ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮೀನಾರಾಯಣ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

M lakshminarayana Interview : ಬೆಂಗಳೂರು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ | Oneindia Kannada

ಬೆಂಗಳೂರು ನಗರದ ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಅದಕ್ಕೆ ಪ್ರಮುಖ ಕಾರಣ, ಜೆಡಿಎಸ್ ತೊರೆದು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವ ಇಲ್ಲಿನ ಮೂರು ಬಾರಿಯ ಹಾಲೀ ಶಾಸಕ ಜಮೀರ್ ಅಹಮದ್ ಖಾನ್.

ಜಮೀರ್ ನನ್ನು ಸೋಲಿಸಲು ಪಣತೊಟ್ಟಿರುವ ದೇವೇಗೌಡ್ರು, ಮಾಜಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಇವರಿಬ್ಬರ ನಡುವೆ ನೇರ ಹಣಾಹಣಿ ಎನ್ನುವ ಲೆಕ್ಕಾಚಾರವಿದ್ದರೂ, ಕಳೆದ ಚುನಾವಣೆಯಲ್ಲಿ ಬಿಜೆಪಿ ಹದಿನೇಳು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು.

ಬೆಂಗಳೂರು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಸಂದರ್ಶನ ಬೆಂಗಳೂರು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಸಂದರ್ಶನ

ಬಿಜೆಪಿ ಈ ಕ್ಷೇತ್ರದಿಂದ ಮಾಜಿ ಉಪಮೇಯರ್ ಎಂ ಲಕ್ಷ್ಮೀನಾರಾಯಣ ಅವರನ್ನು ಕಣಕ್ಕಿಳಿಸಿದೆ. ಬಿ ವಿ ಗಣೇಶ್, ಲಹರಿ ವೇಲು ಮುಂತಾದವರ ಹೆಸರು ಚಾಲ್ತಿಯಲ್ಲಿದ್ದರೂ, ಕೊನೆಗೆ ಬಿಜೆಪಿ ಲಕ್ಷ್ಮೀನಾರಾಯಣ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ಬಿಬಿಎಂಪಿ ವಾರ್ಡ್ ಬರುತ್ತದೆ.

ಏಳರ ಪೈಕಿ ಎರಡು ವಾರ್ಡಿನಲ್ಲಿ ಬಿಜೆಪಿ ಕಾರ್ಪೋರೇಟರುಗಳು ಇದ್ದು, ಈ ವಾರ್ಡಿನ ಮತವನ್ನು ಬಹುವಾಗಿ ಪಕ್ಷ ನೆಚ್ಚಿಕೊಂಡಿದೆ. ಯಾರು ಗೆದ್ದರೂ ವಿಜಯದ ಅಂತರ ಹೆಚ್ಚು ಇರುವುದಿಲ್ಲ ಎನ್ನುವುದು ಈ ಕ್ಷೇತ್ರದಲ್ಲಿ ಸುತ್ತಾಡಿದಾಗ ಸಿಕ್ಕ ರಾಜಕೀಯ ಚಿತ್ರಣ.

ಕಷ್ಟವೆಂಬ ರೋಗ ಗುಣಪಡಿಸಲು ರಾಜಕಾರಣಕ್ಕೆ ಬಂದೆ: ಯತೀಂದ್ರ ಸಂದರ್ಶನಕಷ್ಟವೆಂಬ ರೋಗ ಗುಣಪಡಿಸಲು ರಾಜಕಾರಣಕ್ಕೆ ಬಂದೆ: ಯತೀಂದ್ರ ಸಂದರ್ಶನ

ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ನಡುವೆ, ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ಹಿಂದೂಗಳ ಮತವನ್ನು ನೆಚ್ಚಿಕೊಂಡಿದ್ದಾರೆ. ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿರುವ ಇವರು, ಭರ್ಜರಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಜೊತೆಗಿನ ಸಂದರ್ಶನದ ಪ್ರಮುಖಾಂಶ:

