ಯಶಸ್ವಿ ಆಗಿದ್ದರು. ಅವರು ಕಳೆದ ಬಾರಿಯ ಜೆಡಿಎಸ್‌ ಶಾಸಕ ಪಿಳ್ಳಮುನಿಶಾಮಪ್ಪ ಅವರನ್ನು ಪಕ್ಕಕ್ಕೆ ಸರಿಸಿ ಟಿಕೆಟ್ ಪಡೆದಿದ್ದರು.

ಎರಡನೇ ಬಾರಿ ಗೆದ್ದ ವೆಂಕಟರಮಣಯ್ಯ

ಎರಡನೇ ಬಾರಿ ಗೆದ್ದ ವೆಂಕಟರಮಣಯ್ಯ

ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣಯ್ಯ ಅವರು ತಮ್ಮ ಸಮೀತ ಪ್ರತಿಸ್ಪರ್ಧಿ ಜೆಡಿಎಸ್‌ನ ಮುನೇಗೌಡ ಅವರನ್ನು 10000 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆರಂಭದಲ್ಲಿ ಜೆಡಿಎಸ್‌ನ ಮುನೇಗೌಡ ಅವರು ಮುನ್ನಡೆಯಲ್ಲಿದ್ದರೂ ಸಹಿತ ಆ ನಂತರ ವೆಂಕಟರಮಣಯ್ಯ ಅವರು ಮತಗಳ ಅಂತರ ಹೆಚ್ಚಿಸಿಕೊಂಡು ಹೋಗಿ ಕೊನೆಗೆ ವಿಜಯ ಸಾಧಿಸಿದರು.

ಶ್ರೀನಿವಾಸಮೂರ್ತಿಗೆ ಭರ್ಜರಿ ಜಯ

ಶ್ರೀನಿವಾಸಮೂರ್ತಿಗೆ ಭರ್ಜರಿ ಜಯ

ನೆಲಮಂಗಲದಲ್ಲಿ ಜೆಡಿಎಸ್‌ ನ ಅಭ್ಯರ್ಥಿ ಕೆ.ಶ್ರೀನಿವಾಸಮೂರ್ತಿ ಅವರು 23000 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯು ಸಮಾನ ಪೈಪೋಟಿ ನೀಡಿವೆ. ಕಾಂಗ್ರೆಸ್‌ನ ನಾರಾಯಣಸ್ವಾಮಿ ಅವರು 42250 ಮತ ಗಳಿಸಿದರೆ, ಬಿಜೆಪಿಯ ಎಂವಿ ನಾಗರಾಜು ಅವರು 40090 ಮತಗಳನ್ನು ಗಳಿಸಿದ್ದಾರೆ.

ಹೊಸಕೋಟೆಯಲ್ಲಿ ಎಂಟಿಬಿಯದ್ದೇ ಕಾರುಬಾರು

ಹೊಸಕೋಟೆಯಲ್ಲಿ ಎಂಟಿಬಿಯದ್ದೇ ಕಾರುಬಾರು

ಹೊಸಕೋಟೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ. ಇಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಎಂಟಿಬಿ ನಾಗರಾಜು ಅವರು ಬಿಜೆಪಿಯ ಬಚ್ಚೇಗೌಡ ಅವರ ಪುತೃ ಶರತ್ ಬಚ್ಚೇಗೌಡ ವಿರುದ್ಧ 5000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಪೈಪೋಟಿ ಇದ್ದ ಇಲ್ಲಿ ಆರಂಭದಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು ಆದರೆ ಕೊನೆಯ ಎರಡು ಸುತ್ತುಗಳಲ್ಲಿ ಕಾಂಗ್ರೆಸ್‌ ಮುನ್ನಡೆಪಡೆದು ಗೆಲುವು ಸಾಧಿಸಿತು.

English summary
In Bengaluru Rural district JDS and Congress both took two seats each. In Devnhalli and Nelmangala JDS won In Hoskote and Doddaballapura congress won the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X