ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಮುಜರಾಯಿ ಖಾತೆ ಸಾಕಪ್ಪಾ: ಕೃಷ್ಣಯ್ಯ ಶೆಟ್ಟಿ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ನನಗೆ ಮುಜರಾಯಿ ಖಾತೆ ಸಾಕಪ್ಪಾ: ಕೃಷ್ಣಯ್ಯ ಶೆಟ್ಟಿ ಸಂದರ್ಶನ | Oneindia Kannada

ಈ ಹಿಂದೆ ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ಮುಜರಾಯಿ ಸಚಿವರಾಗಿದ್ದಂತಹ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಈ ಬಾರಿ ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿ ಟಿಕೆಟ್ ಸಿಗದೇ ಇದ್ದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಶೆಟ್ರು ಕಣಕ್ಕಿಳಿದು, ಸೋಲು ಅನುಭವಿಸಿದ್ದರು.

ಟಿಕೆಟ್ ವಿಚಾರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೃಷ್ಣಯ್ಯ ಶೆಟ್ಟಿಯವರು ಬಂದಷ್ಟೇ ವೇಗದಲ್ಲಿ ಮತ್ತೆ ಬಿಜೆಪಿ ಗೂಡು ಸೇರಿಕೊಂಡಿದ್ದರು. ಕಳೆದ ಚುನಾವಣೆಯೇ ಬೇರೆ, ಈ ಬಾರಿಯ ಚುನಾವಣೆಯೇ ಬೇರೆ ಎನ್ನುವ ಶೆಟ್ರು ಮಿನಿಮಮ್ ಐವತ್ತು ಸಾವಿರ ಲೀಡ್ ನಿಂದ ಜಯಭೇರಿ ಬಾರಿಸುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಮಾಲೂರಿನ ಯುವ ಜೆಡಿಎಸ್ ಶಾಸಕ ಮಂಜುನಾಥ ಗೌಡ ಸಂದರ್ಶನಮಾಲೂರಿನ ಯುವ ಜೆಡಿಎಸ್ ಶಾಸಕ ಮಂಜುನಾಥ ಗೌಡ ಸಂದರ್ಶನ

ಕ್ಷೇತ್ರದ ಮತದಾರರಲ್ಲಿ ಒಳ್ಲೆಯ ಹೆಸರನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿರುವ ಶೆಟ್ರು, ಬಿರುಸಿನ ಪ್ರಚಾರದ ನಡುವೆ ತುಸು ಬಿಡುವು ಮಾಡಿಕೊಂಡು, 'ಒನ್ ಇಂಡಿಯಾ' ಗೆ ಸಂದರ್ಶನ ನೀಡಿದ್ದಾರೆ. ಮುಂದೆ ಓದಿ..

ಪ್ರ: ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೀರಿ, ಈ ಬಾರಿ ಮಾಲೂರಿನ ಚುನಾವಣಾ ಆಖಾಡ ಯಾವ ರೀತಿ ಇದೆ?
ಕೃಷ್ಣಯ್ಯ ಶೆಟ್ಟಿ: ಕಳೆದ ಬಾರಿ ಬಿಜೆಪಿಯಿಂದ ಯಾಕೆ ಸ್ಪರ್ಧೆ ಮಾಡಿಲ್ಲ ಎನ್ನುವುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಈ ಬಾರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಸಜ್ಜಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಸೀಟು ಕೊಟ್ಟ ಪರಿಣಾಮ ನಾನು ಚುನಾವಣೆಯಲ್ಲಿ ನಿಂತಿದ್ದೇನೆ.

ಬಿಜೆಪಿ ಎಷ್ಟು ಸೀಟು ಗೆಲ್ಲಬಹುದು?

ಬಿಜೆಪಿ ಎಷ್ಟು ಸೀಟು ಗೆಲ್ಲಬಹುದು?

ಪ್ರ: ಕಳೆದ ಬಾರಿ 39ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ರಿ. ಈ ಬಾರಿ ನಿಮ್ಮ ನೇರ ಪ್ರತಿಸ್ಪರ್ಧಿ ಯಾರು?
ಕೃಷ್ಣಯ್ಯ ಶೆಟ್ಟಿ: ನನಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಇಬ್ಬರೂ ನೇರ ಸ್ಪರ್ಧಿನೇ, ಆದರೆ ಇವೆಲ್ಲವನ್ನೂ ಮೀರಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎನ್ನುವ ನಂಬಿಕೆ ನನಗಿದೆ.

