ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಸಿ ತಮ್ಮಣ್ಣ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಸಿ ತಮ್ಮಣ್ಣ ಸಂದರ್ಶನ | Oneindia Kannada

ಜಿದ್ದಾಜಿದ್ದಿನ ರಾಜಕೀಯ ಮೇಲಾಟಕ್ಕೆ ಹೆಸರಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಮದ್ದೂರು ಕೂಡಾ ಒಂದು. ಬಿಜೆಪಿ ಅಭ್ಯರ್ಥಿ ಸತೀಶ್ ಅವರು ಚುನಾವಣಾ ಕಣದಲ್ಲಿದ್ದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಪೈಪೋಟಿ.

ಮಳವಳ್ಳಿ ಮೀಸಲು ಕ್ಷೇತ್ರವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸಾಮಾನ್ಯ ಕ್ಷೇತ್ರಗಳು. ಜೆಡಿಎಸ್ ನಿಂದ ದೊಡ್ದಗೌಡ್ರ ಬೀಗರಾದ ಡಿ ಸಿ ತಮ್ಮಣ್ಣ ಮತ್ತು ಕಾಂಗ್ರೆಸ್ಸಿನಿಂದ ಮಾದೇಗೌಡರ ಪುತ್ರ ಜಿ ಎಂ ಮಧು ಕಣದಲ್ಲಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ತಮ್ಮಣ್ಣ ಮತ್ತು ಮಧು ಅವರ ನಡುವೆ ಆರೋಪ, ಪ್ರತ್ಯಾರೋಪಕ್ಕೇನೂ ಬರವಿಲ್ಲ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ವಿರುದ್ದ ಭರ್ಜರಿ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ತಮ್ಮಣ್ಣ, ಈ ಬಾರಿಯೂ ಜನತೆ ನನ್ನ ಮೇಲೆ ಆಶೀರ್ವದಿಸಲಿದ್ದಾನೆ ಎನ್ನುವ ಭರವಸೆಯಲ್ಲಿದ್ದಾರೆ.v

ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಕಲ್ಪನಾ ಸಿದ್ದರಾಜು ಅವರನ್ನು ಸಮಾಧಾನ ಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಕ್ಷೇತ್ರದ ಚಿತ್ರಣ ಮೇಲ್ನೋಟಕ್ಕೆ ತುಸು 'ತೆನೆಹೊತ್ತ ಮಹಿಳೆ'ಯ ಪರವಾಗಿ ಇದ್ದಂತಿದೆ.

ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಮ್ಮಣ್ಣ ಅವರು ಮತ್ತೆ ತಮ್ಮ ರಾಜಕೀಯ ಭವಿಷ್ಯವನ್ನು ಮತದಾರರ ಮುಂದಿಟ್ಟಿದ್ದಾರೆ. ಬಿರುಸಿನ ಪ್ರಚಾರದ ನಡುವೆ ಜೆಡಿಎಸ್ ಅಭ್ಯರ್ಥಿ ತಮ್ಮಣ್ಣ, 'ಒನ್ ಇಂಡಿಯಾ' ಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದ ಪ್ರಮುಖಾಂಶ ಮುಂದೆ ಓದಿ.

ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ

ಕ್ಷೇತ್ರದ ಅಭಿವೃದ್ದಿ ಬಗ್ಗೆ ಒಂದೆರಡು ಮಾತನ್ನು ಹೇಳಿ

ಕ್ಷೇತ್ರದ ಅಭಿವೃದ್ದಿ ಬಗ್ಗೆ ಒಂದೆರಡು ಮಾತನ್ನು ಹೇಳಿ

ಪ್ರ: ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರಿ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಒಂದೆರಡು ಮಾತನ್ನು ಹೇಳಿ
ತಮ್ಮಣ್ಣ: ಮದ್ದೂರು ಕ್ಷೇತ್ರದಲ್ಲಿ ನಾನು ಸರ್ವಾಂಗೀಣ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ. ಯಾವುದೇ ಒಂದು ವಿಚಾರವನ್ನು ಇಟ್ಟುಕೊಂಡು ಕೆಲಸ ಮಾಡಿಲ್ಲ. ಆರೋಗ್ಯ, ಶಿಕ್ಷಣ, ನೀರಾವರಿ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಮಾಡಿದ್ದೇನೆ.