ಗೌಡ್ರು ಮತ್ತು ಕುಮಾರಸ್ವಾಮಿಯವರ ಪ್ರಭಾವ ಇತ್ತು

ಗೌಡ್ರು ಮತ್ತು ಕುಮಾರಸ್ವಾಮಿಯವರ ಪ್ರಭಾವ ಇತ್ತು

ಪ್ರ: ಕಳೆದ ಬಾರಿ ಬಿಜೆಪಿ ಮೂರು ಭಾಗವಾಗಿತ್ತು, ಈ ಸಲ ಹೇಗಿದೆ ರಾಜಕೀಯ?
ಲಕ್ಷ್ಮೀನಾರಾಯಣ: ಕಳೆದ ಬಾರಿಯೂ ಬಿಜೆಪಿಯಲ್ಲಿ ಹೊಂದಾಣಿಕೆಯಿತ್ತು, ಈಗಲೂ ಇದೆ. ಕಳೆದ ಚುನಾವಣೆಯಲ್ಲಿ ಏನಾಗಿತ್ತು ಅಂದರೆ, ಜಮೀರ್ ಅಹಮದ್ ಅವರು ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದರು. ಗೌಡ್ರು ಮತ್ತು ಕುಮಾರಸ್ವಾಮಿಯವರ ಪ್ರಭಾವ ಇತ್ತು.

ಕಳೆದ ಮೂರು ಅವಧಿಯಲ್ಲಿ ಜಮೀರ್ ಮಾಡಿದ ಕೆಲಸವೇನೆಂದರೆ, ಬಸವಣ್ಣನ ದೇವಸ್ಥಾನವನ್ನು ಹೊಡೆಯೋಕೆ ಹೋಗಿರೋದೆ ಜಮೀರ್ ಸಾಧನೆ. ಕಳೆದ ಹದಿನೈದು ವರ್ಷಗಳಲ್ಲಿ ಆತ ಮಾಡಿದ ಅಭಿವೃದ್ದಿ ಕೆಲಸ ಏನೂ ಇಲ್ಲ. ಸರಕಾರದಿಂದ ಬಂದ ಅನುದಾನಕ್ಕೂ ಅಡ್ಡಗಾಲು ಹಾಕುವ ಕೆಲಸವನ್ನು ಜಮೀರ್ ಮಾಡಿದ್ದಾರೆ.

ವಿದ್ಯಾವಂತ ಮುಸ್ಲಿಮರು ನಮ್ಮ ಜೊತೆಗಿದ್ದಾರೆ, ಜಮೀರ್ ಮತ್ತು ಅಲ್ತಾಫ್ ಖಾನ್ ನಿಂದಾಗಿ ಕ್ಷೇತ್ರದಲ್ಲಿ ಭಯದ ವಾತಾವರಣವಿದೆ. ಹಿಂದೂಗಳು ನಮ್ಮ ಜೊತೆಗಿದ್ದಾರೆ, ಮೋದಿಯವರ ಕೆಲಸವನ್ನು ಜನ ಮೆಚ್ಚಿದ್ದಾರೆ. ಈ ಬಾರಿ ಬಿಜೆಪಿ ಗೆಲ್ಲುವ ವಿಶ್ವಾಸದಲ್ಲಿದ್ದೇವೆ.

ನೀರಿನ ಸಮಸ್ಯೆ ಉಲ್ಬಣವಾಗಿದೆ

ನೀರಿನ ಸಮಸ್ಯೆ ಉಲ್ಬಣವಾಗಿದೆ

ಪ್ರ: ಉಪಮೇಯರ್ ಆಗಿದ್ದವರು ನೀವು, ಕ್ಷೇತ್ರದ ಮೂಲ ಸಮಸ್ಯೆ ಏನು?
ಲಕ್ಷ್ಮೀನಾರಾಯಣ: ಇಲ್ಲಿನ ಮೂಲ ಸಮಸ್ಯೆ ಏನೆಂದರೆ ಒಂದೇ ಒಂದು ಫುಟ್ ಪಾತ್ ಸರಿಯಾಗಿಲ್ಲ. ಎಲ್ಲೂ ಸ್ವಚ್ಚತೆಯಿಲ್ಲ. ಕಸದ ಸಮಸ್ಯೆ, ರಸ್ತೆ ಅಭಿವೃದ್ದಿಯಾಗಿಲ್ಲ. ನೀರಿನ ಸಮಸ್ಯೆ ಉಲ್ಬಣವಾಗಿದೆ. ವಿಠಲ ನಗರದಲ್ಲಿ ಮತಯಾಚನೆಗೆ ಹೋದಾಗ, ಹಿರಿಯ ನಾಗರೀಕರು ಇಲ್ಲಿನ ನೀರಿನ ಸಮಸ್ಯೆಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ನಮಗೂ ಒಂದು ಚಾನ್ಸ್ ಕೊಡಿ, ನಮ್ಮ ಐದು ವರ್ಷದ ಅವಧಿಯಲ್ಲಿ ನಾವು ಏನು ಅಭಿವೃದ್ದಿ ಮಾಡಿ ತೋರಿಸುತ್ತೇವೋ ಆನಂತರ, ನಮಗೆ ಮತ ನೀಡಬೇಕೋ, ಬೇಡವೋ ಎನ್ನುವುದನ್ನು ನಿರ್ಧರಿಸಿ. ನಗರದ ಉಪಮೇಯರ್ ಆಗಿ ಇಲ್ಲಿನ ಸಮಸ್ಯೆ ಏನು ಎನ್ನುವುದರ ಅರಿವು ನನಗಿದೆ.

