• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಸಂಸದೀಯ ಪಟು, ಜೆಡಿಎಸ್ ಕಟ್ಟಾಳು ! ವೈಎಸ್ವಿ ದತ್ತ

By Mahesh
|

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮಾನಸ ಪುತ್ರ, ಜೆಡಿಎಸ್‌ನ ಮೆದುಳು ಎಂದೇ ಗುರುತಿಸಲ್ಪಡುವ ಕಡೂರು ಕ್ಷೇತ್ರದ ಹಾಲಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ(ವೈ.ಎಸ್‌.ವಿ. ದತ್ತ ) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರಾಗಿ ಕಾಣಿಸಿಕೊಳ್ಳಬಲ್ಲರು.

ಮಲೆನಾಡು, ಅರೆ ಮಲೆನಾಡು ಭಾಗದಲ್ಲಿ ರೈತಾಪಿ ಜನರ ಬಳಿ ಮತ ಕೇಳಲು ಹೆಗಲು ಮೇಲೆ ಟವೆಲ್ ಹಾಕಿಕೊಂಡು ಇವ ನಮ್ಮೊಳಗೊಬ್ಬ ಎನಿಸಿಕೊಳ್ಳಬಲ್ಲ ವ್ಯಕ್ತಿ ಬೇಕು. ಇದಕ್ಕೆ ಈ ಭಾಗದಲ್ಲಿ ಜೆಡಿಎಸ್ ಸೇನಾನಿಯಾಗಿ ದತ್ತಣ್ಣ ಸಂಚರಿಸಿದ್ದಾರೆ.

ಮತದಾರರ ನೋಟಿನಿಂದ ಗೆದ್ದ ಜೆಡಿಎಸ್ ಅಭ್ಯರ್ಥಿ

ಜನಾನುರಾಗಿಯಾಗಿರುವ ದತ್ತ ಅವರು ಜೂನ್ ತಿಂಗಳಿನಲ್ಲಿ ಜಿ ಯರದಕೆರೆ ಗ್ರಾಮದಿಂದ ಒಂದು ಸಾವಿರ ಕಿ.ಮೀಗಳ ಪಾದಯಾತ್ರೆ ಆರಂಭಿಸಿದ ಈ ಬಗ್ಗೆ ಅನುಮಾನಪಟ್ಟವರೇ ಹೆಚ್ಚು ಮಂದಿ.

ಆದರೆ, ಸುಮಾರು 380 ಗ್ರಾಮ, 45ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳನ್ನು ಹಾಯ್ದು, ಜನರ ಕಷ್ಟ ಸುಖಗಳನ್ನು ವಿಚಾರಿಸಿ ಕಡೂರಿಗೆ ಮತ್ತೆ ಬಂದ ದತ್ತ ಅವರನ್ನು ಸ್ವಾಗತಿಸಲು ಖುದ್ದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಬಂದಿದ್ದರು. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ದತ್ತ ಅವರನ್ನು ಪ್ರಶಂಸಿಸಿದರು.

ದೇವೇಗೌಡ್ರು ಬ್ರಾಹ್ಮಣ ದ್ವೇಷಿಯಲ್ಲ, ಹೆಗ್ಡೆ ಫ್ರೆಂಡ್

ಉನ್ನತ ಸ್ಥಾನ ಸಿಗಬೇಕಿತ್ತು: 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದತ್ತ ಅವರಿಗೆ ಕಡೂರು ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗುವ ಬಗ್ಗೆ ಅನುಮಾನವಿದೆ' ಎಂಬ ಸುದ್ದಿಯನ್ನು ಹಬ್ಬಿಸಿದವರು ಈ ಪಾದಯಾತ್ರೆ ಯಶಸ್ಸಿನ ನಂತರ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನ, ಎಂಎಲ್ಎ, ಎಂಎಲ್ಸಿ, ವಕ್ತಾರ ಸ್ಥಾನಗಳನ್ನು ಅಲಂಕರಿಸಿರುವ ದತ್ತ ಅವರಿಗೆ ಜೆಡಿಎಸ್ ನ ಅಧ್ಯಕ್ಷ ಪಟ್ಟ ಈಗಾಗಲೇ ಒಲಿದು ಬರಬೇಕಿತ್ತು ಎಂಬುದು ಅವರ ಅಭಿಮಾನಿಗಳ ಅಳಲು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಜತೆಯೂ ಹೆಚ್ಚು ಸಲುಗೆ ಹೊಂದಿರುವ ದತ್ತ ಅವರು ಮತದಾರರಿಗೆ ಇಷ್ಟವಾಗುವುದು ಅವರ ಸರಳತೆ, ಸಜ್ಜನಿಕೆಯಿಂದ ಮಾತ್ರ.