ತಾನೊಬ್ಬ ಕಾಗೆಯೆಂದು ಪ್ರಕಾಶ್ ರೈ ಒಪ್ಪಿಕೊಂಡಿದ್ದಾರೆ: ಪ್ರತಾಪ್ ಸಿಂಹ ಸಂದರ್ಶನ ತಾನೊಬ್ಬ ಕಾಗೆಯೆಂದು ಪ್ರಕಾಶ್ ರೈ ಒಪ್ಪಿಕೊಂಡಿದ್ದಾರೆ: ಪ್ರತಾಪ್ ಸಿಂಹ ಸಂದರ್ಶನ

ನೀವು ಈ ಸ್ಥಾನದಲ್ಲಿ ಇರಬೇಕಾದರೆ ಅದಕ್ಕೆ ನಮ್ಮದೂ ಕೊಡುಗೆಯಿದೆ

ನೀವು ಈ ಸ್ಥಾನದಲ್ಲಿ ಇರಬೇಕಾದರೆ ಅದಕ್ಕೆ ನಮ್ಮದೂ ಕೊಡುಗೆಯಿದೆ

ಪ್ರ: ಸರಕಾರದಿಂದ ಕ್ಷೇತ್ರಕ್ಕೆ ಅನುದಾನ ಸರಿಯಾಗಿ ಬರುತ್ತಿದೆಯಾ?
ತಮ್ಮಣ್ಣ: 1,400 ಕೋಟಿಯಷ್ಟು ಅನುದಾನವನ್ನು ನಾನು ತಂದಿದ್ದೇನೆ. ಆದರೆ ನೇರವಾಗಿ ಸಿದ್ದರಾಮಯ್ಯನವರಿಂದ ನಮಗೆ ಅನುಕೂಲವಾಗಿಲ್ಲ. ಅನೇಕ ಜನಪರವಾದಂತಹ ಯೋಜನೆಗಳು ಆಗಬೇಕಾಗಿತ್ತು. ಅದಕ್ಕೆ ನಿರೀಕ್ಷಿತ ಮಟ್ಟದಲ್ಲಿ ನಮಗೆ ಸರಕಾರದಿಂದ ಪ್ರೋತ್ಸಾಹ ಸಿಗಲಿಲ್ಲ.

ಮುಖ್ಯಮಂತ್ರಿಗಳಿಗೆ ನಾನು ನೇರವಾಗಿ ಹೇಳಿದ್ದೆ, ನಾನು ವಿರೋಧ ಪಕ್ಷದಲ್ಲಿದ್ದರೂ, ನಾನು ನಿಮ್ಮ ವಿರೋಧಿಯಲ್ಲ. ನೀವು ಪ್ರಥಮ ಬಾರಿಗೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದಾಗ, ನಿಮ್ಮ ಗೆಲುವಿಗೆ ನಾನೂ ಕಾರಣನಾಗಿದ್ದೆ. ನೀವು ಈ ಸ್ಥಾನದಲ್ಲಿ ಇರಬೇಕಾದರೆ ಅದಕ್ಕೆ ನಮ್ಮದೂ ಕೊಡುಗೆಯಿದೆ. ನಮ್ಮ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡಿ ಎಂದು ಮನವಿ ಮಾಡಿದ್ದೆ.

ಎಲ್ಲಾ ಕಡೆ ಸ್ಪಂದನೆ ಚೆನ್ನಾಗಿತ್ತು

ಎಲ್ಲಾ ಕಡೆ ಸ್ಪಂದನೆ ಚೆನ್ನಾಗಿತ್ತು

ಪ್ರ: ಮಾರ್ಚ್ 29ರಂದು ನಡೆದ ಕುಮಾರಪರ್ವಕ್ಕೆ ಜನಸ್ಪಂದನೆ ಹೇಗಿತ್ತು?
ತಮ್ಮಣ್ಣ: ಜನಸ್ಪಂದನೆ ಅತ್ಯುತ್ತಮವಾಗಿತ್ತು. ಇಡೀ ರಾಜ್ಯದಲ್ಲಿ ಮಾಡಿದ ಬೈಕ್ ರ‍್ಯಾಲಿಯಲ್ಲಿ ಸುಮಾರು ಹದಿನಾರು ಸಾವಿರ ಯುವಕರು ಭಾಗವಹಿಸಿದ್ದರು. ಮೂರು ಕಿಲೋಮೀಟರ್ ದೂರ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಎಲ್ಲಾ ಕಡೆ ಸ್ಪಂದನೆ ಚೆನ್ನಾಗಿತ್ತು.