ಜಮೀರ್ ಅವರೊಬ್ಬರು ವ್ಯಾಪಾರಸ್ಥರು, ಬಾಂಬೆಯಿಂದ ಬಂದವರು. ಚಾಮರಾಜಪೇಟೆಯಲ್ಲಿ ನನ್ನದೇ ಸಾಮ್ರಾಜ್ಯ ಎನ್ನುವ ಜಮೀರ್ ಅಹಮದಿಗೆ, ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗಿದ್ದು ಎರಡೇ ವಾರ್ಡಿನಲ್ಲಿ. ಕುಮಾರಸ್ವಾಮಿಯವರ ಸರಕಾರದಲ್ಲಿ ಸಚಿವರಾಗಿದ್ದ ಜಮೀರ್ ಸಾಧನೆ ದೊಡ್ಡ ಶೂನ್ಯ. ಪಿ ಸಿ ಮೋಹನ್, ಅನಂತ್ ಕುಮಾರ್, ಅಶೋಕ್, ಸೋಮಣ್ಣ ಎಲ್ಲರ ಸಹಕಾರ ನನಗಿದೆ.

ಛಲವಾದಿ ಪಾಳ್ಯ ಮತ್ತು ರಾಯಪುರಂ ವಾರ್ಡ್

ಛಲವಾದಿ ಪಾಳ್ಯ ಮತ್ತು ರಾಯಪುರಂ ವಾರ್ಡ್

ಪ್ರ: ಎರಡು ವಾರ್ಡಿನಲ್ಲಿ ಬಿಜೆಪಿ ಗೆದ್ದಿದೆ, ಅಲ್ಲಿಂದ ಹೆಚ್ಚಿನ ಮತ ನಿರೀಕ್ಷಿಸುತ್ತಿದ್ದೀರಾ?

ಲಕ್ಷ್ಮೀನಾರಾಯಣ: ಆ ಎರಡು ವಾರ್ಡನ್ನೇ ಉದಾಹರಣೆಗೆ ತೆಗೆದುಕೊಳ್ಳಿ, ಅಲ್ಲಿ ಆಗಿರುವ ಅಭಿವೃದ್ದಿ ಮತ್ತು ಕ್ಷೇತ್ರದ ಇತರ ವಾರ್ಡಿನಲ್ಲಾಗಿರುವ ಅಭಿವೃದ್ದಿಯನ್ನು ನೋಡಿದರೆ ನಮ್ಮ ಪಕ್ಷದ ಕೆಲಸದ ಶೈಲಿ ಗೊತ್ತಾಗುತ್ತದೆ. ಛಲವಾದಿ ಪಾಳ್ಯ ಮತ್ತು ರಾಯಪುರಂ ವಾರ್ಡಿನಲ್ಲಿ ನಮ್ಮ ಕಾರ್ಪೋರೇಟರುಗಳು ಇದ್ದಾರೆ.