ಪ್ರ: ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ನಿಮ್ಮ ರಾಜಕೀಯ ಲೆಕ್ಕಾಚಾರದ ಪ್ರಕಾರ, ಬಿಜೆಪಿ ಎಷ್ಟು ಸೀಟು ಗೆಲ್ಲಬಹುದು?
ಕೃಷ್ಣಯ್ಯ ಶೆಟ್ಟಿ: ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಖಚಿತವಾಗಿ ನಾಲ್ಕು ಸೀಟು ಗೆಲ್ಲುತ್ತೇವೆ. ಮಾಲೂರು, ಕೆಜಿಎಫ್, ಬಂಗಾರಪೇಟೆ ಮತ್ತು ಕೋಲಾರ. ಇನ್ನು ಉಳಿದ ಮೂರು ಕಡೆ ಸರಿಯಾದ ಮಾಹಿತಿ ಬರುತ್ತಿಲ್ಲ.

ಮೋದಿ, ಶಾ ಬಲದಿಂದ ಮಿಷನ್ 150 ಸಾಧ್ಯವಾಗುತ್ತಾ?

ಮೋದಿ, ಶಾ ಬಲದಿಂದ ಮಿಷನ್ 150 ಸಾಧ್ಯವಾಗುತ್ತಾ?

ಪ್ರ: ಕಳೆದ ಬಾರಿ ಬಿಎಸ್ವೈ ಇಲ್ಲದ ಬಿಜೆಪಿ. ಈ ಬಾರಿ ಯಡಿಯೂರಪ್ಪ, ಮೋದಿ, ಶಾ ಬಲದಿಂದ ಮಿಷನ್ 150 ಸಾಧ್ಯವಾಗುತ್ತಾ?
ಕೃಷ್ಣಯ್ಯ ಶೆಟ್ಟಿ: ನೂರಕ್ಕೆ ನೂರು ನಮ್ಮ ಗುರಿ ಸಾಧಿಸುತ್ತೇವೆ. ಮೋದಿ ಸರಕಾರ ಕೊಟ್ಟಂತಹ ಕೊಡುಗೆ, ಇಡೀ ಪ್ರಪಂಚವೇ ಮೆಚ್ಚುವಂತಹ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎನ್ನುವುದು ಅರಿವು ಅವರಿಗಿಲ್ಲ, ಹೇಗೆ ಸೋತೆವು ಎನ್ನುವ ಲೆಕ್ಕಾಚಾರವೂ ನಮಗಿಲ್ಲ.

ಹತ್ತು ವರ್ಷ ದೇಶದಲ್ಲಿ ಅಧಿಕಾರವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ ನಮ್ಮ ಅಜಾತಶತ್ರು ಮೋದಿಯವರು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದರು. ಅಂದಿನಿಂದ ಇಂದಿನವರೆಗೆ ಕಳಂಕರಹಿತ ಆಡಳಿತವನ್ನು ನೀಡಿದ್ದಾರೆ. ಮೋದಿಯವರ ಅಭಿವೃದ್ದಿಯ ಸ್ಪೀಡಿಗೆ ವಿಶ್ವವೇ ಮೆಚ್ಚಿದೆ.

ಮೋದಿವರನ್ನು ಹೊಗಳದೇ ಇರುವ ವ್ಯಕ್ತಿಯೇ ಇಲ್ಲ. ಮೋದಿಯವರ ನೆರಳಿನಲ್ಲಿ 150 ಸೀಟು ಗೆಲ್ಲುವ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತೆ. ಜೊತೆಗೆ, ಯಡಿಯೂರಪ್ಪನವರ ಅಂದಿನ ಆಡಳಿತದ ಅವಧಿಯಲ್ಲಿ ಅವರು ನೀಡಿದ ಕೊಡುಗೆ. ಸಮಯ, ಸಂದರ್ಭ ಬೇರೆ ಬೇರೆ ಆಗಿರಬಹುದು, ಆದರೆ ಬಿಎಸ್ವೈ ಕೊಡುಗೆಯನ್ನು ಜನ ಮರೆತಿಲ್ಲ.

