• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಸಂದರ್ಶನ

By ಬಾಲರಾಜ್ ತಂತ್ರಿ
|
   ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಸಂದರ್ಶನ | Oneindia Kannada

   ಕರ್ನಾಟಕ ಕಾಂಗ್ರೆಸ್ಸಿನ ಯುವ ಮುಖಂಡರಲ್ಲೊಬ್ಬರು ಡಾ. ಸುಧಾಕರ್ ಕೆ. ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸುಧಾಕರ್, ಕಳೆದ ಚುನಾವಣೆಯಲ್ಲಿ ಗೆದ್ದು ಪ್ರಥಮ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ದರು.

   2008 - 2010ರ ಅವಧಿಯಲ್ಲಿ ಕೆಪಿಸಿಸಿ ಸೆಕ್ರೆಟರಿಯಾಗಿದ್ದ ಡಾ. ಸುಧಾಕರ್, ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಬೆಂಗಳೂರು-ಬಳ್ಳಾರಿ ಪಾದಯಾತ್ರೆಯಲ್ಲೂ ಭಾಗವಹಿಸಿದ್ದರು.

   ಮುಂದಿನ ತಿಂಗಳು ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುಧಾಕರ್, 'ಒನ್ ಇಂಡಿಯಾ' ಜೊತೆ ಪ್ರಸಕ್ತ ಚುನಾವಣೆ ಮತ್ತು ಇತರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ.

   ಚಿಕ್ಕಬಳ್ಳಾಪುರ: ಜೆಡಿಎಸ್- 'ಕೈ' ಕದನ, ಗೆದ್ದವರಿಗೆ ಕೈ ತುಂಬ ಕೆಲಸ

   ಪ್ರ: ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡ ನಿಮಗೆ ರಾಜಕೀಯದಲ್ಲಿ ಸೆಳೆತ ಬಂದಿದ್ದು ಹೇಗೆ?

   ಸುಧಾಕರ್: ಮೊದಲು, ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ, ಸಾಮಾಜಿಕ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ನನ್ನ ತಾಯಿಯವರು ತೀರಿಕೊಂಡ ಮೇಲೆ ಇನ್ನೂ ಹೆಚ್ಚು ಜನಪರ ಕೆಲಸ ಮಾಡಲು ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದೆ.

   ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಹಳ್ಳಿಯಿಂದ ಶಾಲೆಗೆ ಹೋಗುತ್ತಿದ್ದವನು ನಾನು, ಹಾಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತೊಂದರೆ ಏನು ಎನ್ನುವುದು ನನಗೆ ಅರಿವಿದೆ. ಉಚಿತವಾಗಿ ಬಸ್ ಪಾಸ್ ಮಾಡಿಸಿಕೊಡುತ್ತಿದ್ದೇನೆ. ಆ ಮೂಲಕ ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದೇನೆ. ಮುಂದೆ ಓದಿ...

   ಜಿಲ್ಲಾಕೇಂದ್ರಕ್ಕೆ ಬೇಕಾದಂತಹ ಸೂಕ್ತ ಸೌಲಭ್ಯಗಳನ್ನು ತಂದುಕೊಟ್ಟವರು ಸುಧಾಕರ್

   ಜಿಲ್ಲಾಕೇಂದ್ರಕ್ಕೆ ಬೇಕಾದಂತಹ ಸೂಕ್ತ ಸೌಲಭ್ಯಗಳನ್ನು ತಂದುಕೊಟ್ಟವರು ಸುಧಾಕರ್

   ಪ್ರ: ಚಿಕ್ಕಬಳ್ಳಾಪುರ ಜಿಲ್ಲೆಯೆಂದು ಘೋಷಣೆಯಾದ ಮೇಲೆ, ಜಿಲ್ಲಾಕೇಂದ್ರಕ್ಕೆ ಬೇಕಾದಂತಹ ಸೂಕ್ತ ಸೌಲಭ್ಯಗಳನ್ನು ತಂದುಕೊಟ್ಟವರು ಸುಧಾಕರ್ ಎನ್ನುವ ಮಾತು ಜನಸಾಮಾನ್ಯರಲ್ಲಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು?

   ಸುಧಾಕರ್: 2013ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ, ಅದರ ಐದು ವರ್ಷದ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲೆಯೆಂದು ಘೋಷಣೆಯಾಗಿತ್ತು. ಆದರೆ ಹಿಂದಿನವರು ಜಿಲ್ಲಾಕೇಂದ್ರಕ್ಕೆ ಬೇಕಾದಂತಹ ಕೆಲಸವನ್ನು ಮಾಡಿರಲಿಲ್ಲ. ಮೂಲಭೂತ ಸೌಲಭ್ಯ ಒದಗಿಸಬೇಕು ಎನ್ನುವ ಚಿಂತನೆಯೇ ಅವರಿಗಿರಲಿಲ್ಲ.

