• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಂತಾಮಣಿಯ ಜನಪ್ರಿಯ ಪಕ್ಷೇತರ ಅಭ್ಯರ್ಥಿ ಡಾ. ಎಂ ಸಿ ಸುಧಾಕರ್ ಸಂದರ್ಶನ

By ಬಾಲರಾಜ್ ತಂತ್ರಿ
|
   ಚಿಂತಾಮಣಿಯ ಜನಪ್ರಿಯ ಪಕ್ಷೇತರ ಅಭ್ಯರ್ಥಿ ಡಾ. ಎಂ ಸಿ ಸುಧಾಕರ್ ಸಂದರ್ಶನ | Oneindia Kannada

   ಕಳೆದ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಂ ಕೃಷ್ಣರೆಡ್ಡಿಯವರ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಎಂ ಸಿ ಸುಧಾಕರ್ ಕೇವಲ 1,696 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

   2004 ಮತ್ತು 2008ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಗೆದ್ದು ಬಂದಿದ್ದ ಸುಧಾಕರ್, ನಂತರ ದಿನಗಳಲ್ಲಿ ಪಕ್ಷದ ಮುಖಂಡರ ಜೊತೆಗಿನ ಮನಸ್ತಾಪದಿಂದ ಪಕ್ಷದಿಂದ ಹೊರನಡೆದಿದ್ದರು.

   ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಸಂದರ್ಶನ

   ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಚಿಂತಾಮಣಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಧಾಕರ್, ಹಾಲೀ ಚುನಾವಣೆ, ಕಳೆದ ಚುನಾವಣೆಯಲ್ಲಿ ಸೋಲಲು ಕಾರಣವಾದ ಅಂಶಗಳು ಮುಂತಾದವುದರ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನ, ಮುಂದಿದೆ..

   ಪ್ರ: ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದೀರಿ. ಈ ಬಾರಿ ಚಿಂತಾಮಣಿಯ ರಾಜಕೀಯ ಹೇಗಿದೆ?

   ಎಂ ಸಿ ಸುಧಾಕರ್: ಕಳೆದ ಚುನಾವಣೆಯಲ್ಲಿ 1,696 ಮತಗಳ ಅಂತರದಿಂದ ಸೋಲು ಕಂಡೆ. ಶೇ. ಒಂದಕ್ಕಿಂತ ಕಮ್ಮಿ. ಸಮಾಜಸೇವೆಯ ರೂಪದಲ್ಲಿ ಬಂದ ಕ್ಷೇತ್ರಕ್ಕೆ ಸಂಬಂಧ ಇಲ್ಲದೇ ಇರುವ ವ್ಯಕ್ತಿಯೊಬ್ಬರು ಈ ಕ್ಷೇತ್ರಕ್ಕೆ ಪ್ರವೇಶಿಸಿದರು.

   ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಸಮಾಜಸೇವೆಯ ಜೊತೆ ರಾಜಕಾರಣ ಪ್ರವೇಶ ಮಾಡಿದ್ದರಿಂದ ಜೊತೆಗೆ ಹಣದ ಪ್ರಭಾವ, ಎರಡು ಕುಟುಂಬದ ನಡುವಿನ ಹೋರಾಟ, ಮಾಜಿ ಗೃಹಸಚಿವ ಕೃಷ್ಣಾರೆಡ್ಡಿಯವರ ಅಕಾಲಿಕ ಮರಣ, ಇದೆಲ್ಲದ ನಂತರ ಜೆ ಕೆ ಕೃಷ್ಣಾರೆಡ್ಡಿಯವರು ಇಲ್ಲಿ ಕಣಕ್ಕಿಳಿದಿದ್ದರು. ಚುನಾವಣೆಯ ವೇಳೆ ಆಮಿಷಗಳನ್ನು ಒಡ್ಡಿದರು. ಒಂದು ಜಾತಿಯವರನ್ನು ನನ್ನ ವಿರುದ್ದ ಎತ್ತಿಕಟ್ಟಿ ನನ್ನಿಂದ ದೂರವಾಗುವಂತೆ ಮಾಡಿದರು.