ಪ್ರ: 2013ರ ಚುನಾವಣೆಗೆ ಹೋಲಿಸಿದರೆ, ಈ ಚುನಾವಣೆ ಯಾವ ರೀತಿ ಭಿನ್ನವಾಗಿದೆ?
ತಮ್ಮಣ್ಣ: ಈಗಿನ ಚುನಾವಣೆ ಹೋದ ಚುನಾವಣೆಗಿಂತ ಪ್ರೋತ್ಸಾಹದಾಯಕವಾಗಿದೆ. ಪ್ರಚಾರಕ್ಕೆ ಹೋದಲೆಲ್ಲಾ ಜನ ವಿಶ್ವಾಸದಿಂದ ಹೇಳುತಿದ್ದಾರೆ, ನಿಮ್ಮನ್ನು ಈಗಾಗಲೇ ಗೆಲ್ಲಿಸಿದ್ದೇವೆ, ನಿರಾಳವಾಗಿರಿ ಎಂದು.

ಮಂಡ್ಯ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರವನ್ನು ಜೆಡಿಎಸ್ ಗೆಲ್ಲಬಹುದು?

ಮಂಡ್ಯ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರವನ್ನು ಜೆಡಿಎಸ್ ಗೆಲ್ಲಬಹುದು?

ಪ್ರ: ನಿಮ್ಮ ರಾಜಕೀಯ ಲೆಕ್ಕಾಚಾರದ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರವನ್ನು ಜೆಡಿಎಸ್ ಗೆಲ್ಲಬಹುದು?
ತಮ್ಮಣ್ಣ: ಏಳಕ್ಕೆ ಏಳು ಕ್ಷೇತ್ರವನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮಗಿದೆ.

ಪ್ರ: ಎರಡನೇ ಶನಿವಾರ ಚುನಾವಣೆ ಇರುವುದರಿಂದ ಮತದಾನದ ಪ್ರಮಾಣ ಕಮ್ಮಿಯಾಗಬಹುದಾ?
ತಮ್ಮಣ್ಣ: ಜನರಲ್ಲಿ ಉತ್ಸಾಹವಿದೆ, ಜನ ಬಂದು ವೋಟ್ ಮಾಡುತ್ತಾರೆ.

ಕುಮಾರಪರ್ವಕ್ಕೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ

ಕುಮಾರಪರ್ವಕ್ಕೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ

ಪ್ರ: ಮದ್ದೂರು ಕ್ಷೇತ್ರದ ಜನತೆಗೆ ನಿಮ್ಮ ಮನವಿ?
ತಮ್ಮಣ್ಣ: ಇಡೀ ರಾಜ್ಯ ಕುಮಾರಸ್ವಾಮಿಯವರು ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲೂ ಜನ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರಿಗೆ ಹೇಳುತ್ತಿದ್ದಾರೆ. ಕುಮಾರಪರ್ವಕ್ಕೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ.

ದಕ್ಷಿಣ ಭಾಗದಲ್ಲೂ ನಿರಾಂತಕವಾಗಿ ನೀವು ಪ್ರಚಾರ ಮಾಡಿ, ನಾವಿದ್ದೇವೆ ಎಂದು ಜನತೆ ಕುಮಾರಸ್ವಾಮಿಯವರನ್ನು ಆಶೀರ್ವದಿಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎನ್ನುವ ಭರವಸೆಯನ್ನು ಜನ ನೀಡುತ್ತಿದ್ದಾರೆ.

English summary
An exclusive interview with Maddur (Mandya district) JDS candidate DC Thammanna. In his interview Thammanna said, we are very confident of winning all the seven seats in Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X