ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನೊಬ್ಬ ಕಾಗೆಯೆಂದು ಪ್ರಕಾಶ್ ರೈ ಒಪ್ಪಿಕೊಂಡಿದ್ದಾರೆ: ಪ್ರತಾಪ್ ಸಿಂಹ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ತಾನೊಬ್ಬ ಕಾಗೆಯೆಂದು ಪ್ರಕಾಶ್ ರೈ ಒಪ್ಪಿಕೊಂಡಿದ್ದಾರೆ: ಪ್ರತಾಪ್ ಸಿಂಹ ಸಂದರ್ಶನ | Oneindia Kannada

ತನ್ನ ನೇರ, ನಿಷ್ಠುರ ನುಡಿಯಿಂದ ಸದಾ ಸುದ್ದಿಯಲ್ಲಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಕ್ಷೇತ್ರದ ವ್ಯಾಪ್ತಿಗೆ ಬರುವ ಅಸೆಂಬ್ಲಿ ಕ್ಷೇತ್ರದಲ್ಲೆಲ್ಲಾ ಸುತ್ತಾಡಿ, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಾದ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ಬಿಜೆಪಿ ಪರ ಮತಯಾಚಿಸುವಲ್ಲಿ ಪ್ರತಾಪ್ ಸಿಂಹ ಬ್ಯೂಸಿಯಾಗಿದ್ದಾರೆ.

ಮೂರು ಕಾಸಿನ ಪ್ರಕಾಶ್ ರೈ, ವಾಚ್ ಕಿತ್ಕೊಂಡ ಸಿಎಂ : ಪ್ರತಾಪ್ ಸಿಂಹಮೂರು ಕಾಸಿನ ಪ್ರಕಾಶ್ ರೈ, ವಾಚ್ ಕಿತ್ಕೊಂಡ ಸಿಎಂ : ಪ್ರತಾಪ್ ಸಿಂಹ

ಮೈಸೂರು ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದು ಎರಡು ಕ್ಷೇತ್ರಗಳಲ್ಲಿ. ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಒಂದು ಸ್ಥಾನದಲ್ಲಿ ಗೆದ್ದಿತ್ತು.

ಈ ಬಾರಿಯ ಚುನಾವಣೆಯಲ್ಲಿ ಮೈಸೂರು ವ್ಯಾಪ್ತಿಯಲ್ಲಿ ಬರುವ ಚಾಮುಂಡೇಶ್ವರಿ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾದರೆ, ಉಳಿದ ಸೀಟುಗಳಲ್ಲೂ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಸಿಖ್ಖರ ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ಕಾಂಗ್ರೆಸ್: ಪ್ರತಾಪ್ ಸಿಂಹಸಿಖ್ಖರ ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ಕಾಂಗ್ರೆಸ್: ಪ್ರತಾಪ್ ಸಿಂಹ

ನನಗೆ ಮರಾಠಿ ಬರುವುದಿಲ್ಲ, ಕ್ಷಮಿಸಿ ಎಂದು ಸಿದ್ದರಾಮಯ್ಯನವರು ಬೆಳಗಾವಿಯಲ್ಲಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಾಪ್ ಸಿಂಹ, ಬೆಳಗಾವಿಯಲ್ಲಿ ಕರ್ನಾಟಕದಲ್ಲೇ ಇರುವುದು. ಈ ರೀತಿಯ ಹೇಳಿಕೆಯನ್ನು ನೀಡಿರುವ ಮುಖ್ಯಮಂತ್ರಿಗಳು ಮೊದಲು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತಾಪ್ ಸಿಂಹ ಪ್ರಸಕ್ತ ಚುನಾವಣೆಯ ಸಂದರ್ಭದಲ್ಲಿ 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ, ಪ್ರಕಾಶ್ ರೈ ವಿರುದ್ದವೂ ಕಿಡಿಕಾರಿದ್ದಾರೆ. ಅವರ ಸಂದರ್ಶನದ ಪೂರ್ಣ ಪಾಠ ಇಂತಿದೆ..