   ಚಿಂತಾಮಣಿಯ ಪಕ್ಷೇತರ ಅಭ್ಯರ್ಥಿ ಡಾ. ಎಂ ಸಿ ಸುಧಾಕರ್ ಸಂದರ್ಶನ

   ಚಿಂತಾಮಣಿಯ ಪಕ್ಷೇತರ ಅಭ್ಯರ್ಥಿ ಡಾ. ಎಂ ಸಿ ಸುಧಾಕರ್ ಸಂದರ್ಶನ

   ಪ್ರ: ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ನಡೆದಿಲ್ವಾ?

   ಎಂ ಸಿ ಸುಧಾಕರ್: ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಕಳೆದ ಬಾರಿ ವಿಜೇತರಾದವರು ಸಮಾಜ ಸೇವೆಯಲ್ಲಿ ತೊಡಗಿದ್ದರು, ಜೊತೆಗೆ ಸರಕಾರ ಹಣ ನೀಡದಿದ್ದರೂ ಅವರ ಸ್ವಂತ ದುಡ್ಡಿನಿಂದ ಅಭಿವೃದ್ದಿ ಕೆಲಸ ನಡೆಸುತ್ತಾರೆಂದು ಜನರಲ್ಲಿ ಬಿಂಬಿತರಾಗಿದ್ದವರು.

   ಆದರೆ ಅವರು ಬರೀ ಶಾಸಕರಾಗಿ ಇರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಸರಕಾರದಿಂದ ಸೀಮಿತವಾಗಿ ಬರುವಂತಹ ಅನುದಾನಕ್ಕೆ ತಕ್ಕಂತೆ ಅವರು ಕೆಲಸ ಮಾಡಿದ್ದಾರೆ. ವಿಶೇಷವಾಗಿ ಇಲ್ಲಿ ಆಗಬೇಕಾಗಿದ್ದ ಕೆಲಸಕ್ಕೆ ಅವರು ಸ್ಪಂದನೆ ಮಾಡಿಲ್ಲ. ಹಿಂದೆ ನಮ್ಮ ಅವಧಿಯಲ್ಲಿ ಶುರುವಾಗಿದ್ದ ಕಾಮಗಾರಿಯನ್ನು ಉದ್ಘಾಟನೆಯನ್ನಷ್ಟೇ ಅವರು ಮಾಡಿದ್ದಾರೆ.

   ಏನೇನು ಅಭಿವೃದ್ದಿ ಕೆಲಸಗಳು ನಡೆಯಬೇಕೆಂದು ಯೋಜನೆ ಹಾಕಿಕೊಂಡಿದ್ದೀರಾ?

   ಏನೇನು ಅಭಿವೃದ್ದಿ ಕೆಲಸಗಳು ನಡೆಯಬೇಕೆಂದು ಯೋಜನೆ ಹಾಕಿಕೊಂಡಿದ್ದೀರಾ?

   ಪ್ರ: ನೀವು ಆಯ್ಕೆಯಾದರೆ, ಮುಂದಿನ ಐದು ವರ್ಷದಲ್ಲಿ ಏನೇನು ಅಭಿವೃದ್ದಿ ಕೆಲಸಗಳು ನಡೆಯಬೇಕೆಂದು ಯೋಜನೆ ಹಾಕಿಕೊಂಡಿದ್ದೀರಾ?

   ಎಂ ಸಿ ಸುಧಾಕರ್: ನನಗೆ ಬಹಳ ದೊಡ್ಡ ಕನಸಿದೆ. 2013-2023ರ ಅವಧಿಯಲ್ಲಿ ಏನೇನು ಕೆಲಸ ಆಗಬೇಕೆಂದು ಅಂದುಕೊಂಡಿದ್ದೆ ಅದನ್ನು ಮಾಡುವಂತಹ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಅಂತರ್ಜಲ ವೃದ್ದಿಸಲು ಚೆಕ್ ಡ್ಯಾಂ ನಿರ್ಮಿಸಿದ್ದೆವು. ಮರಳು ದಂಧೆಯನ್ನು ನಿಲ್ಲಿಸುವಂತಹ ಕೆಲಸವನ್ನು ಮಾಡಿದ್ದೆವು.

