ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೈಸೂರು ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಸಂದರ್ಶನ | Oneindia Kannada

ಪರಮಾಪ್ತರಾಗಿದ್ದ ಸಂದೇಶ್ ನಾಗರಾಜ್ ಕುಟುಂಬ ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ಹಾಳಾಗಲು ಮೈಸೂರಿನ ನರಸಿಂಹರಾಜ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯ ಕಾರಣವಾಗಿದೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ, ಸಂದೇಶ್ ನಾಗರಾಜ್ ಸಹೋದರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನರಸಿಂಹರಾಜ ಕ್ಷೇತ್ರ ತಲೆಮಾರಿನಿಂದ ಕಾಂಗ್ರೆಸ್ ಆಧಿಪತ್ಯದಲ್ಲೇ ಇರುವಂತದ್ದು. ಅಜೀಜ್ ಸೇಠ್, ಅವರ ಬೆಂಬಲಿತ ಅಭ್ಯರ್ಥಿ ಮತ್ತು ಈಗ ಅವರ ಪುತ್ರ ತನ್ವೀರ್ ಸೇಠ್ ಸತತ ನಾಲ್ಕು ಬಾರಿ ಚುನಾವಣೆಯನ್ನು ಗೆದ್ದಿದ್ದಾಗಿದೆ. ಒಂದರ್ಥದಲ್ಲಿ ತನ್ವೀರ್, ಕಾಂಗ್ರೆಸ್ ಪಾಲಿಗೆ ಗೆಲುವಿನ ಕುದುರೆ.

ಶಿಕಾರಿಪುರದಲ್ಲಿ 50 ಸಾವಿರ ಅಂತರದಲ್ಲಿ ಗೆಲ್ಲುವೆ : ವಿನಯ್ ಕೆ.ಸಿ.ರಾಜಾವತ್ ಸಂದರ್ಶನಶಿಕಾರಿಪುರದಲ್ಲಿ 50 ಸಾವಿರ ಅಂತರದಲ್ಲಿ ಗೆಲ್ಲುವೆ : ವಿನಯ್ ಕೆ.ಸಿ.ರಾಜಾವತ್ ಸಂದರ್ಶನ

ತನ್ವೀರ್ ವಿರುದ್ದವಾಗಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಮತ ವಿಭಜನೆಯಾಗಿ, ಅವರನ್ನು ಸೋಲಿಸುವ ಪ್ರಯತ್ನವೂ ಈ ಹಿಂದೆ ವಿಫಲವಾಗಿತ್ತು. ಈ ಬಾರಿ ಅಬ್ದುಲ್ಲಾ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಜೆಡಿಎಸ್ ಟಿಕೆಟ್ ಸಿಗದ ಕಾರಣಕ್ಕೆ, ಸಂದೇಶ್ ನಾಗರಾಜ್ ತನ್ನ ಸಹೋದರನನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ.

ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ, ಈ ಹಿಂದೆ ಮೈಸೂರಿನ ಮಹಾಪೌರರಾಗಿದ್ದ ಸಂದೇಶ್ ಸ್ವಾಮಿ, ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣ ಸಚಿವ ಮತ್ತು ಕ್ಷೇತ್ರದ ಹಾಲೀ ಶಾಸಕರಾಗಿರುವ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳೇ ಇಲ್ಲ. ಈ ಬಗ್ಗೆ ಸ್ಥಳೀಯರಿಗೆ ಬೇಸರವಿದೆ.

ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ ಮೈಸೂರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಸಂದರ್ಶನ

ಅಲ್ಪಸಂಖ್ಯಾತ ಪ್ರಾಭಲ್ಯದ ಈ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಜೊತೆ ಅಬ್ದುಲ್ಲಾ, ಖಲೀದ್, ಅಬ್ದುಲ್ ಮಜೀದ್, ಮೊಹಮ್ಮದ್ ಆಲಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಈ ಬಾರಿ ಮತವಿಭಜನೆಯಾಗುವುದು ನಿಶ್ಚಿತ ಎಂದು ಕೇಳಿ ಬರುತ್ತಿರುವ ಸುದ್ದಿಯ ನಡುವೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ (ಎಸ್ ಸತೀಶ್) ಜೊತೆ, 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಹೈಲೆಟ್ಸ್ ಇಂತಿದೆ..