   ಬಸ್ ಸ್ಟಾಪ್, ಆಸ್ಪತ್ರೆ, ಕಲಾಭವನ, ಲೈಬ್ರೆರಿ, ಪಾರ್ಕ್ ಯಾವುದೂ ಇಲ್ಲಿರಲಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯನವರ ಬಳಿ ಜಿಲ್ಲಾಕೇಂದ್ರಕ್ಕೆ ನೀಡಬೇಕಾದ ಸೌಲಭ್ಯದ ಬಗ್ಗೆ ಮಾತುಕತೆ ನಡೆಸಿದೆ. ಅವರು ಕೂಡಲೇ ಅನುದಾನ ಬಿಡುಗಡೆ ಮಾಡಿದರು, ಹಾಗಾಗಿ ಈಗ ಚಿಕ್ಕಬಳ್ಳಾಪುರ ನಗರದ ರೂಪುರೇಷೆಯೇ ಬದಲಾಗುವಂತಾಯಿತು. 130 ಕೋಟಿ ರೂಪಾಯಿಯಷ್ಟು ಹಣ ನಗರಸಭೆಯಲ್ಲಿ ಇನ್ನೂ ಉಳಿದುಕೊಂಡಿದೆ. ಚುನಾವಣೆ ಮುಗಿದ ನಂತರ ಕೆಲಸ ಮುಂದುವರಿಯಲಿದೆ.

   ಅಭಿವೃದ್ದಿ ಕೆಲಸಗಳು ನಿಮಗೆ ಸಂತೃಪ್ತಿ ತಂದಿದೆಯೇ?

   ಅಭಿವೃದ್ದಿ ಕೆಲಸಗಳು ನಿಮಗೆ ಸಂತೃಪ್ತಿ ತಂದಿದೆಯೇ?

   ಪ್ರ: ಕಳೆದ ಐದು ವರ್ಷದ ಅವಧಿಯಲ್ಲಿ ನೀವು ಮಾಡಿದ ಅಭಿವೃದ್ದಿ ಕೆಲಸಗಳು ನಿಮಗೆ ಸಂತೃಪ್ತಿ ತಂದಿದೆಯೇ? ಸರಕಾರದಿಂದ ಸೂಕ್ತ ಅನುದಾನಗಳು ಬಂದಿವೆಯೇ?

   ಸುಧಾಕರ್: ತೃಪ್ತಿ ಎನ್ನುವುದು relative terminology. ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ದಿಗೆ ಬಹಳದೊಡ್ಡ ಕನಸು ಇಟ್ಟುಕೊಂಡಿದ್ದೇನೆ. ಅದರ ಬಗ್ಗೆ ಈಗ ಚುನಾವಣೆಯ ವೇಳೆ ಹೇಳಿದರೆ, ಇವರು ಏನು ನಿಜ ಹೇಳುತ್ತಾರಾ ಎಂದು ಜನರು ಭಾವಿಸಬಹುದು.

   ನನ್ನ ಕನಸನ್ನು ನಾನು ಲಿಮಿಟ್ ಮಾಡಲಿಕ್ಕಾಗುವುದಿಲ್ಲ. ಸಿಂಗಾಪುರ ನಗರದ ರೀತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕೆಂದು ಅಂದುಕೊಂಡಿದ್ದೇನೆ. ನಾನು ಹಗಲು ಕನಸು ಕಾಣುತ್ತಿಲ್ಲ, ಚಿಕ್ಕಬಳ್ಳಾಪುರ, ಬೆಂಗಳೂರು ಮಹಾನಗರಕ್ಕೆ ಹತ್ತಿರವಾಗಿ ಇರುವುದರಿಂದ ನನ್ನ ಕನಸನ್ನು ನನಸು ಮಾಡಲು ಸಾಧ್ಯವಿದೆ. ಬೆಂಗಳೂರಿಗೆ ಪರ್ಯಾಯವಾಗಿ ಉಪಗ್ರಹ ನಗರ ಮಾಡಲು ಸಾಧ್ಯವಿದೆ. ಮುಂದಿನ ಐದು ವರ್ಷದಲ್ಲಿ ನಾನು ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ.