   ಆದರೆ ಕಳೆದ ಐದು ವರ್ಷದಲ್ಲಿ ಮರಳು ದಂಧೆ ಯಥೇಚ್ಚವಾಗಿ ನಡೆಯಿತು. ಶುದ್ದೀಕರಿಸಿದ ನೀರನ್ನು ಚಿಂತಾಮಣಿ ತಾಲೂಕಿಗೆ ತರುವಂತಹ ಕೆಲಸವಾಗಬೇಕು. ಎರಡು ಕೈಗಾರಿಕಾ ಪ್ರದೇಶಗಳನ್ನು ನಾವು ಗುರುತಿಸಿದ್ದೇವೆ. ನನ್ನ ಅವಧಿಯಲ್ಲಿ ಏನೇನು ಪ್ರಯತ್ನ ಪಟ್ಟಿದ್ದೇನೋ, ಅದೆಲ್ಲಾ ಕಳೆದ ಐದು ವರ್ಷದಲ್ಲಿ ನೆನೆಗುದಿಗೆ ಬಿತ್ತು. ಕೈಗಾರಿಕೆಗಳು ಬಂದರೆ ನಮ್ಮ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ.

   25ದಿವಸವಾದರೂ ನೀರು ಸಿಗುತ್ತಿಲ್ಲ, ಹಾಗಾಗಿ ನೀರು ನನ್ನ ಮೊದಲ ಆದ್ಯತೆ. ಒಳಾಂಗಣ ಕ್ರೀಡಾಂಗಣ ಮಾಡಬೇಕು ಎನ್ನುವ ದೂರದೃಷ್ಟಿಯಿದೆ. ಎಪಿಎಂಸಿ ವಿಸ್ತರಣೆ ಮಾಡಬೇಕೆನ್ನುವ ಯೋಜನೆಯಿದೆ. ಟೆಂಡರ್ ಶ್ಯೂರ್ ರೀತಿಯಲ್ಲಿ ಚಿಂತಾಮಣಿಯಲ್ಲೂ ರಸ್ತೆ ಅಭಿವೃದ್ದಿ ಮಾಡಬೇಕೆನ್ನುವ ಕನಸಿದೆ.

   ಬೆಂಬಲ ಬೆಲೆ ಅನ್ನುವುದು ಒಂದು ಕ್ಷೇತ್ರಕ್ಕೆ ಸೀಮಿತವಾದಂತಹ ಸಮಸ್ಯೆ ಅಲ್ಲ

   ಬೆಂಬಲ ಬೆಲೆ ಅನ್ನುವುದು ಒಂದು ಕ್ಷೇತ್ರಕ್ಕೆ ಸೀಮಿತವಾದಂತಹ ಸಮಸ್ಯೆ ಅಲ್ಲ

   ಪ್ರ: ಕ್ಷೇತ್ರದ ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿದೆಯೇ?

   ಎಂ ಸಿ ಸುಧಾಕರ್: ಎಪಿಎಂಸಿಯನ್ನು ನಾವು ಒಳ್ಳೆ ರೀತಿಯಲ್ಲಿ ಅಭಿವೃದ್ದಿ ಪಡಿಸಿದ್ವಿ. ಬೆಂಬಲ ಬೆಲೆ ಅನ್ನುವುದು ಒಂದು ಕ್ಷೇತ್ರಕ್ಕೆ ಸೀಮಿತವಾದಂತಹ ಸಮಸ್ಯೆ ಅಲ್ಲ. ಬೆಂಬಲ ಬೆಲೆ ಅನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರ ದೀರ್ಘವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕಾರುವಂತದ್ದು.