ಎಲ್ಲವೂ ದಾಖಲೆ ಪ್ರಮಾಣದಲ್ಲಿ ಅಭಿವೃದ್ದಿ ಕೆಲಸಗಳು ಆಗಿದ್ದವು

ಎಲ್ಲವೂ ದಾಖಲೆ ಪ್ರಮಾಣದಲ್ಲಿ ಅಭಿವೃದ್ದಿ ಕೆಲಸಗಳು ಆಗಿದ್ದವು

ಪ್ರ: ಕಳೆದ ಐದು ವರ್ಷಗಳಲ್ಲಿ ಮಾಲೂರು ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ದಿ ಏನೂ ಆಗಿಲ್ವಾ?
ಕೃಷ್ಣಯ್ಯ ಶೆಟ್ಟಿ: ಹೇಳಿಕೊಳ್ಳುವಂತಹ ಅಲ್ಲಾ.. ಅಭಿವೃದ್ದಿನೇ ಆಗಿಲ್ಲ. ಹತ್ತು ವರ್ಷಗಳ ಹಿಂದೆ ಬಿಎಸ್ವೈ, ಸದಾನಂದ ಗೌಡ ಮತ್ತು ಶೆಟ್ಟರ್ ಸರಕಾರ ನೀಡಿದ ಅನುದಾನ ಮೊನ್ನೆ ತನಕ ಖರ್ಚಾಯಿತು. 24ಗಂಟೆ ವಿದ್ಯುತ್, ರಸ್ತೆ ನಿರ್ಮಾಣ ಎಲ್ಲವೂ ದಾಖಲೆ ಪ್ರಮಾಣದಲ್ಲಿ ಅಂದು ಆದಂತಹ ಅಭಿವೃದ್ದಿ ಕೆಲಸಗಳು.

ಇದನ್ನು ಸರಿದೂಗಿಸುವ ಒಂದೇ ಒಂದು ಕೆಲಸಗಳು ಕಳೆದ ಐದು ವರ್ಷಗಳಲ್ಲಿ ನಡೆದಿಲ್ಲ. ಮಾತಾಡಿದ್ರೆ, ಸ್ಟೇಡಿಯಂ, ದೇವಸ್ಥಾನ ಕಟ್ಟಿದ್ದೇವೆ ಎಂದು ಎರಡೇ ಎರಡು ಕೆಲಸಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸರಕಾರದ ಅನುದಾನಗಳನ್ನು ತಂದು ಅಭಿವೃದ್ದಿ ಮಾಡಬೇಕಾಗಿರುವುದು ಜನಪ್ರತಿನಿಧಿಗಳ ಕೆಲಸ.

ನನಗೆ ಬೇಕಾಗಿರುವುದು ಮುಜರಾಯಿ ಖಾತೆ

ನನಗೆ ಬೇಕಾಗಿರುವುದು ಮುಜರಾಯಿ ಖಾತೆ

ಪ್ರ: ಬಿಜೆಪಿ ಅಧಿಕಾರಕ್ಕೆ ಬಂದರೆ, ನೀವು ಸಚಿವ ಸ್ಥಾನದ ಆಕಾಂಕ್ಷಿನಾ?
ಕೃಷ್ಣಯ್ಯ ಶೆಟ್ಟಿ: ಖಂಡಿತ ನನಗೆ ಅಂತಹ ಆಸೆಯೇನೂ ಇಲ್ಲ. ಆದರೆ, ಕೊಟ್ಟರೆ ಬೇಡ ಅನ್ನೋದಕ್ಕೆ ಆಗುತ್ತಾ? ಅದು ರಾಜ್ಯ ಮತ್ತು ಕೇಂದ್ರದ ಮುಖಂಡರ ನಿರ್ಧಾರ. ಲೀಡರ್ಸ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ, ಅದಕ್ಕೆ ನಾನು ಬದ್ದ. ನನಗೆ ಬೇಕಾಗಿರುವುದು ಮುಜರಾಯಿ ಖಾತೆ, ಅದು ಕೊಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ನನಗೆ ಬೇರೊಂದು ಇಲ್ಲ.

ನನ್ನನ್ನು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ

ನನ್ನನ್ನು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ

ಪ್ರ: ಮಾಲೂರು ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
ಕೃಷ್ಣಯ್ಯ ಶೆಟ್ಟಿ: ಹಿಂದೆ ನಾನು ಮಾಡಿದಂತಹ ಅಭಿವೃದ್ದಿ ಸಾಧನೆಗಳನ್ನು ನೆನಪಿಸಿಕೊಂಡು ನನಗೆ ಇನ್ನೊಂದು ಅವಕಾಶವನ್ನು ನೀಡಿ. ಭಗವಂತ ಮೆಚ್ಚುವ ರೀತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ. ದಯವಿಟ್ಟು ನನ್ನನ್ನು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ ಎಂದು ಕ್ಷೇತ್ರದ ಮತದಾರರಲ್ಲಿ ನಾನು ಮನವಿ ಮಾಡುತ್ತೇನೆ.

English summary
An exclusive interview with Malur BJP candidate and former Muzrai minister in B S Yeddyurappa government S N Krishnaiah Setty. During his interview with Oneindia, Krishnaiah Setty very confident in winning the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X