   ಮಹಿಳಾ ಸಬಲೀಕರಣ ಆಗಲೇ ಬೇಕು, ಸುಧಾಕರ್

   ಮಹಿಳಾ ಸಬಲೀಕರಣ ಆಗಲೇ ಬೇಕು, ಸುಧಾಕರ್

   ಪ್ರ: ಮಹಿಳಾ ಸಬಲೀಕರಣದ ಬಗ್ಗೆ ಪ್ರಧಾನಿ ಮೋದಿಯವರ ದೃಷ್ಟಿಕೋನದ ನಿಮ್ಮ ಅಭಿಪ್ರಾಯ?

   ಸುಧಾಕರ್: ಮಹಿಳಾ ಸಬಲೀಕರಣ ಆಗಲೇ ಬೇಕು. ಪ್ರಗತಿಪರ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಕೊಡದಿದ್ದರೆ, ಮುಖ್ಯವಾಹಿನಿಗೆ ತರದೇ ಇದ್ದಲ್ಲಿ ನಾವು ಹಿಂದೆ ಬೀಳುತ್ತೇವೆ. ಸ್ವಾಮಿ ವಿವೇಕಾನಂದ ಅವರು ಹೇಳಿದಂತೆ, ಪುರುಷರು ಮತ್ತು ಮಹಿಳೆಯರು ಒಂದು ಪಕ್ಷಿಯ ಎರಡು ರೆಕ್ಕೆಯಿದ್ದಂತೆ. ಒಂದು ರೆಕ್ಕೆಯಿಲ್ಲದಿದ್ದರೆ ಹಾರಲು ಹೇಗೆ ಸಾಧ್ಯವಿಲ್ಲವೋ, ಹಾಗೇ ಮಹಿಳೆಯರು ಸಮಾಜಕ್ಕೆ ಅಷ್ಟೇ ಮುಖ್ಯ.

   ಎರಡುವರೆ ಸಾವಿರ ಸ್ತ್ರೀಶಕ್ತಿ ಸಂಘಗಳನ್ನು ನನ್ನ ಟ್ರಸ್ಟ್ ವತಿಯಿಂದ ನಾನೇ ರಚಿಸಿ, ಸಹಕಾರ ಬ್ಯಾಂಕುಗಳ ಮೂಲಕ, ಬಡ್ಡಿರಹಿತವಾದ ಸಾಲವನ್ನು ನೀಡಿದ್ಡೇವೆ. ಇದರಿಂದ ಸ್ವಾವಲಂಬಿ ಜೀವನ ನಡೆಸಲು ಅವರಿಗೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಇರಾದೆಯನ್ನು ಹೊಂದಿದ್ದೇನೆ.

   ಯುವಪೀಳಿಗೆಗೆ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ನಿಮ್ಮ ಕಿವಿಮಾತು

   ಯುವಪೀಳಿಗೆಗೆ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ನಿಮ್ಮ ಕಿವಿಮಾತು

   ಪ್ರ: ನೀವು ಬೆಳೆದ ಬಂದ ರೀತಿ ಪ್ರಮುಖವಾಗಿ ಯುವಕರಿಗೆ ಆದರ್ಶಪ್ರಾಯವಾಗಿರುವಂತದ್ದು. ಇಂದಿನ ಯುವಪೀಳಿಗೆಗೆ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ನಿಮ್ಮ ಕಿವಿಮಾತು?

   ಸುಧಾಕರ್: ತಂತ್ರಜ್ಞಾನ ಬಹಳ ಬೇಗ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣ ಒಂದು ಕಮ್ಯೂನಿಕೇಷನ್ ಮಿಡಿಯಾ, ಯುವ ಸಮುದಾಯ ಇದನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಉಪಯೋಗವಿದೆ, ಕೆಲವು ಅನಾನುಕೂಲವೂ ಇದೆ.

   ತಪ್ಪು ವಿಚಾರಕ್ಕೆ ಬಳಸಿ, ಇನ್ನೊಬ್ಬರನ್ನು ತೇಜೋವಧೆ ಮಾಡುವಂತ ಕೆಲಸ ಮಾಡಿದರೆ, ಅದು ನಾಚಿಕೆಗೇಡಿನ ಕೆಲಸವಾಗುತ್ತದೆ. ವಸ್ತುಸ್ಥಿತಿಯನ್ನು ಅರಿತುಕೊಂಡು ಯುವಕರು ಸಾಮಾಜಿಕ ತಾಣವನ್ನು ಬಳಸಬೇಕು ಎನ್ನುವುದು ನನ್ನ ಮನವಿ. ಧರ್ಮದ ಹಾದಿಯಲ್ಲಿ ಸಾಗಿದರೆ, ಸುಸ್ಥಿರ ಸಮಾಜವನ್ನು ನಿರ್ಮಿಸಬಹುದು.