 ಮೂಲಭೂತ ಸೌಕರ್ಯಗಳು ಇಲ್ಲದಿರುವುದೇ ಕ್ಷೇತ್ರದ ಸಮಸ್ಯೆ

ಮೂಲಭೂತ ಸೌಕರ್ಯಗಳು ಇಲ್ಲದಿರುವುದೇ ಕ್ಷೇತ್ರದ ಸಮಸ್ಯೆ

ಪ್ರ: ಮಹಾಪೌರರಾಗಿದ್ದವರು, ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?
ಸಂದೇಶ್: ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವುದೇ ಕ್ಷೇತ್ರದ ಪ್ರಮುಖ ಸಮಸ್ಯೆ. ಸ್ವಾತ್ಯಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ, ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಕುಡಿಯುವ ನೀರಿನ ಸಮಸ್ಯೆಯಿದೆ, ರಸ್ತೆಗಳು ಸರಿಯಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣಕ್ಕೆ ಇಲ್ಲಿ ಆದ್ಯತೆನೇ ಇಲ್ಲ. ಸರಕಾರದ ಯಾವುದೇ ಕಾಲೇಜುಗಳು ಇಲ್ಲಿಲ್ಲ. 180 ವಿದ್ಯಾರ್ಥಿಗಳು ಓದಬಹುದಾದಂತಹ ಮಹಿಳಾ ಕಾಲೇಜ್ ಒಂದನ್ನು ಬಿಟ್ಟರೆ, ಇನ್ಯಾವುದೂ ಇಲ್ಲಿಲ್ಲ. ಹಿಂದುಳಿದ ಕ್ಷೇತ್ರಗಳ ಪೈಕಿ ಎಚ್ ಡಿ ಕೋಟೆಯನ್ನು ಮೀರಿಸುವಂತಿದೆ ನರಸಿಂಹರಾಜ ಕ್ಷೇತ್ರ. ನಿರುದ್ಯೋಗ, ಮನೆಯಿಲ್ಲದೇ ಇರುವಂತದ್ದು ಈ ಕ್ಷೇತ್ರದ ಮತ್ತೊಂದು ಸಮಸ್ಯೆಗಳು.

 ನರಸಿಂಹರಾಜ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

ನರಸಿಂಹರಾಜ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

ಪ್ರ: ಸುಮಾರು ಐದು ದಶಕಗಳಿಂದ ಒಂದೇ ಕುಟುಂಬ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ, ಏನೂ ಅಭಿವೃದ್ದಿಯಾಗಲಿಲ್ಲವೇ?
ಸಂದೇಶ್: ಯಾವುದೇ ಅಭಿವೃದ್ದಿ ಆಗಲಿಲ್ಲ, ಸರಕಾರದಿಂದ ಸಿಗಬೇಕಾದಂತಹ ಸವಲತ್ತು, ಅನುದಾನ ಸಿಗಲಿಲ್ಲ. ಈ ಕುಟುಂಬದಿಂದ ಯಾವುದೇ ಸಾರ್ವಜನಿಕರಿಗೆ ಉಪಯೋಗವಾಗಲಿಲ್ಲ.

ಪ್ರ: ನರಸಿಂಹರಾಜ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
ಸಂದೇಶ್: ಈ ಕ್ಷೇತ್ರ, ಬೇರೆ ಕ್ಷೇತ್ರದ ರೀತಿಯಲ್ಲಿ ಬದಲಾವಣೆಯಾಗಬೇಕು. ಸಹಬಾಳ್ವೆ, ಶಾಂತಿಯಿಂದ ಬೇರೆ ಕಡೆ ಹೇಗೆ ಬದುಕುತ್ತಿದ್ದಾರೋ, ಈ ಕ್ಷೇತ್ರವೂ ಅದೇ ರೀತಿ ಆಗಬೇಕು.

 ಹಾಲೀ ಶಾಸಕರಿಂದ ಜನ ನಿರಾಶೆ ಹೊಂದಿದ್ದಾರೆ

ಹಾಲೀ ಶಾಸಕರಿಂದ ಜನ ನಿರಾಶೆ ಹೊಂದಿದ್ದಾರೆ

ಪ್ರ: ಬಿಜೆಪಿ ಸೇರಿದ ಮೇಲೆ ಯಾವ ರೀತಿ ಚುನಾವಣೆ ಭಿನ್ನವಾಗಿದೆ?
ಸಂದೇಶ್: ಎರಡು ಬಾರಿ ನನ್ನ ಸಹೋದರ ಸಂದೇಶ್ ನಾಗರಾಜ್ ನಿಂತಿದ್ದರು. ಕಳೆದ ಬಾರಿ ನಾನು ನಿಂತಿದ್ದೆ, ಪ್ರಾಮಾಣಿಕವಾಗಿ ಹೇಳಬೇಕಾದರೆ, ಹಾಲೀ ಶಾಸಕರಿಂದ ಜನ ನಿರಾಶೆ ಹೊಂದಿದ್ದಾರೆ. ಅವರ ವಿರುದ್ದ ಮತ ಯಾರಿಗೆ ಚಲಾಯಿಸಬೇಕು ಎನ್ನುವುದರ ಬಗ್ಗೆ ಆಲೋಚಿಸಿದ್ದರು.