 ಮೈಸೂರು ಸಂಸದ ಪ್ರತಾಪ್ ಸಿಂಹ ಸಂದರ್ಶನ

ಮೈಸೂರು ಸಂಸದ ಪ್ರತಾಪ್ ಸಿಂಹ ಸಂದರ್ಶನ

ಪ್ರ: 2013ರ ಚುನಾವಣೆಗೂ ಈಗಿನ ಚುನಾವಣೆ ಬಿಜೆಪಿಗೆ ಹೇಗೆ ಭಿನ್ನವಾಗಿದೆ?
ಪ್ರತಾಪ್ ಸಿಂಹ: 2013ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಎಷ್ಟೆಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರೂ, ಒಳಜಗಳದಿಂದಾಗಿ, ಮೂರು ಪಕ್ಷಗಳಾಗಿ ವಿಭಜನೆಯಾಗಿತ್ತು. ಆ ವಿಭಜನೆ ಅನ್ನೋದು ನಮಗೆ ಸೋಲನ್ನು ತಂದುಕೊಟ್ಟಿತು.

2018ರಲ್ಲಿ ಮೂರೂ ಪಕ್ಷಗಳು ಒಂದಾಗಿ ಬಿಜೆಪಿ ಪಕ್ಷವಾಗಿದೆ. ನಮ್ಮೆಲ್ಲರ ನಾಯಕರು ಈಗ ಒಟ್ಟಾಗಿದ್ದಾರೆ, ಜೊತೆಗೆ ಯಡಿಯೂರಪ್ಪನವರು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೀಗೆ ತ್ರಿಮೂರ್ತಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾ ಇದ್ದೀವಿ. ನೂರಕ್ಕೆ ನೂರರಷ್ಟು ನಮಗೆ ವಿಶ್ವಾಸವಿದೆ. ನಾವು ಅಧಿಕಾರಕ್ಕೆ ಬರುತ್ತೇವೆ, ಸ್ವಂತ ಶಕ್ತಿಯಿಂದ ಸರಕಾರ ರಚಿಸುತ್ತೇವೆ.

 ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ

ಪ್ರ: ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು?
ಪ್ರತಾಪ್ ಸಿಂಹ: ನನ್ನ ದೃಷ್ಟಿಯಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕನಿಷ್ಟ ಎಂಟು ಸೀಟನ್ನು ಬಿಜೆಪಿ ಗೆಲ್ಲುವ ಸುವರ್ಣಾವಕಾಶವಿದೆ, ನಾನು ವಾಸ್ತವದ ಮಾತನ್ನು ಆಡುತ್ತಿದ್ದೇನೆ.

 ಬಿಎಸ್ವೈ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ.

ಬಿಎಸ್ವೈ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ.

ಪ್ರ: ವರುಣಾ ಕ್ಷೇತ್ರದಲ್ಲಿನ ಟಿಕೆಟ್ ಗೊಂದಲ ಬಿಜೆಪಿಗೆ ಮುಳುವಾಗಿ ಪರಿಣಮಿಸುತ್ತಾ?
ಪ್ರತಾಪ್ ಸಿಂಹ: ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ. ಅದಕ್ಕೆ ಪೂರಕವಾಗಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು, ಹಿತೈಷಿಗಳು ಒಟ್ಟಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಸಣ್ಣಪುಟ್ಟ ವ್ಯತ್ಯಾಸಗಳಾಗಿದ್ದರೆ ಅದಕ್ಕೆ ಯಡಿಯೂರಪ್ಪನವರೇ ಅದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗಾಗಿ, ಈ ವಿಚಾರ ಏನಿದೆಯೋ ಅದು ಈಗ ಮುಕ್ತಾಯಗೊಂಡಿದೆ.