   ಮೊಯ್ಲಿ, ಮುನಿಯಪ್ಪ, ಜಿಲ್ಲೆಯ ಹಿರಿಯ ಮುಖಂಡರ ಜೊತೆ ನಿಮ್ಮ ಸಂಬಂಧ

   ಮೊಯ್ಲಿ, ಮುನಿಯಪ್ಪ, ಜಿಲ್ಲೆಯ ಹಿರಿಯ ಮುಖಂಡರ ಜೊತೆ ನಿಮ್ಮ ಸಂಬಂಧ

   ಪ್ರ: ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ, ಕೋಲಾರ ಸಂಸದ ಮುನಿಯಪ್ಪ ಮತ್ತು ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿನ ಮುಖಂಡರ ಜೊತೆ ನಿಮ್ಮ ಸಂಬಂಧ ಯಾವ ರೀತಿಯಿದೆ?

   ಸುಧಾಕರ್: ಮೊಯ್ಲಿಯವರು ಅತ್ಯಂತ ಮುತ್ಸದ್ದಿ ನಾಯಕರು, ನನ್ನ ನಾಯಕರು ಕೂಡಾ.. ಜಿಲ್ಲೆಯಲ್ಲಿ ಬಹಳ ಅನುಭವಿಗಳಿದ್ದಾರೆ. ಮೊಯ್ಲಿಯವರ ಜೊತೆಗೆ ನನ್ನ ಸಂಬಂಧ ಅತ್ಯುತ್ತಮವಾಗಿದೆ. ಅವರ ಮಾರ್ಗದರ್ಶನದಲ್ಲಿ ಹಲವಾರು ಕೆಲಸಗಳನ್ನು ಮಾಡಿತ್ತಿದ್ದೇನೆ.

   ಅದೇ ರೀತಿ.. ಮುನಿಯಪ್ಪನವರು, ಸತತವಾಗಿ ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅವರ ಮಾರ್ಗದರ್ಶನವೂ ನನಗೆ ಉಪಕಾರಿಯಾಗಿದೆ. (Image courtesy: Dr.Sudhakar.com, file photo)

   ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿ ಬಚ್ಚೇಗೌಡ್ರು

   ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿ ಬಚ್ಚೇಗೌಡ್ರು

   ಪ್ರ: ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವಂತಹ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿ ಬಚ್ಚೇಗೌಡ್ರು. ಕಳೆದ ಚುನಾವಣೆಯಲ್ಲಿ ಸುಮಾರು 15ಸಾವಿರ ಮತಗಳ ಅಂತರದಿಂದ ನೀವು ಗೆದ್ದಿದ್ರಿ. ಈ ಬಾರಿ ಇಲ್ಲಿನ ಚುನಾವಣಾ ಆಖಾಡ ಯಾವರೀತಿ ಇದೆ?

   ಸುಧಾಕರ್: ಕಳೆದ ಚುನಾವಣೆಯಲ್ಲಿ ಇಷ್ಟೊಂದು ಉತ್ಸಾಹ ಜನರಲ್ಲಿ ಇರಲಿಲ್ಲ. ಇಷ್ಟು ಮುಖಂಡರು ನನ್ನ ಬೆನ್ನಿಗೆ ನಿಂತಿರುವುದನ್ನು ನೋಡಿದರೆ ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದೇನೆ. ಪಕ್ಷದ ಎಲ್ಲಾ ಹಿರಿಯರು, ಮುಖಂಡರು ನನಗೆ ಬೆಂಬಲ ನೀಡುತ್ತಿದ್ದಾರೆ.

   ಬಿಜೆಪಿ ಬಗ್ಗೆ ನಿಮಗೆ ಸಾಫ್ಟ ಕಾರ್ನರ್ ಏನಾದರೂ ಇದೆಯಾ?

   ಬಿಜೆಪಿ ಬಗ್ಗೆ ನಿಮಗೆ ಸಾಫ್ಟ ಕಾರ್ನರ್ ಏನಾದರೂ ಇದೆಯಾ?

   ಪ್ರ: ಎಸ್ ಎಂ ಕೃಷ್ಣ ನಿಮ್ಮನ್ನು ರಾಜಕೀಯಕ್ಕೆ ಪರಿಚಯಿಸಿದ್ದು, ಕೃಷ್ಣ ಈಗ ಬಿಜೆಪಿಯಲ್ಲಿ ಇರುವುದರಿಂದ, ಬಿಜೆಪಿ ಬಗ್ಗೆ ನಿಮಗೆ ಸಾಫ್ಟ ಕಾರ್ನರ್ ಏನಾದರೂ ಇದೆಯಾ?