ಈ ಬಾರಿ ಬಿಜೆಪಿಯ ಪರ ಒಲವು ತೋರಿದ್ದಾರೆ. ಕಾರ್ಯಕರ್ತರು, ಪದಾಧಿಕಾರಿಗಳು ಬಹಳ ಉತ್ಸಾಹದಿಂದ, ಮನೆಮನೆಗೆ ಹೋಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೆಚ್ಚಿನ ಯುವಕರು, ಮಹಿಳೆಯರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

 ಮತವಿಭಜನೆಯಾಗುವುದು ಖಂಡಿತ

ಮತವಿಭಜನೆಯಾಗುವುದು ಖಂಡಿತ

ಪ್ರ: ಅಲ್ಪಸಂಖ್ಯಾತ ಸಮುದಾಯದ ಮೂವರು ಕಣದಲ್ಲಿದ್ದಾರೆ. ಇದು ನಿಮಗೆ ಲಾಭವಾಗಲಿದೆಯೇ?
ಸಂದೇಶ್: ಮತವಿಭಜನೆಯಾಗುವುದು ಖಂಡಿತ. ಯಾಕೆಂದರೆ ಎಸ್ಡಿಪಿಐನವರು ಕಳೆದ ಬಾರಿ ಮೂವತ್ತು ಸಾವಿರ ಮತ ಪಡೆದಿದ್ದರು. ಆದರೆ, ಹೆಚ್ಚಿನ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಇತರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಬಿಜೆಪಿಗೆ ಒಂದು ಚಾನ್ಸ್ ಕೊಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

 ಸಹಾಕರ ಇಲ್ಲದಿದ್ದರೆ ಟಿಕೆಟ್ ಸಿಗುತ್ತಿರಲಿಲ್ಲ

ಸಹಾಕರ ಇಲ್ಲದಿದ್ದರೆ ಟಿಕೆಟ್ ಸಿಗುತ್ತಿರಲಿಲ್ಲ

ಪ್ರ: ರಾಜ್ಯ ಬಿಜೆಪಿ ಮುಖಂಡರ ಸಹಕಾರ ಹೇಗಿದೆ?
ಸಂದೇಶ್: ಖಂಡಿತ ಇದೆ, ಅವರ ಸಹಾಕರ ಇಲ್ಲದಿದ್ದರೆ ಟಿಕೆಟ್ ಸಿಗುತ್ತಿರಲಿಲ್ಲ. ರಾಜ್ಯದ 224ಕ್ಷೇತ್ರಗಳಲ್ಲಿ ನರಸಿಂಹರಾಜದಲ್ಲಿ ಗೆಲ್ಲಬೇಕೆಂದು ಅವರೆಲ್ಲಾ ಆದ್ಯತೆ ನೀಡಿದ್ದಾರೆ. ಬಿಜೆಪಿಯ ಕಾರ್ಯಕರ್ತರು ನನಗಿಂತ ಮೊದಲು ಬಂದು ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರ: ಕ್ಷೇತ್ರದಲ್ಲಿ ಜಯಗಳಿಸಿದರೆ ಮೊದಲ ಆದ್ಯತೆಯ ಕೆಲಸ ಯಾವುದು?
ಸಂದೇಶ್: ಮೂಲಭೂತ ಸೌಕರ್ಯ, ಶಿಕ್ಷಣ, ಆಸ್ಪತ್ರೆ ಇದು ನನ್ನ ಮೊದಲ ಆದ್ಯತೆಯ ಕೆಲಸಗಳು. ಏನೇ ಬೇಕಾದರೂ ಜನ ಸಿಟಿಗೆ ಹೋಗಬೇಕಾಗುತ್ತದೆ. ಕಾನೂನುಬದ್ದವಾಗಿ ಈ ಕ್ಷೇತ್ರಕ್ಕೆ ಸರಕಾರದಿಂದ ಏನೇನು ಸಿಗಬೇಕೋ ಅದೆಲ್ಲದ್ದಕ್ಕೂ ನಾನು ಆದ್ಯತೆ ಕೊಡುತ್ತೇನೆ.

English summary
An exclusive interview with Narasimharaja BJP candidate Sandesh Swamy (S Satish). During his interview Sandesh said, four time Congress party sitting MLA, has done nothing development work in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X