ವ್ಯಕ್ತಿಚಿತ್ರ: ಕಾಂಗ್ರೆಸ್ಸಿನ 'ಸೋಷಿಯಲ್ ಪವರ್' ರಮ್ಯಾ

ಸರಳ ಜೀವಿ: ದತ್ತ ಅವರು ಮೇಷ್ಟ್ರಾಗಿಯೂ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಅವರು ಭೌತಶಾಸ್ತ್ರ ಮತ್ತು ಗಣಿತದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಹಲವಾರು ಶಾಸಕರು ಕೂಡ ದತ್ತ ಅವರ ಬಳಿ ಕಲಿತವರಿದ್ದಾರೆ. ಆದರೆ, ದತ್ತ ಅವರು ಸಮಾಜವಾದಿಯಾಗಿ ರಾಜಕೀಯದಲ್ಲಿ ವೃತ್ತಿ ಮುಂದುವರೆಸಿದ್ದಾರೆ.

ವಿಧಾನಸಭೆ ಕಲಾಪಕ್ಕೆ ಆಟೋರಿಕ್ಷಾ ಏರಿ ಬರುವ ದತ್ತ ಅವರು ಕಳೆದ ಬಾರಿ ಆಸ್ತಿ ಘೋಷಿಸಿದಾಗ ಎಲ್ಲರ ಹುಬ್ಬೇರಿತ್ತು. ಏಕೆಂದರೆ, ದತ್ತ ಅವರು ತಮ್ಮ ಬಳಿ ಬ್ಯಾಂಕ್ ಖಾತೆಯೇ ಇಲ್ಲ ಎಂದು ಘೋಷಿಸಿದ್ದರು.

ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಯಗಟಿ ಹೋಬಳಿಯ ಬಸವನಹಳ್ಳಿಯಲ್ಲಿ 160 ತೆಂಗಿನ ಮರ ಹೊಂದಿರುವ ಏಳು ಲಕ್ಷ ಮೌಲ್ಯದ 5 ಎಕರೆ ಭೂಮಿ, ಯಗಟಿಯಲ್ಲಿ 2 ನಿವೇಶನ ಆಸ್ತಿ ಮಾತ್ರ ಹೊಂದಿದ್ದಾರೆ.

ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ

ಸ್ವಂತ ಬ್ಯಾಂಕ್ ಖಾತೆ, ಸಾಲದ ಹೊರೆ ಇಲ್ಲ, ಸ್ವಂತ ವಾಹನವಂತೂ ಇಲ್ಲ. ಮನೆಯವರ ಬಳಿ ಇರುವ ಚಿನ್ನಾಭರಣ ಲೆಕ್ಕ ಹಾಕಿದರೆ 1175 ಗ್ರಾಮ್ ದಾಟುವುದಿಲ್ಲ. ಎಲ್ ಐಸಿ, ಕಿಸಾನ್ ವಿಕಾಸ್ ಪತ್ರದಲ್ಲಿ ಒಂದಿಷ್ಟು ಲಕ್ಷ ಉಳಿತಾಯ ಬಿಟ್ಟರೆ ಬೇರೆ ಐಷಾರಾಮಿ, ಆಡಂಬರದ ಸುಳಿವಿಲ್ಲ. ಪಕ್ಷಕ್ಕೆ, ಕ್ಷೇತ್ರದ ಜನತೆಗೆ ನಿಷ್ಠರಾಗಿರುವ ದತ್ತ ಅವರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೀಟು ಗೆಲ್ಲಿಸುವ ಯೋಜನೆಯಲ್ಲಿ ತೊಡಗಿದ್ದಾರೆ.