 ಬಿಜೆಪಿ ಮತ್ತು ಮೋದಿ ವಿರುದ್ದದ ವಾಗ್ದಾಳಿ

ಬಿಜೆಪಿ ಮತ್ತು ಮೋದಿ ವಿರುದ್ದದ ವಾಗ್ದಾಳಿ

ಪ್ರ: ಪ್ರಕಾಶ್ ರೈ ಅವರ ಬಿಜೆಪಿ ಮತ್ತು ಮೋದಿ ವಿರುದ್ದದ ವಾಗ್ದಾಳಿ ಮುಂದುವರಿದಿದೆಯಲ್ಲಾ?
ಪ್ರತಾಪ್ ಸಿಂಹ: ಪ್ರಕಾಶ್ ರೈ ಅವರು ಹಿಂದೊಮ್ಮೆ ಹೇಳಿದ್ದರು. ಪ್ರಾಣಿಗಳು ಕೆಲವೊಮ್ಮೆ ಮೌನಕ್ಕೆ ಶರಣಾಗುತ್ತಾರೆ ಎಂದು. ಕಾಗೆಗಳು ಮಾತ್ರ ಪ್ರತಿನಿತ್ಯ ಕಾಕಾ ಎನ್ನುವುದು ಎಂದು. ಪ್ರಕಾಶ್ ರೈ ತಾನೊಬ್ಬ ಕಾಗೆಯೆಂದು ಒಪ್ಪಿಕೊಂಡಿದ್ದಾರೆ. ಕಾಗೆ ಬಂದು ಕಾಕಾ ಎಂದರೆ ಜನ ಏನು ಮಾಡುತ್ತಾರೆ, ಕಲ್ಲು ಹೊಡೆಯುತ್ತಾರೆ. ಕರ್ನಾಟಕದ ಜನತೆ ಕೂಡಾ ಮೇ ಹನ್ನೆರಡರಂದು ಈ ಕಾಗೆಗಳನ್ನು ಓಡಿಸುತ್ತಾರೆ.

 ಶೇ.80ರಷ್ಟು ಕಮಿಷನ್ ಪಡೆಯುವ ಮೋದಿ

ಶೇ.80ರಷ್ಟು ಕಮಿಷನ್ ಪಡೆಯುವ ಮೋದಿ

ಪ್ರ: ಜಿಗ್ನೇಶ್ ಮೆವಾನಿ ಮೋದಿಯವರು ಶೇ.80ರಷ್ಟು ಕಮಿಷನ್ ಪಡೆಯುತ್ತಾರೆ ಅಂದಿದ್ದಾರಲ್ಲಾ?
ಪ್ರತಾಪ್ ಸಿಂಹ: ಜಿಗ್ನೇಶ್ ಮೆವಾನಿ ಎಂದರೆ ಯಾರು, ಅವನೊಬ್ಬ ಮನುಷ್ಯನಾ ಅಥವಾ ಏನಾದರೂ ವಸ್ತುನಾ? ಕರ್ನಾಟಕಕ್ಕೆ ಜಿಗ್ನೇಶ್ ಮೆವಾನಿ ಅಪ್ರಸ್ತುತ. ಆತನ ಬಗ್ಗೆ ನಾನೇನು ಕಾಮೆಂಟ್ ಮಾಡುವ ಅವಶ್ಯಕತೆಯಿಲ್ಲ.

 ಜಿಲ್ಲೆಯ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

ಜಿಲ್ಲೆಯ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

ಪ್ರ: ಮೈಸೂರು ಕ್ಷೇತ್ರದ ಜನತೆಯಲ್ಲಿ ನಿಮ್ಮ ಮನವಿ?
ಪ್ರತಾಪ್ ಸಿಂಹ: ಮೈಸೂರು ಜನರಿಗೆ ನಾನು ಮನವಿ ಮಾಡಿಕೊಳ್ಳುವಂತದ್ದು ಏನೂ ಇಲ್ಲ. ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯನವರ ಸರಕಾರವನ್ನು ಜನ ನೋಡಿದ್ದಾರೆ. ಜನರಿಗೆ ಮೋದಿ, ಶಾ ಮತ್ತು ಯಡಿಯೂರಪ್ಪನವರ ಮೇಲೆ, ಅಪಾರ ವಿಶ್ವಾಸವಿದೆ ಎನ್ನುವುದು ನಮಗೆ ಗೊತ್ತಿದೆ. ಮೇ ಹನ್ನೆರಡರಂದು ಯಾವುದೇ ಕೆಲಸ ಕಾರ್ಯಗಳು ಇದ್ದರೂ, ಬದಿಗೊತ್ತಿ, ಮತಗಟ್ಟೆಗೆ ಬಂದು ಕಮಲದ ಗುರುತಿಗೆ ವೋಟ್ ಮಾಡಿ.

English summary
An exclusive interview with Mysuru MP from BJP Pratap Simha. During his interview with Oneindia, Pratap Simha said, BJP government will come back to the power for surely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X