   ಟೊಮ್ಯಾಟೋ ತುಂಬಾ ಇಲ್ಲಿ ಬೆಳೆಯಲಾಗುತ್ತಿದೆ, ಇದಕ್ಕೆ ಸರಿಯಾದ ಬೆಲೆ ಸಿಗದೇ ಇದ್ದಲ್ಲಿ, ರೈತರಿಗೆ ತೊಂದರೆಯಾಗುತ್ತದೆ.

   ಚಿಹ್ನೆ ಯಾವುದೆಂದು ಇನ್ನೂ ತೀರ್ಮಾನವಾಗಿಲ್ಲ

   ಚಿಹ್ನೆ ಯಾವುದೆಂದು ಇನ್ನೂ ತೀರ್ಮಾನವಾಗಿಲ್ಲ

   ಪ್ರ: ಚುನಾವಣಾ ಆಯೋಗ ಯಾವ ಚಿಹ್ನೆ ನಿಮಗೆ ನೀಡಿದೆ?

   ಎಂ ಸಿ ಸುಧಾಕರ್: ಚಿಹ್ನೆ ಯಾವುದೆಂದು ಇನ್ನೂ ತೀರ್ಮಾನವಾಗಿಲ್ಲ. ಸೂಚಕರ ಮೂಲಕ ಅರ್ಜಿ ಸಲ್ಲಿಸಿದ್ದೇವೆ. 24ನೇ ತಾರೀಕು ನಾಮಪತ್ರ ಸಲ್ಲಿಸಲಿದ್ದೇನೆ, 27ನೇ ತಾರೀಕು ಬಹುಷ: ಚಿಹ್ನೆ ಅಂತಿಮವಾಗಬಹುದು.

   ಮತ್ತೆ ನನ್ನನ್ನು ಆಯ್ಕೆ ಮಾಡುತ್ತೀರಾ ಎನ್ನುವ ವಿಶ್ವಾಸ ನನ್ನಲಿದೆ

   ಮತ್ತೆ ನನ್ನನ್ನು ಆಯ್ಕೆ ಮಾಡುತ್ತೀರಾ ಎನ್ನುವ ವಿಶ್ವಾಸ ನನ್ನಲಿದೆ

   ಪ್ರ: ಚಿಂತಾಮಣಿ ಕ್ಷೇತ್ರದ ಮತದಾರರಿಗೆ ನಿಮ್ಮ ಮನವಿ?

   ಎಂ ಸಿ ಸುಧಾಕರ್: ಎರಡು ಅವಧಿಗಳಲ್ಲಿ ಮತ್ತು ಅದಕ್ಕಿಂತ ಮುಂಚಿತವಾಗಿ ನಮ್ಮ ಕುಟುಂಬ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದೆ. ಕಳೆದ ಚುನಾವಣೆಯಲ್ಲಿ ಕಾರಣಾಂತರದಿಂದ ನಾನು ಸೋತೆ, ಗೆದ್ದ ಅಭ್ಯರ್ಥಿಯ ಅನುಭವ ಜನರಿಗೆ ಆಗಿದೆ.

   ಚಿಂತಾಮಣಿ ಕ್ಷೇತ್ರದ ಜನ ಅಭಿವೃದ್ದಿಯನ್ನು ಬಯಸುವಂತವರು. ಮತ್ತೆ ನನ್ನನ್ನು ಆಯ್ಕೆ ಮಾಡುತ್ತೀರಾ ಎನ್ನುವ ವಿಶ್ವಾಸ ನನ್ನಲಿದೆ. ನಿಮ್ಮ ನಂಬಿಕೆಗೆ ಯಾವುದೇ ರೀತಿಯಲ್ಲಿ ಚ್ಯುತಿ ಬರದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನ್ನನ್ನು ಆಶೀರ್ವದಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with Chintamani independent candidate Dr. M C Sudhakar. During in 2004 and 2008 he has won the election from Congress ticket, in the 2013 election he lost to JDS candidate in very narrow margin. Dr. Sudhakar now contesting as an independent candidate.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more