ಸರ್ವಜನಾಂಗಕ್ಕೂ ಬೇಕಾದವರು: ಕುರುಬರು, ಲಿಂಗಾಯತರಲ್ಲದೆ, ಮುಸ್ಲಿಮರು, ಉಪ್ಪಾರರು, ಅಲ್ಪಸಂಖ್ಯಾತರು ಈ ಕ್ಷೇತ್ರದಲ್ಲಿದ್ದಾರೆ. ಕಡೂರಿನ ಪಟ್ಟಣ ಪುರಸಭೆ ಜೆಡಿಎಸ್ ವಶದಲ್ಲಿದ್ದರೆ, ತಾಲೂಕು ಪಂಚಾಯಿತಿ ಮೇಲೆ ಕಾಂಗ್ರೆಸ್ ಪ್ರಭುತ್ವ ಹೊಂದಿದೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪರಿಚಯ

ನೀರಾವರಿ ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ಜನರನ್ನು ಭೇಟಿ ಮಾಡಿರುವ ದತ್ತ ಅವರು ಲಕ್ಕವಳ್ಳಿಯಿಂದ ನೀರು ಹರಿಸುವ ಯೋಜನೆ ಅನುಷ್ಠಾನವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಕಡೂರಿನಿಂದ -ಸಕಲೇಶಪುರ ರೈಲು ಮಾರ್ಗ ಸಂಪರ್ಕ ಸಾಧ್ಯವಾಗಿಸಲು ದೇವೇಗೌಡರು ಮಾಡಿರುವ ಪ್ರಯತ್ನಗಳನ್ನು ದತ್ತ ಅವರು ಬಳಸಿಕೊಳ್ಳಬಹುದು.

ಇದು ಕೇವಲ ಕಡೂರಿಗೆ ಮಾತ್ರ ಸೀಮಿತವಾಗಿಲ್ಲ, ಅಕ್ಕ ಪಕ್ಕದ ಮೂರ್ನಾಲ್ಕು ಅಸೆಂಬ್ಲಿ ಕ್ಷೇತ್ರಗಳ ಸಮಸ್ಯೆಯಾಗಿರುವುದರಿಂದ ಈ ಬಗ್ಗೆ ದತ್ತ ಅವರ ಗಮನ ಹೆಚ್ಚು ಹರಿದಿದೆ. ಕಾಂಗ್ರೆಸ್ಸಿನ ಕೆ.ಎಂ ಕೃಷ್ಣಮೂರ್ತಿ ವಿರುದ್ಧ ಸೋಲನ್ನು ಗೆಲುವಾಗಿ ಪರಿವರ್ತಿಸಲು ದತ್ತ ಅವರಿಗೆ ಸಾಮರ್ಥ್ಯವನ್ನು ಇದ್ದೇ ಇದೆ.

ಕನ್ನಡ ಪರ, ರೈತ ಪರ ಚಿಂತನೆ, ಭ್ರಷ್ಟಾಚಾರದ ವಿರುದ್ಧ ದನಿಯಾಗಿ ಕಾಣಿಸಿಕೊಂಡಿರುವ ದತ್ತ ಅವರು ನಗರದ ಭಾಗದ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರು ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಮುಂದಾದ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಅದ್ದೂರಿ ಮದುವೆ, ಉಕ್ಕಿನ ಸೇತುವೆ ಈ ರೀತಿ ದುಂದು ವೆಚ್ಚ ಎಲ್ಲವೂ ಅಸಹ್ಯ ಎಂದಿದ್ದರು.

ಆದರೆ, ಕೇಂದ್ರ ಸರ್ಕಾರವು ಗೋಹತ್ಯೆ ನಿಷೇಧಕ್ಕೆ ಮುಂದಾದಾಗ ಕಟುವಾಗಿ ವಿರೋಧಿಸಿದ್ದರು. ಕೋಮು-ಕೋಮಿನ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಬೇಡಿ ಎಂದಿದ್ದರು. ಹುಟ್ಟಿನಿಂದ ಬ್ರಾಹ್ಮಣರಾದ ದತ್ತ ಅವರ ಹೇಳಿಕೆ ಬಗ್ಗೆ ಆ ಸಮುದಾಯದವರು ಕಿಡಿಕಾರಿದ್ದರು. ಆದರೆ, ಜಾತ್ಯಾತೀತರಾಗಿ ಉಳಿದಿರುವ ದತ್ತ ಅವರನ್ನು ಒಂದು ಜಾತಿ, ಸಮುದಾಯಕ್ಕೆ ಎಂದಿಗೂ ಸೀಮಿತಗೊಳಿಸಲಾಗದು ಎಂಬುದನ್ನು ಕಳೆದ ಬಾರಿ ಮತದಾರ ತೋರಿಸಿಕೊಟ್ಟಿದ್ದಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the perspective of Karnataka Assembly Elections 2018, we present the short biography and political journey of JDS leader. Yagati Suryanarayana Venkatesha Datta. YSV Datta is loyal and most trusted person of HD Deve Gowda family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more