ಬಿಜೆಪಿಯನ್ನು ಗೆಲ್ಲಿಸಬೇಕು ಎನ್ನುವ ವಾತಾವರಣವಿದೆ

ಬಿಜೆಪಿಯನ್ನು ಗೆಲ್ಲಿಸಬೇಕು ಎನ್ನುವ ವಾತಾವರಣವಿದೆ

ಪ್ರ: ಎರಡು ಪ್ರಮುಖ ಅಭ್ಯರ್ಥಿಗಳು ಮುಸ್ಲಿಮರು, ವೋಟ್ ಡಿವೈಡ್ ಆಗುತ್ತಾ?
ಲಕ್ಷ್ಮೀನಾರಾಯಣ: ಕಳೆದ ಬಾರಿಯೂ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿದ್ದರು. ಆದರೆ, ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎನ್ನುವ ವಾತಾವರಣವಿದೆ. ಹಿಂದೂತ್ವವನ್ನು ತರಬೇಕು ಎನ್ನುವ ಸ್ಥಿತಿಯಿದೆ. ಇಲ್ಲಿ ಜನ ಭಯದ ವಾತಾವರಣದಲ್ಲಿದ್ದಾರೆ.

ಹಿಂದೂ, ಮುಸ್ಲಿಂ ಅನ್ಯೋನ್ಯವಾಗಿ ಬದುಕಬೇಕು, ಜಮೀರ್ ಜಾತಿ ಒಡೆಯುವ ಮನುಷ್ಯ. ಧರ್ಮ ಒಡೆಯುವುದೇ ಆತನ ಕಾಯಕ. ಬಂದವರಿಗೆ ದುಡ್ಡು ಕೊಟ್ಟು ಕಳುಹಿಸುವುದು, ಮಂಗಳಾರತಿ ತಟ್ಟೆಗೆ ದುಡ್ಡು ಹಾಕೋದು, ಈ ರೀತಿ ಮಾಡಿ ಜಯ ಸಾಧಿಸುತ್ತಾ ಬಂದಿದ್ದಾರೆ.

ಮೋದಿ, ಶಾ ಅವರು ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿನ ಚಿತ್ರಣ

ಮೋದಿ, ಶಾ ಅವರು ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿನ ಚಿತ್ರಣ

ಪ್ರ: ಪ್ರಧಾನಿ ಮೋದಿಯವರ ಸಮಾವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತಾ?
ಲಕ್ಷ್ಮೀನಾರಾಯಣ: ಮೋದಿ ಮತ್ತು ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿನ ಚಿತ್ರಣವೇ ಬದಲಾಗಿದೆ. 76 ಇದ್ದದ್ದು 86ಕ್ಕೆ ಬಂತು, ನಿನ್ನೆ ಬಿಡುಗಡೆಯಾದ ಸಮೀಕ್ಷೆಯ ಪ್ರಕಾರ 103 ಸೀಟಿಗೆ ಬಂದು ನಿಂತಿದೆ. ಇವತ್ತು (ಮೇ 8) ಮೋದಿಯವರು ಬೆಂಗಳೂರಿಗೆ ಬರಲಿದ್ದಾರೆ, ನಮಗೆ ಇನ್ನೂ ಹದಿನೈದು ಸೀಟು ಜಾಸ್ತಿಯಾಗಲಿದೆ. ಬೆಂಗಳೂರು ನಗರದಲ್ಲಿ 21-22 ಸೀಟ್ ಬಿಜೆಪಿ ಗೆಲ್ಲಲಿದೆ.

ಕಾನೂನು, ಸುವ್ಯವಸ್ಥೆ ಸುಧಾರಿಸಬೇಕಿದೆ

ಕಾನೂನು, ಸುವ್ಯವಸ್ಥೆ ಸುಧಾರಿಸಬೇಕಿದೆ

ಪ್ರ: ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?
ಲಕ್ಷ್ಮೀನಾರಾಯಣ: ಮೊದಲು ಕ್ಷೇತ್ರದಲ್ಲಿ ಶಾಂತಿ ನೆಲೆಸಬೇಕು. ಸ್ವಚ್ಚ ಚಾಮರಾಜಪೇಟೆಯಾಗಬೇಕು. ಕಾನೂನು, ಸುವ್ಯವಸ್ಥೆ ಸುಧಾರಿಸಬೇಕಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಮೊದಲು ಬೇಲಿ ಹಾಕುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಅದನ್ನೆಲ್ಲಾ ಕಬಳಿಸಿ ಬಿಡುತ್ತಾರೆ.

English summary
Karnataka Assembly elections 2018: An exclusive interview with Chamarajpet (Bengaluru Urban) BJP candidate M Lakshminarayana. During his interview Lakshminarayana lashed out at Zameer Ahmed. Altaf Khan and Zameer Ahmed is the JDS and INC candidate respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X