ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ನಗರ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಹೊತ್ತೂರ್ ಆಸ್ತಿ 160 ಕೋಟಿ

|
Google Oneindia Kannada News

ಬಳ್ಳಾರಿ, ಏಪ್ರಿಲ್ 20: ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮೊಹಮದ್ ಇಕ್ಬಾಲ್ ಹೊತ್ತೂರ್, ಸುಮಾರು 160 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.

ಈಶ್ವರಪ್ಪ ಆಸ್ತಿ ಮೌಲ್ಯ ಏರಿಕೆಯಾಗಿದ್ದು ಕೇವಲ 2 ಕೋಟಿ ರೂಪಾಯಿಈಶ್ವರಪ್ಪ ಆಸ್ತಿ ಮೌಲ್ಯ ಏರಿಕೆಯಾಗಿದ್ದು ಕೇವಲ 2 ಕೋಟಿ ರೂಪಾಯಿ

ತಮ್ಮ ಬಳಿ 12.75 ಲಕ್ಷ ನಗದು ಇದೆ. ಪತ್ನಿ ನಾದಿರಾ ಇಕ್ಬಾಲ್ ಬಳಿ 53.88 ಲಕ್ಷ, ದೊಡ್ಡ ಮಗ ಶರ್ಮೀನ್ ಇಕ್ಬಾಲ್ 37.09 ಲಕ್ಷ ಮತ್ತು ಕಿರಿ ಮಗ ಜಹಾನ್ ಮೊಹಮದ್ ಇಕ್ಬಾಲ್ 17,075 ರೂಪಾಯಿ ನಗದು ಹೊಂದಿರುವುದಾಗಿ ತಿಳಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

149 ಕೋಟಿ ಚರಾಸ್ತಿ, ಸುಮಾರು 7 ಕೋಟಿ ಚರಾಸ್ತಿ ಅವರ ಹೆಸರಿನಲ್ಲಿದೆ. ಪತ್ನಿ ನಾದಿರಾ ಹೆಸರಿನಲ್ಲಿ 88 ಕೋಟಿ ಚರಾಸ್ತಿ, 109 ಕೋಟಿ ಸ್ಥಿರಾಸ್ತಿ ಇದೆ. ಶರ್ಮೀನ್ ಹೆಸರಿನಲ್ಲಿ 12 ಕೋಟಿ, ಕಿರಿಮಗನ ಹೆಸರಿನಲ್ಲಿ 17 ಕೋಟಿ ಚರಾಸ್ತಿ ಇದೆ.

Ballari city JDS candidate Mohamad Iqbal Hothur declared his assets and liabilities

ಆಸ್ತಿ-ಪಾಸ್ತಿ ಮಾಹಿತಿ
ತಮ್ಮ ಬಳಿ 1.14 ಕೋಟಿ ಮತ್ತು ಪತ್ನಿ ಬಳಿ 9.80 ಕೋಟಿ ಮೊತ್ತದ ಚಿನ್ನಾಭರಣ ಇದೆ. ಬ್ಯಾಂಕ್ ಖಾತೆ, ಹೂಡಿಕೆ, ನೀಡಿರುವ ಸಾಲ ಮತ್ತು ವಾಹನಗಳ ಮೌಲ್ಯ ಸೇರಿ 149 ಕೋಟಿ ಮೊತ್ತದ ಆಸ್ತಿ ಇದೆ. ಪತ್ನಿ ಹೆಸರಿನಲ್ಲಿ 88.54 ಕೋಟಿ ಇದೆ. ಮಕ್ಕಳಿಬ್ಬರ ಹೆಸರಿನಲ್ಲಿ 30 ಕೋಟಿ ಆಸ್ತಿ ಇದೆ.

ಆಸ್ತಿ-ಸಾಲ ಎಷ್ಟಿದೆ?
ಹುಲಿಕುಂಟೆ ಗ್ರಾನದಲ್ಲಿ ಐದು ಎಕರೆ ಕೃಷಿ ಭೂಮಿ, ಕೃಷ್ಣರಾಜಪುರಂನಲ್ಲಿ ನಿವೇಶನ, ಬೆಂಗಳೂರಿನ ಇಂದಿರಾನಗರದಲ್ಲಿ ವಾಣಿಜ್ಯ ಕಟ್ಟಡ, ಮನೆಗಳನ್ನು ಹೊಂದಿದ್ದಾರೆ.

ತಮ್ಮ ಮೇಲೆ 5.61 ಕೋಟಿ ಸಾಲವಿದ್ದು, ಪತ್ನಿ ಮೇಲೆ 22 ಕೋಟಿ ಸಾಲದ ಹೊರೆಯಿದೆ. ಉಳಿದಂತೆ ಸರ್ಕಾರಕ್ಕೆ ಯಾವುದೇ ಬಾಕಿ ಮತ್ತು ತೆರಿಗೆ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಸುಮಾರು 3 ಕೋಟಿ ಆದಾಯ ತೆರಿಗೆ ಮೊತ್ತ ವಿವಾದದಲ್ಲಿದೆ.

ತಮ್ಮ ಬಳಿ ರೇಂಜ್ ರೋವರ್, ಪತ್ನಿ ಬಳಿ ಸಿವಿಕ್ ಹೊಂಡಾ ಮತ್ತು ಜಾಗ್ವಾರ್ ಕಾರು ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

English summary
Karnataka Assembly Elections 2018 : Ballari city JDS candidate Mohamad Iqbal Hothur has declared his assets and liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X