ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ಪ್ರಕಾರ ಬರ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ನಂ.1

By Manjunatha
|
Google Oneindia Kannada News

Recommended Video

ಬರ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ನಂ 1 | ಇದು ಸಮೀಕ್ಷಾ ವರದಿ | Oneindia Kannada

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ-ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಪ್ರಕಟವಾಗಿದೆ. ಅದರ ಪ್ರಕಾರ ಬರ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ನಂ.1 ಅಂತೆ.

ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ

ಸಿದ್ದರಾಮಯ್ಯ ಅವರು ಬರ ನಿರ್ವಹಣೆ ಮಾಡಿದ ರೀತಿ ನಿಮಗೆ ತೃಪ್ತಿ ತಂದಿದೆಯೇ? ಎಂದು ಇಂಡಿಯಾ ಟುಡೆ-ಕಾರ್ವಿ ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 39% ಜನ ಉತ್ತಮವಾಗಿ ನಿಭಾಯಿಸಿದ್ದಾರೆ ಎಂದಿದ್ದಾರೆ.

As per the survey Siddaramaiah is best in handling the drought

39% ತೃಪ್ತಿಯಾಗಿದೆ ಎಂದರೆ, 26% ಪ್ರತಿಕ್ರಿಯೆಯನ್ನೇ ನೀಡಿಲ್ಲ, 18% ಜನಕ್ಕೆ ಸಮಾಧಾನವಾಗಿಲ್ಲ, 10% ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎಂದಿದ್ದಾರೆ. 7% ಕಳಪೆಯಾಗಿ ನಿಭಾಯಿಸಿದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಸೂಕ್ಷ್ಮವಾಗಿ ಗಮನಿಸಿದಲ್ಲಿ ಸಿದ್ದರಾಮಯ್ಯ ಅವರ ಸಮಯದಲ್ಲಿ ಅತಿಯಾದ ಬರವೇನೂ ಕಾಡಲಿಲ್ಲ, ಅದೂ ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ಕಾಡಿದ ಯಮ ಬರ ಸಿದ್ದರಾಮಯ್ಯ ಅವರಿಗೆ ಒಕ್ಕರಿಸಲಿಲ್ಲ, ಪೃಕೃತಿ ಸಿದ್ದರಾಮಯ್ಯ ಅವರ ಪರವೇ ಇತ್ತು. ಆದರೆ ಕಾಡಿದ ಅಲ್ಪ ಬರವನ್ನು ಅವರು ಉತ್ತಮವಾಗಿಯೇ ನಿರ್ವಹಿಸಿದ್ದರು.

ಇಂಡಿಯಾ ಟುಡೇ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರದ ಆಡಳಿತ ಹೇಗಿದೆ? ಇಂಡಿಯಾ ಟುಡೇ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರದ ಆಡಳಿತ ಹೇಗಿದೆ?

ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಕಾಡಿದ ಬರ ಮುಖ್ಯಮಂತ್ರಿಯನ್ನೇ ಬದಲಾಯಿಸುವಂತೆ ಮಾಡಿಬಿಟ್ಟಿತ್ತು. ಅದೇ ಸಮಯದಲ್ಲಿ ಕಾವೇರಿ ತೀರ್ಪು ಸಹ ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದಿದ್ದು, ಬರದ ಮೇಲೆ ಬರೆ ಎಳೆದಂತಾಗಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ಅಂತಹಾ ಸ್ಥಿತಿ ಬರಲಿಲ್ಲ.

ಅದರಲ್ಲಿಯೂ ಸಿದ್ದರಾಮಯ್ಯ ಅವರು ಕೃಷಿಭಾಗ್ಯದ ಮೂಲಕ ಸಾಕಷ್ಟು ಸವಲತ್ತುಗಳನ್ನು ರೈತರಿಗೆ ಒದಗಿಸಿದರು, ಅದರಲ್ಲೂ ಕೃಷಿ ಹೊಂಡ, ಬದು ನಿರ್ಮಾಣ ಮುಂತಾದವುಗಳಿಗೆ ಹೆಚ್ಚಿನ ಒತ್ತು ನೀಡಿ ಬರ ನಿರ್ವಹಿಸುವ ಶಕ್ತಿಯನ್ನು ತುಂಬುವ ಕೆಲಸ ಮಾಡಿದರು.

English summary
As per the India today and karvy opinion poll Cm Siddaramaiah handled drought in the best way than the other CM's. above 50% people satisfied with the Siddaramaiah about his work in handling drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X