   ಸುಧಾಕರ್: ಎಸ್ ಎಂ ಕೃಷ್ಣ ಅತ್ಯಂತ ಮುತ್ಸದ್ದಿ ನಾಯಕರು, ರಾಜ್ಯ ಕಂಡಂತಹ ಅಪರೂಪದ ರಾಜಕಾರಣಿಯವರು. ಅವರ ಹಾದಿಯಲ್ಲೇ ನಾನು ರಾಜಕೀಯಕ್ಕೆ ಬಂದವನು. ಅವರು ನನ್ನ ರಾಜಕೀಯ ಗುರು ಕೂಡಾ ನಿಜ. ಆದರೆ, ರಾಜಕೀಯ ಬದುಕಿನ ಅವರ ಕೊನೆಯ ನಿರ್ಧಾರ, ಅದಕ್ಕೆ ನನ್ನ ಸಹಮತವಿಲ್ಲ.

   ಬಿಜೆಪಿ ಪಕ್ಷ ನನ್ನ ವ್ಯಕ್ತಿತ್ವಕ್ಕೆ ವಿರುದ್ದವಾದದ್ದು, ನನ್ನ ಆಸೆಗೆ ಆ ಪಕ್ಷದ ಸಿದ್ದಾಂತ ಸರಿಹೊಂದುವುದಿಲ್ಲ. ಹಾಗಾಗಿ, ನಾನು ಎಸ್ ಎಂ ಕೃಷ್ಣ ಅವರನ್ನು ಹಿಂಬಾಲಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಆಶಯ ನನ್ನ ಪ್ರತೀಕಣದಲ್ಲೂ ಇದೆ. ರಾಹುಲ್ ಗಾಂಧಿ ಈ ದೇಶದ ನಿಜವಾದ ನಾಯಕ, ದೇಶದ ಮೇಲೆ ಬದ್ದತೆ ಇಟ್ಟುಕೊಂಡವರು. ರಾಹುಲ್ ನಡೆ, ನುಡಿ, ಗುಣ ನನಗೆ ಇಷ್ಟವಾಗಿದೆ. ಅವರನ್ನು ದೇಶದ ಪ್ರಧಾನಿ ಮಾಡಲು ನನ್ನಿಂದ ಏನು ಅಳಿಲುಸೇವೆ ಸಾಧ್ಯವಿದೆಯೋ ಅದನ್ನು ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲುವುದೇ ನನ್ನ ಅಂತಿಮ ಗುರಿ. (Image courtesy: Dr.Sudhakar.com, file photo)

   ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

   ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

   ಪ್ರ: ಕೊನೆಯದಾಗಿ, ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

   ಸುಧಾಕರ್: ಕಳೆದ ಐದು ವರ್ಷಗಳಲ್ಲಿ ಅಭಿವೃದ್ದಿ, ದಕ್ಷತೆ ಮತ್ತು ಪಾರದರ್ಶತೆಯಿಂದೆ ಕೆಲಸ ಮಾಡಿದ್ದೇನೆ ಅದನ್ನು ಇಲ್ಲಿನ ಜನತೆ ಕೂಡಾ ನೋಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನನ್ನ ವ್ಯಕ್ತಿಪರಿಚಯ ಇಲ್ಲಿನ ಜನರಿಗಿದೆ. ರೈತರ ಸಬಲೀಕರಣ, ಕೈಗಾರಿಕೆಯನ್ನು ತಂದು ಉದ್ಯೋಗ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಂತದ್ದು, ಈ ಮೂರು ಭರವಸೆಗಳನ್ನು ನಾನು ನೀಡಿದ್ದೇನೆ.

   ನನ್ನ ವ್ಯಕ್ತಿತ್ವವನ್ನು ಒಮ್ಮೆ ಅವಲೋಕನ ಮಾಡಿ, ಮತ್ತೊಂದು ಅವಕಾಶವನ್ನು ಕೊಟ್ಟರೆ, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ದೇಶವೇ ಗುರುತಿಸುವಂತಹ ನಗರವನ್ನಾಗಿ ಮಾಡುತ್ತೇನೆ ಎಂದು ನಿಮ್ಮ ವಾಹಿನಿಯ ಮೂಲಕ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with Chikkaballapura constituency sitting MLA and Congress candidate Dr. Sudhakar. During his interview with Oneindia, Dr. Sudhakar was explaining his effort to improve the water and other facility to the constituency.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more